Wednesday, May 22, 2024
spot_img
spot_img
spot_img
spot_img
spot_img
spot_img

ಈ 4 ರಾಶಿಯವರು ಬಹುತೇಕ ಪ್ರೇಮ ವಿವಾಹವಾಗುವುದೇ ಹೆಚ್ಚು.!

spot_img

ಜನಸ್ಪಂದನ ನ್ಯೂಸ್‌, ವಿಶೇಷಮದುವೆ ಇದನ್ನು ಆಂಗ್ಲ ಭಾಷೆಯಲ್ಲಿ Marriage ಎಂದು ಕರೆಯುತ್ತಾರೆ. ಈ ಮದುವೆ ಅನ್ನುವ ಪದದಲ್ಲಿಯೇ ಏನೋ ಒಂದು ಖುಷಿ ಅಡಗಿದೆ. ಮದುವೆಯಾಗೋ ಜೋಡಿಗೆ ಅದೊಂದು ಸುಂದರ ಕ್ಷಣ. ಇದು ಪ್ರತಿ ವ್ಯಕ್ತಿಯ ಜೀವನದಲ್ಲಿ ಪ್ರಮುಖ ಪ್ರಾತ್ರ ವಹಿಸುತ್ತದೆ.

ಇತ್ತಿಚ್ಚೇಗೆ ಸಾಮಾನ್ಯವಾಗಿ ಎರಡು ರೀತಿಯ ವಿವಾಹಗಳನ್ನು ಕಾಣಬಹುದು.

  • ಹಿರಿಯರು ನೋಡಿ ಮಾತಾಡಿ ನಿಶ್ಚಯಿಸಿದ ಮದುವೆ (Arranged marriage) ಇನ್ನೊಂದು,
  • ಪ್ರೇಮ ವಿವಾಹ (Love marriage).

ಇವುಗಳಲ್ಲಿ ಯಾವುದೇ ಮದುವೆಯಾದರೂ ಅದೊಂದು ಅತ್ಯಮೂಲ್ಯ ಕ್ಷಣಗಾಗಿರುತ್ತದೆ. ಪ್ರೇಮ ವಿವಾಹ ಬಹುತೇಕ ಯುವಜನರ ಕನಸು. ಪ್ರೇಮ ವಿವಾಹದಲ್ಲಿ ವಿವಾಹಕ್ಕೂ ಮುನ್ನವೇ ಪಾರ್ಟ್ನ್‌ರ್ ಬಗ್ಗೆ ಸಂಪೂರ್ಣ ತಿಳಿದಿರುವುದಷ್ಟೇ ಅಲ್ಲ, ಒಬ್ಬರನ್ನೊಬ್ಬರು ಸಿಕ್ಕಾಪಟ್ಟೆ ಬಯಸುತ್ತಿರುತ್ತಾರೆ. ಇಬ್ಬರ ನಡುವೆ ಯಾವುದೇ ಸಂಕೋಚವಿರುವುದಿಲ್ಲ, ಇರುವುದು ಪ್ರೀತಿ ಮಾತ್ರವಾಗಿರುತ್ತದೆ.

ಈಗ ಪ್ರೇಮ ವಿವಾಹವನ್ನು ಹೊಂದುವ ಸಾಧ್ಯತೆಯಿರುವ ಪ್ರಮುಖ ರಾಶಿಗಳಾವವು ಎಂಬುದನ್ನು ತಿಳಿಯೋಣ…

ಇದನ್ನು ಓದಿ : Video : ಪತಿಗೆ ಸರಪಳಿಯಿಂದ ಕಟ್ಟಿ ಚಿತ್ರಹಿಂಸೆ ಕೊಟ್ಟ ಪತ್ನಿ ; ಕಾರಣವಾದ್ರು ಏನು.?

ವೃಶ್ಚಿಕ ರಾಶಿ/Scorpio :
ಪ್ರೀತಿಯ ವಿಷಯಕ್ಕೆ ಬಂದಾಗ, ವೃಶ್ಚಿಕ ರಾಶಿಯವರು ಉತ್ತಮ ಯಶಸ್ಸನ್ನು ಹೊಂದಿದ್ದಾರೆ. ಅವರು ತಾವು ಪ್ರೀತಿಸಿದವರನ್ನೇ ಮದುವೆಯಾಗುತ್ತಾರೆ. ಮತ್ತು ಪರಿಪೂರ್ಣ ಸಂಗಾತಿಯನ್ನು ಕಂಡುಕೊಳ್ಳುವ ಸಾಧ್ಯತೆಯಿದೆ. ವೃಶ್ಚಿಕ ರಾಶಿಯವರಿಗೆ ಪ್ರೀತಿಯ ಪಾಲುದಾರರನ್ನು ಹುಡುಕುವ ಅಭ್ಯಾಸವಿದೆ. ಅವರು ದೀರ್ಘಾವಧಿಯ ಪ್ರೇಮ ಸಂಬಂಧವನ್ನು ಅನುಭವಿಸುವ ಸಾಧ್ಯತೆ ಹೆಚ್ಚು. ಒಂದು ವೇಳೆ ಮನೆಯಲ್ಲಿ ಒಪ್ಪಲಿಲ್ಲವೆಂದರೆ ಅವರು ಒಪ್ಪುವವರೆಗೂ ತಾಳ್ಮೆ(Patience)ಯಿಂದ ಕಾಯಬಲ್ಲರು.

ಸಿಂಹ ರಾಶಿ/Leo :
ಸಿಂಹ ರಾಶಿಯವರು ಕೂಡ ಪ್ರೇಮ ವಿವಾಹವಾಗುವ ಸಾಧ್ಯತೆ ಹೆಚ್ಚು. ಅವರು ಸಮಾನ ಮನಸ್ಸಿನ ಸಂಗಾತಿಗಳನ್ನು ಆಕರ್ಷಿಸುತ್ತಾರೆ. ಸಿಂಹ ರಾಶಿಯವರು ತಮ್ಮಂತೆಯೇ ವ್ಯಕ್ತಿತ್ವದ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳೊಂದಿಗೆ ಪ್ರೀತಿಯಲ್ಲಿ ಬೀಳುತ್ತಾರೆ. ಸಾಮಾನ್ಯವಾಗಿ ಹೋದಲ್ಲೆಲ್ಲ ಗಮನ ಸೆಳೆಯುವ ಅವರಿಗೆ ತಮ್ಮಂತೆ ಗಮನ ಸೆಳೆವವರೇ ಇಷ್ಟವಾಗುವುದು. ಅದಕ್ಕಾಗಿಯೇ ಅವರ ವಿವಾಹ ಜೀವನವು ಸಂತೋಷದಿಂದಿರುತ್ತದೆ ಮತ್ತು ಯಶಸ್ವಿಯಾಗುವ ಸಾಧ್ಯತೆ ಹೆಚ್ಚು.

ಇದನ್ನು ಓದಿ : ರೆಸ್ಟೋರೆಂಟ್‌ನಲ್ಲಿ ಬ್ಯೂಟಿ ಕ್ವೀನ್ ಗುಂಡಿಕ್ಕಿ ಬರ್ಬರ ಹತ್ಯೆ ; CCTV ಯಲ್ಲಿ ಭಯಾನಕ ದೃಶ್ಯ ಸೆರೆ.!

ಮೇಷ ರಾಶಿ/Aries :
ಯಾರೋ ನೋಡಿ ಮಾಡಿಸುವ ಮದುವೆ ಮೇಷ ರಾಶಿಯವರಿಗೆ ಒಪ್ಪಿತವಲ್ಲ. ತಮ್ಮ ಬದುಕು ಎಂದ ಮೇಲೆ ಆಯ್ಕೆಯೂ ತಮ್ಮದೇ ಆಗಿರಬೇಕೆಂದು ಬಯಸುವವರಿವರು. ಸಂಗಾತಿಯ ಆಯ್ಕೆಯಲ್ಲಿ ಸದಾ ಮುಂದು. ಮೇಷ ರಾಶಿಯವರು ಪ್ರೇಮಕ್ಕೆ ಬಿದ್ದ ಮೇಲೆ ಯಾವುದೇ ಕಾರಣಕ್ಕೂ ಪ್ರೇಮಿಯನ್ನು ಬಿಟ್ಟು ಕೊಡುವುದಿಲ್ಲ. ಅವರನ್ನು ವಿವಾಹವಾಗಲು ಎಷ್ಟೇ ಅಡ್ಡಿ ಆತಂಕಗಳು ಎದುರಾದರೂ ಎದುರಿಸಿಯೇ ಸಿದ್ಧ ಎಂಬ ಗುಣ ಇವರದು. ಹಾಗಾಗಿ, ಮೇಷ ರಾಶಿಯವರದು ಪ್ರೇಮ ವಿವಾಹವಾಗುವ ಸಾಧ್ಯತೆ ಹೆಚ್ಚು. ಅದೂ ಅಲ್ಲದೆ, ಹೋದಲ್ಲೆಲ್ಲ ತಮ್ಮದೇ ನಾಯಕತ್ವ ಗುಣ ತೋರುವ ಇವರಿಗೆ ಆಕರ್ಷಿತರಾಗುವವರ ಸಂಖ್ಯೆಯೂ ಹೆಚ್ಚು.

ಇದನ್ನು ಓದಿ : Good News : ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಗೆ ಅರ್ಜಿ ಸಲ್ಲಿಕೆ ಅವಧಿ ಮೇ. 15 ರವರೆಗೆ ವಿಸ್ತರಣೆ.!

ತುಲಾ ರಾಶಿ/Libra :
ತುಲಾ ರಾಶಿಯವರು ಪ್ರೇಮವಿವಾಹಕ್ಕೆ ಮುಂದಾಗುತ್ತಾರೆ. ತುಲಾ ರಾಶಿಯವರು ಅತ್ಯಂತ ಭಾವೋದ್ರಿಕ್ತ ಪ್ರೇಮಿಗಳು, ಮತ್ತು ಅವರು ಅದೇ ರೀತಿ ಭಾವಿಸುವ ಸಂಗಾತಿಯನ್ನು ಹೊಂದಲು ಬಯಸುತ್ತಾರೆ.  ಸಂತೋಷದ ಜೀವನ ಮತ್ತು ಪ್ರೇಮ ವಿವಾಹದ ವಿಷಯಕ್ಕೆ ಬಂದಾಗ, ಅವರು ಸಾಕಷ್ಟು ಅದೃಷ್ಟವಂತರು. ಅವರ ಸ್ನೇಹ ನಡೆಗೆ ಪ್ರೇಮಿಯು ಸಂಪೂರ್ಣ ಪ್ರೀತಿಯಲ್ಲಿ ಬೀಳುತ್ತಾರೆ. ಭಾವನಾಜೀವಿಗಳಾದ, ಮಾತಿನಲ್ಲಿ ಮಹಾಚತುರರಾದ ಅವರಿಗೆ ಪ್ರೇಮ ವಿವಾಹಕ್ಕೆ ಮನೆಯವರನ್ನು ಒಪ್ಪಿಸುವ ಕಲೆಯೂ ಗೊತ್ತಿದೆ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು ಕರ್ತವ್ಯವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
spot_img
- Advertisment -spot_img