ಸೋಮವಾರ, ಫೆಬ್ರವರಿ 2, 2026

Janaspandhan News

Home Blog Page 8

ಕೇರಳದಲ್ಲಿ ಗರ್ಭಿಣಿ ಮಹಿಳೆ ಮೇಲೆ ಪೊಲೀಸ್ ಹಲ್ಲೆ ; ಸಾರ್ವಜನಿಕರಲ್ಲಿ ಆಕ್ರೋಶ.

0

ಜನಸ್ಪಂದನ ನ್ಯೂಸ್‌, ಕೊಚ್ಚಿ (ಕೇರಳ) : 2024 ರಲ್ಲಿ ನಡೆದ ಒಂದು ಘಟನೆ ಇದೀಗ ಬೆಳಕಿಗೆ ಬಂದಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ರಾಜ್ಯದಾದ್ಯಂತ ಜನರ ಆಕ್ರೋಶಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಪ್ರತಾಪ್ ಚಂದ್ರನ್ ಎಂಬ HSO ಗರ್ಭಿಣಿ ಮಹಿಳೆಯೊಬ್ಬರಿಗೆ ಕಪಾಳಕ್ಕೆ ಹೊಡೆದ ದೃಶ್ಯಗಳು ಕಾಣಿಸುತ್ತಿವೆ.

ಸ್ಥಳೀಯ ವರದಿಗಳ ಪ್ರಕಾರ, ಆರೋಪಿತ ಪೊಲೀಸ್ ಅಧಿಕಾರಿ ಯಾವುದೇ ಆಧಾರವಿಲ್ಲದೇ ಸುಳ್ಳು ಪ್ರಕರಣ ದಾಖಲಿಸಿ ಮಹಿಳೆಯ ಪತಿಯನ್ನು ಠಾಣೆಗೆ ಕರೆತಂದಿದ್ದರು. ಆಗ ತನ್ನ ಮಗುವಿನೊಂದಿಗೆ ಪತ್ನಿ ಠಾಣೆಗೆ ಆಗಮಿಸಿದ್ದರು ಎನ್ನಲಾಗಿದೆ

ಪತಿ ಬಂಧನದ ಬಗ್ಗೆ ಪ್ರಶ್ನಿಸಲು ಬಂದ ಎನ್.ಜೆ. ಶೈಮೋಲ್ ಎಂಬ ಗರ್ಭಿಣಿ ಮಹಿಳೆಗೆ ಅಧಿಕಾರಿ ಕಪಾಳಿಗೆ ಹೊಡೆದಿದ್ದಾರೆ ಎಂದು ಮಹಿಳೆಯ ಕುಟುಂಬದವರು ಆರೋಪಿಸಿದ್ದಾರೆ. ಸದ್ಯ ಈ ಅಧಿಕಾರಿ ಅರೂರ್ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ ಎಂದು ತಿಳಿಸಲಾಗಿದೆ.

ವಿಡಿಯೋ ವೈರಲ್ ಆದ ಕೆಲವೇ ಹೊತ್ತಿನಲ್ಲಿ, ಕೇರಳ ಮುಖ್ಯಮಂತ್ರಿ ಈ ಘಟನೆಗೆ ಗಂಭೀರತೆಯನ್ನು ನೀಡಿದ್ದು, ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ, ಶೈಮೋಲ್ ಅವರ ಪತಿ ಬೆನ್ ಜೋ ಅವರು ಈ ಘಟನೆ ಬಗ್ಗೆ ವಿವರಿಸಿ, ಪೊಲೀಸ್ ಅಧಿಕಾರಿಗಳು ತಮ್ಮ ಮೇಲೆ ಹಲ್ಲೆ ನಡೆಸಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮೂಲ ವರದಿಗಳ ಪ್ರಕಾರ, ಬೆನ್ ಜೋ ಅವರು ಕಳ್ಳತನದ ಆರೋಪದ ಮೇಲೆ ಇಬ್ಬರು ಯುವಕರನ್ನು ಪೊಲೀಸರು ಬಲವಂತವಾಗಿ ಬಂಧಿಸುತ್ತಿದ್ದ ದೃಶ್ಯವನ್ನು ಚಿತ್ರೀಕರಿಸುತ್ತಿದ್ದ ಕಾರಣ, “ಕರ್ತವ್ಯ ನಿರ್ವಹಣೆಗೆ ಅಡ್ಡಿ ಪಡಿಸಿದ್ದಾರೆ” ಎಂಬ ಆರೋಪದಡಿ ಮೂರನೇ ಆರೋಪಿಯಾಗಿ ಸೇರಿಸಲಾಗಿತ್ತು.

ಮೀಡಿಯಾ ವರದಿಗಳ ಪ್ರಕಾರ, ಈ ಘಟನೆ ಪೊಲೀಸ್ ದೌರ್ಜನ್ಯದ ಮತ್ತೊಂದು ಉದಾಹರಣೆಯಾಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸ್ಥಳೀಯರು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರು ಘಟನೆ ಕುರಿತು ಗಂಭೀರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಪೊಲೀಸ್‌ ಅಧಿಕಾರಿ ಹಲ್ಲೆ ಮಾಡಿದರೆ ಏನು ಮಾಡಬೇಕು?

ಒಬ್ಬ ಪೊಲೀಸ್ ಅಧಿಕಾರಿ ನಿಮಗೆ ಕಿರುಕುಳ ನೀಡಿದರೆ, ಶಾಂತವಾಗಿರಿ, ಎಲ್ಲವನ್ನೂ ದಾಖಲಿಸಿ (ವಿಡಿಯೋ, ಅಧಿಕಾರಿ ವಿವರಗಳು, ಸಾಕ್ಷಿಗಳು), ಮತ್ತು ಅದನ್ನು ಅವರ ಮೇಲಧಿಕಾರಿಗಳಿಗೆ, ಪೊಲೀಸ್ ದೂರು ಪ್ರಾಧಿಕಾರಕ್ಕೆ ಅಥವಾ FBI/DOJ (ಯುಎಸ್‌ನಲ್ಲಿ) ಗೆ ವರದಿ ಮಾಡಿ.

ನಿಮ್ಮ ಹಕ್ಕುಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಔಪಚಾರಿಕ ದೂರುಗಳನ್ನು ಸಲ್ಲಿಸಲು ವಕೀಲರಿಂದ ಕಾನೂನು ಸಹಾಯವನ್ನು ಪಡೆಯಿರಿ, ಅಗತ್ಯವಿದ್ದರೆ ರಿಟ್ ಅರ್ಜಿಯನ್ನು ಸಹ ಪರಿಗಣಿಸಿ.

ಇದನ್ನು ಓದಿ : ಕಿರುಕುಳ ನೀಡಿದ Police ನಿಗೆ ಮಧ್ಯರಸ್ತೆಯಲ್ಲೇ ಎಳೆದು ಯುವತಿಯಿಂದ ಏಟು ; ವಿಡಿಯೋ.!


Disclaimer : ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಆಧಾರದಲ್ಲಿದೆ.
ಜನಸ್ಪಂದನ ನ್ಯೂಸ್ ಯಾವುದೇ ದಾವೆ ಅಥವಾ ದೃಢೀಕರಣ ಮಾಡುವುದಿಲ್ಲ.

ರೂ.110, ರೂ.205 ಗೆ ಪೆಟ್ರೋಲ್–ಡೀಸೆಲ್ ಹಾಕೋ ಟ್ರಿಕ್ಸ್ ಬಿಡಿ ; ಈ ಸಲಹೆ ಪಾಲಿಸಿ.

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಪೆಟ್ರೋಲ್ ಅಥವಾ ಡೀಸೆಲ್‌ ತುಂಬಿಸುವಾಗ ಸರಿಯಾದ ಪ್ರಮಾಣದ ಇಂಧನ ಸಿಗುತ್ತಿದೆಯೇ ಎಂಬ ಅನುಮಾನ ಎಲ್ಲ ವಾಹನ ಸವಾರರ ಮನಸ್ಸಿನಲ್ಲಿ ಬರುತ್ತದೆ. ಕೆಲವರು ರೂ.100, ರೂ.200, ಅಥವಾ ರೂ.500 ರ ಬದಲು ರೂ.110, ರೂ.210, ರೂ.305 ರಂತಹ ಮೊತ್ತ ತುಂಬಿಸಿದರೆ ಮೋಸವಾಗುವುದಿಲ್ಲ ಎಂದು ನಂಬುತ್ತಾರೆ. ಆದರೆ, ಈ “ಸಣ್ಣ ಮೊತ್ತದ ಟ್ರಿಕ್” ಕೆಲಸ ಮಾಡುವುದಿಲ್ಲ ಎಂದು ಪೆಟ್ರೋಲ್ ಪಂಪ್ ಉದ್ಯೋಗಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ವಿಡಿಯೋ ಮೂಲಕ ಸ್ಪಷ್ಟಪಡಿಸಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ :

Video Courtesy : @babamunganathfillingstation / Instagram

ಪೆಟ್ರೋಲ್ ಪಂಪ್ ಉದ್ಯೋಗಿಯ ಸಲಹೆಗಳು :

ವೈರಲ್ ವಿಡಿಯೋದಲ್ಲಿ ಅವರು Petrol ಅಥವಾ Diesel ಸರಿಯಾಗಿ ತುಂಬಿಸಿಕೊಳ್ಳಲು ಎರಡು ಮುಖ್ಯ ಮಾರ್ಗಗಳನ್ನು ಹಂಚಿಕೊಂಡಿದ್ದಾರೆ:

1️⃣ ಇಂಧನದ ಸಾಂದ್ರತೆ (Density) ಪರಿಶೀಲನೆ :

ನಿಖರವಾದ ಇಂಧನವನ್ನು ಪಡೆಯಲು ಮೊದಲ ನಿಯಮವೆಂದರೆ, ತೈಲದ ಸಾಂದ್ರತೆಯನ್ನು ಗಮನಿಸುವುದು.

  • Petrol : 720–775 Kg/m3
  • Diesel : 820–860 Kg/m3

Note : ಪೆಟ್ರೋಲ್ ಮತ್ತು ಡೀಸೆಲ್‌ಗಳಿಗೆ ನಿಗದಿತ ಸಾಂದ್ರತೆ ಮಿತಿಗಳು ಇರುತ್ತವೆ. ಸಾಮಾನ್ಯವಾಗಿ ಪೆಟ್ರೋಲ್ 720–780 kg/m³ ಮತ್ತು ಡೀಸೆಲ್ 820–860 kg/m³ ಮಿತಿಯಲ್ಲಿ ಇರುತ್ತದೆ ಎಂದು ತೈಲ ಉದ್ಯಮ ಮೂಲಗಳು ತಿಳಿಸುತ್ತವೆ. ತಾಪಮಾನ ಮತ್ತು ಸ್ಥಳದ ಮೇಲೆ ಸ್ವಲ್ಪ ವ್ಯತ್ಯಾಸ ಸಾಧ್ಯ.

ಉದ್ಯೋಗಿಯ ಪ್ರಕಾರ, ಸಾಮಾನ್ಯವಾಗಿ ಈ ವ್ಯಾಪ್ತಿಯಲ್ಲಿರುವ ಸಾಂದ್ರತೆ ಇಂಧನವು ಮಾನದಂಡಗಳಿಗೆ ಸಮೀಪದಲ್ಲಿದೆ ಎಂಬ ಸೂಚನೆ ನೀಡುತ್ತದೆ.

2️⃣ ಮೀಟರ್‌ನ ಎರಡನೇ ಅಂಕಿ ಗಮನಿಸಿ :

ಇಂದನ ಪಂಪ್ ಮೀಟರ್‌ ‘0’ ಯಿಂದ ಪ್ರಾರಂಭವಾಗುವುದು ಎಲ್ಲಾ ವಾಹನ ಸವಾರರು ಗಮನಿಸುತ್ತಾರೆ. ಆದರೆ, ಯಂತ್ರವು ‘0’ ನಂತರ ಹೋರಾಡುವ ಅಂಕಿಗಳನ್ನು ನೋಡಿ ಗಮನಹರಿಸುವುದು ಮುಖ್ಯ.

  • ಮೀಟರ್ ‘0’ ನಂತರ ಓದುವಿಕೆ ತುಂಬಾ ಹೆಚ್ಚಾಗಿರಬಾರದು.
  • ಕೆಲವು ಪೆಟ್ರೋಲ್ ಪಂಪ್ ಯಂತ್ರಗಳಲ್ಲಿ ‘0’ ನಂತರ ಓದುವಿಕೆ ಕ್ರಮೇಣ ಹೆಚ್ಚಾಗುತ್ತದೆ. ಆದರೆ ‘0’ ನೇರವಾಗಿ ದೊಡ್ಡ ಅಂಕಿಗೆ ಜಿಗಿದಂತೆ ಕಂಡರೆ ಗ್ರಾಹಕರು ಎಚ್ಚರ ವಹಿಸುವುದು ಒಳಿತು ಎಂದು ಉದ್ಯೋಗಿ ಸಲಹೆ ನೀಡಿದ್ದಾರೆ.

🔹 ಸಲಹೆಗಳು ಉಪಯುಕ್ತ :

ಈ ವಿಡಿಯೋ (@babamunganathfillingstation) ಇನ್‌ಸ್ಟಾಗ್ರಾಮ್‌ನಲ್ಲಿ ಲಕ್ಷಾಂತರ ವೀಕ್ಷಣೆ ಪಡೆದಿದ್ದು, ಬಳಕೆದಾರರಿಗೆ ಬಹಳ ಉಪಯುಕ್ತವಾಗಿದೆ. ಜನರು ಈಗ ಹಣದ ಬದಲು ಲೀಟರ್ ಲೆಕ್ಕದಲ್ಲಿ ಇಂಧನವನ್ನು ತುಂಬಿಸುವ ಅಭ್ಯಾಸಕ್ಕೆ ಹೋಗುತ್ತಿದ್ದಾರೆ.

ಪೆಟ್ರೋಲ್ ಬಂಕ್ ವಂಚನೆ – ಸಂಕ್ಷಿಪ್ತ ಸಾರಾಂಶ :

ಪೆಟ್ರೋಲ್ ಬಂಕ್‌ಗಳಲ್ಲಿ ವಂಚನೆಗಳು ಸಾಮಾನ್ಯವಾಗಿ ಮೀಟರ್ ಟ್ಯಾಂಪರಿಂಗ್, ಕಡಿಮೆ ಪ್ರಮಾಣದ ಇಂಧನ (Short Delivery), ಸಾಂದ್ರತೆ ಕಡಿಮೆ ಮಾಡುವುದು (Density manipulation) ಮತ್ತು ನೊಜಲ್ ಮ್ಯಾನಿಪುಲೇಷನ್ ಮೂಲಕ ನಡೆಯುತ್ತವೆ. ಕೆಲವೊಮ್ಮೆ ಗಮನ ಬೇರೆಡೆ ಸೆಳೆದು ಕಡಿಮೆ ಇಂಧನ ನೀಡುವ ಪ್ರಯತ್ನವೂ ಮಾಡಲಾಗುತ್ತದೆ.

ಇವುಗಳಿಂದ ತಪ್ಪಿಸಿಕೊಳ್ಳಲು:
* ಇಂಧನ ತುಂಬಿಸುವ ಮೊದಲು ಮೀಟರ್ ‘0’ ನಲ್ಲಿ ಇದೆಯೇ ಗಮನಿಸಬೇಕು.
* ಪೆಟ್ರೋಲ್–ಡೀಸೆಲ್ ಸಾಂದ್ರತೆ (Density) ಸರಿಯಾದ ಮಿತಿಯಲ್ಲಿದೆಯೇ ಪರಿಶೀಲಿಸಬೇಕು.
* ಹಣದ ಮೊತ್ತಕ್ಕಿಂತ ಲೀಟರ್ ಲೆಕ್ಕದಲ್ಲಿ ಇಂಧನ ತುಂಬಿಸಿಕೊಳ್ಳುವುದು ಸುರಕ್ಷಿತ.
* ವಂಚನೆ ಅನುಮಾನ ಬಂದರೆ ತಕ್ಷಣ ಬಂಕ್ ಮ್ಯಾನೇಜರ್ ಅಥವಾ ತೈಲ ಕಂಪನಿಗೆ ದೂರು ನೀಡಬೇಕು.

👉 ₹110, ₹205 ತರಹದ “ಟ್ರಿಕ್ಸ್” ಗಿಂತ ಜಾಗ್ರತೆ ಮತ್ತು ಮಾಹಿತಿ ಇವೇ ನಿಜವಾದ ರಕ್ಷಣೆ.

ಇದನ್ನು ಓದಿ : LPG : ಹೋಮ್ ಡೆಲಿವರಿ ಮಾಡುವ ಸಿಲಿಂಡರ್‌ಗೆ ಹೆಚ್ಚುವರಿ ಹಣ ಕೊಡಬೇಡಿ ; ಕೇಳಿದರೆ ದೂರು ಕೊಡಿ.!


Disclaimer : ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಆಧಾರದಲ್ಲಿದೆ.
ಜನಸ್ಪಂದನ ನ್ಯೂಸ್ ಯಾವುದೇ ದಾವೆ ಅಥವಾ ದೃಢೀಕರಣ ಮಾಡುವುದಿಲ್ಲ.

ಗರ್ಲ್‌ಫ್ರೆಂಡ್ ಜೊತೆಗಿದ್ದ ಪತಿಯನ್ನು ಹಿಡಿದ ಪತ್ನಿ ; ಮಧ್ಯರಸ್ತೆಯಲ್ಲಿ ಭೀಕರ ಗಲಾಟೆ, ವಿಡಿಯೋ ವೈರಲ್.

0

ಜನಸ್ಪಂದನ ನ್ಯೂಸ್‌, ಕಾನ್ಪುರ : ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಒಂದು ಕುಟುಂಬದೊಳಗಿನ ಗಂಭೀರ ಗಲಾಟೆಯ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪತ್ನಿಯೊಬ್ಬರು ತಮ್ಮ ಪತಿಯನ್ನು ಅವನ ಗರ್ಲ್‌ಫ್ರೆಂಡ್ ಜೊತೆ ಸಾರ್ವಜನಿಕ ರಸ್ತೆಯಲ್ಲೇ ಹಿಡಿದ ಘಟನೆ, ಕ್ಷಣಾರ್ಧದಲ್ಲಿ ದೊಡ್ಡ ಗಲಭೆಯಾಗಿ ಮಾರ್ಪಟ್ಟಿದೆ. ಸದ್ಯ ಈ ದೃಶ್ಯಗಳ ವಿಡಿಯೋ ವ್ಯಾಪಕವಾಗಿ ವೈರಲ್ ಆಗುತ್ತಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಪತಿ–ಪತ್ನಿ–ಗರ್ಲ್‌ಫ್ರೆಂಡ್ ಗಲಾಟೆ :

ಈ ಘಟನೆ ಕಾನ್ಪುರದ ಮಹಾರಾಜಪುರ ಪೊಲೀಸ್ ಠಾಣೆ ವ್ಯಾಪ್ತಿಯ ನರವಲ್ ಮೋಡ್ ಬಳಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಸ್ಥಳೀಯ ಮಾಹಿತಿಯ ಪ್ರಕಾರ, ಹಬ್ಬದ ನಿಮಿತ್ತ ಮನೆಗೆ ಬಂದಿದ್ದ ಪತಿಯ ಬಗ್ಗೆ ಪತ್ನಿಗೆ ಮೊದಲಿನಿಂದಲೂ ಸಂಶಯವಿತ್ತು.

ಈ ಹಿನ್ನೆಲೆಯಲ್ಲಿ ಆಕೆ ಪತಿಯ ಚಲನವಲನವನ್ನು ಗಮನಿಸುತ್ತಿದ್ದು, ನರವಲ್ ಮೋಡ್ ಬಳಿ ಅವನು ಮತ್ತೊಬ್ಬ ಮಹಿಳೆಯೊಂದಿಗೆ ಇರುವುದನ್ನು ನೇರವಾಗಿ ಕಂಡು ಬೆಚ್ಚಿಬಿದ್ದಿದ್ದಾರೆ.

ಮಧ್ಯರಸ್ತೆಯಲ್ಲೇ ಜೋರಾದ ವಾಗ್ವಾದ :

ಪತ್ನಿಯನ್ನು ನೋಡುತ್ತಿದ್ದಂತೆ ಪತಿ ಮತ್ತು ಅವನ ಜೊತೆಗಿದ್ದ ಮಹಿಳೆ ಗಲಿಬಿಲಿಗೊಂಡಿದ್ದಾರೆ. ತಕ್ಷಣವೇ ಪತ್ನಿ ಮಧ್ಯರಸ್ತೆಯಲ್ಲೇ ಜೋರಾಗಿ ಗಲಾಟೆ ಆರಂಭಿಸಿದ್ದಾರೆ. ಮೊದಲಿಗೆ ಮಾತಿನ ಚಕಮಕಿ ನಡೆದರೂ, ಕೆಲವೇ ಕ್ಷಣಗಳಲ್ಲಿ ವಿವಾದ ಗಂಭೀರವಾಗಿ ತೀವ್ರಗೊಂಡಿದೆ.

ಆದರೆ ಸ್ವಲ್ಪ ಸಮಯದ ನಂತರ ಪರಿಸ್ಥಿತಿ ವಿಕೋಪಕ್ಕೆ ಹೋಯಿತು ಮತ್ತು ವಿಡಿಯೋದಲ್ಲಿ ಕಾಣಿಸುವಂತೆ, ಗಂಡ ಪತ್ನಿಯ ಮೇಲೆ ಕೈ ಎತ್ತಿದಂತಿರುವ ದೃಶ್ಯಗಳು ಕಾಣಿಸುತ್ತವೆ.

ವೈರಲ್ ವಿಡಿಯೋ ಇಲ್ಲಿದೆ :‌

Video Courtesy : Social media / ABP Live

ರಸ್ತೆಯ ಮೇಲೆ ಗೊಂದಲದ ಪರಿಸ್ಥಿತಿ :

ಪತಿಯ ವರ್ತನೆಗೆ ಆಕ್ರೋಶಗೊಂಡ ಪತ್ನಿ ಅವನ ಗರ್ಲ್‌ಫ್ರೆಂಡ್ ಜೊತೆ ತೀವ್ರ ವಾಗ್ವಾದಕ್ಕೆ ಇಳಿದಿದ್ದು, ಅದು ಕ್ಷಣಾರ್ಧದಲ್ಲಿ ಕೈ ಕೈ ಮಿಲಾಯಿಸುವ ಮಟ್ಟಕ್ಕೆ ತಲುಪಿದೆ. ಇಬ್ಬರು ಮಹಿಳೆಯರು ಪರಸ್ಪರ ಹೊಡೆದಾಡಿಕೊಂಡಿದ್ದು, ಪತ್ನಿ ಪತಿಗೂ ಕಪಾಳಕ್ಕೆ ಹೊಡೆದಿರುವುದು ಕಂಡುಬಂದಿದೆ.

“ಜಗಳವು ತೀವ್ರ ಸ್ವರೂಪ ಪಡೆದುಕೊಂಡು, ಪರಿಸ್ಥಿತಿ ಅಸ್ತವ್ಯಸ್ತವಾಯಿತು.” ಬೀದಿಯಲ್ಲಿ ದೊಡ್ಡ ಜನಸಮೂಹ ಜಮಾಯಿಸಿತು.

ವಿಡಿಯೋ ಮಾಡಿದ್ದ ಜನ, ತಡೆಯದ ಪತಿ :

ಆಶ್ಚರ್ಯದ ಸಂಗತಿಯೆಂದರೆ, ಜಗಳವನ್ನು ತಡೆಯುವ ಬದಲು ಅಲ್ಲಿ ಸೇರಿದ್ದ ಅನೇಕರು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಲು ಮುಂದಾದರು. ಇನ್ನಷ್ಟು ಆಘಾತಕಾರಿಯಾದ ಸಂಗತಿ ಎಂದರೆ, ಪತಿ ಜಗಳ ಶಮನಗೊಳಿಸುವ ಪ್ರಯತ್ನ ಮಾಡದೇ, ತನ್ನ ಗರ್ಲ್‌ಫ್ರೆಂಡ್‌ಗೆ ಪತ್ನಿಯ ಮೇಲೆ ದಾಳಿ ಮಾಡಲು ಪ್ರೋತ್ಸಾಹಿಸಿದಂತೆ ವರ್ತಿಸಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

ವಿಡಿಯೋ ವೈರಲ್, ಪೊಲೀಸ್ ಸ್ಪಷ್ಟನೆ :

ಘಟನೆಯ ಕೆಲ ಸಮಯದ ಬಳಿಕ ಸ್ಥಳೀಯರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಿಂದ ವಿವಿಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಈವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ದೂರು ಬಂದಲ್ಲಿ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ : ಅನೈತಿಕ ಸಂಬಂಧ ಹೊಂದಿದ್ದ ಆರೋಪ ; ತಮ್ಮನನ್ನೇ ಮಣ್ಣಲ್ಲಿ ಹೋತು ಹಾಕಿದ ಅಣ್ಣ.


Disclaimer : “This video is taken from social media. We do not endorse violence or defamation. For responsible sharing.”

ಅನೈತಿಕ ಸಂಬಂಧ ಹೊಂದಿದ್ದ ಆರೋಪ ; ತಮ್ಮನನ್ನೇ ಮಣ್ಣಲ್ಲಿ ಹೋತು ಹಾಕಿದ ಅಣ್ಣ.

0

ಜನಸ್ಪಂದನ ನ್ಯೂಸ್‌, ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ನಡೆದ ಭೀಕರ ಹತ್ಯೆಯೊಂದು ಇದೀಗ ಸಿನಿಮಾವನ್ನೇ ಮೀರಿಸುವ ರೀತಿಯಲ್ಲಿ ಬೆಳಕಿಗೆ ಬಂದಿದೆ. ಅಣ್ಣನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಆರೋಪದ ಹಿನ್ನಲೆಯಲ್ಲಿ ತಮ್ಮನನ್ನೇ ಕೊಂದು ಮಣ್ಣಿನಲ್ಲಿ ಹೂತು, ಬಳಿಕ ನಾಟಕೀಯವಾಗಿ ಮಿಸ್ಸಿಂಗ್ ದೂರು ನೀಡಿದ್ದ ಅಣ್ಣನ ಅಸಲಿ ಮುಖವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.

28 ವರ್ಷದ ರಾಮಚಂದ್ರ ಎಂಬ ಯುವಕ ಈ ಹತ್ಯೆಯ ಬಲಿಯಾಗಿದ್ದು, ಆತನ ಸಹೋದರ ಮಾಲತೇಶ್‌ನೇ ಕೊಲೆ ಆರೋಪಿಯಾಗಿದ್ದಾನೆ. ರಾಮಚಂದ್ರ ಕೂಲಿ ಕೆಲಸ ಮಾಡಿಕೊಂಡಿದ್ದು, ಇನ್ನೂ ಮದುವೆಯಾಗಿರಲಿಲ್ಲ. ತನಿಖೆ ಪ್ರಕಾರ, ರಾಮಚಂದ್ರ ಮತ್ತು ಅಣ್ಣನ ಪತ್ನಿ ಭಾಗ್ಯ ನಡುವೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ.

ಅನೈತಿಕ ಸಂಬಂಧಕ್ಕೆ ಎಚ್ಚರಿಕೆ ; ಆದರೂ ಮುಂದುವರಿದ ಸರಸ :

ತಮ್ಮನ ಮತ್ತು ಪತ್ನಿಯ ಸಂಬಂಧದ ಬಗ್ಗೆ ತಿಳಿದುಕೊಂಡಿದ್ದ ಮಾಲತೇಶ್‌, ಇಬ್ಬರಿಗೂ ಹಲವು ಬಾರಿ ಎಚ್ಚರಿಕೆ ನೀಡಿದ್ದ. ಆದರೆ ರಾಮಚಂದ್ರ ತನ್ನ ನಡತೆಯನ್ನು ಬದಲಾಯಿಸದೆ ಮುಂದುವರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರಿಂದ ತೀವ್ರ ಕೋಪಗೊಂಡ ಮಾಲತೇಶ್‌, ತಮ್ಮನನ್ನು ದೂರಮಾಡುವ ನಿರ್ಧಾರ ಕೈಗೊಂಡಿದ್ದಾನೆ.

ಮದುವೆ ನೆಪದಲ್ಲಿ ಕರೆದುಕೊಂಡು ಹೋಗಿ ಹತ್ಯೆ :

ರಾಮಚಂದ್ರನಿಗೆ “ನಿನಗೆ ಬೇಗ ಮದುವೆ ಆಗಲಿ, ಸ್ವಾಮೀಜಿಯ ಬಳಿ ಪೂಜೆ ಮಾಡಿಸೋಣ” ಎಂದು ನಂಬಿಸಿ, ಮಾಲತೇಶ್ ಆತನನ್ನು ಮಂಜುನಾಥ್ ಎಂಬವರ ತೋಟಕ್ಕೆ ಕರೆದುಕೊಂಡು ಹೋಗಿದ್ದಾನೆ.

ಅಲ್ಲಿ ಮದ್ಯಪಾನ ಮಾಡಿಸಿ, ಕೈಕಾಲು ಕಟ್ಟಿ, ಕುಂಕುಮ ಹಾಗೂ ಲಿಂಬೆಹಣ್ಣು ನೀಡಿ ಪೂಜೆ ನೆಪದಲ್ಲಿ ಹಗ್ಗದಿಂದ ಕತ್ತು ಹಿಸುಕಿ ಕೊಂದಿರುವುದು ತನಿಖೆಯಿಂದ ತಿಳಿದುಬಂದಿದೆ. ಬಳಿಕ ಶವವನ್ನು ತೋಟದಲ್ಲೇ ಗುಂಡಿ ತೋಡಿ ಹೂತು ಹಾಕಲಾಗಿದೆ.

ಕೊಲೆ ಮಾಡಿ ಮಿಸ್ಸಿಂಗ್ ದೂರು – ಶಂಕೆ ತಪ್ಪಿಸಲು ಯತ್ನ :

ಕೊಲೆ ಬಳಿಕ ಮಾಲತೇಶ್ ತಾನೇ ಸೊರಬ ಪೊಲೀಸ್ ಠಾಣೆಗೆ ಹೋಗಿ “ತಮ್ಮ ರಾಮಚಂದ್ರ ಕಾಣೆಯಾಗಿದ್ದಾನೆ” ಎಂದು ದೂರು ನೀಡಿದ್ದ. ನಿತ್ಯ ಪೊಲೀಸ್ ಠಾಣೆಗೆ ತೆರಳಿ ವಿಚಾರಣೆ ನಡೆಸುತ್ತಿದ್ದಂತೆ ನಟಿಸಿದ್ದಾನೆ. ಇದರಿಂದ ಕುಟುಂಬದವರಿಗೂ ಆರಂಭದಲ್ಲಿ ಅನುಮಾನ ಬಂದಿರಲಿಲ್ಲ.

ಸೊಸೆಯ ಒಪ್ಪಿಗೆ – ಕೊಲೆ ರಹಸ್ಯ ಬಹಿರಂಗ :

45 ದಿನಗಳಾದರೂ ರಾಮಚಂದ್ರ ಮನೆಗೆ ವಾಪಸ್ ಆಗದ ಹಿನ್ನೆಲೆಯಲ್ಲಿ ತಾಯಿ ಗೌರಮ್ಮ ಆತಂಕಗೊಂಡು ಮತ್ತೊಮ್ಮೆ ಪೊಲೀಸರ ಮೊರೆ ಹೋಗಿದ್ದಾರೆ. ಈ ವೇಳೆ, ಸೊಸೆ ಭಾಗ್ಯ ತನ್ನ ಹಾಗೂ ರಾಮಚಂದ್ರನ ನಡುವಿನ  ಅನೈತಿಕ ಸಂಬಂಧ ಮತ್ತು ಅದರಿಂದ ಮಾಲತೇಶ್‌ನೇ ಕೊಲೆ ಮಾಡಿರುವ ಶಂಕೆಯನ್ನು ಬಾಯಿಬಿಟ್ಟಿದ್ದಾಳೆ.

ತಾಯಿ ಗೌರಮ್ಮ ನೇರವಾಗಿ ಮಾಲತೇಶ್‌ನನ್ನು ಪ್ರಶ್ನಿಸಿದಾಗ, “ಅವನ ಕಥೆ ಮುಗಿದಿದೆ, ಇನ್ನೇನು ಕೇಳಬೇಡ” ಎಂದು ಹೇಳಿದ್ದಾನೆ ಎನ್ನಲಾಗಿದೆ. ಬಳಿಕ ಒತ್ತಡದ ವಿಚಾರಣೆಗೆ ಒಳಗಾದ ಮಾಲತೇಶ್‌, ಶವ ಹೂತಿದ್ದ ಸ್ಥಳವನ್ನು ಪೊಲೀಸರಿಗೆ ತೋರಿಸಿದ್ದಾನೆ.

ಪೊಲೀಸ್ ತನಿಖೆ ಮುಂದುವರಿಕೆ :

ಪೊಲೀಸರು ಸ್ಥಳದಿಂದ ಅವಶೇಷಗಳನ್ನು ಹೊರತೆಗೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅನೈತಿಕ ಸಂಬಂಧ, ಕುಟುಂಬದೊಳಗಿನ ವೈಮನಸ್ಸು ಮತ್ತು ಪೂರ್ವಯೋಜಿತ ಹತ್ಯೆ ಎಂಬ ಅಂಶಗಳ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

Courtesy : News 18 ಕನ್ನಡ

ಸ್ವಾಮೀಜಿಯ ಬೆತ್ತಲೆ ಮಸಾಜ್ ವಿಡಿಯೋ ವೈರಲ್ ; ಬ್ಲಾಕ್‌ಮೇಲ್ ಆರೋಪ.

0

ಜನಸ್ಪಂದನ ನ್ಯೂಸ್‌, ಧಾರವಾಡ : ಧಾರವಾಡ ಜಿಲ್ಲೆಯ ಶಿವಾನಂದ ಮಠದ ಪೀಠಾಧಿಪತಿ ಸರಸ್ವತಿ ಸ್ವಾಮೀಜಿಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರಿಂದ ಮಠದ ಭಕ್ತರು ಮತ್ತು ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮಠದ ಆವರಣದಲ್ಲಿ ಮಹಿಳೆಯೊಬ್ಬರಿಂದ ಎಣ್ಣೆ ಮಸಾಜ್ ಪಡೆಯುತ್ತಿರುವ ದೃಶ್ಯಗಳು ಎನ್ನಲಾಗಿರುವ ವಿಡಿಯೋ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಸದ್ಯ ಪ್ರಕರಣ ಸದ್ದು ಮಾಡುತ್ತಿದೆ.

ವಿಡಿಯೋ ವೈರಲ್ ಆದ ಬಳಿಕ ಗ್ರಾಮಸ್ಥರು ಸ್ವಾಮೀಜಿಯ ವರ್ತನೆ ಕುರಿತು ಪ್ರಶ್ನೆ ಎತ್ತಿದ್ದು, ಮಠದ ಪಾವಿತ್ರ್ಯ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೋರ್ನ್ ಸ್ಟಾರ್ ಆಗುವ ಆಸೆಗೆ ಪತ್ನಿ ಜೊತೆಗಿನ ಖಾಸಗಿ ವಿಡಿಯೋ ಹರಿಬಿಟ್ಟ ಪತಿ.

ಕೆಲವು ದಿನಗಳ ಕಾಲ ಅವರನ್ನು ಮಠದಿಂದ ಹೊರಗಿಡಲಾಗಿತ್ತು. ನಂತರ ಗ್ರಾಮದ ಕೆಲವರ ಮಧ್ಯಸ್ಥಿಕೆಯಿಂದ ಅವರನ್ನು ಮಠಕ್ಕೆ ಮರಳಿ ಕರೆತರಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬ್ಲಾಕ್‌ಮೇಲ್ ಆರೋಪ ಮಾಡಿದ ಸ್ವಾಮೀಜಿ :

ಈ ಬೆಳವಣಿಗೆಗಳ ಕುರಿತು ಅವರು ಪ್ರತಿಕ್ರಿಯೆ ನೀಡಿದ್ದು, ತಾನು ಬ್ಲಾಕ್‌ಮೇಲ್‌ಗೆ ಒಳಗಾಗಿದ್ದೇನೆ ಎಂದು ಆರೋಪಿಸಿದ್ದಾರೆ. ಮಹಿಳೆಯೊಬ್ಬರು ಪರಿಚಯ ಮಾಡಿಕೊಂಡು ನಂತರ ತಮ್ಮ ವಿರುದ್ಧ ವಿಡಿಯೋ ಬಳಸಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.

ಸುಮಾರು ಐದು ಮಂದಿಯ ಗುಂಪು 20 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದು, ಮಾತುಕತೆ ಬಳಿಕ 10 ಲಕ್ಷ ರೂಪಾಯಿಗೆ ಒಪ್ಪಂದವಾಗಿದೆ ಎಂಬುದಾಗಿ ಸ್ವಾಮೀಜಿ ತಿಳಿಸಿದ್ದಾರೆ.

ಇತರೇ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಅದರಂತೆ, ಮಠಕ್ಕೆ ಬಂದ ನಾಲ್ವರಿಗೆ ಹಂತ ಹಂತವಾಗಿ ಹಣ ನೀಡಲಾಗಿದೆ. ಆದರೆ ಉಳಿದ ಹಣ ನೀಡದ ಕಾರಣ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗಿದೆ ಎಂದು ಅವರು ದೂರಿದ್ದಾರೆ. ಈ ವಿಷಯದಲ್ಲಿ ತಮಗೆ ಮೋಸವಾಗಿದೆ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

ತನಿಖೆಗೆ ಒತ್ತಾಯ :

ವಿಡಿಯೋ ಯಾರು ಚಿತ್ರೀಕರಿಸಿದ್ದಾರೆ, ಹೇಗೆ ಹೊರಬಂದಿದೆ ಎಂಬುದರ ಬಗ್ಗೆ ತನಗೆ ಮಾಹಿತಿ ಇಲ್ಲ ಎಂದು ಸ್ವಾಮೀಜಿ ಹೇಳಿಕೊಂಡಿದ್ದಾರೆ. ಈ ಸಂಬಂಧ ಬ್ಲಾಕ್‌ಮೇಲ್ ಮಾಡಿದವರ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿರುವುದಾಗಿ ಅವರು ತಿಳಿಸಿದ್ದಾರೆ.

ಇನ್ನೊಂದೆಡೆ, ಈ ಪ್ರಕರಣದ ಸತ್ಯಾಸತ್ಯತೆ ಕುರಿತು ಸಂಪೂರ್ಣ ತನಿಖೆ ನಡೆಯಬೇಕು ಎಂದು ಗ್ರಾಮಸ್ಥರು ಹಾಗೂ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಮಠದ ಗೌರವ ಮತ್ತು ಧಾರ್ಮಿಕ ಸಂಸ್ಥೆಗಳ ಮೇಲಿನ ನಂಬಿಕೆ ಕಾಪಾಡುವ ದೃಷ್ಟಿಯಿಂದ ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ.

ಇದನ್ನು ಓದಿ : ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಅತಿರೇಕದ ಪ್ರೇಮ ಕಾಟ ; ಮಹಿಳೆ ವಿರುದ್ಧ ಎಫ್‌ಐಆರ್.

ಪ್ರಕರಣ ಇದೀಗ ಕಾನೂನು ಹಂತದಲ್ಲಿದ್ದು, ಮುಂದಿನ ತನಿಖೆಯ ನಂತರವೇ ನಿಖರವಾದ ಸತ್ಯಾಂಶ ಬಹಿರಂಗವಾಗಲಿದೆ.‌

ವರದಿ : ಜನಸ್ಪಂದನ ನ್ಯೂಸ್ ತಂಡ

ಹೆಚ್ಚಿನ ಸುದ್ದಿಗಳಿಗಾಗಿ janaspandhan.com ಕ್ಲಿಕ್ ಮಾಡಿ

ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಅತಿರೇಕದ ಪ್ರೇಮ ಕಾಟ ; ಮಹಿಳೆ ವಿರುದ್ಧ ಎಫ್‌ಐಆರ್.

0

ಜನಸ್ಪಂದನ ನ್ಯೂಸ್‌, ಬೆಂಗಳೂರು : ಬೆಂಗಳೂರು ನಗರದ ರಾಮಮೂರ್ತಿ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸತೀಶ್ ಅವರಿಗೆ ಮಹಿಳೆಯೊಬ್ಬರಿಂದ ಎದುರಾದ ಅತಿರೇಕದ ಪ್ರೇಮ ಕಾಟ ಇದೀಗ ಗಂಭೀರ ಕಾನೂನು ಪ್ರಕರಣವಾಗಿ ಮಾರ್ಪಟ್ಟಿದೆ. ನಿರಂತರವಾಗಿ ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಒತ್ತಡ ಹೇರಿದ್ದು, ಒಪ್ಪಿಕೊಳ್ಳದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಮಹಿಳೆ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಮಹಿಳೆ ಇನ್ಸ್‌ಪೆಕ್ಟರ್‌ರಿಗೆ ಪದೇಪದೇ ಫೋನ್ ಕರೆ ಮಾಡಿ, ಸಂದೇಶಗಳನ್ನು ಕಳುಹಿಸಿ “ನನ್ನನ್ನು ಪ್ರೀತಿಸಬೇಕು” ಎಂದು ಮಾನಸಿಕ ಒತ್ತಡ ಹಾಕುತ್ತಿದ್ದಳು ಎನ್ನಲಾಗಿದೆ. ‘‘Chinni love u, u love m’’ ಎಂದು ರಕ್ತದಲ್ಲಿ ಬರೆದ ಪತ್ರವನ್ನು ಪೋಸ್ಟ್ ಮೂಲಕ ಠಾಣೆಗೆ ಕಳುಹಿಸಿದ್ದಾಳೆ ಎಂಬುದು ಮತ್ತೊಂದು ಗಂಭೀರ ಆರೋಪವಾಗಿದೆ.

ಇದನ್ನು ಓದಿ : ರಸ್ತೆಯಲ್ಲಿ ಹೃದಯಾಘಾತ : ರಾತ್ರಿ ಸಹಾಯಕ್ಕೆ ಬಾರದ ಜನ ; 34 ವರ್ಷದ ಯುವಕ ಸಾವು.

ತನ್ನನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆಯೆಂದು ಹೇಳಿಕೊಂಡಿದ್ದ ಮಹಿಳೆ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳೊಂದಿಗೆ ಪರಿಚಯವಿದೆ ಎಂದಿದ್ದಾಳೆ. ಜೊತೆಗೆ ಕೆಲ ರಾಜಕೀಯ ನಾಯಕರೊಂದಿಗೆ ತೆಗೆಸಿಕೊಂಡಿರುವ ಫೋಟೋಗಳನ್ನು ಕಳುಹಿಸಿ, ಪ್ರೀತಿಯನ್ನು ಒಪ್ಪಿಕೊಳ್ಳಲೇಬೇಕು ಎಂದು ಇನ್ಸ್‌ಪೆಕ್ಟರ್ ಮೇಲೆ ಒತ್ತಡ ಹೇರುತ್ತಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.

ಠಾಣೆಗೇ ಹೂಗುಚ್ಛ, ಕಜ್ಜಾಯ ಡಬ್ಬಿ ಕಳುಹಿಸಿದ ಮಹಿಳೆ :

ಮಹಿಳೆಯ ಕಾಟ ಇಷ್ಟರ ಮಟ್ಟಿಗೆ ಹೋಗಿತ್ತು ಎನ್ನಲಾಗಿದ್ದು, ಇನ್ಸ್‌ಪೆಕ್ಟರ್ ಠಾಣೆಯಲ್ಲಿ ಇಲ್ಲದ ಸಂದರ್ಭದಲ್ಲೂ ಪೊಲೀಸ್ ಠಾಣೆಗೆ ಹೂಗುಚ್ಛ ಹಾಗೂ ಕಜ್ಜಾಯದ ಡಬ್ಬಿಗಳನ್ನು ತಂದು ಇಟ್ಟು ಹೋಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ : ಕುಡಿದ ಅಮಲಿನಲ್ಲಿ ರಾಪಿಡೋದಿಂದ ಕೆಳಗೆ ಬಿದ್ದ Young woman ; ವಿಡಿಯೋ ವೈರಲ್.

ಒಂದೇ ಅಲ್ಲದೆ, 11 ವಿಭಿನ್ನ ಮೊಬೈಲ್ ಸಂಖ್ಯೆಗಳ ಮೂಲಕ ಇನ್ಸ್‌ಪೆಕ್ಟರ್‌ಗೆ ನಿರಂತರವಾಗಿ ಕರೆ ಮಾಡುತ್ತಿದ್ದಳು. ಈ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ಎಲ್ಲಾ ಸಂಖ್ಯೆಗಳನ್ನೂ ಬ್ಲಾಕ್ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.

ರಕ್ತದಲ್ಲಿ ಬರೆದ ಪ್ರೇಮ ಪತ್ರ, ಆತ್ಮಹತ್ಯೆ ಬೆದರಿಕೆ :

ಇಷ್ಟಕ್ಕೂ ನಿಲ್ಲದ ಮಹಿಳೆ, ಪ್ರೇಮ ಪತ್ರ (Love letter) ಜೊತೆಗೆ ಮಾತ್ರೆಗಳನ್ನೂ ಕಳುಹಿಸಿದ್ದಾಳೆ ಎನ್ನಲಾಗಿದೆ. “ನನ್ನ ಪ್ರೀತಿಯನ್ನು ನೀವು ಒಪ್ಪಿಕೊಳ್ಳುತ್ತಿಲ್ಲ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನೀವೇ ಕಾರಣ” ಎಂದು ಬರೆದು, ರಕ್ತದಲ್ಲಿ ಬರೆಯಲಾಗಿದೆ ಎನ್ನಲಾದ ಪತ್ರ (ಪ್ರೇಮ ಪತ್ರ) ವನ್ನು ಪೋಸ್ಟ್ ಮೂಲಕ ಠಾಣೆಗೆ ಕಳುಹಿಸಿದ್ದಾಳೆ ಎಂಬುದು ಪ್ರಕರಣಕ್ಕೆ ಮತ್ತಷ್ಟು ಗಂಭೀರತೆ ತಂದಿದೆ.

ಇದನ್ನು ಓದಿ : ಇತರೇ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಗೃಹ ಸಚಿವರ ಕಚೇರಿಯಿಂದ ಕರೆ?

ಈ ಮಧ್ಯೆ, ಮಹಿಳೆ ದೂರು ದಾಖಲಿಸಲು ಬಂದಿದ್ದಾಳೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಗೃಹ ಸಚಿವರ ಕಚೇರಿಯಿಂದಲೂ ಠಾಣೆಗೆ ಕರೆ ಬಂದಿತ್ತು ಎನ್ನಲಾಗಿದೆ. ಆದರೆ ಮಹಿಳೆ ಯಾವುದೇ ಅಧಿಕೃತ ದೂರು ದಾಖಲಿಸಿಲ್ಲ ಎಂದು ಇನ್ಸ್‌ಪೆಕ್ಟರ್ ಸತೀಶ್ ಸ್ಪಷ್ಟಪಡಿಸಿದ್ದಾರೆ.

ಕಾನೂನು ಕ್ರಮಕ್ಕೆ ಮೊರೆ ಹೋದ ಇನ್ಸ್‌ಪೆಕ್ಟರ್ :

ನಿರಂತರ ಮಾನಸಿಕ ಕಿರುಕುಳ, ಕರ್ತವ್ಯಕ್ಕೆ ಅಡ್ಡಿ ಹಾಗೂ ಆತ್ಮಹತ್ಯೆ ಬೆದರಿಕೆ ಆರೋಪಗಳ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ಸತೀಶ್ ಕೊನೆಗೂ ಕಾನೂನು ಕ್ರಮ ಕೈಗೊಂಡಿದ್ದಾರೆ. ಮಹಿಳೆ ವಿರುದ್ಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಪ್ರಕರಣವನ್ನು ತನಿಖೆಗೆ ಒಳಪಡಿಸಲಾಗಿದೆ.

ಇದನ್ನು ಓದಿ : ಮೊಟ್ಟೆಗಳಲ್ಲಿ ʼಕ್ಯಾನ್ಸರ್ ಕಾರಕʼ ಅಂಶ ಅನುಮಾನ ; ರಾಜ್ಯಾದ್ಯಂತ ಆರೋಗ್ಯ ಅಲರ್ಟ್.

ಪ್ರಕರಣದ ಹಿನ್ನೆಲೆ, ಮಹಿಳೆಯ ವರ್ತನೆಯ ನಿಜಾಂಶ ಹಾಗೂ ಆರೋಪಗಳ ಸತ್ಯಾಸತ್ಯತೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Courtesy : TV9 Kannada

ಇಂತಹ ಹೆಚ್ಚಿನ ಸುದ್ದಿಗಳನ್ನು ನೀವು ಓದಲು ಬಯಸುವಿರಾ? janaspandhan.com ಕ್ಲಿಕ್ ಮಾಡಿ

ರಸ್ತೆಯಲ್ಲಿ ಹೃದಯಾಘಾತ : ರಾತ್ರಿ ಸಹಾಯಕ್ಕೆ ಬಾರದ ಜನ ; 34 ವರ್ಷದ ಯುವಕ ಸಾವು.

0

ಜನಸ್ಪಂದನ ನ್ಯೂಸ್‌, ಬೆಂಗಳೂರು : ದಿನದಿಂದ ದಿನಕ್ಕೆ ಬೆಂಗಳೂರು ನಗರ ವಿಸ್ತಾರಗೊಳ್ಳುತ್ತಲೇ ಇದೆ. ಮೂಲಸೌಕರ್ಯ, ಜನಸಂಖ್ಯೆ ಮತ್ತು ವಾಹನ ಸಂಚಾರ ಎಲ್ಲವೂ ವೇಗವಾಗಿ ಹೆಚ್ಚುತ್ತಿದೆ. ಆದರೆ, ಇದೇ ಸಮಯದಲ್ಲಿ ನಗರದಲ್ಲಿನ ಮಾನವೀಯತೆ ಕುಗ್ಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗುವ ಘಟನೆಗಳು ಪದೇಪದೇ ಬೆಳಕಿಗೆ ಬರುತ್ತಿವೆ. ಇತ್ತೀಚೆಗೆ ನಡೆದ ಒಂದು ದಾರುಣ ಘಟನೆ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.

ಬೆಂಗಳೂರಿನ ಬನಶಂಕರಿ ಸಮೀಪದ ಕದಿರೇನಹಳ್ಳಿಯ ಮುಖ್ಯ ರಸ್ತೆಯಲ್ಲಿ 34 ವರ್ಷದ ಯುವಕನೊಬ್ಬ ಹೃದಯಾಘಾತದಿಂದ ರಸ್ತೆ ಮಧ್ಯೆ ಪ್ರಾಣ ಕಳೆದುಕೊಂಡಿದ್ದಾನೆ. ಈ ಘಟನೆ ಡಿಸೆಂಬರ್ 13ರಂದು ರಾತ್ರಿ ನಡೆದಿದೆ.

ಇದನ್ನು ಓದಿ : ಯುವತಿಯ ಹೊಟ್ಟೆಯಲ್ಲಿ “ಶಸ್ತ್ರಚಿಕಿತ್ಸಾ ಬ್ಲೇಡ್” ಉಳಿಸಿ ಹೊಲಿಗೆ ಹಾಕಿದ Doctor!

ಚಲಿಸುತ್ತಿದ್ದ ಬೈಕ್‌ನಲ್ಲೇ ಆತನಿಗೆ ಹೃದಯಾಘಾತವಾಗಿದ್ದು, ಬೈಕ್‌ನಿಂದ ಕೆಳಗೆ ಬಿದ್ದು ಆತ ಜೀವ ಉಳಿಸಿಕೊಳ್ಳಲು ಒದ್ದಾಡಿದ್ದಾನೆ. ಆದರೆ, ಅದೆಲ್ಲದರ ನಡುವೆಯೂ ಸಹಾಯಕ್ಕೆ ಯಾರೊಬ್ಬರೂ ಮುಂದಾಗದೇ ಇರುವುದೇ ಈ ಘಟನೆಯ ಅತ್ಯಂತ ನೋವಿನ ಅಂಶವಾಗಿದೆ.

ಮೃತ ವ್ಯಕ್ತಿಗೆ ಮನೆಯಲ್ಲಿಯೇ ಮೊದಲು ಹೃದಯಾಘಾತದ ಸಣ್ಣ ಸೂಚನೆಗಳು ಕಂಡುಬಂದಿದ್ದವು. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲು ಕುಟುಂಬ ಯತ್ನಿಸಿದರೂ, ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಲಭ್ಯವಾಗದ ಕಾರಣ ಪತ್ನಿಯೊಂದಿಗೆ ಬೈಕ್‌ನಲ್ಲೇ ಆಸ್ಪತ್ರೆಗೆ ತೆರಳುತ್ತಿದ್ದರು. ಆದರೆ ಮಾರ್ಗಮಧ್ಯೆ ಮತ್ತೊಮ್ಮೆ ತೀವ್ರ ಹೃದಯಾಘಾತ ಸಂಭವಿಸಿದೆ.

ಇದನ್ನು ಓದಿ : ಗರ್ಭಿಣಿ ಪತ್ನಿಗೆ ಮೋಸ ; ಗಂಡನ ರಹಸ್ಯ ಬಯಲು ಮಾಡಿದ ಪ್ರವಾಹ.

ಬೈಕ್‌ನಿಂದ ಕೆಳಗೆ ಬಿದ್ದ ವ್ಯಕ್ತಿ ರಸ್ತೆ ಮೇಲೆ ತೀವ್ರ ನೋವಿನಿಂದ ಒದ್ದಾಡುತ್ತಿದ್ದಾಗ, ಆತನ ಪತ್ನಿ ಗಂಡನನ್ನು ಉಳಿಸಿಕೊಡುವಂತೆ ಕಾರು, ಬೈಕ್ ಮತ್ತು ಗೂಡ್ಸ್ ವಾಹನಗಳನ್ನು ನಿಲ್ಲಿಸಲು ಕೈ ತೋರಿಸಿ ಸಹಾಯ ಕೇಳಿದ್ದಾಳೆ. ಆದರೂ, ಒಂದು ವಾಹನ ಕೂಡ ನಿಲ್ಲಿಸದೇ ಮುಂದೆ ಸಾಗಿರುವುದು ಸ್ಥಳೀಯರಲ್ಲಿಯೇ ಆಕ್ರೋಶಕ್ಕೆ ಕಾರಣವಾಗಿದೆ.

ರಾತ್ರಿ ಸಮಯದಲ್ಲಿ ಸಹಾಯಕ್ಕೆ ಜನರು ಮುಂದಾಗದಿರುವುದಕ್ಕೆ ನಗರದಲ್ಲಿನ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ಭಯವೂ ಒಂದು ಕಾರಣ ಎಂದು ಸ್ಥಳೀಯರು ಹೇಳುತ್ತಾರೆ. ಯಾವ ಕ್ಷಣದಲ್ಲಿ ಏನು ಆಗುತ್ತದೆ ಎಂಬ ಆತಂಕದಿಂದಾಗಿ ಅನೇಕರು ಇಂತಹ ಸಂದರ್ಭಗಳಲ್ಲಿ ನಿಲ್ಲಲು ಹಿಂದೇಟು ಹಾಕುತ್ತಿದ್ದಾರೆ.

ಇದನ್ನು ಓದಿ : ಪೋರ್ನ್ ಸ್ಟಾರ್ ಆಗುವ ಆಸೆಗೆ ಪತ್ನಿ ಜೊತೆಗಿನ ಖಾಸಗಿ ವಿಡಿಯೋ ಹರಿಬಿಟ್ಟ ಪತಿ.

ಆದರೆ, ಮಾನವ ಜೀವ ಉಳಿಸುವ ಕನಿಷ್ಠ ಮಾನವೀಯತೆ ಕೂಡ ಕಾಣಿಸದಿರುವುದು ಸಮಾಜದ ಮೇಲೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.

ಕೊನೆಗೂ 34 ವರ್ಷದ ಯುವಕ ಯಾವುದೇ ವೈದ್ಯಕೀಯ ನೆರವು ಸಿಗದೆ ರಸ್ತೆ ಮೇಲೆಯೇ ಪ್ರಾಣ ಬಿಟ್ಟಿದ್ದಾನೆ. ಪತ್ನಿಯ ಕಣ್ಣೆದುರೇ ನಡೆದ ಈ ದಾರುಣ ಘಟನೆ, ಬೆಂಗಳೂರಿನ ಜನರ ಮನಸ್ಸುಗಳು ನಗರ ಬೆಳವಣಿಗೆಯಂತೆ ವಿಸ್ತಾರಗೊಳ್ಳುತ್ತಿಲ್ಲ ಎಂಬ ನೋವಿನ ಸತ್ಯವನ್ನು ಮತ್ತೆ ಈ ಘಟನೆ ಬಹಿರಂಗಪಡಿಸಿದೆ.

ಇದನ್ನು ಓದಿ : Mangaluru : ಲಂಚಕ್ಕೆ ಬೇಡಿಕೆ : ಮಹಿಳಾ ಅಧಿಕಾರಿ ಸೇರಿದಂತೆ ಮೂವರು ಲೋಕಾಯುಕ್ತ ಬಲೆಗೆ.!

ಈ ಹೃದಯಾಘಾತದ ಘಟನೆ ನಗರದಲ್ಲಿ ತುರ್ತು ಸೇವೆಗಳ ಲಭ್ಯತೆ, ಸಾರ್ವಜನಿಕರ ಜವಾಬ್ದಾರಿ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಬೇಕಾಗಿದೆ.

ಇತ್ತೀಚೆಗೆ ಮಾನವೀಯತೆ ಕುಗ್ಗಲು ಪ್ರಮುಖ ಕಾರಣಗಳು :

ಅಪರಾಧ ಭಯ (Crime Fear) :

ನಗರಗಳಲ್ಲಿ ಅಪರಾಧ ಪ್ರಮಾಣ ಹೆಚ್ಚಾಗಿದೆ ಎಂಬ ಭಾವನೆ ಜನರಲ್ಲಿ ಗಾಢವಾಗಿದೆ.
“ನಿಲ್ಲಿಸಿದರೆ ಏನಾದರೂ ಸಮಸ್ಯೆ ಆಗಿಬಿಡುತ್ತದಾ?”
“ಯಾರಾದರೂ ತಪ್ಪು ಕೇಸ್ ಹಾಕಿಬಿಡ್ತಾರಾ?”
ಎಂಬ ಆತಂಕದಿಂದ ಜನರು ಸಹಾಯಕ್ಕೆ ಮುಂದಾಗುವುದಿಲ್ಲ.

ಕಾನೂನು ಗೊಂದಲ ಮತ್ತು ತಪ್ಪು ಭಾವನೆ :

ಬಹಳಷ್ಟು ಜನರಿಗೆ Good Samaritan Law ಬಗ್ಗೆ ಸರಿಯಾದ ಅರಿವು ಇಲ್ಲ.

  • ಸಹಾಯ ಮಾಡಿದರೆ ಪೊಲೀಸ್ ಕಿರುಕುಳ
  • ಕೋರ್ಟ್‌ಗೆ ಅಲೆದಾಡಿಸಬಹುದು
    ಎಂಬ ತಪ್ಪು ಕಲ್ಪನೆ ಮಾನವೀಯತೆಯನ್ನು ತಡೆಹಿಡಿಯುತ್ತಿದೆ.

👉 ವಾಸ್ತವದಲ್ಲಿ, ಅಪಘಾತ ಅಥವಾ ತುರ್ತು ಪರಿಸ್ಥಿತಿಯಲ್ಲಿ ಸಹಾಯ ಮಾಡುವವರಿಗೆ ಕಾನೂನು ರಕ್ಷಣೆ ಇದೆ.

ಹೃದಯಾಘಾತ – “ನನಗೆ ಸಂಬಂಧ ಇಲ್ಲ” ಅನ್ನುವ ಮನೋಭಾವ :

ಇತ್ತೀಚಿನ ಸಮಾಜದಲ್ಲಿ
ಸ್ವಾರ್ಥ + ನಿರ್ಲಕ್ಷ್ಯ ಹೆಚ್ಚಾಗಿದೆ.

  • “ನನಗೆ ತಡವಾಗುತ್ತಿದೆ”
  • “ಯಾರಾದರೂ ನೋಡಿಕೊಳ್ಳುತ್ತಾರೆ”
  • “ನಾನು ಏಕೆ ಮಧ್ಯೆ ಬೀಳಬೇಕು?”
    ಎಂಬ ಮನೋಭಾವ ಸಾಮಾನ್ಯವಾಗಿದೆ.

ನಗರ ಜೀವನದ ಒತ್ತಡ :

  • ಸಮಯದ ಒತ್ತಡ.
  • ಉದ್ಯೋಗ ಒತ್ತಡ.
  • ಸಂಚಾರ ಗೊಂದಲ.

ಇವೆಲ್ಲ ಕಾರಣಗಳಿಂದ ಜನರು ಇತರರ ನೋವನ್ನು ನೋಡುವ ಸಹನೆ ಕಳೆದುಕೊಳ್ಳುತ್ತಿದ್ದಾರೆ.

ಸಾಮಾಜಿಕ ಮಾಧ್ಯಮದ ದುಷ್ಪರಿಣಾಮ :

ಜನರು ಸಹಾಯ ಮಾಡುವ ಬದಲು:

  • ವಿಡಿಯೋ ತೆಗೆಯುತ್ತಾರೆ,
  • ರೀಲ್ಸ್ ಮಾಡುತ್ತಾರೆ,
  • ವೈರಲ್ ಮಾಡಲು ಪ್ರಯತ್ನಿಸುತ್ತಾರೆ.

ಮಾನವೀಯತೆಯಿಗಿಂತ ಕಂಟೆಂಟ್ ಮುಖ್ಯವಾಗಿರುವ ಸ್ಥಿತಿ ಉಂಟಾಗಿದೆ.

ವ್ಯವಸ್ಥೆಯ ಮೇಲಿನ ನಂಬಿಕೆ ಕುಸಿತ

  • ಆಂಬ್ಯುಲೆನ್ಸ್ ಸಮಯಕ್ಕೆ ಬರೋದಿಲ್ಲ.
  • ಪೊಲೀಸ್ ಪ್ರತಿಕ್ರಿಯೆ ತಡ.
  • ಆಸ್ಪತ್ರೆಗಳಲ್ಲಿ ಗೊಂದಲ.

ಇವೆಲ್ಲದಿಂದ
👉 “ನಾವು ಸಹಾಯ ಮಾಡಿದರೂ ಪ್ರಯೋಜನವಿಲ್ಲ”
ಎಂಬ ನಿರಾಶೆ ಜನರಲ್ಲಿ ಮೂಡುತ್ತಿದೆ.

ಮೌಲ್ಯಾಧಾರಿತ ಶಿಕ್ಷಣದ ಕೊರತೆ :

ಶಿಕ್ಷಣದಲ್ಲಿ:

  • ಅಂಕಗಳು ಮುಖ್ಯ ಮತ್ತು ಸ್ಪರ್ಧೆ ಮುಖ್ಯ ಆದರೆ,
  1. ಸಹಾನುಭೂತಿ,
  2. ಮಾನವೀಯತೆ,
  3. ಸಾಮಾಜಿಕ ಜವಾಬ್ದಾರಿ ಇವುಗಳ ಬಗ್ಗೆ ಸಾಕಷ್ಟು ಒತ್ತು ಇಲ್ಲ.

ಇಂತಹ ಹೆಚ್ಚಿನ ಸುದ್ದಿಗಳನ್ನು ನೀವು ಓದಲು ಬಯಸುವಿರಾ? janaspandhan.com ಕ್ಲಿಕ್ ಮಾಡಿ

ಪೋರ್ನ್ ಸ್ಟಾರ್ ಆಗುವ ಆಸೆಗೆ ಪತ್ನಿ ಜೊತೆಗಿನ ಖಾಸಗಿ ವಿಡಿಯೋ ಹರಿಬಿಟ್ಟ ಪತಿ.

0

ಜನಸ್ಪಂದನ ನ್ಯೂಸ್‌, ರೇವಾ (ಮ.ಪ್ರ) : ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಮಹಿಳೆಯ ಗೌಪ್ಯತೆಗೆ ಭಾರೀ ಧಕ್ಕೆ ತರುವ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪೋರ್ನ್ ಸ್ಟಾರ್ (Porn Star) ಆಗಬೇಕೆಂಬ ಆಸೆಯಲ್ಲಿದ್ದ ಯುವಕನೊಬ್ಬ ತನ್ನ ಪತ್ನಿಯ ಖಾಸಗಿ ಕ್ಷಣಗಳನ್ನು ಗುಪ್ತವಾಗಿ ವಿಡಿಯೋ ದಾಖಲಿಸಿ, ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಉದ್ದೇಶಪೂರ್ವಕವಾಗಿ ಅಪ್ಲೋಡ್ ಮಾಡಿದ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಪ್ರಸ್ತುತ ಆತ ಮುಂಬೈನಲ್ಲಿ ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ತನಿಖೆಯ ಪ್ರಕಾರ, ಆರೋಪಿತ ಪತಿ ದೀರ್ಘಕಾಲದಿಂದ ಅಶ್ಲೀಲ ವಿಡಿಯೋಗಳ ವ್ಯಸನಿಯಾಗಿದ್ದು, ಅಲ್ಲಿ ಕಾಣಿಸುವ ಪಾತ್ರಗಳನ್ನು ಅನುಸರಿಸುತ್ತಿದ್ದನು. ಈ ಗೀಳಿನಿಂದ ಪ್ರೇರಿತನಾಗಿ, ಪತ್ನಿಯೊಂದಿಗೆ ಸುಮಾರು 13 ನಿಮಿಷ 14 ಸೆಕೆಂಡುಗಳ ಖಾಸಗಿ ವಿಡಿಯೋವನ್ನು ರೆಕಾರ್ಡ್ ಮಾಡಿ, ನಂತರ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ : ಮಹಿಳೆಯ ಮೇಲೆ sexual-assault ನಡೆಸಿ ಪರಾರಿಯಾದ ವ್ಯಕ್ತಿ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ.!

ಪತ್ನಿ ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದಾಗ, “ನಾನು ಉದ್ದೇಶಪೂರ್ವಕವಾಗಿಯೇ ಖಾಸಗಿ ವಿಡಿಯೋ ಅಪ್ಲೋಡ್ ಮಾಡಿದ್ದೇನೆ. ಜನರು ನನ್ನನ್ನು ಗುರುತಿಸಬೇಕು, ಜನಪ್ರಿಯರಾಗಬೇಕು ಎಂಬುದೇ ನನ್ನ ಉದ್ದೇಶ” ಎಂದು ಆರೋಪಿ ಹೇಳಿರುವುದಾಗಿ ತನಿಖೆಯಲ್ಲಿ ಬಹಿರಂಗವಾಗಿದೆ.

ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ಬಳಿಕ, ಬಲಿಪಶು ಮಹಿಳೆ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾಳೆ. ಆ ಖಾಸಗಿ ವಿಡಿಯೋವನ್ನು ಆರೋಪಿಯೇ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಕಳುಹಿಸಿದ್ದಾನೆ ಎಂದು ಆಕೆ ಆರೋಪಿಸಿದ್ದಾಳೆ.

“ನನ್ನನ್ನು ಸಾಮಾಜಿಕವಾಗಿ ಅವಮಾನಿಸಲಾಗಿದೆ. ನನಗೆ ಸಮಾಜದಲ್ಲಿ ಮುಖ ತೋರಿಸಲು ಸಾಧ್ಯವಾಗದಂತೆ ಮಾಡಲಾಗಿದೆ. ಅವನು ನನ್ನ ಜೀವನವನ್ನೇ ಹಾಳುಮಾಡಿದ್ದಾನೆ” ಎಂದು ಆಕೆ ತನ್ನ ದೂರಿನಲ್ಲಿ ನೋವು ವ್ಯಕ್ತಪಡಿಸಿದ್ದಾಳೆ.

ಇದನ್ನು ಓದಿ : ನರ್ಸಿಂಗ್ ವಿದ್ಯಾರ್ಥಿನಿ ಅಪಹರಣ, Sexual assault ಪ್ರಕರಣ ; ಒಬ್ಬ ಆರೋಪಿ ಬಂಧನ, ಇನ್ನೊಬ್ಬನಿಗಾಗಿ ಶೋಧ”.!

ಇದಲ್ಲದೆ, ವರದಕ್ಷಿಣೆ ವಿಚಾರವೂ ಈ ಪ್ರಕರಣಕ್ಕೆ ತಿರುವು ನೀಡಿದೆ. ಬಲಿಪಶುವಿನ ಸಹೋದರನ ಹೇಳಿಕೆಯಂತೆ, ಮದುವೆ ಆರಂಭದಿಂದಲೂ ಆರೋಪಿಗಳು ವರದಕ್ಷಿಣೆಗೆ ಒತ್ತಡ ಹೇರುತ್ತಿದ್ದರು. ಮೇ 10ರಂದು ಮದುವೆ ನಡೆದಿದ್ದು, ವರದಕ್ಷಿಣೆಯಾಗಿ ರೂ.3 ಲಕ್ಷ ಬೇಡಿಕೆ ಇಟ್ಟಿದ್ದರು.

ಅದರಲ್ಲಿ ರೂ.2 ಲಕ್ಷವನ್ನು ಪಾವತಿಸಿದರೂ, ಉಳಿದ ಮೊತ್ತಕ್ಕಾಗಿ ನಿರಂತರ ಕಿರುಕುಳ ನೀಡಲಾಗುತ್ತಿತ್ತು. ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಕೋಪಗೊಂಡ ಆರೋಪಿ ಈ ಹೇಯ ಕೃತ್ಯಕ್ಕೆ ಮುಂದಾಗಿದ್ದಾನೆ ಎಂದು ಕುಟುಂಬ ಆರೋಪಿಸಿದೆ.

ಇದನ್ನು ಓದಿ : ಹಿಟ್ಟಿನ ಗಿರಣಿಯಲ್ಲಿ 11 ವರ್ಷದ ಬಾಲಕಿಯ ಮೇಲೆ Sexual-Assault ನಡೆಸಿದ ವೃದ್ದ.!

ಈ ಪ್ರಕರಣವು ಮಹಿಳೆಯ ಗೌಪ್ಯತೆ, ಮಾನಸಿಕ ಹಿಂಸೆ ಹಾಗೂ ಸೈಬರ್ ಅಪರಾಧಗಳ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದ್ದು, ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಇಂತಹ ಹೆಚ್ಚಿನ ಸುದ್ದಿಗಳನ್ನು ನೀವು ಓದಲು ಬಯಸುವಿರಾ? janaspandhan.com ಕ್ಲಿಕ್ ಮಾಡಿ

ಫ್ಯಾಟಿ ಲಿವರ್ ತಪ್ಪಿಸಲು ಈ 3 ತಪ್ಪುಗಳನ್ನ ಈಗಲೇ ಬಿಡಿ : ಲಿವರ್ ತಜ್ಞರ ಎಚ್ಚರಿಕೆ.

0

ಜನಸ್ಪಂದನ ನ್ಯೂಸ್‌, ಆರೋಗ್ಯ : ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕರ ಆಹಾರ ಪದ್ಧತಿ, ಶಾರೀರಿಕ ಚಟುವಟಿಕೆಯ ಕೊರತೆ ಮತ್ತು ಒತ್ತಡಪೂರ್ಣ ಜೀವನಶೈಲಿ ಕಾರಣದಿಂದ ಯಕೃತ್ತಿನ ಸಂಬಂಧಿತ ಕಾಯಿಲೆಗಳು ವೇಗವಾಗಿ ಹೆಚ್ಚುತ್ತಿವೆ. ಹಿಂದೆ ಕೆಲವರಿಗೆ ಮಾತ್ರ ಸೀಮಿತವಾಗಿದ್ದ ಫ್ಯಾಟಿ ಲಿವರ್ (Fatty Liver) ಸಮಸ್ಯೆ ಈಗ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲ ವಯೋವರ್ಗದಲ್ಲೂ ಸಾಮಾನ್ಯವಾಗುತ್ತಿದೆ.

ವೈದ್ಯರ ಎಚ್ಚರಿಕೆಯ ಪ್ರಕಾರ, ಫ್ಯಾಟಿ ಲಿವರ್ ಅನ್ನು ಪ್ರಾರಂಭಿಕ ಹಂತದಲ್ಲೇ ನಿಯಂತ್ರಿಸದಿದ್ದರೆ, ಅದು ಮುಂದುವರಿದು ಲಿವರ್ ಇನ್ಫ್ಲಮೇಶನ್, ಫೈಬ್ರೋಸಿಸ್, ಸಿರೋಸಿಸ್ ಹಾಗೂ ಲಿವರ್ ಕ್ಯಾನ್ಸರ್ ನಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.

ಇದನ್ನು ಓದಿ : Intestine ನಲ್ಲಿ ಸಂಗ್ರಹವಾದ ತ್ಯಾಜ್ಯ ಹೊರ ಬರಲು ಇವುಗಳನ್ನ ಸೇವಿಸಿ ; ಹೊಟ್ಟೆನೂ ಕ್ಲೀನ್ ಆಗುತ್ತೆ.

“ದಿ ಲಿವರ್ ಡಾಕ್ಟರ್” ಡಾ. ಸಿರಿಯಾಕ್ ಎಬಿ ಫಿಲಿಪ್ಸ್ ಸಲಹೆ :

“ದಿ ಲಿವರ್ ಡಾಕ್ಟರ್” ಎಂದು ಖ್ಯಾತಿ ಪಡೆದಿರುವ ಪ್ರಶಸ್ತಿ ವಿಜೇತ ಲಿವರ್ ತಜ್ಞ ಡಾ. ಸಿರಿಯಾಕ್ ಎಬಿ ಫಿಲಿಪ್ಸ್,
ದೈನಂದಿನ ಜೀವನದಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಅಳವಡಿಸಿಕೊಂಡರೆ ಫ್ಯಾಟಿ ಲಿವರ್ ಸಮಸ್ಯೆಯನ್ನು ತಡೆಯುವುದು ಸಾಧ್ಯ ಎಂದು ತಿಳಿಸಿದ್ದಾರೆ.

ಅವರ ಪ್ರಕಾರ, ಯಕೃತ್ತಿನ ಆರೋಗ್ಯ ಕಾಪಾಡಿಕೊಳ್ಳಲು ಜನರು ಮುಖ್ಯವಾಗಿ ಮೂರು ದೊಡ್ಡ ತಪ್ಪುಗಳನ್ನು ತಪ್ಪಿಸಬೇಕು.

ಯಕೃತ್ತಿಗೆ ಹಾನಿಕಾರಕವಾದ 3 ಪ್ರಮುಖ ತಪ್ಪುಗಳು :

1. ಸಕ್ಕರೆ ಪಾನೀಯಗಳ ಅತಿಯಾದ ಸೇವನೆ :

ತಂಪು ಪಾನೀಯಗಳು, ಪ್ಯಾಕೆಟ್ ಜ್ಯೂಸ್‌ಗಳು, ಸಿಹಿ ಚಹಾ ಮತ್ತು ಎನರ್ಜಿ ಡ್ರಿಂಕ್‌ಗಳಲ್ಲಿ ಇರುವ ಅತಿಯಾದ ಸಕ್ಕರೆ ಯಕೃತ್ತಿನಲ್ಲಿ ಕೊಬ್ಬು ಸಂಗ್ರಹವಾಗಲು ಪ್ರಮುಖ ಕಾರಣವಾಗುತ್ತದೆ. ಇವು ಇನ್ಸುಲಿನ್ ಮಟ್ಟವನ್ನು ಹೆಚ್ಚಿಸಿ ಫ್ಯಾಟಿ ಲಿವರ್ ಅಪಾಯವನ್ನು ಹೆಚ್ಚಿಸುತ್ತವೆ ಎಂದು ಡಾ. ಫಿಲಿಪ್ಸ್ ಎಚ್ಚರಿಸುತ್ತಾರೆ.

2. ಅತಿಯಾದ ತುಪ್ಪ, ಬೆಣ್ಣೆ ಮತ್ತು ಸ್ಯಾಚುರೇಟೆಡ್ ಕೊಬ್ಬು :

ಅಡುಗೆಯಲ್ಲಿ ಅತಿಯಾಗಿ ಬಳಸುವ ತುಪ್ಪ, ಬೆಣ್ಣೆ, ತೆಂಗಿನ ಎಣ್ಣೆ ಮತ್ತು ಪಾಮ್ ಎಣ್ಣೆಗಳಲ್ಲಿ ಸ್ಯಾಚುರೇಟೆಡ್ ಕೊಬ್ಬು ಅಧಿಕವಾಗಿರುತ್ತದೆ. ಇವು ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆಯನ್ನು ಮತ್ತಷ್ಟು ಹೆಚ್ಚಿಸಬಹುದು. ಆದ್ದರಿಂದ ಪ್ರಮಿತ ಪ್ರಮಾಣದಲ್ಲಿ ಆರೋಗ್ಯಕರ ಎಣ್ಣೆಗಳನ್ನು ಬಳಸುವುದು ಅಗತ್ಯ ಎಂದು ತಜ್ಞರು ಸಲಹೆ ನೀಡುತ್ತಾರೆ.

3. ಮದ್ಯಪಾನ :

ಯಕೃತ್ತಿಗೆ ಅತಿ ಹೆಚ್ಚು ಹಾನಿ ಮಾಡುವ ಅಂಶವೇ ಮದ್ಯಪಾನ. ಸಣ್ಣ ಪ್ರಮಾಣದಲ್ಲೂ ದೀರ್ಘಾವಧಿಗೆ ಮದ್ಯ ಸೇವಿಸಿದರೆ ಯಕೃತ್ತಿನ ಉರಿಯೂತ, ಕೊಬ್ಬಿನ ಶೇಖರಣೆ ಮತ್ತು ಸಿರೋಸಿಸ್ ಸಂಭವಿಸುವ ಸಾಧ್ಯತೆ ಇದೆ.
ಆರೋಗ್ಯಕರ ಯಕೃತ್ತನ್ನು ಕಾಪಾಡಿಕೊಳ್ಳಲು ಸಾಧ್ಯವಾದಷ್ಟು ಮದ್ಯಪಾನವನ್ನು ತಪ್ಪಿಸುವುದು ಉತ್ತಮ.

ಇದನ್ನು ಓದಿ : Heart-Attack ಕ್ಕೂ 30 ನಿಮಿಷ ಮುನ್ನ ದೇಹ ನೀಡುವ ಈ ಎಚ್ಚರಿಕೆ ಸೂಚನೆಗಳು

ಕಪ್ಪು ಕಾಫಿ ಯಕೃತ್ತಿಗೆ ಲಾಭಕರ :

ಸಿಹಿಗೊಳಿಸದ ಕಪ್ಪು ಕಾಫಿ ಯಕೃತ್ತಿಗೆ ಉಪಯುಕ್ತ ಎಂದು ಡಾ. ಫಿಲಿಪ್ಸ್ ತಿಳಿಸಿದ್ದಾರೆ. ಇದರಲ್ಲಿ ಇರುವ ಉತ್ಕರ್ಷಣ ನಿರೋಧಕಗಳು:

  • ಯಕೃತ್ತಿನ ಕೊಬ್ಬು ಕಡಿಮೆ ಮಾಡಲು,
  • ಉರಿಯೂತ ತಗ್ಗಿಸಲು,
  • ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ
    ಸಹಾಯ ಮಾಡುತ್ತವೆ ಎನ್ನಲಾಗಿದೆ.

ಫ್ಯಾಟಿ ಲಿವರ್ ಎಂದರೇನು?

ಯಕೃತ್ತು ತನ್ನ ಒಟ್ಟು ತೂಕದ 5% ಕ್ಕಿಂತ ಹೆಚ್ಚು ಕೊಬ್ಬನ್ನು ಸಂಗ್ರಹಿಸಿದಾಗ, ಅದನ್ನು ಫ್ಯಾಟಿ ಲಿವರ್ ಎಂದು ಕರೆಯಲಾಗುತ್ತದೆ. ಇದರಿಂದ ಯಕೃತ್ತು,

  • ಆಹಾರ ಜೀರ್ಣಿಸಲು,
  • ವಿಷಕಾರಿ ಅಂಶಗಳನ್ನು ಹೊರಹಾಕಲು,
  • ರಕ್ತದ ಸಕ್ಕರೆಯನ್ನು ನಿಯಂತ್ರಿಸಲು
    ಸಮರ್ಥವಾಗಿರದು.

ಇದನ್ನು ಓದಿ : ದಂತ ಕುಳಿ, ಒಸಡು ನೋವು, ಬಾಯಿಯ ದುರ್ವಾಸನೆಗೆ ಜಾಮುನ್ ಬೀಜವೇ ಪರಿಹಾರ.

ಫ್ಯಾಟಿ ಲಿವರ್‌ನ ವಿಧಗಳು :

  • ಆಲ್ಕೊಹಾಲಿಕ್ ಫ್ಯಾಟಿ ಲಿವರ್ (ಮದ್ಯಪಾನದಿಂದ ಉಂಟಾಗುವುದು).
  • ನಾನ್-ಆಲ್ಕೊಹಾಲಿಕ್ ಫ್ಯಾಟಿ ಲಿವರ್ (NAFLD / MASLD)
    ಇದು ಸ್ಥೂಲಕಾಯ, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಇರುವವರಲ್ಲಿ ಹೆಚ್ಚು ಕಂಡುಬರುತ್ತದೆ.

ಚಿಕಿತ್ಸೆ ನೀಡದೆ ಬಿಟ್ಟರೆ, ಇದು MASH ಎಂಬ ಗಂಭೀರ ಸ್ಥಿತಿಯಾಗಿ ಮಾರ್ಪಟ್ಟು ಲಿವರ್ ವೈಫಲ್ಯ ಮತ್ತು ಲಿವರ್ ಕ್ಯಾನ್ಸರ್‌ಗೆ ಕಾರಣವಾಗಬಹುದು.

ಯಕೃತ್ತನ್ನು ಆರೋಗ್ಯವಾಗಿಡಲು ಪಾಲಿಸಬೇಕಾದ ಸಲಹೆಗಳು :

  • ದೇಹದ ತೂಕವನ್ನು ನಿಯಂತ್ರಣದಲ್ಲಿ ಇಡಿ.
  • ಪ್ರತಿದಿನ ಸ್ವಲ್ಪ ವ್ಯಾಯಾಮ ಮಾಡಿ.
  • ಮನೆಯಲ್ಲೇ ತಯಾರಿಸಿದ ತಾಜಾ ಆಹಾರ ಸೇವಿಸಿ.
  • ಸಿಹಿತಿಂಡಿಗಳು ಮತ್ತು ಮದ್ಯಪಾನ ತಪ್ಪಿಸಿ.
  • ನಿಯಮಿತವಾಗಿ ಲಿವರ್ ಪರೀಕ್ಷೆ ಮಾಡಿಸಿಕೊಳ್ಳಿ.

ಇದನ್ನು ಓದಿ : ಮೊಟ್ಟೆಗಳಲ್ಲಿ ʼಕ್ಯಾನ್ಸರ್ ಕಾರಕʼ ಅಂಶ ಅನುಮಾನ ; ರಾಜ್ಯಾದ್ಯಂತ ಆರೋಗ್ಯ ಅಲರ್ಟ್.

ಸೂಚನೆ :

ಈ ಮಾಹಿತಿ ವೈದ್ಯರು ಮತ್ತು ಆರೋಗ್ಯ ತಜ್ಞರ ಅಭಿಪ್ರಾಯಗಳನ್ನು ಆಧರಿಸಿದೆ. ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

ಇಂತಹ ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

ಮೊಟ್ಟೆಗಳಲ್ಲಿ ʼಕ್ಯಾನ್ಸರ್ ಕಾರಕʼ ಅಂಶ ಅನುಮಾನ ; ರಾಜ್ಯಾದ್ಯಂತ ಆರೋಗ್ಯ ಅಲರ್ಟ್.

0

ಜನಸ್ಪಂದನ ನ್ಯೂಸ್‌, ಬೆಂಗಳೂರು : ರಾಜ್ಯದಲ್ಲಿ ಮಾರಾಟವಾಗುತ್ತಿರುವ ಕೆಲವು ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾದ ಅನುಮಾನ ಹಿನ್ನೆಲೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ರಾಜ್ಯಾದ್ಯಂತ ಮೊಟ್ಟೆ (egg) ಗಳ ಮಾದರಿ ಸಂಗ್ರಹಿಸಿ ಲ್ಯಾಬ್ ಪರೀಕ್ಷೆ ನಡೆಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮೊಟ್ಟೆಗಳಲ್ಲಿ ನಿಷೇಧಿತ ಔಷಧೀಯ ಅಂಶಗಳಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ, ಆರೋಗ್ಯ ಇಲಾಖೆ ತಕ್ಷಣವೇ ಅಲರ್ಟ್ ಘೋಷಣೆ ಮಾಡಿದೆ.

ಒಂದು ವೇಳೆ ಪರೀಕ್ಷೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ದೃಢಪಟ್ಟರೆ, ಸಂಬಂಧಪಟ್ಟ ಮೊಟ್ಟೆ ಉತ್ಪಾದಕರು ಹಾಗೂ ಮಾರಾಟಗಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.

ಇದನ್ನು ಓದಿ : ದಂತ ಕುಳಿ, ಒಸಡು ನೋವು, ಬಾಯಿಯ ದುರ್ವಾಸನೆಗೆ ಜಾಮುನ್ ಬೀಜವೇ ಪರಿಹಾರ.

ಮೊಟ್ಟೆಗಳಲ್ಲಿ ಯಾವ ಅಂಶ ಪತ್ತೆಯಾಗಿದೆ?

ಪ್ರಾಥಮಿಕ ಮಾಹಿತಿಯ ಪ್ರಕಾರ, ಕೆಲವು ಮೊಟ್ಟೆಗಳಲ್ಲಿ ನೈಟ್ರೋಫ್ಯುರಾನ್ (Nitrofuran) ಎಂಬ ನಿಷೇಧಿತ ಪ್ರತಿಜೀವಕದ ಅಂಶ ಪತ್ತೆಯಾಗಿದೆ. ಈ ಅಂಶ ಮಾನವ ದೇಹದಲ್ಲಿ ಜೀವಕೋಶ ಹಾನಿ, ರೋಗನಿರೋಧಕ ಶಕ್ತಿ ಕುಗ್ಗುವಿಕೆ ಹಾಗೂ ದೀರ್ಘಾವಧಿಯಲ್ಲಿ ಕ್ಯಾನ್ಸರ್ ಅಪಾಯ ಉಂಟುಮಾಡುವ ಸಾಧ್ಯತೆ ಇದೆ ಎಂದು ಆಹಾರ ತಜ್ಞ ಡಾ. ಕೀರ್ತಿ ಹಿರೀಸಾವೆ ತಿಳಿಸಿದ್ದಾರೆ.

ನೈಟ್ರೋಫ್ಯುರಾನ್ ಒಂದು ಕಾಲದಲ್ಲಿ ಪ್ರಾಣಿಗಳಲ್ಲಿ ಬಳಸಲಾಗುತ್ತಿದ್ದ ವಿಶಾಲ ಸ್ಪೆಕ್ಟ್ರಮ್ ಪ್ರತಿಜೀವಕವಾಗಿದ್ದು, ಸಂಭಾವ್ಯ ಕ್ಯಾನ್ಸರ್ ಕಾರಕ ಗುಣಗಳ ಕಾರಣದಿಂದ ಹಲವು ವರ್ಷಗಳ ಹಿಂದೆಯೇ ನಿಷೇಧಿಸಲಾಗಿದೆ.

ಇದನ್ನು ಓದಿ : Heart-Attack ಕ್ಕೂ 30 ನಿಮಿಷ ಮುನ್ನ ದೇಹ ನೀಡುವ ಈ ಎಚ್ಚರಿಕೆ ಸೂಚನೆಗಳು

ಯೂಟ್ಯೂಬ್ ವಿಡಿಯೋದಿಂದ ಆರಂಭವಾದ ವಿವಾದ :

ಪ್ರಿಮಿಯಂ ಮೊಟ್ಟೆಗಳನ್ನು ಮಾರಾಟ ಮಾಡುತ್ತಿರುವ ಒಂದು ನ್ಯೂಟ್ರಿಷನ್ ಕಂಪನಿಯ ವಿರುದ್ಧ ವಿವಾದ ಆರಂಭವಾಗಿದ್ದು, ಯೂಟ್ಯೂಬ್‌ನಲ್ಲಿ ವೈರಲ್ ಆದ ವಿಡಿಯೋ ಒಂದರಲ್ಲಿ, ಆ ಕಂಪನಿಯ ಮೊಟ್ಟೆಗಳ ಮಾದರಿ ನೈಟ್ರೋಫ್ಯುರಾನ್‌ಗೆ ಧನಾತ್ಮಕ ಪರೀಕ್ಷೆ ನೀಡಿದೆ ಎಂದು ಹೇಳಲಾಗಿದೆ.

‘ಟ್ರಸ್ಟಿಫೈಡ್’ ಎಂಬ ವೇದಿಕೆ ಈ ವಿಷಯವನ್ನು ಬಹಿರಂಗಪಡಿಸಿದ ಬಳಿಕ, ಮೊಟ್ಟೆಗಳ ಗುಣಮಟ್ಟ ಮತ್ತು ಪೌಷ್ಟಿಕ ಮೌಲ್ಯದ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ.

ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಅರ್ಪಿತ್ ಮಂಗಲ್, ಎಗ್ಗೋಜ್ ಬ್ರ್ಯಾಂಡ್ ಅಡಿಯಲ್ಲಿ ಮಾರಾಟವಾದ ಮೊಟ್ಟೆಗಳಲ್ಲಿ AOZ (ನೈಟ್ರೋಫ್ಯುರಾನ್‌ನ ಮೆಟಾಬೊಲೈಟ್) ಪತ್ತೆಯಾಗಿದೆ ಎಂದು ವರದಿ ಮಾಡಿದ್ದಾರೆ.

ಇದನ್ನು ಓದಿ : Iron content ಕೊರತೆಯ ಲಕ್ಷಣಗಳು : ಮಕ್ಕಳ ಮತ್ತು ವಯಸ್ಕರ ಆರೋಗ್ಯಕ್ಕೆ ಅಪಾಯ.

ತಜ್ಞರ ಸ್ಪಷ್ಟನೆ: ಜನರು ಆತಂಕ ಪಡಬೇಕಾ?

ಈ ಕುರಿತು ಪ್ರತಿಕ್ರಿಯಿಸಿರುವ ಅಪೋಲೋ ಆಸ್ಪತ್ರೆಯ ಹಿರಿಯ ಸಲಹೆಗಾರ ನರರೋಗ ತಜ್ಞ ಡಾ. ಸುಧೀರ್ ಕುಮಾರ್, “ಸದ್ಯ ಪತ್ತೆಯಾದ ಪ್ರಮಾಣ ಅನುಮತಿತ ಮಿತಿಯೊಳಗಿದ್ದರೆ, ತಕ್ಷಣದ ಕ್ಯಾನ್ಸರ್ ಅಪಾಯ ಇರುವುದಿಲ್ಲ. ಆದರೆ ಇಂತಹ ವಿಷಯಗಳನ್ನು ವೈಜ್ಞಾನಿಕ ದೃಷ್ಟಿಯಿಂದ ಪರಿಶೀಲಿಸುವುದು ಅಗತ್ಯ” ಎಂದು ಹೇಳಿದ್ದಾರೆ.

ಅವರು ಮುಂದುವರೆದು, “ಮೊಟ್ಟೆಗಳು ಪ್ರೋಟೀನ್ ಮತ್ತು ವಿಟಮಿನ್ B12 ಸೇರಿದಂತೆ ಹಲವಾರು ಪೌಷ್ಟಿಕಾಂಶಗಳ ಉತ್ತಮ ಮೂಲ. ಜನರು ಅವುಗಳನ್ನು ಸೇವಿಸಬಹುದು, ಆದರೆ ವಿಶ್ವಾಸಾರ್ಹ ಮೂಲ ಮತ್ತು ಬ್ರ್ಯಾಂಡ್ ಆಯ್ಕೆ ಮಾಡುವುದು ಅತ್ಯಂತ ಮುಖ್ಯ” ಎಂದು ಸಲಹೆ ನೀಡಿದ್ದಾರೆ.

ಆರೋಗ್ಯ ಇಲಾಖೆ ಎಚ್ಚರಿಕೆ :

ಆರೋಗ್ಯ ಇಲಾಖೆ ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೊಟ್ಟೆಗಳ ಮಾದರಿ ಸಂಗ್ರಹ ಕಾರ್ಯ ಆರಂಭಿಸಿದ್ದು, ಲ್ಯಾಬ್ ವರದಿಗಳ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಿದೆ. ಸಾರ್ವಜನಿಕರು ಅಪಾಯಕಾರಿ ವದಂತಿಗಳಿಗೆ ಕಿವಿಗೊಡದೆ, ಅಧಿಕೃತ ವರದಿಗಳಿಗೆ ಕಾಯುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಇದನ್ನು ಓದಿ : ಬೆಳಿಗ್ಗೆ ಮೂತ್ರದಲ್ಲಿ ಈ ಲಕ್ಷಣಗಳಿದ್ದರೆ ಎಚ್ಚರ.! ಕೊಲೆಸ್ಟ್ರಾಲ್‌ ಹೆಚ್ಚಾಗಿರಬಹುದು.?

ಸೂಚನೆ :

ಈ ಸುದ್ದಿ ಲಭ್ಯವಿರುವ ವರದಿಗಳು, ತಜ್ಞರ ಅಭಿಪ್ರಾಯ ಮತ್ತು ಸರ್ಕಾರಿ ಮಾಹಿತಿಯನ್ನು ಆಧರಿಸಿದೆ. ಯಾವುದೇ ಆರೋಗ್ಯ ಸಂಬಂಧಿತ ಆತಂಕಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು.

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ