ಜನಸ್ಪಂದನ ನ್ಯೂಸ್, ಡೆಸ್ಕ್ : ಮಲಗುವ ಮುಂಚೆ ಕೆಲವರು ನೀರು ಕುಡಿಯಬೇಕು (Drink water) ಎಂದು ಹೇಳಿದರೆ, ಇನ್ನು ಕೆಲವರು ನೀರು ಕುಡಿಯಲೇಬಾರದು ಎನ್ನುತ್ತಾರೆ. ಹಾಗಾದರೆ ಈ ಎರಡರಲ್ಲಿ ಒಳ್ಳೆಯ ಅಭಿಪ್ರಾಯ ಯಾವುದು ಎಂದು ತಿಳಿಯೋಣ ಬನ್ನಿ.
ಮಲಗುವ ಮುಂಚೆ (Before sleeping) ನೀರು ಕುಡಿಯುವುದರಿಂದ ಆಗುವ ಉಪಯೋಗ :
ಇದನ್ನು ಓದಿ : ರೆಸ್ಟೋರೆಂಟ್‌ನಲ್ಲಿ ಬ್ಯೂಟಿ ಕ್ವೀನ್ ಗುಂಡಿಕ್ಕಿ ಬರ್ಬರ ಹತ್ಯೆ ; CCTV ಯಲ್ಲಿ ಭಯಾನಕ ದೃಶ್ಯ ಸೆರೆ.!
ನಾವು ದಿನವೂ ಬಹಳ ಕೆಲಸ ಮಾಡಿರುತ್ತೇವೆ. ಹೀಗಾಗಿ ನಮ್ಮ ದೇಹದ ಸ್ನಾಯುಗಳು ಸಾಕಷ್ಟು ಶ್ರಮಪಟ್ಟಿರುತ್ತವೆ (are hardworking). ಇದರಿಂದ ದೇಹವು ಸಾಕಷ್ಟು ನೀರಿನ ಅಂಶವನ್ನು ಕಳೆದುಕೊಂಡಿರುತ್ತದೆ. ಅಂದರೆ, ನೀರಿನ ಪ್ರಮಾಣ ಕುಂಠಿತಗೊಂಡಿರುತ್ತದೆ.
ನಿದ್ರೆಯ ಕೊರತೆಯಿಂದ ದೇಹಕ್ಕೆ ಅಸ್ವಸ್ಥತೆ ಉಂಟಾಗುವುದು. ಪರಿಣಾಮ ಒಣ ಗಂಟಲು ಮತ್ತು ಗೊರಕೆಯ ಸಾಧ್ಯತೆಗಳಿವೆ. ಇದೆಲ್ಲವನ್ನು ಹೋಗಲಾಡಿಸಲು ನಮ್ಮ ದೇಹ ಹೈಡ್ರೇಟ್ (body hydrated) ಆಗಿರಲೇಬೇಕು. ಹೀಗಾಗಿ ಮಲಗುವ ಮುನ್ನ ನೀರು ಕುಡಿಯುವುದು ಉತ್ತಮ.
ಈ ರೀತಿ ಮಾಡುವುದರಿಂದ ಒತ್ತಡಕ್ಕೊಳಗಾದ ಸ್ನಾಯುಗಳು ವಿಶ್ರಾಂತಿಗೆ ಜಾರುತ್ತವೆ ಮತ್ತು ಬಲಗೊಳ್ಳುತ್ತವೆ. ಸರಿಯಾಗಿ ನಿದ್ರೆ ಮಾಡುವುದರಿಂದ ಮರುದಿನ ತುಂಬಾ ಚುರುಕಾಗಿರಬಹುದು (quick).
ಮಲಗುವ ಮೊದಲು ನೀರು ಕುಡಿದರೆ ದೇಹದಲ್ಲಿ ಸಂಗ್ರಹವಾದ ವಿಷವನ್ನು ಸಹ ಹೊರಹಾಕಬಹುದು. ಇದರಿಂದ ನಮ್ಮ ತ್ವಚೆ ನಯವಾದ ಹಾಗೂ ಮೃದುವಾಗಿರುತ್ತದೆ.
ಇದನ್ನು ಓದಿ : ತಡವಾಗಿ ಬಂದ ಶಿಕ್ಷಕಿ : ಬಟ್ಟೆ ಹಿಡಿದೆಳೆದು ಥಳಿಸಿದ ಪ್ರಿನ್ಸ್‌ಪಾಲ್ ; ಕಿತ್ತಾಟದ ವಿಡಿಯೋ ವೈರಲ್.!
ನಾವು ನಿದ್ರಿಸಿದ ನಂತರ ನಮ್ಮ ದೇಹದ ಉಷ್ಣತೆಯು ಸ್ವಾಭಾವಿಕವಾಗಿ (Warmth is natural) ಕಡಿಮೆಯಾಗುತ್ತದೆ. ಹೀಗಾಗಿ ಮಲಗುವ ಮುನ್ನ ನೀರು ಕುಡಿಯುವುದು ಈ ಸಮಸ್ಯೆಗೆ ಪರಿಹಾರವಾಗಿದೆ. ದೇಹದ ಉಷ್ಣತೆಯು ಸಮತೋಲಿತವಾಗಿರುತ್ತದೆ.
ಮಲಗುವ ಮುಂಚೆ ನೀರು ಕುಡಿಯುವುದರಿಂದ ದೇಹಕ್ಕಾಗುವ ನಷ್ಟ :
ರಾತ್ರಿಯಲ್ಲಿ ಹೆಚ್ಚು ನೀರು ಕುಡಿಯುವುದರಿಂದ ಎದೆಯುರಿ ಕಾಡಬಹುದು. ಉಸಿರಾಟದ ತೊಂದರೆಯೂ (breathing problem) ಸಹ ಉಂಟಾಗುತ್ತದೆ.
ನಾವು ರಾತ್ರಿಯಲ್ಲಿ ಹೆಚ್ಚು ದ್ರವ ಪದಾರ್ಥಗಳನ್ನು ಸೇವಿಸಿದರೆ, ಅವು ಉಸಿರಾಟದ ಪ್ರದೇಶಕ್ಕೆ ಪ್ರವೇಶಿಸಿ ಉಸಿರಾಟದ ತೊಂದರೆಗೆ ಕಾರಣವಾಗಬಹುದು.
ಮಲಗುವ ಮುನ್ನ ಹೆಚ್ಚು ನೀರು ಕುಡಿದರೆ ರಾತ್ರಿಯಿಡೀ (night) ಬೇಕೆಂದಾಗ ಮೂತ್ರ ವಿಸರ್ಜನೆಗೆ ಎದ್ದೇಳಬೇಕಾಗುತ್ತದೆ. ಇದು ಎಲ್ಲರೂ ಎದುರಿಸುವ ಸಾಮಾನ್ಯ ಸಮಸ್ಯೆಯಾಗಿದೆ. ಇದರಿಂದ ನಿದ್ರೆಗೆ ತುಂಬಾ ತೊಂದರೆಯಾಗುತ್ತದೆ.
ಇದನ್ನು ಓದಿ : ನಮ್ಮ ಮೆಟ್ರೋದಲ್ಲಿ ಎಲ್ಲರ ಮುಂದೆಯೇ ತಬ್ಬಿಕೊಂಡು ಕಿಸ್ ಮಾಡಿದ ಪ್ರೇಮಿಗಳು ; Video Viral.!
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.
ಜನಸ್ಪಂದನ ನ್ಯೂಸ್, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.