Saturday, July 27, 2024
spot_img
spot_img
spot_img
spot_img
spot_img
spot_img

ಬಿಎಂಟಿಸಿಯ 2500 ನಿರ್ವಾಹಕರ ಹುದ್ದೆಗಳಿಗೆ ಅರ್ಜಿ ಆಹ್ವಾನ ; ಇಲ್ಲಿದೆ ಡೈರೆಕ್ಟ್‌ ಲಿಂಕ್.!

spot_img

ಜನಸ್ಪಂದನ ನ್ಯೂಸ್‌, ನೌಕರಿ : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಯು ಇತ್ತಿಚೇಗೆ ಬರೋಬರಿ 2,500 ಕಂಡಕ್ಟರ್‌ ಹುದ್ದೆಗಳ ಭರ್ತಿಗೆ ಕೆಇಎ (KEA) ಮೂಲಕ ಅಧಿಸೂಚನೆ ಬಿಡುಗಡೆ ಮಾಡಿತ್ತು. ಇದೀಗ ಸದರಿ ಹುದ್ದೆಗಳಿಗೆ ಅರ್ಜಿ ಹಾಕಲು ಆನ್‌ಲೈನ್‌ ಲಿಂಕ್‌ನ್ನು ಬಿಡುಗಡೆ ಮಾಡಲಾಗಿದೆ. 

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಿಕ್ಕುಳಿದ ವೃಂದದಲ್ಲಿ 2,286 ನಿರ್ವಾಹಕ ಹುದ್ದೆ, ಸ್ಥಳೀಯ ವೃಂದದಲ್ಲಿ 214 ( ಹಿಂಬಾಕಿ 15 ಹುದ್ದೆ ಸೇರಿ) ನಿರ್ವಾಹಕ ಹುದ್ದೆಗಳ ಭರ್ತಿಗೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯನ್ನು ಅಧಿಕೃತ ಲಿಂಕ್‌ಗಳಲ್ಲಿ ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

ಇದನ್ನು ಓದಿ :‌ ಒಂದು ಹೊತ್ತು ಊಟ ಬಿಟ್ಟರೂ Heart​ ಅಟ್ಯಾಕ್​ ಗ್ಯಾರಂಟಿ ; ಸಂಶೋಧನೆ ಹೇಳೊದೇನು.?

  • ಉದ್ಯೋಗ ಸಂಸ್ಥೆ : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ.
  • ಹುದ್ದೆ ಹೆಸರು : ನಿರ್ವಾಹಕ (ಕಂಡಕ್ಟರ್).
  • ಒಟ್ಟು ಹುದ್ದೆಗಳ ಸಂಖ್ಯೆ : 2500.

ಅರ್ಜಿ ಹಾಕುವ ವಿಧಾನ :

* ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು Apply Online ವೆಬ್‌ ವಿಳಾಸಕ್ಕೆ ಭೇಟಿ ನೀಡಿ.
* ತೆರೆದ ವೆಬ್‌ಸೈಟ್‌ನಲ್ಲಿ HK/NHK ಹುದ್ದೆಗಳ ಅರ್ಜಿಗೆ ಪ್ರತ್ಯೇಕ ಲಿಂಕ್ ಇರುತ್ತವೆ.
* ನೀವು ಯಾವ ವೃಂದದ ಹುದ್ದೆಗೆ ಅರ್ಜಿ ಹಾಕಲು ಬಯಸುವಿರೋ ಸದರಿ ಲಿಂಕ್ ಕ್ಲಿಕ್ ಮಾಡಿ.
* ಕೆಇಎಯ ಮತ್ತೊಂದು ವೆಬ್‌ಸೈಟ್‌ ತೆರೆಯುತ್ತದೆ.
* ಇಲ್ಲಿ ಮೊದಲ ಬಾರಿಗೆ ಕೆಇಎ ಹುದ್ದೆಗೆ ಅರ್ಜಿ ಹಾಕುವವರು ‘New Applicant Registration’ ಎಂದಿರುವಲ್ಲಿ ಕ್ಲಿಕ್ ಮಾಡಿ.
* ಕೇಳಲಾದ ಮಾಹಿತಿ ನೀಡಿ ಅರ್ಜಿ ರಿಜಿಸ್ಟ್ರೇಷನ್‌ ಪಡೆಯಿರಿ.
* ರಿಜಿಸ್ಟ್ರೇಷನ್‌ ಪಡೆದಿರುವವರು ರಿಜಿಸ್ಟ್ರೇಷನ್ ಸಂಖ್ಯೆ, ಹೆಸರಿನ ಮೊದಲ 5 ಅಕ್ಷರ ನೀಡಿ ಲಾಗಿನ್‌ ಆಗುವ ಮೂಲಕ ಅರ್ಜಿ ಸಲ್ಲಿಸಿ.

ಅರ್ಜಿ ಶುಲ್ಕ ವಿವರ :

  • ಜೆನೆರಲ್ ಕೆಟಗರಿ/ಇತರೆ ಹಿಂದುಳಿದ ಪ್ರವರ್ಗಗಳಿಗೆ ಅರ್ಜಿ ಶುಲ್ಕ ರೂ.750.
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ, ಅಂಗವಿಕಲ ಅಭ್ಯರ್ಥಿಗಳಿಗೆ ರೂ.500.

ಇದನ್ನು ಓದಿ :‌ ರೇಷ್ಮೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ Online ಮೂಲಕ ಅರ್ಜಿ ಆಹ್ವಾನ.!

ವಯಸ್ಸು :

  • ಅಪ್ಲಿಕೇಶನ್ ಸ್ವೀಕರಿಸಲು ನಿಗದಿಪಡಿಸಿದ ಕೊನೆ ದಿನಾಂಕಕ್ಕೆ 18-05-2024 ಕ್ಕೆ ಕನಿಷ್ಠ 18 ವರ್ಷ ಆಗಿರಬೇಕು.
  • ಗರಿಷ್ಠ ವಯಸ್ಸು ವರ್ಗಾವಾರು ತಿಳಿಯಲು ಕೆಳಗಿನ ಡೀಟೇಲ್ಡ್‌ ಲೇಖನದ ಲಿಂಕ್ ಕ್ಲಿಕ್ ಮಾಡಿ ಓದಿರಿ.

ವೇತನ :

  • ಬಿಎಂಟಿಸಿ ನಿರ್ವಾಹಕ ಹುದ್ದೆಗೆ ವೇತನ ಶ್ರೇಣಿ : ರೂ.18660-25300.

ಬಿಎಂಟಿಸಿ ಕಂಡಕ್ಟರ್ ಪರೀಕ್ಷಾ ವಿಧಾನ :

ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯನ್ನು ಎರಡು ಪತ್ರಿಕೆಗಳಿಗೆ ತಲಾ 100 ಗಳಿಗೆ ನಡೆಸಿ, ನಂತರ ಇದರಲ್ಲಿನ ಶೇಕಡ.75 ಅಂಕಗಳು ಹಾಗೂ ಶೈಕ್ಷಣಿಕ ಅರ್ಹತೆಯ ಶೇಕಡ.25 ಅಂಕಗಳನ್ನು ಸೇರಿಸಿ ಮೆರಿಟ್ ಆಧಾರದ ಮೇಲೆ 1:5 ಅನುಪಾತದ ಅಭ್ಯರ್ಥಿಗಳಿಗೆ ಮೂಲ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ.

ಮಹತ್ವದ ದಿನಾಂಕ :

  • ಆನ್‌ಲೈನ್ ಮುಖಾಂತರ ಅರ್ಜಿ ಸ್ವೀಕಾರ ಮಾಡುವ ಕೊನೆ ದಿನಾಂಕ: 18-05-2024.
  • ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ : 19-05-2024.

Disclaimer : All information provided here is for reference purpose only. While we try to list all the scholarships for the convenience of students, this information is available on the internet. Please refer official website for official information.

 ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು ಕರ್ತವ್ಯವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
- Advertisment -spot_img