Wednesday, May 22, 2024
spot_img
spot_img
spot_img
spot_img
spot_img
spot_img

ತಡವಾಗಿ ಬಂದ ಶಿಕ್ಷಕಿ : ಬಟ್ಟೆ ಹಿಡಿದೆಳೆದು ಥಳಿಸಿದ ಪ್ರಿನ್ಸ್‌ಪಾಲ್‌ ; ಕಿತ್ತಾಟದ ವಿಡಿಯೋ ವೈರಲ್.!

spot_img

ಜನಸ್ಪಂದನ ನ್ಯೂಸ್‌, ಡೆಸ್ಕ್  : ಒಂದು ದೇಶದ ಅಭಿವೃದ್ದಿಯನ್ನು ಸದರಿ ದೇಶದ ಶಿಕ್ಷಣದ ವ್ಯವಸ್ಥೆಯ ಮೇಲೆ ಅಳೆಯಲಾಗುತ್ತದೆ. ಇಂಥ ಶಿಕ್ಷಣ ಕೊಡಬೇಕಾದ ಸ್ಥಳದಲ್ಲಿಯೇ ಅಂದರೆ ಶಾಲೆಯಲ್ಲಿಯೆ ಶಾಲೆಯ ಪ್ರಿನ್ಸ್‌ಪಾಲ್‌ರು ಮತ್ತು ಓರ್ವ ಶಿಕ್ಷಕಿಯರ ನಡುವೆ ಪರಸ್ಪರ ಬಡೆದಾಡಿಕೊಂಡಿರುವ ಘಟನೆಯೊಂದು ನಡೆದಿದೆ.

ಈ ಆಘಾತಕಾರಿ ಘಟನೆ ನಡೆದಿರುವದು ಉತ್ತರ ಪ್ರದೇಶದ ಆಗ್ರಾದಲ್ಲಿ ಮೇ 3ರಂದು. ಅಂದು ಓರ್ವ ಶಿಕ್ಷಕಿ ಶಾಲೆಗೆ ತಡವಾಗಿ ಬಂದ ಪರಿಣಾಮ ಪ್ರಿನ್ಸಿಪಾಲ್ ಬೈದಿದ್ದಾರೆ. ಆಗ ಶಿಕ್ಷಕಿಯು ನೀವು ಸಹ  ಕಳೆದ ನಾಲ್ಕೈದು ದಿನಗಳಿಂದ ತಡಮಾಡಿ ಬರುತ್ತಿರುವಿರಲ್ಲಾ ಎಂದು ಪ್ರಶ್ನಿಸಿದ್ದಾರೆ.

ಇದನ್ನು ಓದಿ : ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ; ಪರಾರಿಯಾಗಲೆತ್ನಿಸಿದ ಆರೋಪಿಗೆ ಗುಂಡೇಟು ಕೊಟ್ಟ Police.!

ಇಟ್ಟಕ್ಕೆ ಅವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಆಗ ಕೋಪಗೊಂಡ ಪ್ರಿನ್ಸ್‌ಪಾಲ್‌ರು, ಶಿಕ್ಷಕಿಯ ಬಟ್ಟೆ ಹಿಡಿದೆಳೆದು ಮನಬದ್ದಂತೆ ಥಳಿಸಿದ್ದಾರೆ ಎನ್ನಲಾಗಿದೆ. ಇಬ್ಬರಿಬ್ಬರ ಜಗಳದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.

ಇಬ್ಬರಿಬ್ಬರ ಜಗಳದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಒಂದೇ ದಿನದಲ್ಲಿ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದೆ. ಇಲ್ಲಿ ತಡವಾಗಿ ಬಂದಿ ಶಿಕ್ಷಕಿಯನ್ನು ಗುಂಜಾ ಚೌಧರಿ ಎಂದು ಹೇಳಲಾಗುತ್ತಿದೆ.

ಇದನ್ನು ಓದಿವೇಗವಾಗಿ ಪ್ರೀತಿಯಲ್ಲಿ ಬೀಳುವ 4 ರಾಶಿಗಳು ಇವು ; ನೀವೂ ಈ ರಾಶಿಯಲ್ಲಿರಬಹುದು.?

ಪ್ರಿನ್ಸಿಪಾಲ್ ಮತ್ತು ಶಿಕ್ಷಕಿಯರ ಜಟಾಪಟಿಯನ್ನು ಸ್ಥಳದಲ್ಲಿದ್ದ ಇತರ ಸಿಬ್ಬಂದಿಗಳು ಮಧ್ಯಪ್ರವೇಶಿಸಿ ಬೇರ್ಪಡಿಸಲು ಪ್ರಯತ್ನಿಸಿದ್ದಾರೆ. ಆದರೆ ಅವರ ಪ್ರಯತ್ನಗಳು ವ್ಯರ್ಥವಾಯಿತು.

ಘಟನೆ ಸಿಕಂದರಾ ಪೊಲೀಸ್ ಠಾಣೆಗೆ ವ್ಯಾಪ್ತಿಯಲ್ಲಿ ನಡೆದಿದ್ದು, ಎರಡೂ ಕಡೆಯವರು ಪರಸ್ಪರ ದೂರು ದಾಖಲಿಸಿದ್ದಾರೆ.

ಜನಸ್ಪಂದನ ನ್ಯೂಸ್‌, ಕಳಕಳಿಮತದಾನ ಪ್ರತಿಯೊಬ್ಬ ಭಾರತೀಯನ ಹಕ್ಕು ಮತ್ತು “ಕರ್ತವ್ಯವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
spot_img
- Advertisment -spot_img