Saturday, July 27, 2024
spot_img
spot_img
spot_img
spot_img
spot_img
spot_img

2024 – ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ : ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.!

spot_img

ಜನಸ್ಪಂದನ ನ್ಯೂಸ್, ಬೆಂಗಳೂರು :ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಹುದ್ದೆ (Village Administrative Officer) ನೇಮಕಾತಿಗೆ ಅರ್ಜಿ ಸಲ್ಲಿಕೆ ಅವಧಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮತ್ತೆ ವಿಸ್ತರಣೆ ಮಾಡಿದೆ. ಅರ್ಜಿ ಸಲ್ಲಿಕೆಗೆ ಮೇ 5 ಕೊನೆಯ ದಿನವಾಗಿತ್ತು. ಆದರೆ, ಅರ್ಜಿ ಸಲ್ಲಿಕೆ ಹಾಗೂ ಶುಲ್ಕ ಪಾವತಿಸಲು ತಾಂತ್ರಿಕ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಅವಧಿ ವಿಸ್ತರಿಸಲು ಹುದ್ದೆ ಆಕಾಂಕ್ಷಿಗಳು ಕೋರಿದ್ದರು. ಹೀಗಾಗಿ ಮೇ 15ರವರೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸಲಾಗಿದೆ.

ಹೌದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ  ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಅರ್ಜಿಗಳನ್ನು ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳ ನೇಮಕಾತಿಗೆ ಅರ್ಹತೆ ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಬಾರಿ ಒಟ್ಟು 1,000 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ.

Health : ಅರಿಶಿನ ಬೆರೆಸಿದ ನೀರು ಕುಡಿಯುವುದರಿಂದ ಎಷ್ಟೆಲ್ಲ‌ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ.?

ಶೈಕ್ಷಣಿಕ ವಿದ್ಯಾರ್ಹತೆ : ದ್ವಿತೀಯ ಪಿಯುಸಿ ಅಥವಾ ತತ್ಸಮಾನ.

* ಸಿಬಿಎಸ್‌ಸಿ ಮತ್ತು ಐಸಿಎಸ್‌ಸಿ ಮಂಡಳಿಯು ನಡೆಸುವ ಕ್ಲಾಸ್ 12 ಪರೀಕ್ಷೆ
* ಇತರೆ ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿಗಳಿಂದ ನಡೆಸುವ ಕ್ಲಾಸ್ 12 ಪರೀಕ್ಷೆ
* ಮೂರು ವರ್ಷಗಳ ಡಿಪ್ಲೋಮಾ ಅಥವಾ ಎರಡು ವರ್ಷಗಳ ಐಟಿಐ ಕೋರ್ಸ್ ಅಥವಾ ಎರಡು ವರ್ಷಗಳ    ವೃತ್ತಿ ಶಿಕ್ಷಣ ಡಿಪ್ಲೋಮಾ (ಜೆ.ಓ.ಸಿ/ಜೆ.ಓ.ಡಿ.ಸಿ/ಜೆ.ಎಲ್.ಡಿ.ಸಿ).

ಯಾವ ಜಿಲ್ಲೆಯಲ್ಲಿ ಎಷ್ಟು ಪೋಸ್ಟ್ ?

* ಬೆಂಗಳೂರು ನಗರ – 32.
* ಬೆಂಗಳೂರು ಗ್ರಾಮಾಂತರ – 34.
* ಚಿತ್ರದುರ್ಗ – 32.
* ಕೋಲಾರ – 45.
* ತುಮಕೂರು – 73.
* ರಾಮನಗರ – 51.
* ಚಿಕ್ಕಬಳ್ಳಾಪುರ – 42.
* ಶಿವಮೊಗ್ಗ – 31.
* ಮೈಸೂರು – 66.
* ಚಾಮರಾಜನಗರ – 55.
* ಮಂಡ್ಯ – 60.
* ಹಾಸನ – 54.
* ಚಿಕ್ಕಮಗಳೂರು – 23.
* ಕೊಡಗು – 06.
* ಉಡುಪಿ – 22.
* ದಕ್ಷಿಣ ಕನ್ನಡ – 50.
* ಬೆಳಗಾವಿ – 64
* ವಿಜಯಪುರ – 07.
* ಬಾಗಲಕೋಟೆ – 22.
* ಧಾರವಾಡ – 12.
* ಗದಗ – 30.
* ಹಾವೇರಿ – 34
* ಉತ್ತರ ಕನ್ನಡ – 02.
* ಕಲಬುರಗಿ – 67.
* ರಾಯಚೂರು – 04.
* ಕೊಪ್ಪಳ – 19.
* ಬಳ್ಳಾರಿ – 17.
* ಬೀದರ್ – 24.
* ಯಾದಗಿರಿ – 09 ಮತ್ತು
* ವಿಜಯನಗರ – 03.

ಸ್ಕೂಲ್ ಬಸ್‌ಗಳಿಗೆ ಹಳದಿ ಕಲರ್ ಯಾಕೆ ಇರುತ್ತೆ ಗೊತ್ತಾ.? ಇಲ್ವಾ, ಹಾಗಾದ್ರೆ ಈ ಸುದ್ದಿ ಓದಿ.!

ವಯೋಮಿತಿ : 

ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ಮೀರಿರಬಾರದು.
ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ಮೀರಿರಬಾರದು.
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ಮೀರಿರಬಾರದು.

ಪ್ರಮುಖ ದಿನಾಂಕಗಳು :

* ಆನ್‌ಲೈನ್‌ ಮುಖಾಂತರ ಅಪ್ಲಿಕೇಶನ್‌ ಸಲ್ಲಿಸಲು ಪ್ರಾರಂಭಿಕ ದಿನಾಂಕ : 04-03-2024.
* ಆನ್‌ಲೈನ್‌ ಮುಖಾಂತರ ಅಪ್ಲಿಕೇಶನ್‌ ಸಲ್ಲಿಸಲು ಕೊನೆ ದಿನಾಂಕ : 04-04-2024.
* ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ : 06-04-2024.

* ಆನ್‌ಲೈನ್‌ ಮುಖಾಂತರ ಅಪ್ಲಿಕೇಶನ್‌ ಸಲ್ಲಿಸಲು ವಿಸ್ತರಿಸಲಾದ ಕೊನೆ ದಿನಾಂಕ : 15-05-2024.
* ಅರ್ಜಿ ಶುಲ್ಕವನ್ನು ಪಾವತಿ ಮಾಡಲು ವಿಸ್ತರಿಸಲಾದ ಕೊನೆಯ ದಿನಾಂಕ : 18-05-2024.

ಅಭ್ಯರ್ಥಿಗಳ ಅರ್ಹತೆ ವಿವರ, ವಯೋಮಿತಿ, ಸ್ಪರ್ಧಾತ್ಮಕ ಪರೀಕ್ಷೆ, ಆಯ್ಕೆ ಪ್ರಕ್ರಿಯೆ ಮತ್ತು ನೇಮಕಾತಿಯ ವಿವರ ಹಾಗೂ ಪ್ರವರ್ಗವಾರು ಮತ್ತು ಜಿಲ್ಲಾವಾರು ಹುದ್ದೆಗಳ ವಿವರಗಳು ಹಾಗೂ ಇನ್ನಿತರ ಮಾಹಿತಿಗಾಗಿ ಈ ಕೆಳಗಿನ  ಕೆಇಎ ವೆಬ್’ಸೈಟ್’ಗೆ ಭೇಟಿ ನೀಡಬಹುದು.

https://cetonline.karnataka.gov.in/kea/indexnew

ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅಪ್ಲಿಕೇಶನ್‌ ಶುಲ್ಕ ವಿವರ : 

ಸಾಮಾನ್ಯ ಅರ್ಹತೆ, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.750/- ; ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಮತ್ತು ವಿಕಲ ಚೇತನ ಅಭ್ಯರ್ಥಿಗಳಿಗೆ ರೂ.500/-

ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಹೊರತುಪಡಿಸಿ ಇತರೆ ಯಾವುದೇ ಮಾದರಿಯಲ್ಲಿ ಅರ್ಜಿ ಹಾಕಲು ಅವಕಾಶ ಇಲ್ಲ. ಅಪ್ಲಿಕೇಶನ್‌ ಲಿಂಕ್‌ ಅನ್ನು ಮಾರ್ಚ್ 04 ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಆಕ್ಟಿವೇಟ್‌ ಮಾಡಲಿದೆ. ನಂತರ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಇರಲಿದ್ದು, ಆಸಕ್ತರು ಇಂದಿನಿಂದಲೇ ಸಕಲ ಸಿದ್ಧತೆ ನಡೆಸಿಕೊಳ್ಳಿ.

Video : ನೋಡುಗರಿಗೆ ನಡುಕ ಹುಟ್ಟಿಸಿದ ಆರ್. ಮಾಧವನ್ ‘ಶೈತಾನ್’ ಟ್ರೇಲರ್.!

ಸ್ಪರ್ಧಾತ್ಮಕ ಪರೀಕ್ಷಾ ವಿಧಾನ :

ಈ ಮೇಲ್ಕಂಡ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಫ್-ಲೈನ್‌ (ಓಎಂಆರ್)‌ ಮೂಲಕ ನಡೆಸಲಾಗುವುದು.

ವಿಶೇಷ ಸೂಚನೆ :

  • ಕೇವಲ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು, ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವುದು ಮತ್ತು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವುದು ಅಭ್ಯರ್ಥಿಗಳಿಗೆ ಗ್ರಾಮ ಆಡಳಿತ ಅಧಿಕಾರಿ ನೇಮಕಾತಿಗೆ ಯಾವುದೇ ಹಕ್ಕನ್ನು ನೀಡುವುದಿಲ್ಲ.
  • ನೇಮಕಾತಿಯು ಸರ್ಕಾರ / ಸಕ್ಷಮ ಪ್ರಾಧಿಕಾರ / ನೇಮಕಾತಿ ಪ್ರಾಧಿಕಾರವು ನಿಗದಿಪಡಿಸಬಹುದಾದ ಅರ್ಹತಾ ಮಾನದಂಡಗಳಿಗೆ ಒಳಪಟ್ಟಿರುತ್ತದೆ.
  • ಮೇಲಿನ ಯಾವುದೇ ನಿಯಮಗಳು / ಕಾರ್ಯವಿಧಾನಗಳಿಗೆ ಸಂಬಂಧಿಸಿದಂತೆ ವ್ಯತ್ಯಾಸ ಅಥವಾ ಅಸ್ಪಷ್ಟತೆ ಕಂಡು ಬಂದಲ್ಲಿ, ಕರ್ನಾಟಕ ನಾಗರೀಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು, 1977 (ತಿದ್ದುಪಡಿಗಳು), ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021 (ತಿದ್ದುಪಡಿಗಳು) ಮತ್ತು ಗ್ರಾಮ ಆಡಳಿತ ಅಧಿಕಾರಿ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಸಾಮಾನ್ಯ ನಿಯಮಗಳು (ರೆವೆನ್ಯೂ ಸಬಾರ್ಡಿನೇಟ್ ಬ್ರಾಂಜ್) (C&R) (ತಿದ್ದುಪಡಿ) ನಿಯಮಗಳು 2024 ರಲ್ಲಿರುವಂತೆ ಅನ್ವಯಿಸುತ್ತದೆ.

Disclaimer : ಈ ವಿಷಯ ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

spot_img
spot_img
- Advertisment -spot_img