ಜನಸ್ಪಂದನ ನ್ಯೂಸ್, ಡೆಸ್ಕ್ : ಸುಮ್ಮನಿರಲಾರದೇ ಇರುವೆ ಬಿಟ್ಕೊಂಡ್ರು ಎನ್ನುವಂತೆ ಬಾಲಕನೋರ್ವ ಲಿಫ್ಟ್‌ನ ಬಟನ್‍ಗಳನ್ನು ಒಂದೇ ಸಮನೆ ಒತ್ತಿದ ಕಾರಣ ಲಿಫ್ಟ್‌ನೊಳಗೆ ಸಿಲುಕಿಕೊಂಡು ಪರದಾಡಿದ (Stuck in an elevator and struggling) ಘಟನೆ ನಡೆದಿದೆ.
ಗಾಜಿಯಾಬಾದ್‌ನ ಕೌಶಂಬಿಯಲ್ಲಿರುವ ಅಪಾರ್ಟ್‌ಮೆಂಟ್‌ವೊಂದರಲ್ಲಿ ಈ ಘಟನೆ ನಡೆದಿದ್ದು, ಈ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನು ಓದಿ : Debt crisis : ಸಾಲಬಾಧೆ ಒಂದೇ ಕುಟುಂಬದ 7 ಜನರು ಆತ್ಮಹತ್ಯೆ.!
Elevator :
ಬಾಲಕ ಲಿಫ್ಟ್ ಕೆಟ್ಟು ನಿಂತಾಗ ಹೊರಗೆ ಬರಲು ಸಾಧ್ಯವಾಗದೇ ಕಿರುಚಾಡಿದ್ದಾನೆ. ಕೊನೆಗೆ ಸಿಬ್ಬಂದಿ ಲಿಫ್ಟ್ ಸರಿಮಾಡಿ ಬಾಲಕನನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಬಂದಿದ್ದಾರೆ (Got out safely).
ಹುಡುಗ ಲಿಫ್ಟ್‌ನ ಬಟನ್‍ಗಳನ್ನು ಒಂದೇ ಸಮನೆ ಒತ್ತುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಹುಡುಗ ಆಟವಾಡುತ್ತಾ ಲಿಫ್ಟ್‌ನೊಳಗೆ ಹೋಗಿ ಬಟನ್‍ಗಳನ್ನು ಒತ್ತಿದ್ದಾನೆ.
ಇದನ್ನು ಓದಿ : DC ಕಚೇರಿಯಲ್ಲಿ ಶವವಾಗಿ ಪತ್ತೆಯಾದ ಕರ್ತವ್ಯನಿರತ ಮಹಿಳಾ ಕಾನ್ಸ್‌ಟೇಬಲ್.!
ಲಿಫ್ಟ್ ಚಲಿಸಲು ಶುರುವಾಗುತ್ತಿದ್ದಂತೆ, ಬಾಲಕ ತನ್ನ ಕೈಗಳಿಂದ ಬಾಗಿಲನ್ನು ಬಲವಂತವಾಗಿ ತೆರೆಯಲು ಪ್ರಯತ್ನಿಸಿದ್ದಾನೆ (Tried to force it open). ಇದರಿಂದಾಗಿ ಲಿಫ್ಟ್ ನಿಂತು ಹೋಗಿದ್ದು, ಭಯಗೊಂಡ ಆತ ಸಹಾಯಕ್ಕಾಗಿ ಕಿರುಚಾಡಿದ್ದಾನೆ.
ಬಾಲಕ ಲಿಫ್ಟ್ ಒಳಗೆ ಸಿಲುಕಿಕೊಂಡ ಸುಮಾರು ಏಳು ನಿಮಿಷಗಳ ಬಳಿಕ, ಲಿಫ್ಟ್ ಸರಿ ಮಾಡಿ ಹುಡುಗನನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಬರಲಾಯಿತು ಎಂದು ವರದಿಯಿಂದ ತಿಳಿದು ಬಂದಿದೆ.
ವಿಡಿಯೋ ನೋಡಿ :
A minor boy was stuck inside an elevator at a residential society in Ghaziabad's Kaushambi. He could be seen shouting and crying for help, and was rescued safely after a technician was called. pic.twitter.com/NgyBAbXwf3
— Vani Mehrotra (@vani_mehrotra) May 27, 2025
ಹಿಂದಿನ ಸುದ್ದಿ Health : ನೀವು ಪ್ಯಾಕೆಟ್ ಹಾಲನ್ನು ಬಳಸುತ್ತೀರಾ.? ಹಾಗಿದ್ರೆ ಈ ಸುದ್ದಿಯನ್ನೊಮ್ಮೆ ಓದಿ.
ಜನಸ್ಪಂದನ ನ್ಯೂಸ್, ಡೆಸ್ಕ್ : ನೀವು ನಿಮ್ಮ ಮನೆಗಳಲ್ಲಿ ಪ್ಯಾಕೆಟ್ ಹಾಲನ್ನು ಬಳಸುತ್ತೀರಾ.? ಹಾಗಿದ್ರೆ ಈ ಸುದ್ದಿಯನ್ನೊಮ್ಮೆ ಓದಿ.
ಪ್ರತಿನಿತ್ಯವೂ ಎಲ್ಲರೂ ಬಳಸುವ ಆಹಾರ ಪದಾರ್ಥವೆಂದರೆ ಅದು ಹಾಲು (Milk). ಮಕ್ಕಳ ಆರೋಗ್ಯಕ್ಕೂ ಹಾಲು ಬಹಳ ಮುಖ್ಯವಾಗಿದೆ.
ಹಾಲಿನಲ್ಲಿ ಸಿಗುವ ಕ್ಯಾಲ್ಸಿಯಂ ದೇಹಕ್ಕೆ ಬಹಳ ಮುಖ್ಯ (Calcium is very important for the body). ಅಷ್ಟೇ ಅಲ್ಲ ದೇಹಕ್ಕೆ ಹಾಲಿನಿಂದ ಬಹಳಷ್ಟು ಪ್ರಯೋಜನವಿದೆ. ಈಗ ಬಹಳ ಜನರು ದನಗಳಿಂದ ನೇರವಾಗಿ ಹಾಲು ಪಡೆಯುವುದು ಬಹಳ ಕಡಿಮೆಯಾಗಿದೆ. ಹಳ್ಳಿಗಳಲ್ಲಿಯೂ ಈಗ ಪ್ಯಾಕೆಟ್ ಮಾಡಲಾದ ಹಾಲನ್ನೇ ಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ.
ಇದನ್ನು ಓದಿ : Bengaluru : ಮದ್ಯದ ನಶೆಯಲ್ಲಿ ಪೊಲೀಸರ ಮೇಲೆಯೇ ಕಾರು ಹರಿಸಿದ ಆಸಾಮಿ ; ಮುಂದೇನಾಯ್ತು.?
ಏವಿಯನ್ ಇನ್ಫ್ಲುಯೆನ್ಸ ವೈರಸ್, ಮೈಕೋಬ್ಯಾಕ್ಟೀರಿಯಂ, ಇ. ಕೋಲಿ, ಲಿಸ್ಟೇರಿಯಾ ಮತ್ತು ಕ್ಯಾಂಪಿಲೋಬ್ಯಾಕ್ಟರ್ ಅನ್ನು ಕೊಲ್ಲಲು ಹಾಲನ್ನು ಸಾಮಾನ್ಯವಾಗಿ 71 ಡಿಗ್ರಿ ಸೆಲ್ಸಿಯಸ್ನಲ್ಲಿ ಬಿಸಿ ಮಾಡಲಾಗುತ್ತದೆ. ಇವೆಲ್ಲವೂ ವಿವಿಧ ಕಾಯಿಲೆಗಳು ಮತ್ತು ರೋಗಗಳಿಗೆ ಕಾರಣವಾಗಬಹುದಾದ ಬ್ಯಾಕ್ಟೀರಿಯಾಗಳಾಗಿವೆ ಎಂಬುದು ತಜ್ಞರ ಅಭಿಪ್ರಾಯ.
ಟೈಫಾಯಿಡ್ ಜ್ವರ, ಲಿಸ್ಟೀರಿಯೊಸಿಸ್, ಕ್ಷಯ, ಡಿಫ್ತೀರಿಯಾ ಮತ್ತು ಬ್ರೂಸೆಲೋಸಿಸ್ ಹರಡುವಿಕೆ ಬ್ಯಾಕ್ಟೀರಿಯಾವನ್ನು ಪಾಶ್ಚರೀಕರಣವು ಕೊಲ್ಲುತ್ತದೆ (Pasteurization kills bacteria). ಇದು ಆ ಹಾಲಿನ ಯಾವುದೇ ರುಚಿಯ ಮೇಲೆ ಪರಿಣಾಮ ಬೀರುವುದಿಲ್ಲ ಹೀಗಾಗಿ ಹಾಲನ್ನು ಹೆಚ್ಚು ಕುದಿಸಿಡುವುದು ಸರಿಯಲ್ಲ.
ಇದನ್ನು ಓದಿ : Tablets : ಜ್ವರ, ನೆಗಡಿ, ಡಯಾಬಿಟಿಸ್ ಸೇರಿದಂತೆ ಪ್ರತಿದಿನ ಸೇವಿಸುವ 196 ಮಾತ್ರಗಳು ಗುಣಮಟ್ಟದಲ್ಲಿ ಫೇಲ್.!
ಮನೆಯಲ್ಲಿ ಹಾಲನ್ನು ಬಳಸುವಾಗ ಈ ಹಾಲನ್ನು ಸರಿಯಾದ ತಾಪಮಾನದಲ್ಲಿ ಕುದಿಸದೇ ಇದ್ದರೆ ಹಾನಿಕಾರಕ ಬ್ಯಾಕ್ಟೀರಿಯಾ ಹಾಗೂ ವೈರಸ್‌ಗಳು ಬೆಳವಣಿಗೆಯಾಗುವ ಸಾಧ್ಯತೆ ಇರುತ್ತದೆ.
ಹಾಲನ್ನು ಕುದಿಸುವುದು ಅದರಲ್ಲಿರುವ ಮಧ್ಯಮ ಹಾಗೂ ಸಣ್ಣ ಫ್ಯಾಟಿ ಆಸಿಡ್‌ಗಳ ಹಾಜರಾತಿಯನ್ನು ಹೆಚ್ಚಿಸುತ್ತದೆ. ಈ ಫ್ಯಾಟಿ ಆಮ್ಲ ಅಥವಾ ಆಸಿಡ್ ಹಾಲಿನಿಂದ ಅಜೀರ್ಣ ಹಾಗೂ ಅಲರ್ಜಿ ಸಮಸ್ಯೆಯುಳ್ಳವರಿಗೆ ಉಪಯುಕ್ತವಾಗಿದೆ.
ಇದನ್ನು ಓದಿ : Health : ತಾಮ್ರದ ಬಾಟಲಿಗಳಲ್ಲಿ ನೀರು ಕುಡಿಯುವವರೇ ಈ ಸುದ್ದಿಯನ್ನೊಮ್ಮೆ ಓದಿ.
ಇನ್ನೂ ಹಾಲನ್ನು 100 ಅಥವಾ ಅದಕ್ಕಿಂತ ಹೆಚ್ಚಿನ ಡಿಗ್ರಿಯಲ್ಲಿ ಪ್ಯಾಶ್ಚರೈಸ್ ಮಾಡುವುದರಿಂದ ಹಾಲಿನಲ್ಲಿರುವ ಕೆಲವೊಂದು ವಿಟಮಿನ್ ಹಾಗೂ ಮಿನರಲ್‌ಗಳು ನಷ್ಟವಾಗುತ್ತವೆ. ಅಲ್ಲದೇ ಬಿ2, ಬಿ3, ಬಿ6 ಹಾಗೂ ಫೋಲಿಕ್ ಆಮ್ಲ ನಷ್ಟಗೊಳ್ಳಬಹುದು.
ತಜ್ಞರು ಸಹ ಸಾಕಷ್ಟು ಸಮಯದವರೆಗೆ ಹಾಲನ್ನು ಕುದಿಸುವುದು ವಿಟಮಿನ್ ಡಿ ಅಂಶವನ್ನು ಕಡಿಮೆ ಮಾಡುತ್ತದೆ. ಇದು ದೇಹದಲ್ಲಿರುವ ಕ್ಯಾಲ್ಸಿಯಂ ಹೀರುವಿಕೆಗೆ ಋಣಾತ್ಮಕ ಪರಿಣಾಮ (negative effect) ಬೀರುತ್ತದೆ. ನ್ಯೂಟ್ರಿಯಂಟ್ ನಷ್ಟವನ್ನು ಕಡಿಮೆ ಮಾಡಲು, ಹಾಲನ್ನು ನಾಲ್ಕರಿಂದ ಐದು ನಿಮಿಷ ಕುದಿಸಿದರೆ ಸಾಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನು ಓದಿ : Job : ಹಿಂದೂಸ್ತಾನ್ ಕಾಪರ್ ಲಿಮಿಟೆಡ್‌ನಲ್ಲಿ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಹಾಲನ್ನು ಯಾವಾಗಲೂ ದೊಡ್ಡದಾದ ಪಾತ್ರೆಯಲ್ಲಿ ಕುದಿಸಲು ಇಡಿ. ತಳ ಗಟ್ಟಿಯಾಗಿರುವ ಪಾತ್ರೆಯನ್ನು ಆಯ್ಕೆಮಾಡಿಕೊಳ್ಳುವುದು ಉತ್ತಮ. ಇದರಿಂದ ಹಾಲು ಉಕ್ಕದಂತೆ ತಡೆಯಬಹುದು. ತಳ ಗಟ್ಟಿ ಇದ್ದರೆ ಹಾಲು ಪಾತ್ರೆ ತಳ ಹಿಡಿದುಕೊಳ್ಳುವುದಿಲ್ಲ.
ಹಾಲನ್ನು ಕುದಿಸುವಾಗ ಪಾತ್ರೆಯ ಮೇಲ್ಭಾಗದಲ್ಲಿ ಅಡ್ಡಲಾಗಿ ಮರದ ಸೌಟನ್ನು ಇರಿಸಿ. ಇದರಿಂದ ಹಾಲು ಉಕ್ಕುವಾಗ ಅದು ಕೆಳಕ್ಕೆ ಹರಿಯದಂತೆ ಸೌಟು ತಡೆಯುತ್ತದೆ. ಇನ್ನು ಚಿಟಿಕೆ ಉಪ್ಪು ಸೇರಿಸುವುದರಿಂದ ಕೂಡ ಹಾಲು ಉಕ್ಕದಂತೆ ತಡೆಯಬಹುದಾಗಿದೆ.