Wednesday, May 22, 2024
spot_img
spot_img
spot_img
spot_img
spot_img
spot_img

Murder : ತಲೆ ಮೇಲೆ ರುಬ್ಬುವ ಕಲ್ಲು ಎತ್ತಿಹಾಕಿ ಚಿಕ್ಕಪ್ಪನ ಕೊಲೆಗೈದ ಮಗ.!

spot_img

ಜನಸ್ಪಂದನ ನ್ಯೂಸ್, ಅಥಣಿ : ಬೆಳಗಾವಿ ಜಿಲ್ಲೆಯ ಅಥಣಿ (Athani) ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಆಸ್ತಿ ವಿಚಾರಕ್ಕೆ ಚಿಕ್ಕಪ್ಪ ಹಾಗೂ ಮಗನ ಮಧ್ಯೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ನಡೆದಿದೆ.

ಖಂಡೊಬಾ ಬೊಸಲೆ (27) ಎಂಬಾತ ತನ್ನ ಚಿಕ್ಕಪ್ಪನಾದ ಕೇಶವ ಬೊಸಲೆಯನ್ನು (47) ಕೊಲೆ (murder) ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಇವರಿಬ್ಬರೂ ದಬದಬಹಟ್ಟಿ ಗ್ರಾಮದ ನಿವಾಸಿಗಳು.

ಇದನ್ನು ಓದಿ : ಹೀಗೆ ಮಾಡಿದರೆ ಸಾಕು ನಿಮ್ಮ ಮುಖದ ಸುಕ್ಕು ಮಟಮಾಯವಾಗಿ ನೈಸರ್ಗಿಕ ಹೊಳಪು ಸಿಗುತ್ತದೆ.!

ಕುಡಿದ ನಶೆಯಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಗಲಾಟೆ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ.

ಕೋಪದ ಕೈಗೆ ಬುದ್ದಿ ಕೊಟ್ಟ ಮಗ, ಚಿಕ್ಕಪ್ಪನ್ನೇ ಕೊಂದಿದ್ದಾನೆ ಎನ್ನಬಹುದು.

ಇದನ್ನು ಓದಿ : Double murder : ಪ್ರೀತಿಸುವಂತೆ ಪುತ್ರಿಯ ಹಿಂದೆ ಬಿದ್ದ ಯುವಕ ಹಾಗೂ ಆತನ ಸಹೋದರನ ಬರ್ಬರ ಹತ್ಯೆಗೈದ ತಂದೆ.!

ಸದ್ಯ ಕೊಲೆ ಮಾಡಿದ ಆರೋಪಿ ಖಂಡೊಬಾ ಬೊಸಲೆಯನ್ನು ಪೋಲಿಸರು ಬಂಧಿಸಿದ್ದಾರೆ (arrested).

ಐಗಳಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

spot_img
spot_img
spot_img
- Advertisment -spot_img