ಜನಸ್ಪಂದನ ನ್ಯೂಸ್, ಡೆಸ್ಕ್ : ಈ ಪೋಟೋದಲ್ಲಿರುವ ಲೇಡಿ ಅಲಿಸಿಯಾ ಅಂತ. ಪೊಲೀಸ್ ಅಧಿಕಾರಿಯಾಗಿ ವೃತ್ತಿ ಜೀವನವನ್ನು ಆರಂಭಿಸಿದ್ದ ಈಕೆ ಅದನ್ನು ತೊರೆದು ಇದೀಗ ಹೊಸ ಬಿಸಿನೆಸ್ ಒಂದನ್ನು ಆರಂಭಿಸಿದ್ದಾರೆ.
ಇದನ್ನು ಓದಿ : Cable ಅಳವಡಿಕೆಗೆ ಲಕ್ಷ ಲಕ್ಷ ಲಂಚಕ್ಕೆ ಬೇಡಿಕೆ ; ಅಧಿಕಾರಿಯ ವಿರುದ್ಧ ಹರಿದಾಡಿದ ವಿಡಿಯೋ.!
ಆಸ್ಟ್ರೇಲಿಯಾದ ಅಲಿಸಿಯಾ ಡೇವಿಸ್ (32) ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ.
ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಅಲಿಸಿಯಾ ಅದನ್ನು ತೊರೆದು ಇದೀಗ ಹೊಸ ಬಿಸಿನೆಸ್ ಒಂದನ್ನು ಆರಂಭಿಸಿದ್ದಾರೆ.
ಈಕೆ ಒಂಟಿ ಹುಡುಗರಿಗೆ ಹುಡುಗಿಯರ ಜೊತೆ ಹೇಗೆ ಡೇಟಿಂಗ್ ಮಾಡುವುದು ಎಂಬುದರ ಕುರಿತು ಟ್ರೈನಿಂಗ್ ನೀಡುತ್ತಾಳೆ.
ಈ ಮೂಲಕ ಪ್ರತಿ ತಿಂಗಳು 5 ರಿಂದ 7 ಲಕ್ಷ ರೂಪಾಯಿಗಳನ್ನು ಗಳಿಸುತ್ತಿರುವುದಾಗಿ ಈಕೆ ಸಂದರ್ಶನವೊಂದರಲ್ಲಿ ಹೇಳಿ ಕೊಂಡಿದ್ದಾಳೆ.
ಇದನ್ನು ಓದಿ : Special news : ರಾತ್ರಿ ಮಲಗುವ ಮುನ್ನ ಒಂದು ಎಸಳು ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ.?
ನಾನು ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಿ, ಡೇಟಿಂಗ್ ನಂತರ ಸಂಬಂಧವನ್ನು ಹೇಗೆ ಮುಂದುವರಿಸಬೇಕು ಎಂದು ನಾನು ಹೇಳಿಕೊಡುತ್ತೇನೆ ಎಂದು ಅಲಿಸಿಯಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಮಹಿಳೆಯರು ಯಾವಾಗಲೂ ತಮ್ಮ ಬಗ್ಗೆ ತಿಳಿದುಕೊಳ್ಳಲು ಬಯಸುವ ಆತ್ಮವಿಶ್ವಾಸದ ಪುರುಷರನ್ನು ಇಷ್ಟಪಡುತ್ತಾರೆ ಎಂದು ಅಲಿಸಿಯಾ ಮಹಿಳೆ ಇನ್ನಿತರ ಅನೇಕ ಗುಟ್ಟುಗಳನ್ನು ಪುರುಷರಿಗೆ ಹೇಳಿಕೊಟ್ಟು ಅವರ ಸಂಬಂಧ ಗಟ್ಟಿಯಾಗುವಂತೆ ಮಾಡುತ್ತಾಳಂತೆ.