Wednesday, May 22, 2024
spot_img
spot_img
spot_img
spot_img
spot_img
spot_img

Video : ಪತಿಗೆ ಸರಪಳಿಯಿಂದ ಕಟ್ಟಿ ಚಿತ್ರಹಿಂಸೆ ಕೊಟ್ಟ ಪತ್ನಿ ; ಕಾರಣವಾದ್ರು ಏನು.?

spot_img

ಜನಸ್ಪಂದನ ನ್ಯೂಸ್‌, ಡೆಸ್ಕ್ : ಪತ್ನಿಯೋರ್ವಳು ತನ್ನ ಗಂಡನನ್ನೇ ಕಬ್ಬಿಣದ ಸರಳಪಳಿಯಿಂದ ಬಂಧಿಸಿ ಮನ ಬಂದಂತೆ ಥಳಿಸಿರುವ ಘಟನೆ ತೆಲಂಗಾಣದ ಮೇಡ್ಪಲ್ ಜಿಲ್ಲೆಯ ಅಂಬೇಡ್ಕರ್ ನಗರದಲ್ಲಿ ನಡೆದಿದೆ.

ಗಂಡನನ್ನೇ ಕಬ್ಬಿಣದ ಸರಳಪಳಿಯಿಂದ ಕಟ್ಟಿ ಮನ ಬಂದಂತೆ ಥಳಿಸಲು ಕಾರಣವೆನಾದರೂ ಗೊತ್ತೇ.? ಎಲ್ಲವೂ ಆಸ್ತಿಗಾಗಿ.

ಇದನ್ನೂ ಓದಿ : ಶಿವಕುಮಾರ ಸ್ವಾಮೀಜಿ ಕಾರಿಗೆ ಟಿಪ್ಪರ್ ವಾಹನ ಡಿಕ್ಕಿ ; ಶ್ರೀಗಳು ಆಸ್ಪತ್ರೆಗೆ ದಾಖಲು.!

ತೆಲಂಗಾಣದ ಮೇಡ್ಪಲ್ ಜಿಲ್ಲೆಯ ಅಂಬೇಡ್ಕರ್ ನಗರದ ಪಟ್ಟಿ ನರಸಿಂಹ (55) ಎಂಬ ವ್ಯಕ್ತಿಯೇ ತನ್ನ ಪತ್ನಿಯಿಂದ ಹಲ್ಲೆಗೊಳಗಾದ ವ್ಯಕ್ತಿ. ಇನ್ನು ಹಲ್ಲೆ ಮಾಡಿದ ಮಹಾನ್‌ ಪತ್ನಿ ಭರತಮ್ಮ (45). ಇನ್ನು ಈ ಕೃತ್ಯಕ್ಕೆ ದಂಪತಿಯ ನಾಲ್ವರು ಮಕ್ಕಳು ಸಹ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಭರತಮ್ಮ ಸಮೇತ 5 ಜನರ ಮೇಲೆ ನಗರದ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.

ಪತಿ ಪಟ್ಟಿ ನರಸಿಂಹ ಪತ್ನಿಯ ಹೆಸರಲ್ಲಿನ ಸ್ಥಳದಲ್ಲಿ ಸಾಲ ಮಾಡಿ ಹೊಸ ಮನೆ ನಿರ್ಮಾಣ ಮಾಡಿದ್ದನು. ಆದರೆ ಸಾಲ ಹೆಚ್ಚಾಗಿದ್ದರಿಂದ ಜಮೀನು ಮಾರಾಟ ಮಾಡಿ ಸಾಲ ಕಟ್ಟಲು ಗಂಡ ಮುಂದಾಗಿದ್ದನು. ಇದಕ್ಕೆ ತಕರಾರು ತೆಗೆದ ಹೆಂಡತಿ – ಮಕ್ಕಳು ಜಮೀನು ಮಾರಾಟ ಮಾಡಲು ಬಿಟ್ಟಿಲ್ಲ. ಇದರಿಂದ ಕುಟುಂಬದಲ್ಲಿ ಜಗಳ ಪ್ರಾರಂಭವಾಗಿದೆ. ಈ ಹಿನ್ನಲೆಯಲ್ಲಿ ಮನೆ ಬಿಟ್ಟು ಹೋಗಿ ಭುವನಗಿರಿ ಜಿಲ್ಲೆಯಲ್ಲಿ ಪತಿ ಪಟ್ಟಿ ನರಸಿಂಹ ವಾಸ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ತಡವಾಗಿ ಬಂದ ಶಿಕ್ಷಕಿ : ಬಟ್ಟೆ ಹಿಡಿದೆಳೆದು ಥಳಿಸಿದ ಪ್ರಿನ್ಸ್‌ಪಾಲ್‌ ; ಕಿತ್ತಾಟದ ವಿಡಿಯೋ ವೈರಲ್.!

ಪತಿ ಭುವನಗಿರಿ ಜಿಲ್ಲೆಯಲ್ಲಿ ಇರುವುದನ್ನು ತಿಳಿದ ಪತ್ನಿ ಭರತಮ್ಮ ಮಕ್ಕಳೊಂದಿಗೆ ತನ್ನ ಗಂಡನನ್ನು ಕರೆದುಕೊಂಡು ಬಂದಿದ್ದಾಳೆ. ಬಳಿಕ ಮನೆಯಲ್ಲಿ ಪತಿಯನ್ನು ಕಬ್ಬಿಣದ ಸರಪಳಿಯಿಂದ ಕಟ್ಟಿ ಹಾಕಿ ಮನಬಂದಂತೆ ನಿರಂತರವಾಗಿ ಥಳಿಸಿ ಗಾಯಗೊಂಡಿದ್ದಾರೆ.

ಸದ್ಯ ಇದನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿದ್ದರು. ಅಲ್ಲದೇ ಮಾಜಿ ಎಂಪಿಟಿಸಿ ಸದಸ್ಯರಿಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅವರ ಮನೆಗೆ ಬಂದು ನರಸಿಂಹನನ್ನು ಬಿಡುಗಡೆಗೊಳಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಇನ್ನು ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.‌

ಜನಸ್ಪಂದನ ನ್ಯೂಸ್‌, ಕಳಕಳಿಮತದಾನ ಪ್ರತಿಯೊಬ್ಬ ಭಾರತೀಯನ ಹಕ್ಕು” ಮತ್ತು “ಕರ್ತವ್ಯವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
spot_img
- Advertisment -spot_img