Wednesday, May 22, 2024
spot_img
spot_img
spot_img
spot_img
spot_img
spot_img

ಒಂದು ಹೊತ್ತು ಊಟ ಬಿಟ್ಟರೂ Heart​ ಅಟ್ಯಾಕ್​ ಗ್ಯಾರಂಟಿ ; ಸಂಶೋಧನೆ ಹೇಳೊದೇನು.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಇಂದಿನ ಕಾಲದಲ್ಲಿ ಹೃದಯ ಸಂಬಂಧಿ ಖಾಯಿಲೆಗಳು (Heart related diseases) ಜನರನ್ನು ಹೆಚ್ಚಾಗಿ ಪೀಡಿಸುತ್ತಿದ್ದು, ಯುವ ಪೀಳಿಗೆಯೇ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ.

ನಾವು ಅಳವಡಿಸಿಕೊಂಡಿರುವ ಆಹಾರ ಕ್ರಮ ಹೇಗಿರುತ್ತದೆಯೋ ಹೃದಯದ ಆರೋಗ್ಯವು ಅಷ್ಟೇ ಚೆನ್ನಾಗಿರುತ್ತದೆ ಎಂಬುದು ವೈದ್ಯರ ಅಭಿಪ್ರಾಯ.

ಇದನ್ನು ಓದಿ : Apex : ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ನಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಈಗಿನ ಜೀವನಶೈಲಿಗೆ ಜನರು ಹೊಂದಿಕೊಂಡಿರುವ ಹಾಗೆ ಮನೆಯ ಆಹಾರಕ್ಕಿಂತ ಮನೆ ಹೊರಗಿನ ಜಂಕ್ ಫುಡ್ ಸೇವನೆಗೆ ಹೆಚ್ಚು ಒತ್ತು ಕೊಡುತ್ತಾರೆ. ಇದರಿಂದ ಒಂದು ಹೊತ್ತಿನಲ್ಲಿ ಊಟ (one time lunch) ಮಾಡಬೇಕು ಎಂದು ಅನಿಸುವುದಿಲ್ಲ. ಇದು ಹಲವಾರು ಆರೋಗ್ಯ ಸಮಸ್ಯೆಗಳಿಗೆ ದಾರಿಯಾಗುತ್ತದೆ.

ಇನ್ನೂ ಕೆಲವರು ದೇಹದ ತೂಕ ಕಡಿಮೆ (weight loss) ಮಾಡಿಕೊಳ್ಳುವ ಒಂದೊತ್ತಿನ ಊಟ ಬಿಟ್ಟಿರುತ್ತಾರೆ. ಅಂತಹವರಿಗಾಗಿ ಈಗ ಸಂಶೋಧನೆ ಮೂಲಕ ಭಯಾನಕ ಸತ್ಯ ಒಂದು ಹೊರಬಿದ್ದಿದೆ. ಅಮೆರಿಕನ್​ ಹಾರ್ಟ್​ ಅಸೋಸಿಯೇಷನ್​​ (American Heart Association) ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಭಯಾನಕ ಅಂಶ ಬಯಲಾಗಿದೆ.

ಒಂದು ಹೊತ್ತು ಊಟ ತ್ಯಜಿಸಿದರೆ ಅಥವಾ ಎಂಟು ಗಂಟೆಗೂ ಹೆಚ್ಚಿನ ಕಾಲ ನಾವು ಆಹಾರವನ್ನು ಸೇವಿಸದಿದ್ದರೆ ಹೃದಯಾಘಾತ (heart attack) ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂದು ಸಂಶೋಧನೆ ತಿಳಿಸಿದೆ.

ಇನ್ನೂ 2003 ರಿಂದ 2019ರವರೆಗೆ ಹೃದಯಾಘಾತದಿಂದ ಸಾವಿಗೀಡಾದವರ ಸಾವಿನ ದತ್ತಾಂಶದೊಂದಿಗೆ ಸಮೀಕ್ಷೆ ನಡೆಸಲಾಗಿದ್ದು, ಶೇ. 91 ರಷ್ಟು ಮಂದಿ ಈ ಕಾರಣಕ್ಕಾಗಿ ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನು ಓದಿ : Health : ಕೈಯಿಂದ ಊಟ ಮಾಡುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು.!

ನಾವು ಆರೋಗ್ಯಕರವಾಗಿ ಬದುಕಲು ಮತ್ತು ದಿನ ನಿತ್ಯದ ಕಾರ್ಯ ಚಟುವಟಿಕೆಗಳಲ್ಲಿ ಹೆಚ್ಚಾಗಿ ಸಕ್ರಿಯತೆಯಿಂದ (actively) ಪಾಲ್ಗೊಳ್ಳಲು ನಿಯಮಿತವಾಗಿ ಆಹಾರವನ್ನು ಸೇವಿಸಿದರೆ ಮಾತ್ರ ಜೀವನಶೈಲಿ ಉತ್ತಮವಾಗಿರುತ್ತದೆ.

spot_img
spot_img
spot_img
- Advertisment -spot_img