Saturday, July 27, 2024
spot_img
spot_img
spot_img
spot_img
spot_img
spot_img

ರೆಸ್ಟೋರೆಂಟ್‌ನಲ್ಲಿ ಬ್ಯೂಟಿ ಕ್ವೀನ್ ಗುಂಡಿಕ್ಕಿ ಬರ್ಬರ ಹತ್ಯೆ ; CCTV ಯಲ್ಲಿ ಭಯಾನಕ ದೃಶ್ಯ ಸೆರೆ.!

spot_img

ಜನಸ್ಪಂದನ ನ್ಯೂಸ್‌, ಡೆಸ್ಕ್ : ಕೇವಲ 23 ವರ್ಷಕ್ಕೆ ಬ್ಯೂಟಿ ಕ್ವೀನ್ ಕಿರೀಟವನ್ನು ಮುಡಿಗೇರಿಸಿಕೊಂಡ ಲ್ಯಾಂಡಿ ಪರ್ರಾಗಾ ಗೊಯ್ಬುರೊ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದಾರೆ. ಸದ್ಯ ಅವರ ಹತ್ಯೆಯ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ 

ಸುಂದರಿ ಪಟ್ಟ ಅಲಂಕರಿಸಿದ 2 ವರ್ಷಕ್ಕೆ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದು, ಹಂತಕರು ಈಕೆಯ ಇನ್‌ಸ್ಟಾಗ್ರಾಮ್‌ ಪೋಸ್ಟ್ ಫಾಲೋ ಮಾಡಿ ಬರ್ಬರವಾಗಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ.

23 ವರ್ಷಕ್ಕೆ ಮಿಸ್‌ ಈಕ್ವೆಡಾರ್ ಸ್ಪರ್ಧೆಯಲ್ಲಿ ಬ್ಯೂಟಿ ಕ್ವೀನ್ ಆಗಿದ್ದ, ಲ್ಯಾಂಡಿ ಪರ್ರಾಗಾ ಗೊಯ್ಬುರೊ ಬಹಳಷ್ಟು ಮಂದಿ ಅಭಿಮಾನಿ ಬಳಗವನ್ನು ಹೊಂದಿದ್ದರು. ಈಗ ಲ್ಯಾಂಡಿ ಪರ್ರಾಗಾ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾಗಿದ್ದಾರೆ.

ಇದನ್ನು ಓದಿ : ತಡವಾಗಿ ಬಂದ ಶಿಕ್ಷಕಿ : ಬಟ್ಟೆ ಹಿಡಿದೆಳೆದು ಥಳಿಸಿದ ಪ್ರಿನ್ಸ್‌ಪಾಲ್‌ ; ಕಿತ್ತಾಟದ ವಿಡಿಯೋ ವೈರಲ್.!

2022ರ ಮಿಸ್ ಈಕ್ವೆಡಾರ್‌ ಲ್ಯಾಂಡಿ ಪರ್ರಾಗಾ ಗೊಯ್ಬುರೊ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕಳೆದ ಏಪ್ರಿಲ್ 28ರಂದು ಲ್ಯಾಂಡಿ ಪರ್ರಾಗಾ ಕ್ವೆವೆಡೊ ನಗರದ ರೆಸ್ಟೋರೆಂಟ್‌ಗೆ ತೆರಳಿದ್ದರು. ಈ ವೇಳೆ ಅವಳನ್ನ ಹಿಂಬಾಲಿಸಿಕೊಂಡು ಬಂದಿರುವ ಇಬ್ಬರು ದುಷ್ಕರ್ಮಿಗಳು ಡೆಡ್ಲಿ ಅಟ್ಯಾಕ್ ಮಾಡಿದ್ದಾರೆ.

ರೆಸ್ಟೋರೆಂಟ್‌ನಲ್ಲಿದ್ದ ಲ್ಯಾಂಡಿ ಪರ್ರಾಗಾ ಮೇಲೆ ಅಟ್ಯಾಕ್ ಮಾಡಿರುವ ಕೊಲೆಗಾರರು ಎರಡು ಸುತ್ತಿನ ಗುಂಡು ಹಾರಿಸಿದ್ದಾರೆ. ಇಬ್ಬರು ದುಷ್ಕರ್ಮಿಗಳು ರೆಸ್ಟೋರೆಂಟ್‌ಗೆ ಬಂದು ಗುಂಡು ಹಾರಿಸಿರುವ ಲೈವ್ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಗುಂಡಿನ ದಾಳಿಗೆ ಒಳಗಾದ ಲ್ಯಾಂಡಿ ಪರ್ರಾಗಾ ಸ್ಥಳದಲ್ಲೇ ರಕ್ತ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಅಂದು ಈಕೆ ಇನ್‌ಸ್ಟಾಗ್ರಾಮ್‌ನಲ್ಲಿ ಮಾಡಿದ ಒಂದು ಪೋಸ್ಟ್‌ ಕೊಲೆಗಾರರಿಗೆ ಬ್ಯೂಟಿ ಕ್ವೀನ್ ಎಲ್ಲಿದ್ದಾರೆ ಅನ್ನೋದರ ಬಗ್ಗೆ ಮಹತ್ವದ ಸುಳಿವು ನೀಡಿದೆ.

ಇದನ್ನು ಓದಿ : Video : ಪತಿಗೆ ಸರಪಳಿಯಿಂದ ಕಟ್ಟಿ ಚಿತ್ರಹಿಂಸೆ ಕೊಟ್ಟ ಪತ್ನಿ ; ಕಾರಣವಾದ್ರು ಏನು.?

ಮದುವೆ ಸಮಾರಂಭ ತೆರಳಿದ ಲ್ಯಾಂಡಿ, ಡಿನ್ನರ್‌ಗಾಗಿ ಕ್ವೆವೆಡೊ ನಗರದ ರೆಸ್ಟೋರೆಂಟ್‌ಗೆ ಹೋಗುವ ಪೋಸ್ಟ್ ಮಾಡಿದ್ದರು. ಈ ಸುಳಿವನ್ನು ಆಧರಿಸಿ ರೆಸ್ಟೋರೆಂಟ್‌ ಲೋಕೇಷನ್ ಪತ್ತೆ ಹಚ್ಚಿದ ಕೊಲೆಗಾರರು ಶೂಟ್ ಮಾಡಿ ಎಸ್ಕೇಪ್ ಆಗಿದ್ದಾರೆ.

ಪೊಲೀಸರು ನಡೆಸಿದ ತನಿಖೆಯಲ್ಲಿ ಹಂತಕರು ಲ್ಯಾಂಡಿ ಪರ್ರಾಗಾ ಹಾಕಿದ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಅವರಿಗೆ ಸಹಾಯ ಮಾಡಿದೆ ಎನ್ನಲಾಗಿದೆ. ಈಕ್ವೆಡಾರ್‌ನಲ್ಲಿ ನಡೆದ ಭ್ರಷ್ಟಾಚಾರ ಹಗರಣದಲ್ಲಿ ಬ್ಯೂಟಿ ಕ್ವೀನ್‌ ಲ್ಯಾಂಡಿ ಪರ್ರಾಗಾ ಅವರ ಹೆಸರು ಕೇಳಿ ಬಂದಿತ್ತು. ಇಬ್ಬರು ಅಪರಿಚಿತರು ರೆಸ್ಟೋರೆಂಟ್‌ಗೆ ಗುಂಡಿಕ್ಕಿ ಕೊಂದು ಹೋಗಿದ್ದಾರೆ. ಲ್ಯಾಂಡಿ ಪರ್ರಾಗಾ ಸಾವಿನ ಬಗ್ಗೆ ಉನ್ನತ ತನಿಖೆ ಮುಂದುವರಿದಿದೆ. (ಎಜೇನ್ಸಿಸ್)

ಜನಸ್ಪಂದನ ನ್ಯೂಸ್‌, ಕಳಕಳಿಮತದಾನ ಪ್ರತಿಯೊಬ್ಬ ಭಾರತೀಯನ ಹಕ್ಕು” ಮತ್ತು ಕರ್ತವ್ಯವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
- Advertisment -spot_img