Thursday, April 25, 2024
spot_img
spot_img
spot_img
spot_img
spot_img
spot_img

Astrology : ಫೆ. 24 ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

spot_img

ಜನಸ್ಪಂದನ ನ್ಯೂಸ್, ಜೋತಿಷ್ಯ : 2024 ಫೆಬ್ರವರಿ 24ರ ಶನಿವಾರ (Saturday) ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಮೇಷ ರಾಶಿ :
ನಿಮ್ಮ ಅನವರತ ಪ್ರಯತ್ನದ ಹಾಗೂ ಕುಟುಂಬದ ಸದಸ್ಯರ ಸಮಯೋಚಿತ (timely) ಬೆಂಬಲದ ಫಲವಾಗಿ ನಿಮಗಮ ಆಸೆಯನ್ನು ಈಡೇರಿಸಿಕೊಳ್ಳುವಿರಿ. ನೀವು ಪ್ರವಾಸ ಮಾಡುತ್ತಿದ್ದರೆ ನಿಮ್ಮ ಅಮೂಲ್ಯ ಸಂಪತ್ತುಗಳ ಬಗ್ಗೆ ವಿಶೇಷ ಎಚ್ಚರಿಕೆ ಇರಲಿ.

ಇದನ್ನು ಓದಿ : Astrology : ಫೆ. 20ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ನಿಮ್ಮ ಮನೆಯ ಸ್ವಚ್ಛತೆಯ ಬಗ್ಗೆ ಗಮನಹರಿಸಿ. ನಿಮ್ಮ ವಿಚಾರಕ್ಕೆ ಕೋಪಗೊಂಡಿದ್ದರೆ, ಅವರನ್ನು ಶಾಂತಗೊಳಿಸಲು ಪ್ರಯತ್ನಿಸಿ. ವಿವಿಧ ವೃತ್ತಿಗಳು ನಿಮ್ಮನ್ನು ಕರೆಯಬಹುದು. ಪಾಲುದಾರಿಕೆಯು ನಿಮಗೆ ಮೋಸದಂತೆ ಕಾಣುವುದು. ಶತ್ರುಗಳ (enemy) ಬಗ್ಗೆ ಯಾರಾದರೂ ಕಿವಿಚುಚ್ಚುವರು. ನೀರಿನ ಸ್ಥಳದಲ್ಲಿ ಎಚ್ಚರಿಕೆಯಿಂದ ಇರಿ. ಆಪಾಯದ ಸೂಚನೆಯನ್ನು ಗಮನಿಸಿಕೊಳ್ಳಿ. ವ್ಯಾಪಾರವನ್ನು ಅಚ್ಚುಕಟ್ಟಾಗಿ ಮುಗಿಸುವ ಕೌಶಲವು ನಿಮ್ಮಲ್ಲಿರುವುದು.

ವೃಷಭ ರಾಶಿ :
ನೀವು ಶಾರೀರಿಕವಾದ ಸೌಂದರ್ಯದ ಕಡೆ ಗಮನ ಅತಿಯಾಗುವುದು. ಸಹೋದರ ಪ್ರೀತಿಯಿಂದ (brother love) ನಿಮಗೆ ಖುಷಿಯಾಗಲಿದೆ. ಎಲ್ಲರಿಂದ ನಿರ್ಮಲ ಪ್ರೀತಿಯನ್ನು ಅನುಭವಿಸಿ. ನೀವು ಕೆಲಸದಲ್ಲಿ ಇಂದು ನಿಜವಾಗಿಯೂ ಯಾವುದಾದರೂ ಅದ್ಭುತವಾದದ್ದನ್ನು ಸಾಧಿಸಬಹುದು.

ಈ ದಿನ ಶ್ರೇಷ್ಠವಾಗಿದೆ, ಇತರರೊಂದಿಗೆ ನೀವು ನಿಮಗಾಗಿ ಸಹ ಸಮಯವನ್ನು ಕಳೆಯುವಿರಿ. ನಿಮ್ಮ ಸಂಗತಿ ಇಂದು ಸ್ವರ್ಗದ ಮೇಲೆ ಇದೆ, ಇಂದು ಅದು ನಿಮಗೆ ಅರ್ಥವಾಗುತ್ತದೆ. ನಿಮ್ಮ ಪ್ರಯತ್ನಕ್ಕೆ ಸರಿಯಾದ ಫಲವು ಸಿಗುವುದು. ಆದಾಯವನ್ನು ನಿರೀಕ್ಷಿತ ಖರ್ಚಿನ (Expected cost) ಬಗ್ಗೆ ನಿಯಂತ್ರಣ ಬೇಕು

ಮಿಥುನ ರಾಶಿ :
ಇಂದು ಯಾರನ್ನಾದರೂ ಸೆಳೆಯುವ ಪ್ರಯತ್ನ ಮಾಡುವಿರಿ. ನೀವು ನಿಮ್ಮ ಯೋಜನೆಗಳನ್ನು ಜಾರಿಗೊಳಿಸಿದರೆ, ಇಂದು ಕೊಂಚ ಹೆಚ್ಚಿನ ಹಣವನ್ನು ಗಳಿಸುವಿರಿ. ದೂರವಾದ ಸಂಬಂಧಿಯೊಬ್ಬರಿಂದ ಬರುವ ಅನಿರೀಕ್ಷಿತ ಸಂದೇಶವು (message) ಸಂಪೂರ್ಣ ಕುಟುಂಬಕ್ಕೆ ಉಲ್ಲಾಸ ಬರುವುದು. ನೀವು ಯಾವುದೇ ಹೊಸ ಉದ್ಯಮವನ್ನು ಆರಂಭಿಸುವ ಮುನ್ನ ಎರಡು ಸಲ ಚಿಂತಿಸಿ. ಖಾಲಿ ಸಮಯದ ಸದುಪಯೋಗವನ್ನು ನೀವು ಕಲಿತುಕೊಳ್ಳಬೇಕು.

ಕಟಕ ರಾಶಿ :
ಕೃಷಿಯ ಉತ್ಪನ್ನದಿಂದ ಅಧಿಕ‌ಲಾಭವಿರಲಿದೆ. ನಿಮ್ಮನ್ನು ವಿರೋಧಿಸುವವರು ಹೆಚ್ಚಾದಾರು. ವಿರೋಧಿಗಳನ್ನು ಲೆಕ್ಕಿಸದೇ ನಿಮ್ಮಷ್ಟಕ್ಕೆ ಇರುವಿರಿ. ನಿಂತ ಕಾರ್ಯಕ್ಕೆ ಚಾಲನೆ ನೀಡುವಿರಿ. ನಿದ್ರೆ ಇಲ್ಲದೇ ಮಾನಸಿಕ‌ವಾಗಿ (mentally) ಕುಗ್ಗುವಿರಿ. ಸ್ಪರ್ಧೆಗಾಗಿ ನಡೆಸಿದ ನಿಮ್ಮ ಶ್ರಮವು ವ್ಯರ್ಥವಾದೀತು. ನಿಮ್ಮ‌ ಮೇಲಿರುವ ಭಾವನೆಯು ದೂರಾಗಬಹುದು. ಅಮೂಲ್ಯ ಸಮಯವನ್ನು ಆಲಸ್ಯದಿಂದ ಕಳೆಯುವಿರಿ. ಆಸ್ತಿಯ ವಿಚಾರಕ್ಕೆ ನೆರಮನೆಯವರ ಜೊತೆ ಕಲಹವಾಗಲಿದೆ.

ಸಿಂಹ ರಾಶಿ :
ಇಂದು ಹಲವು ಕಾರ್ಯಗಳನ್ನು ಒಂದೇ ಸಲ ಮಾಡಬೇಕಾಗಬಹುದು. ಎಲ್ಲವೂ ಆಗಿಹೋದಂತೆ ನಿಮಗೆ ಅನ್ನಿಸಬಹುದು. ನಿಮ್ಮವರನ್ನು ಬಿಟ್ಟು ಹೋದವರ ಬಗ್ಗೆ ಆಲೋಚನೆ (thought) ಬೇಡ. ವಸತಿಯಲ್ಲಿ ತೊಂದರೆ ಬಂದ ಕಾರಣ ಬದಲಾಯಿಸುವ ಸಂದರ್ಭವೂ ಬರಬಹುದು. ಸಂತಾನದ ವಿಚಾರದಲ್ಲಿ ಅಶಾಂತಿ ಮೂಡಬಹುದು. ನಿಮ್ಮವರೆಂದುಕೊಂಡವರು ನಿಮ್ಮವರಾಗದೇ ಇರಬಹುದು. ಅನಾರೋಗ್ಯವನ್ನೂ ನೀವು ಲೆಕ್ಕಿಸದೇ ಕಾರ್ಯದಲ್ಲಿ ಪ್ರವೃತ್ತರಾಗುವಿರಿ.

ಕನ್ಯಾ ರಾಶಿ :
ವಿಶ್ರಾಂತಿಯ ಸಮಯವನ್ನು ನೀವು ಬದಲಿಸಿಕೊಳ್ಳುವಿರಿ. ಮನೆಯ ಚಿಕ್ಕ ಕೆಲಸಗಳಿಗೆ ನಿಮ್ಮ ಹಣ ವ್ಯರ್ಥವಾಗಬಹುದು. ಮಕ್ಕಳು ತಮ್ಮ ಸಾಧನೆಗಳಿಂದ ಗರ್ವಪಡಯವರು. ಪ್ರೇಮಿಗಳ‌ (lover’s) ನಡುವೆ ವಾಗ್ವಾದವು ನಡೆಯಬಹುದು. ಇಂದು ತಜ್ಞರ ಜೊತೆ ನಿಮ್ಮ ಅನುಭವವನ್ನು ಹಂಚಿಕೊಳ್ಳುವಿರಿ. ನಿಮ್ಮ ಹಿಂಜರಿಕೆಗೆ ಕಹಿ ಅನುಭವಗಳು ಕಾರಣವಾಗಬಹುದು. ಇಂದು ಹಿರಿಯರಿಂದ ಕೆಲವು ಹಿತೋಪದೇಶವನ್ನು ಕೇಳಬೇಕಾದೀತು.

ಇದನ್ನು ಓದಿ : Astrology : ಫೆ. 8 ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ತುಲಾ ರಾಶಿ :
ನಿಮ್ಮ ಸಾಮರ್ಥ್ಯವನ್ನು ವರ್ಧಿಸಲು ಕೌಶಲವೂ ಇರಲಿ. ಸ್ತ್ರೀಯರು ತಮ್ಮ ಕೌಶಲವನ್ನು ತೋರಿಸುವರು. ಪಾಲುದಾರಿಕೆಯ ಭೂ ಸಂಬಂಧದ ಕಾರ್ಯದಿಂದ ಲಾಭವಾಗಲಿದೆ. ದಾಂಪತ್ಯವು ಪರಸ್ಪರ ಸೌಹಾರ್ದದ ಮಾತುಗಳಿಂದ ನೆಮ್ಮದಿ (peace of mind) ಸಿಗುವುದು.‌ ಮಕ್ಕಳ‌ ವಿಚಾರವಾಗಿ ಅನವಶ್ಯಕ ಖರ್ಚು ಮಾಡುವುದು ಬೇಡ. ಅವಶ್ಯಕತೆಯನ್ನು ನೋಡಿ. ಯಾರಸದರೂ ಅಸತ್ಯವನ್ನು ಆಡಿದರೆ ಅದನ್ನು ಸರಳವಾಗಿ ಕಂಡು ಹಿಡಿಯುವಿರಿ.‌ ನೀವು ಮೌನದಿಂದ ಇದ್ದರೆ ಒಪ್ಪಿಗೆ ಕೊಟ್ಟಿದ್ದೀರಿ ಎಂದಾಗುವುದು.

ವೃಶ್ಚಿಕ ರಾಶಿ :
ನೀವು ಮಾನಸಿಕ ದೌರ್ಬಲ್ಯಕ್ಕೆ ಬೇಕಾದುದನ್ನು ಮಾಡಿಕೊಳ್ಳುವಿರಿ. ಇಂದು ನಿಮಗೆ ಹೂಡಿಕೆ ಮಾಡುವುದು ಸಾಕೆನಿಸಬಹುದು. ಪಿರ್ತ್ರಾರ್ಜಿತ ಆಸ್ತಿಯ (inherited property) ಬಗ್ಗೆ ಆಸೆ ಬರಬಹುದು. ನಿಮ್ಮ ಯೋಜನೆಗಳು ಅಂತಿಮ ಸ್ವರೂಪವನ್ನು ಪಡೆಯಲಿವೆ. ಮನೆಯ ಸದಸ್ಯರೊಂದಿಗೆ ವಾದ ಮಾಡುವ ವೇಳೆಯಲ್ಲಿ ಕೋಪಗೊಳ್ಳುವ ಸಂಭವವಿದೆ. ಇದಾದ ನಂತರ ಮನೆಯ ಸದಸ್ಯರನ್ನು ಮನವೊಲಿಸಲು ನಿಮ್ಮ ಹೆಚ್ಚಿನ ಸಮಯ ವ್ಯಯವಾಗಬಹುದು.

ಧನು ರಾಶಿ :
ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ನೋಡಿಕೊಳ್ಳಲು ಹೋಗಿ ನಿಮ್ಮ ಆರ್ಥಿಕತೆಯು ಹಿಂದಡಿ ಇಡಬಹುದು. ಸಮಾರಂಭದಲ್ಲಿ ಹಳೆಯ ಸ್ನೇಹಿತರ ಭೇಟಿಯಾಗುವುದು. ಆಕಸ್ಮಿಕ (suddenly) ಧನಪ್ರಾಪ್ತಿಯಿಂದ ಹರ್ಷಗೊಳ್ಳುವಿರಿ. ಶ್ರೇಷ್ಠ ವ್ಯಕ್ತಿಗಳ ಸಹವಾಸವು ನಿಮಗೆ ಸಿಗಲಿದೆ. ವಿದ್ಯಾರ್ಥಿಗಳು ಯಾರ ಬೆಂಬಲಕ್ಕೂ ಕಾಯದೇ ನಿಮ್ಮ ಪ್ರತಿಭೆಯ ಪ್ರದರ್ಶನಕ್ಕೆ ಮುನ್ನುಗ್ಗುವುದು ಸೂಕ್ತ. ನಿಮ್ಮ ಮನಸ್ಸಿಗೆ ಪೂರ್ಣವಾಗಿ ಒಪ್ಪಿಗೆ ಆದರೆ ಮಾತ್ರ ಯಾವ ಕೆಲಸಕ್ಕಾದರೂ ಮುಂದುವರಿಯಿರಿ.

ಮಕರ ರಾಶಿ :
ವ್ಯವಹಾರಗಳಲ್ಲಿ ನೀವು ಎಚ್ಚರಿಕೆಯಿಂದಿರಿ. ನಿಮಗೆ ಅನುಕೂಲಕರವಾಗಿರುತ್ತದೆ. ಕುಟುಂಬದ ಸ್ಥಿತಿಗತಿಗಳು ಇಂದು ನೀವು ಊಹಿಸಿದಂತೆ ಇರದು. ಕೆಲವು ಸನ್ನಿವೇಶಗಳಲ್ಲಿ ನಿಯಂತ್ರಣ (control) ಅವಶ್ಯಕ. ಇಂದು ನೀವು ಇತರರಿಗೆ ಹೇಳುವ ಉತ್ಸಾಹವನ್ನು ಮಾಡುವುದಿಲ್ಲ. ನಿಮ್ಮ ಜೀವನಸಂಗಾತಿ ಇಂದು ನಿಮಗೆ ಪೂರ್ಣ ಬಲ ಮತ್ತು ಪ್ರೀತಿಯನ್ನು ನೀಡುವರು. ಎಲ್ಲರ ಜೊತೆಗಿದ್ದರೂ ಒಂಟಿಯಂತೆ ಅನ್ನಿಸುವುದು

ಕುಂಭ ರಾಶಿ :
ನಿಮ್ಮ ಸಾಮರ್ಥ್ಯವು ದುರ್ಬಲಯಾಗಬಹುದು. ಅದು ನಿಮ್ಮನ್ನು ಭೀತಿಗೊಳಿಸುವ ಮೊದಲು ಮೂಲದಲ್ಲೇ ನಿವಾರಿಸುವುದು ಉತ್ತಮ. ನೀವು ಸಾಲ ಪಡೆಯಲು ಯೋಜನೆ ಮಾಡಿದ್ದರೆ ದೀರ್ಘಕಾಲ‌ ಅದನ್ನು ಇಟ್ಟುಕೊಳ್ಳುವುದು ಬೇಡ. ನಿಮ್ಮ ಪ್ರೀತಿಯು ನಿಜವಾಗಿಯೂ ಅದ್ಭುತ ಎನಿಸಬಹುದು. ನಿಮ್ಮ ಅಂದಾಜು ಮೀರಬಹುದು (Estimates may be exceeded). ಆದಾಯಕ್ಕೆ ನಾನಾ ಮೂಲವನ್ನು ಆಯ್ಕೆ ಮಾಡಿಕೊಳ್ಳುವಿರಿ. ಆಕಸ್ಮಿಕವಾಗಿ ಆರೋಗ್ಯವು ಹದ ತಪ್ಪಬಹುದು.

ಇದನ್ನು ಓದಿ : Astrology : ಫೆ. 15 ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಮೀನ ರಾಶಿ :
ವೈವಾಹಿಕ ಜೀವನವನ್ನು ನಡೆಸುವ ಬಗ್ಗೆ ನಿಮಗೆ ಸಲಹೆಗಳು ಸಿಗುವುದು. ಭೂಮಿಗೆ ಸಂಬಂಧಿಸಿದ ವಿಚಾರಗಳನ್ನು ಇತ್ಯರ್ಥ ಮಾಡಿಕೊಳ್ಳುವುದು ಉಚಿತ. ಉನ್ನತ ವಿದ್ಯಾಭ್ಯಾಸದ ಪ್ರಯುಕ್ತ ಹೊರಗಡೆ ಇರಲಿರುವಿರಿ. ನಿಮ್ಮ ಕಾರ್ಯವು ಆಗಬೇಕಾದರೆ ಓಡಾಟ ಅನಿವಾರ್ಯವಾಗಲಿದೆ (Indispensable). ನಿಮ್ಮ ಕೆಲಸವು ಬದಲಾವಣೆಯಾಗಬಹುದು. ಅನಾರೋಗ್ಯದ ನಡುವೆಯೂ ಉತ್ಸಾಹದಿಂದ ಇರುವಿರಿ.

Disclaimer : ಈ ಲೇಖನವು ಅಂತರ್ಜಾಲದಲ್ಲಿ (on the internet) ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan news) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

spot_img
spot_img
spot_img
- Advertisment -spot_img