Wednesday, May 22, 2024
spot_img
spot_img
spot_img
spot_img
spot_img
spot_img

ನಾಳೆ (ದಿ.7 ಮೇ) ಸವದತ್ತಿ ಶ್ರೀ ಯಲ್ಲಮ್ಮದೇವಿ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲ.!

spot_img

ಜನಸ್ಪಂದನ ನ್ಯೂಸ್‌, ಬೆಳಗಾವಿ : ನಾಳೆ  ಅಂದರೆ ಮೇ 7ರಂದು ರಾಜ್ಯದಲ್ಲಿ 2ನೇ ಹಂತದ ಮತದಾನ ಲೋಕಸಭಾ ಚುನಾವಣೆ ನಡೆಯಲಿರುವ  ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಶ್ರೀ ರೇಣುಕಾ-ಯಲ್ಲಮ್ಮ ದೇವಿಯ ದರ್ಶನಕ್ಕೆ ಭಕ್ತರಿಗೆ ನಿರ್ಬಂಧ ವಿಧಿಸಲಾಗಿದೆ.

ತಾಯಿಯ ದರ್ಶನಕ್ಕೆ ಪ್ರತಿ ಮಂಗಳವಾರ ಸಾಕಷ್ಟು ಭಕ್ತರು ಆಗಮಿಸುತ್ತಿದ್ದು, ನಾಳೆ (ಮೇ 7ರಂದು) ಮತದಾನ ಇರುವ ಕಾರಣ ಜನ ಮತದಾನ ಬಿಟ್ಟು ದೇಗುಲಕ್ಕೆ ಆಗಮಿಸುವ ಸಾಧ್ಯತೆಯಿರುವ ಹಿನ್ನೆಲೆುಯಲ್ಲಿ ಜಿಲ್ಲಾಡಳಿತ ನಾಳೆ ಯಲ್ಲಮ್ಮ ದೇವಿ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡುತ್ತಿಲ್ಲ.

ಇದನ್ನೂ ಓದಿ : ಬಿಎಂಟಿಸಿಯ 2500 ನಿರ್ವಾಹಕರ ಹುದ್ದೆಗಳಿಗೆ ಅರ್ಜಿ ಆಹ್ವಾನ ; ಇಲ್ಲಿದೆ ಡೈರೆಕ್ಟ್‌ ಲಿಂಕ್.!

ಸೋಮವಾರವೇ ಬ್ಯಾರಿಕೆಡ್ ಹಾಕಿ ದೇವಸ್ಥಾನದ ಒಳಗೆ ಯಾರು ಬರದಂತೆ ಬಂದ ಮಾಡಲಾಗಿದೆ. ದೇವಿಗೆ ಎಂದಿನಂತೆ ಪೂಜಾ ಕಾರ್ಯಗಳು ನಡೆಯಲಿವೆ.

ನಾಳೆ (ಮೇ 7ರಂದು) ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಮತ ಚಲಾಯಿಸಿ. ದೇವಸ್ಥಾನಕ್ಕೆ ಯಾರು ಬಾರದಂತೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಬಿ ಮಹೇಶ್ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : ಚುನಾವಣಾ ಕರ್ತವ್ಯಕ್ಕೆ ತೆರಳುತ್ತಿದ್ದ ಸಿಬ್ಬಂದಿ ಹೃದಯಾಘಾತದಿಂದ ಸಾವು.!

ರಾಜ್ಯದಲ್ಲಿ‌ 2ನೇ ಹಂತದ 14 ಲೋಕಸಭಾ ಚುನಾವಣೆಗೆ ಭರದಿಂದ ಸಿದ್ದತೆಗಳು ನಡೆದಿದ್ದು, ಕ್ಷೇತ್ರಗಳ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ.

ಜನಸ್ಪಂದನ ನ್ಯೂಸ್‌, ಕಳಕಳಿಮತದಾನ ಪ್ರತಿಯೊಬ್ಬ ಭಾರತೀಯನ ಹಕ್ಕು” ಮತ್ತು ಕರ್ತವ್ಯವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
spot_img
- Advertisment -spot_img