Wednesday, May 22, 2024
spot_img
spot_img
spot_img
spot_img
spot_img
spot_img

ಚುನಾವಣಾ ಕರ್ತವ್ಯಕ್ಕೆ ತೆರಳುತ್ತಿದ್ದ ಸಿಬ್ಬಂದಿ ಹೃದಯಾಘಾತದಿಂದ ಸಾವು.!

spot_img

ಜನಸ್ಪಂದನ ನ್ಯೂಸ್‌, ಬಾಗಲಕೋಟೆ : ನಾಳೆ ನಡೆಯಲಿರುವ ಲೋಕಸಭಾ ಚುನಾವಣೆಗೆ ಕರ್ತವ್ಯ ನಿರ್ವಹಿಸಲು ತೆರಳುತ್ತಿದ್ದ ಸರ್ಕಾರಿ ಶಾಲಾ ಶಿಕ್ಷಕರೊಬ್ಬರೊಬ್ಬರು ದಿಢೀರ್ ಹೃದಯಾಘಾತದಿಂದ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ರಾಜ್ಯದ 14 ಲೋಕಸಭೆ ಕ್ಷೇತ್ರಗಳಿಗೆ ಮೇ 07ರಂದು ನಡೆಯಲಿರುವ ಎರಡನೇ ಹಂತದ ಲೋಕಸಭಾ ಚುನಾವಣೆಯ ಮತದಾನದ ಸಲುವಾಗಿ ಕರ್ತವ್ಯಕ್ಕೆ ತೆರಳುತ್ತಿದ್ದ ಸರ್ಕಾರಿ ಶಾಲಾ ಶಿಕ್ಷಕರೊಬ್ಬರು, ಬಸ್​ ಹತ್ತುವ ವೇಳೆ ದಿಢೀರ್ ಹೃದಯಾಘಾತದಿಂದ ಸ್ಥಳದಲ್ಲೇ ಮೃತಪಟ್ಟ ಘಟನೆ ಬಾಗಲಕೋಟೆಯ ಮುಧೋಳ ನಗರದಲ್ಲಿ ನಡೆದಿದೆ.

ನಮ್ಮ ಮೆಟ್ರೋದಲ್ಲಿ ಎಲ್ಲರ ಮುಂದೆಯೇ ತಬ್ಬಿಕೊಂಡು ಕಿಸ್ ಮಾಡಿದ ಪ್ರೇಮಿಗಳು ; Video Viral.!

ಶಿಕ್ಷಕನನ್ನು ಮುಧೋಳ ತಾಲೂಕಿನ ಇಂಗಳಗಿ ಗ್ರಾಮದ ಗೋವಿಂದಪ್ಪ ಸಿದ್ದಾಪುರ (47)ಎಂದು ಗುರುತಿಸಲಾಗಿದೆ. ಬಸ್ ನಿಲ್ದಾಣದ ಗೇಟ್ ಬಳಿ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಶಿಕ್ಷಕರು ಬಿದರಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸಲ್ಲಿಸುತ್ತದ್ದ ಅವರು ಚುನಾವಣಾ ಕರ್ತವ್ಯಕ್ಕೆ ತೆರಳಲು ಬಸ್ ಹತ್ತಲು ಬಂದಿದ್ದ ವೇಳೆ ಅವಘಡ ಸಂಭವಿಸಿದೆ.

Mafia : ಪೊಲೀಸ್ ಅಧಿಕಾರಿಯ ಮೇಲೆಯೇ ಟ್ರ್ಯಾಕ್ಟರ್ ಹತ್ತಿಸಿ ಪರಾರಿಯಾದ ಚಾಲಕ.!

ಮೃತಪಟ್ಟ ವ್ಯಕ್ತಿ ಸರಕಾರಿ ಪ್ರಾಥಮಿಕ ಶಾಲೆ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಚುನಾವಣೆಯ ಹಿನ್ನಲೆ ಅವರನ್ನು ಜಮಖಂಡಿ ತಾಲೂಕಿನ ಮೈಗೂರು ಪ್ರಾಥಮಿಕ ಶಾಲೆ ಮತಗಟ್ಟೆಗೆ ಚುನಾವಣಾ ಕರ್ತವ್ಯಕ್ಕೆ ಆಹ್ವಾನಿಸಲಾಗಿತ್ತು. (ಎಜೇನ್ಸಿಸ್)

ಜನಸ್ಪಂದನ ನ್ಯೂಸ್‌, ಕಳಕಳಿಮತದಾನ ಪ್ರತಿಯೊಬ್ಬ ಭಾರತೀಯನ ಹಕ್ಕು ಮತ್ತು “ಕರ್ತವ್ಯವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
spot_img
- Advertisment -spot_img