ಜನಸ್ಪಂದನ ನ್ಯೂಸ್, ಡೆಸ್ಕ್ : ಆನ್ಲೈನ್ ನಲ್ಲಿ ಖರೀದಿ ಮಾಡಿದ ಅಂಡರ್ವೇರ್ ಧರಿಸಿದ ಬಳಿಕ ನನ್ನ ಮಗಳು ಗರ್ಭ ಧರಿಸಿದ್ದಾಳೆ ಎಂದು ಚೀನಾದ ಮಹಿಳೆಯೊಬ್ಬಳು ಕೋರ್ಟ್ ಮೆಟ್ಟಿಲೇರಿದ್ದಾಳೆ.
ನನ್ನ ಮಗಳು ಪ್ರೆಗ್ನೆಂಟ್ ಆಗಲು ಆನ್ಲೈನ್ ನಲ್ಲಿ ಖರೀದಿ ಮಾಡಿದ ಅಂಡರ್ವೇರ್ ಕಾರಣ ಎಂದು ಹೇಳಿಕೊಂಡಿದ್ದಾಳೆ.
ಇದನ್ನು ಓದಿ : ಬಿಎಸ್ಎನ್ಎಲ್ ಗ್ರಾಹಕರಿಗೆ ಗುಡ್ ನ್ಯೂಸ್ : ʼಬಿಎಸ್ಎನ್ಎಲ್ʼನಿಂದ 4G ಸೇವೆ ಆರಂಭ ; ಎಂದಿನಿಂದ ಗೊತ್ತೇ.?
ಮಹಿಳೆ ಟಾವೊಬಾವೊದ ಕಂಪನಿಯಿಂದ ಒಳ ಉಡುಪುಗಳನ್ನು ಖರೀದಿಸಿರುವುದಾಗಿ ಹೇಳಿಕೊಂಡಿದ್ದು, ತನ್ನ ಮಗಳು ಒಂದು ಜೊತೆ ಹೊಸ ಒಳ ಉಡುಪುಗಳನ್ನು ಧರಿಸಿದ ನಂತರ ಗರ್ಭಿಣಿಯಾಗಿದ್ದಾಳೆ ಎಂದು ದೂರು ನೀಡಲು ಗ್ರಾಹಕ ಬೆಂಬಲವನ್ನು ಸಂಪರ್ಕಿಸಿ, ಪರಿಹಾರಕ್ಕಾಗಿ ಬೇಡಿಕೆಯಿಟ್ಟಿದ್ದಾಳೆ.
ಇನ್ನೂ ಈ ವಿಚಾರ ಕೇಳುತ್ತಿದ್ದಂತೆ ಒಳ ಉಡುಪು ತಯಾರಿಕಾ ಕಂಪನಿ ಶಾಕ್ ಆಗಿದೆ.
ಈ ರೀತಿ ಆಗಲು ಸಾಧ್ಯವಿಲ್ಲ ಎಂದು ಮಹಿಳೆಗೆ ಮನವರಿಕೆ ಮಾಡಿದೆ. ಆದರೂ ಇದನ್ನು ಪರಿಗಣಿಸದೇ ತನ್ನ ಮಗಳು ಗರ್ಭಿಣಿಯಾಗಲು ಇದೊಂದೇ ಕಾರಣ ಎಂದು ಪಟ್ಟು ಹಿಡಿದು ಕುಳಿತಿದ್ದಾಳೆ.
ಇದನ್ನು ಓದಿ : ಬಾಲಕಿಯನ್ನು ಹೊತ್ತೊಯ್ಯಲು ಯತ್ನಿಸಿದ ದೈತ್ಯಾಕಾರದ ಹದ್ದು ; ಮೈ ನಡುಗಿಸುವ ವಿಡಿಯೋ Viral.!
ಕಡೆಗೆ ಹುಡುಗಿಯ ಗರ್ಭಧಾರಣೆಗೂ ಕಂಪನಿಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ.
ಈ ಘಟನೆಯ ಕುರಿತು ಒಳ ಉಡುಪು ತಯಾರಿಕಾ ಕಂಪನಿಯ ಸಿಇಒ ತನ್ನ ಅಧಿಕೃತ ಚಾನೆಲ್‌ಗಳಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.