Wednesday, May 22, 2024
spot_img
spot_img
spot_img
spot_img
spot_img
spot_img

ರಾಜ್ಯದಲ್ಲಿ ದಾಖಲೆ ಬರೆದ ಬಿಸಿಲು : ಈ ಜಿಲ್ಲೆಗಳಿಗೆ Red Alert ಘೋಷಿಸಿದ ಹವಾಮಾನ ಇಲಾಖೆ.

spot_img

ಜನಸ್ಪಂದನ ನ್ಯೂಸ್‌, ಬೆಂಗಳೂರು : ಕರ್ನಾಟಕದಲ್ಲಿ ಬಿಸಿಲಿನ ಪ್ರಮಾಣ ದಾಖಲೆಯನ್ನು ಬರೆದಿದ್ದು, ಈ ಕುರಿತು ಮಾಹಿತಿ ನೀಡಿರುವ ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರವು ಹಲವು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಿದ್ದು ಬಿಸಿಲಿಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದೆ.

ಮೇ 1ರ ಬುಧವಾರ ನಾಲ್ಕು ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶದ ಪ್ರಮಾಣ 45 ಡಿಗ್ರಿ ಸೆಲ್ಸಿಯಸ್‌ ಅನ್ನು ದಾಟಿದೆ. ಮೊದಲ ಬಾರಿಗೆ  ಈಗಾಗಲೇ ಕಲಬುರಗಿ, ರಾಯಚೂರು, ಬಾಗಲಕೋಟೆ, ವಿಜಯಪುರ, ಕೊಪ್ಪಳ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಉಷ್ಣಾಂಶದ ಪ್ರಮಾಣ ಮೂರು ತಿಂಗಳಿನಿಂದ ಏರಿಕೆಯಾಗುತ್ತಲೇ ಇದೆ. 44 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿದ್ದ ಉಷ್ಣಾಂಶದ ಪ್ರಮಾಣ ಈಗ ಅದನ್ನೂ ದಾಟಿದೆ.

ಇದನ್ನು ಓದಿ : Health : ಜೀರಿಗೆ ನೀರು ಕುಡಿಯುವುದರಿಂದ ಏನಾಗುವುದು.?

ಉದ್ಯಾನಗಳ ನಗರಿ ಎನ್ನುವ ಬಿರುದಾಂಕಿತ ಬೆಂಗಳೂರಿನಲ್ಲಿ ಈ ಬಾರಿ ಬಿಸಿಲಿನ ಪ್ರಮಾಣ ಕೊಂಚ ಹೆಚ್ಚೇ ಇದೆ. ಏಪ್ರಿಲ್‌ ಕೊನೆ ವಾರದಲ್ಲಿ ಏರಿಕೆ ಕಂಡಿದ್ದ ಉಷ್ಣಾಂಶದ ಪ್ರಮಾಣ ಅದೇ ಸ್ಥಿತಿಯಲ್ಲಿಯೇ ಇದೆ. ಕರ್ನಾಟಕ ರಾಜ್ಯದಲ್ಲಿ ಮೇ 01 ರಿಂದ ಮುಂದಿನ 5 ದಿನಗಳವರೆಗೆ ಶಾಖದ ಅಲೆ ಹೆಚ್ಚಳವಾಗುತ್ತಿದ್ದು, ಸಾರ್ವಜನಿಕರು ಅಗತ್ಯ ಮುಂಜಾಗ್ರತೆ ಕ್ರಮ ವಹಿಸಬೇಕು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದ ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲಿ ತೀವ್ರ ಶಾಖದ ಅಲೆಯು ಚಾಲ್ತಿಯಲ್ಲಿರುವ ಸಾಧ್ಯತೆಯಿದ್ದು, ಗರಿಷ್ಠ ತಾಪಮಾನದ ಪರಿಸ್ಥಿತಿಗಳು ಮುಂದಿನ 5 ದಿನಗಳವರೆಗೆ ರಾಜ್ಯದಾದ್ಯಂತ ಮುಂದುವರಿಯುವ ಸಾಧ್ಯತೆಯಿದೆ ಎಂದು ಭಾರತ ಹವಮಾನ ಇಲಾಖೆಯು ಹೇಳಿದೆ.

ಇದನ್ನು ಓದಿ : ಪೆಟ್ರೋಲ್ ಬಂಕ್​ನ ಸಿಬ್ಬಂದಿ ಮುಂದೆ ಬಟ್ಟೆ ಬಿಚ್ಚಿ ಯುವತಿಯ ಅಸಭ್ಯ ವರ್ತನೆ ; Video Viral.!

ಹಾಗೇಯೇ ಬಳ್ಳಾರಿ, ಕಲಬುರ್ಗಿ, ವಿಜಯಪುರ, ರಾಯಚೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶಾಖದ ಅಲೆಯು ಹೆಚ್ಚಾಗಲಿದೆ.

ಮುಂಗಾರು ಮಳೆ ಆರಂಭಗೊಂಡ ನಂತರ ಬಿಸಿಲಿನ ಪ್ರಮಾಣ ತಗ್ಗಬಹುದು ಎಂದು ಹವಾಮಾನ ತಜ್ಞರು ಹೇಳುತ್ತಿದ್ದಾರೆ. ಬೆಂಗಳೂರಿನಲ್ಲಿ ಏಪ್ರಿಲ್‌ ತಿಂಗಳಲ್ಲಿ ಗರಿಷ್ಠ ಉಷ್ಣಾಂಶದ ಪ್ರಮಾಣ 38.5 ಡಿಗ್ರಿ ಸೆಲ್ಸಿಯಸ್‌ ದಾಟಿತ್ತು. ಇದು ಎಂಟು ವರ್ಷ ನಂತರದ ಅತ್ಯಧಿಕ ಉಷ್ಣಾಂಶ 2016 ರಲ್ಲಿ ಉಷ್ಣಾಂಶ ಪ್ರಮಾಣ 39.2 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಅದನ್ನೇ ಅಧಿಕ ಎಂದುಕೊಳ್ಳಲಾಗಿತ್ತು. ಈಗ ಮೇ ನಲ್ಲಿ ಇದು 40 ಡಿಗ್ರಿ ಸೆಲ್ಸಿಯಸ್‌ ಅನ್ನು ತಲುಪಿದೆ.

ಇದನ್ನು ಓದಿ : ರೇಷ್ಮೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ Online ಮೂಲಕ ಅರ್ಜಿ ಆಹ್ವಾನ.!

ರೆಡ್‌ ಅಲರ್ಟ್‌ ಘೋಷಣೆ :

ಮುಂದಿನ ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಹಳೆ ಮೈಸೂರು, ಮಲೆನಾಡು ಭಾಗದಲ್ಲೂ ಬಿಸಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಲಾಗಿದೆ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ ಹಕ್ಕು” ಮತ್ತು ಕರ್ತವ್ಯವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
spot_img
- Advertisment -spot_img