Saturday, July 27, 2024
spot_img
spot_img
spot_img
spot_img
spot_img
spot_img

KPSC : ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್​ ʼBʼ ಹುದ್ದೆಗಳಿಗೆ ಅರ್ಜಿ ಆಹ್ವಾನ.!

spot_img

ಜನಸ್ಪಂದನ ನ್ಯೂಸ್‌, ನೌಕರಿ : ಕರ್ನಾಟಕ ಲೋಕಸೇವಾ ಆಯೋಗದಿಂದ ನೇಮಕಾತಿ ಅಧಿಸೂಚನೆ ಪ್ರಕಟವಾಗಿದ್ದು ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ  ರಾಜ್ಯ ವೃಂದದಲ್ಲಿ  ಖಾಲಿ ಇರುವ  ಗ್ರೂಪ್ ‘B’ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಆನ್‌ಲೈನ್‌ ಮೂಲಕ ಅರ್ಜಿ 05 ಮೇ 2024ರವರೆಗೆ ಆಹ್ವಾನಿಸಿತ್ತು. ಆದರೆ ಈಗ ಆಯೋಗ ಕೊನೆಯ ದಿನಾಂಕವನ್ನು ಮೇ,24 2024 ರವರೆಗೆ ಮುಂದೂಡಿ ಆದೇಶಿಸಿದೆ.

ಬಿಬಿಎಂಪಿ, ಜಲಸಂಪನ್ಮೂಲ ಇಲಾಖೆ, ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಲ ಸಂಪನ್ಮೂಲ ಇಲಾಖೆ, ಕಾರ್ಖಾನೆಗಳು, ಬಾಯ್ಲರುಗಳು ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ, ಅಂತರ್ಜಲ ನಿರ್ದೇಶನಾಲಯದಲ್ಲಿ ಖಾಲಿ ಇರುವ ಗ್ರೂಪ್​ ʼಬಿʼ 277 ಹುದ್ದೆಗಳಿಗೆ ಅರ್ಜಿ ಸ್ವೀಕಾರ ಪ್ರಾರಂಭವಾಗಿದ್ದು, ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯನ್ನು ಅಧಿಕೃತ ಲಿಂಕ್‌ಗಳಲ್ಲಿ ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

ಇದನ್ನು ಓದಿ : News : ಅಶ್ಲೀಲ ವಿಡಿಯೋ ತೋರಿಸಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕ.!

ವಿದ್ಯಾರ್ಹತೆ :

  • ಬಿಇ ಪದವಿ.

ವಯೋಮಿತಿ : 

  • ಗರಿಷ್ಠ ವಯೋಮಿತಿ 35 ವರ್ಷ.
  • ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ,
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷ,
  • ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.

ಶುಲ್ಕ :

  • ಪ.ಜಾ, ಪ.ಪಂ, ಪ್ರವರ್ಗ 1 ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ಇದೆ.
  • ನಿವೃತ್ತ ಸೇವಾ ಅಭ್ಯರ್ಥಿಗಳಿಗೆ 50 ರೂ.
  • ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 150 ರೂ.,
  • ಸಾಮಾನ್ಯ ಅಭ್ಯರ್ಥಿಗಳಿಗೆ 300 ರೂ. ಅರ್ಜಿ ಶುಲ್ಕವನ್ನು ನಿಗದಿ ಮಾಡಲಾಗಿದೆ.

ಇದನ್ನು ಓದಿ : ನಮ್ಮ ಮೆಟ್ರೋದಲ್ಲಿ ಎಲ್ಲರ ಮುಂದೆಯೇ ತಬ್ಬಿಕೊಂಡು ಕಿಸ್ ಮಾಡಿದ ಪ್ರೇಮಿಗಳು ; Video Viral.!

ಹುದ್ದೆಗಳ ಹಂಚಿಕೆ :

ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ
ಸಹಾಯಕ ಇಂಜಿನಿಯರ್ (ಸಿವಿಲ್) : 182 ಹುದ್ದೆಗಳು.
ಭೂ ದಾಖಲೆಗಳ ಸಹಾಯಕ ನಿರ್ದೇಶಕರು : 24 ಹುದ್ದೆಗಳು.
ಪತ್ರಾಂಕಿತ ವ್ಯವಸ್ಥಾಪಕರು (OBC ಇಲಾಖೆ) : 21 ಹುದ್ದೆಗಳು.
ಸಹಾಯಕ ನಿರ್ದೇಶಕರು : 20 ಹುದ್ದೆಗಳು.
ಸಹಾಯಕ ಇಂಜಿನಿಯರ್ (ಮೆಕ್ಯಾನಿಕಲ್) : 10 ಹುದ್ದೆಗಳು.
ಕಾರ್ಖಾನೆಗಳ ಸಹಾಯಕ ನಿರ್ದೇಶಕರು : 07 ಹುದ್ದೆಗಳು.
ಬಾಯ್ಲರ್ ಗಳ ಸಹಾಯಕ ನಿರ್ದೇಶಕರು : 03 ಹುದ್ದೆಗಳು.
ಭೂ ವಿಜ್ಞಾನಿ : 10 ಹುದ್ದೆಗಳು.
ಒಟ್ಟು ಹುದ್ದೆಗಳು : 277 ಹುದ್ದೆಗಳು.

 

ಅರ್ಜಿ ಸಲ್ಲಿಕೆ :

ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಏಪ್ರಿಲ್​ 15 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಮೇ 14 ಆಗಿತ್ತು. ಮುಂದೂಡಿದ ದಿನಾಂಕ ಮೇ 24, 2024 ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಳು ಆಯೋಗದ  ವೆಬ್‌ಸೈಟ್ www.kpsc.kar.nic.in ನಲ್ಲಿ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ಆಯೋಗದ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

Disclaimer : All information provided here is for reference purpose only. While we try to list all the scholarships for the convenience of students, this information is available on the internet. Please refer official website for official information.

spot_img
spot_img
- Advertisment -spot_img