Thursday, April 25, 2024
spot_img
spot_img
spot_img
spot_img
spot_img
spot_img

ಕರಿಮಣಿ ಮಾಲೀಕ ಹಾಡಿಗೆ ಕುಣಿದ ಆ್ಯಂಕರ್ ಅನುಶ್ರೀ ; ನೆಟ್ಟಿಗರ ಕಮೆಂಟ್ಸ್ ಮಾತ್ರ ಸೂಪರೋ super.!

spot_img

ಜನಸ್ಪಂದನ ನ್ಯೂಸ್, ಬೆಂಗಳೂರು : ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿಯಾಗಿರುವ (anchor) ಅನುಶ್ರೀ ಮನೆಮಾತಾಗಿದ್ದಾರೆ.

ತಮ್ಮ ಚಟಪಟ ಮಾತಿನಿಂದಾಗಿ ಅನುಶ್ರೀ ಅವರು ಅಭಿಮಾನಿಗಳ ಮನ ಗೆದ್ದಿದ್ದಾರೆ. ಅವರು ಟಿವಿ ಶೋಗಳನ್ನು ನಡೆಸಿಕೊಡುವ ಶೈಲಿಗೆ ವೀಕ್ಷಕರು (viewers) ಫಿದಾ ಆಗಿದ್ದಾರೆ.

ಇದನ್ನು ಓದಿ : ಡ್ಯಾನ್ಸ್ ಮಾಡಲು ಒತ್ತಾಯಿಸಿದ ವಧು ; ವರ ಮಾಡಿದ್ದೇನು.? ಈ video ನೋಡಿ.!

ವಯಸ್ಸು 36 ಆದರೂ ವಯಸ್ಸು ಮದುವೆ ಇನ್ನೂ ಆಗಿಲ್ಲ ಎನ್ನುವುದೇ ಅನುಶ್ರೀ ಅವರ ಅಭಿಮಾನಿಗಳಿಗೆ (fans) ಬೇಸರ ತಂದಿದೆ. ಆದ್ದರಿಂದ ಹೋದಲ್ಲಿ, ಬಂದಲ್ಲಿ ಮದ್ವೆ ಯಾವಾಗ ಎನ್ನುವ ಪ್ರಶ್ನೆಯೇ ಎದುರಾಗುತ್ತಿರುತ್ತದೆ.

ಈ ಮಧ್ಯೆ ಇತ್ತೀಚೆಗೆ ಭಾರಿ ಟ್ರೆಂಡ್​ (trend) ಆಗಿರುವ ಕರಿಮಣಿ ಮಾಲೀಕ ನೀನಲ್ಲ ಹಾಡಿಗೆ ಆ್ಯಂಕರ್​ ಅನುಶ್ರೀ ರೀಲ್ಸ್​ ಮಾಡಿದ್ದಾರೆ. ಕೆಲವು ಯುವತಿಯರ ಜೊತೆ ಅನುಶ್ರೀ ರೀಲ್ಸ್​ ಮಾಡಿದ್ದು, ಇದಕ್ಕೆ ಬಹಳಷ್ಟು ಕಮೆಂಟ್​ಗಳು ಬರುತ್ತಿವೆ.

ಪ್ಲೀಸ್​ ರಾಹುಲ್ಲಾ ಅಂತ ಮಾತ್ರ ಹೇಳ್ಬೇಡಮ್ಮಾ ಎಂದು ಕಾಲೆಳೆಯುತ್ತಿದ್ದಾರೆ. ಹೆಚ್ಚಿನವರು ನಾವೂ ಅದನ್ನೇ ಕೇಳ್ತಿದ್ದೇವೆ ಎಂದಿದ್ದಾರೆ. ನಿನ್ನ ಕರಿಮಣಿ ಮಾಲಿಕ ಯಾರಮ್ಮಾ, ಬೇಗ ಹೇಳಮ್ಮಾ ಅಂತಿದ್ದಾರೆ.

ಇದನ್ನು ಓದಿ : ʻಧಕ್ ಧಕ್ ಕರ್ನೆ ಲಗಾʼ ಹಾಡಿಗೆ ಮೈ ಚಳಿ ಬಿಟ್ಟು ಕುಣಿದ ನಟಿ ; Video viral.!

ನಮಗೂ ಇದು ಮಿಲಿಯನ್​ ಡಾಲರ್​ ಪ್ರಶ್ನೆ ಎಂದು ಅಭಿಮಾನಿಯೊಬ್ಬ ಹೇಳಿದ್ದರೆ, ಇನ್ನು ಕೆಲವರು ಕರಿಮಣಿ ಮಾಲೀಕ ನಿಮಗೆ ಆದಷ್ಟು ಬೇಗ ಸಿಗಲಿ ಎಂದು ಹಾರೈಸುತ್ತಿದ್ದಾರೆ (wishing). ಇನ್ನು ಕೆಲವು ತರ್ಲೆ ನೆಟ್ಟಿಗರು ನಾನಾಗ್ಲಾ ಎಂದು ಪ್ರಶ್ನಿಸುತ್ತಿದ್ದಾರೆ.

 

View this post on Instagram

 

A post shared by Zee Kannada (@zeekannada)

spot_img
spot_img
spot_img
- Advertisment -spot_img