ಸೋಮವಾರ, ಫೆಬ್ರವರಿ 2, 2026

Janaspandhan News

Home Blog Page 4

ಧಾರವಾಡದಲ್ಲಿ ಯುವತಿಯ ಭೀಕರ ಹತ್ಯೆ ಮಾಡಿ ಶವವನ್ನು ಬಿಸಾಡಿದ ದುಷ್ಕರ್ಮಿಗಳು.

0

ಜನಸ್ಪಂದನ ನ್ಯೂಸ್, ಧಾರವಾಡ : ಧಾರವಾಡ ಜಿಲ್ಲೆಯ ಹೊರವಲಯದಲ್ಲಿ ಯುವತಿಯೊಬ್ಬರನ್ನು ಭೀಕರ ಹತ್ಯೆ ಮಾಡಿ, ಶವವನ್ನು ಬೇರೆ ಸ್ಥಳಕ್ಕೆ ತಂದು ಎಸೆದಿರುವ ಶಾಕಿಂಗ್ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯಲ್ಲಿ 19 ವರ್ಷದ ಝಕಿಯಾ ಎಂಬ ಯುವತಿ ಮೃತಪಟ್ಟಿರುವುದು ದೃಢಪಟ್ಟಿದೆ.

ಮೃತ ಯುವತಿ ಧಾರವಾಡ ನಗರದ ಗಾಂಧಿ ಚೌಕ್ ಪ್ರದೇಶದ ನಿವಾಸಿ ಆಗಿದ್ದು, ಪ್ಯಾರಾಮೆಡಿಕಲ್ ಶಿಕ್ಷಣ ಮುಗಿಸಿ ಉದ್ಯೋಗ ಹುಡುಕುತ್ತಿದ್ದಳು ಎಂದು ತಿಳಿದುಬಂದಿದೆ.

ಘಟನೆ ಹೇಗೆ ನಡೆಯಿತು?

ಮಂಗಳವಾರ ಸಂಜೆ ಝಕಿಯಾ “ಲ್ಯಾಬ್‌ಗೆ ಹೋಗಿ ಬರುತ್ತೇನೆ” ಎಂದು ಮನೆಯಿಂದ ಹೊರಟಿದ್ದಳು. ಆದರೆ ರಾತ್ರಿ ಆದರೂ ಮನೆಗೆ ಹಿಂದಿರುಗದ ಕಾರಣ ಕುಟುಂಬಸ್ಥರು ಆತಂಕಗೊಂಡು ಹುಡುಕಾಟ ಆರಂಭಿಸಿದ್ದರು.

ಇಂದು ಮುಂಜಾನೆ ಮನಸೂರು ರಸ್ತೆಯಲ್ಲಿರುವ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಸೇರಿದ ವಿನಯ್ ಡೈರಿ ಸಮೀಪ ಯುವತಿಯ ಶವ ಪತ್ತೆಯಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಯುವತಿಯನ್ನು ಬೇರೆಡೆ ಬರ್ಬರವಾಗಿ ಹತ್ಯೆ ಮಾಡಿ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಶವವನ್ನು ಇಲ್ಲಿ ತಂದು ಬಿಸಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಪೊಲೀಸ್ ತನಿಖೆ ಆರಂಭ :

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವಿದ್ಯಾಗಿರಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಯುವತಿಯ ಮೊಬೈಲ್ ಕರೆ ವಿವರಗಳು ಹಾಗೂ ಕೊನೆಯಾಗಿ ಸಂಪರ್ಕಿಸಿದ ವ್ಯಕ್ತಿಗಳ ಮಾಹಿತಿ ಆಧರಿಸಿ ತನಿಖೆ ಚುರುಕುಗೊಂಡಿದೆ.

ಇದನ್ನು ಓದಿ : ಧಾರವಾಡ : ಕ್ಷುಲ್ಲಕ ಜಗಳಕ್ಕೆ ಶಾಲಾ ಬಾಲಕರಿಂದ SSLC ವಿದ್ಯಾರ್ಥಿ ಹತ್ಯೆ.

ಭೀಕರ ಹತ್ಯೆ ; ಕುಟುಂಬಸ್ಥರ ಆಕ್ರಂದನ :

ಮಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮನಕಲಕುವಂತಿತ್ತು. “ಕೆಲಸ ಹುಡುಕುತ್ತಿದ್ದ ಮಗಳಿಗೆ ಇಂತಹ ದುರಂತ ಆಗಬಾರದಿತ್ತು” ಎಂದು ಕಣ್ಣೀರಿಟ್ಟ ಕುಟುಂಬಸ್ಥರು, ಆರೋಪಿಗಳನ್ನು ಕೂಡಲೇ ಬಂಧಿಸಬೇಕು, ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.


Disclaimer: ಈ ವರದಿ ಪೊಲೀಸ್ ಮೂಲಗಳು ಮತ್ತು ಲಭ್ಯ ಮಾಹಿತಿಯ ಆಧಾರದ ಮೇಲೆ ತಯಾರಿಸಲಾಗಿದೆ. ತನಿಖೆ ಮುಂದುವರಿದಿರುವ ಕಾರಣ ಹೆಚ್ಚಿನ ಮಾಹಿತಿ ಬಳಿಕ ಲಭ್ಯವಾಗಲಿದೆ.

ರೈಲಿನ ಶೌಚಾಲಯದಲ್ಲಿ ಯುವಕ–ಯುವತಿ 2 ಗಂಟೆ ಲಾಕ್! ಪ್ಯಾಸೆಂಜರ್‌ಗಳು ಪರದಾಟ.

0

ಜನಸ್ಪಂದನ ನ್ಯೂಸ್, ನವದೆಹಲಿ : ರೈಲಿನ ಶೌಚಾಲಯದಲ್ಲಿ ಯುವಕ–ಯುವತಿ ಸುಮಾರು 2 ಗಂಟೆಗಳ ಕಾಳ ಲಾಕ್ ಮಾಡಿಕೊಂಡ ಹಿನ್ನಲೆಯಲ್ಲಿ ಪ್ಯಾಸೆಂಜರ್‌ಗಳು ಪರದಾಡಿದ ಘಟನೆಯೊಂದು ನಡೆದಿರುವುದು ವರದಿಯಾಗಿದೆ.

ರೈಲಿನೊಳಗಿನ ಪ್ರಯಾಣಿಕರ ಸುರಕ್ಷತೆ ಮತ್ತು ಶಿಸ್ತು ಬಗ್ಗೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗುವಂತಹ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ, ಯುವಕ ಮತ್ತು ಯುವತಿ ಒಟ್ಟಿಗೆ ರೈಲಿನ ಸ್ನಾನಗೃಹದೊಳಗೆ ಲಾಕ್ ಮಾಡಿಕೊಂಡು ಸುಮಾರು ಎರಡು ಗಂಟೆಗಳ ಕಾಲ ಒಳಗೇ ಇದ್ದ ಘಟನೆ ಬೆಳಕಿಗೆ ಬಂದಿದೆ.

ಈ ಅವಧಿಯಲ್ಲಿ ಶೌಚಾಲಯ ಬಳಸಬೇಕಾದ ಅನೇಕ ಪ್ರಯಾಣಿಕರು ತೀವ್ರ ಅಸೌಕರ್ಯ ಅನುಭವಿಸಬೇಕಾಯಿತು. ಬಾಗಿಲು ತೆರೆಯದ ಕಾರಣ ಪ್ರಯಾಣಿಕರು ಗೊಂದಲಕ್ಕೀಡಾಗಿದ್ದು, ನಂತರ ಈ ವಿಷಯವನ್ನು ರೈಲ್ವೆ ಸಿಬ್ಬಂದಿಯ ಗಮನಕ್ಕೆ ತರಲಾಯಿತು ಎಂದು ತಿಳಿದುಬಂದಿದೆ.

ಯುವಕ–ಯುವತಿ 2 ಗಂಟೆ ಲಾಕ್ ; ಪ್ರಯಾಣಿಕರ ಪರದಾಟ :

ಸ್ನಾನಗೃಹ ದೀರ್ಘಕಾಲ ಮುಚ್ಚಿರುವುದರಿಂದ ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಹೆಚ್ಚು ತೊಂದರೆ ಅನುಭವಿಸಿದ್ದಾರೆ. ಹಲವು ಬಾರಿ ಬಾಗಿಲು ತಟ್ಟಿದರೂ ಪ್ರತಿಕ್ರಿಯೆ ದೊರೆಯದ ಕಾರಣ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದರು.

ಅಂತಿಮವಾಗಿ ಬಾಗಿಲು ತೆರೆದಾಗ ಯುವಕ ಹಾಗೂ ಯುವತಿ ಹೊರಬಂದಿದ್ದು, ಈ ವೇಳೆ ಅವರ ವರ್ತನೆ ಪ್ರಯಾಣಿಕರನ್ನು ಮತ್ತಷ್ಟು ಅಚ್ಚರಿಗೊಳಿಸಿತು ಎನ್ನಲಾಗಿದೆ.

ವೈರಲ್ ಆದ ವಿಡಿಯೋ :

ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡುತ್ತಿದೆ. ವಿಡಿಯೋದಲ್ಲಿ ಯುವತಿ,
“ನಾನು ಏನು ಬೇಕಾದರೂ ಮಾಡಬಹುದು, ಅದು ನನ್ನ ಇಚ್ಛೆ” ಎಂದು ಹೇಳುತ್ತಿರುವುದು ಸ್ಪಷ್ಟವಾಗಿ ಕೇಳಿಬರುತ್ತದೆ.

ವಿಡಿಯೋ ವೈರಲ್ ಆಗುತ್ತಿದೆ ಎಂದು ತಿಳಿಸಿದಾಗ, “ಅದರಿಂದ ನನಗೆ ಏನು?” ಎಂದು ಪ್ರತಿಕ್ರಿಯಿಸಿದಂತೆಯೂ ಕಾಣುತ್ತದೆ.

ಸಾರ್ವಜನಿಕರಿಂದ ಆಕ್ರೋಶ :

ಈ ಘಟನೆ ಬೆಳಕಿಗೆ ಬಂದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅನೇಕರು ಇದನ್ನು

  • ಸಾರ್ವಜನಿಕ ಶಿಸ್ತು ಉಲ್ಲಂಘನೆ.
  • ರೈಲು ಪ್ರಯಾಣಿಕರ ಹಕ್ಕುಗಳಿಗೆ ಧಕ್ಕೆಯಾದ ಘಟನೆ.
  • ಇಂತಹ ವರ್ತನೆಗೆ ಕಠಿಣ ಕ್ರಮ ಅಗತ್ಯ ಎಂದು ಖಂಡಿಸಿದ್ದಾರೆ.

ಬಳಕೆದಾರರೊಬ್ಬರು,

  • “ಇದು ರೈಲು, ಹೋಟೆಲ್ ಕೋಣೆ ಅಲ್ಲ. ಇತರ ಪ್ರಯಾಣಿಕರ ಬಗ್ಗೆ ಕನಿಷ್ಠ ಗೌರವ ಇರಬೇಕು” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು,
  • “ಇಂತಹ ವರ್ತನೆಗಳನ್ನು ಸಹಿಸಬಾರದು. ರೈಲ್ವೆ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು”
    ಎಂದು ಆಗ್ರಹಿಸಿದ್ದಾರೆ.

ಇದನ್ನು ಓದಿ : ಓಯೋ ರೂಂನಲ್ಲಿ ಸ್ನೇಹಿತೆಯ ಜೊತೆ ಲವರ್ ನನ್ನು ಕಂಡ ಗೃಹಿಣಿ ; ಮುಂದೆ ನಡೆದದ್ದು ಬೆಚ್ಚಿಬೀಳಿಸುವಂತಿತ್ತು.!

ರೈಲ್ವೆ ಇಲಾಖೆಯ ಮುಂದಿನ ಕ್ರಮ?

ಈ ಪ್ರಕರಣದ ಬಗ್ಗೆ ರೈಲ್ವೆ ಇಲಾಖೆ ಅಧಿಕೃತವಾಗಿ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕರಣ ವ್ಯಾಪಕ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ತನಿಖೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.


Disclaimer: ಈ ವರದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋ/ಪೋಸ್ಟ್ ಆಧಾರಿತವಾಗಿದೆ. ಇದರ ಸತ್ಯಾಸತ್ಯತೆಯನ್ನು Janaspandhan News ದೃಢೀಕರಿಸುವುದಿಲ್ಲ.

ರಾಯಚೂರಿನಲ್ಲಿ ಭೀಕರ ರಸ್ತೆ ಅಪಘಾತ: 5 ಮಂದಿ ಸ್ಥಳದಲ್ಲೇ ಮೃತ್ಯು.

0

ಜನಸ್ಪಂದನ ನ್ಯೂಸ್, ರಾಯಚೂರು : ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬೂದಿವಾಳ ಕ್ಯಾಂಪ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಈ ಅಪಘಾತದಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ತಕ್ಷಣ ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಂಧ್ರಪ್ರದೇಶ ಮೂಲದ ಟಂ ಟಂ ವಾಹನ ಹಾಗೂ ಬುಲೆರೋ ಪಿಕಪ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಈ ದುರ್ಘಟನೆ ನಡೆದಿದೆ. ಅಪಘಾತದ ತೀವ್ರತೆಯಿಂದಾಗಿ ವಾಹನಗಳು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಕೆಲವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಆಸ್ಪತ್ರೆ ಮೂಲಗಳ ಪ್ರಕಾರ, ಕೆಲವು ಗಾಯಾಳುಗಳ ಸ್ಥಿತಿ ಇನ್ನೂ ಗಂಭೀರವಾಗಿದೆ.

ಈವರೆಗೆ ಮೃತಪಟ್ಟವರ ಮತ್ತು ಗಾಯಾಳುಗಳ ಸಂಪೂರ್ಣ ವಿವರಗಳು ಲಭ್ಯವಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅಪಘಾತದ ನಿಖರ ಕಾರಣ ತಿಳಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ ಅಪಘಾತ ಸುದ್ದಿ ಓದಿ : ಭೀಕರ ಅಪಘಾತ: ಖಾಸಗಿ ಬಸ್–ಲಾರಿ ಡಿಕ್ಕಿ, 9 ಜನ ಸಜೀವ ದಹನ.

ಎರಡು ಗೂಡ್ಸ್ ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿ ಮೃತರದವರನ್ನು
▪️ ಸಣ್ಣ ಯಲ್ಲಪ್ಪ (45)
▪️ ಹರಿ (25)
▪️ ರಂಗನಾಥ (12)
▪️ ಬಸವರಾಜ್ (40)
▪️ ಟಾಟಾ ಏಸ್ ಚಾಲಕ ಎಂದು ಗುರುತಿಸಲಾಗಿದೆ. ಎಲ್ಲರೂ ಆಂಧ್ರಪ್ರದೇಶ ಮೂಲದವರಾಗಿದ್ದಾರೆ ಎನ್ನಲಾಗಿದೆ.


ಮತ್ತೊಂದು ಭೀಕರ ಅಪಘಾತ – ವೇಗವೇ ಪ್ರಾಣಹಂತಕ!

ಇದೇ ವೇಳೆ, ರಾಜಸ್ಥಾನದ ಉದಯಪುರದಲ್ಲಿ ನಡೆದ ಮತ್ತೊಂದು ಭೀಕರ ರಸ್ತೆ ಅಪಘಾತ ಕೂಡ ದೇಶಾದ್ಯಂತ ಆತಂಕ ಮೂಡಿಸಿದೆ. ಜನವರಿ 17ರ ಬೆಳಗಿನ ಜಾವ ಸುಮಾರು 3 ಗಂಟೆ ವೇಳೆಗೆ, ಆರು ಮಂದಿ ಯುವಕರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿವೆ.

ಈ ದುರ್ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ವೇಳೆ ಕಾರು 140 ಕಿಮೀ ವೇಗದಲ್ಲಿ ಸಂಚರಿಸುತ್ತಿದ್ದು, ಚಾಲಕನ ಕೈಯಲ್ಲಿ ಸಿಗರೇಟ್ ಮತ್ತು ಜೋರಾಗಿ ಮ್ಯೂಸಿಕ್ ಹಾಕಿಕೊಂಡಿದ್ದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ರಸ್ತೆ ಅಪಘಾತ ವಿಡಿಯೋ :

ವಿಡಿಯೋದಲ್ಲಿ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಯುವಕ ಚಾಲಕನಿಗೆ ನಿಧಾನವಾಗಿ ಚಾಲನೆ ಮಾಡಲು ಹೇಳುತ್ತಿರುವುದು ಸ್ಪಷ್ಟವಾಗಿ ಕೇಳಿಬರುತ್ತದೆ. ಆದರೆ ಕೆಲವೇ ಕ್ಷಣಗಳಲ್ಲಿ ಅಪಘಾತ ಸಂಭವಿಸಿದ್ದು, ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಇದನ್ನು ಓದಿ : ತುಮಕೂರು ಬಳಿ ಭೀಕರ ಅಪಘಾತ: ಲಾರಿಗೆ ಕ್ರೂಸರ್ ಡಿಕ್ಕಿ, 4 ಅಯ್ಯಪ್ಪ ಮಾಲಾಧಾರಿಗಳು ಮೃತ್ಯು


🚦 ಎಚ್ಚರಿಕೆ ಸಂದೇಶ :

  • 👉 ಅತಿವೇಗವೇ ಅಪಘಾತಗಳಿಗೆ ಪ್ರಮುಖ ಕಾರಣ.
  • 👉 ವಾಹನ ಚಾಲನೆ ವೇಳೆ ಮದ್ಯಪಾನ, ಮೊಬೈಲ್ ಬಳಕೆ ಅಪಾಯಕಾರಿ.
  • 👉 ಜೀವಕ್ಕಿಂತ ದೊಡ್ಡದು ಯಾವುದೂ ಇಲ್ಲ – ಸುರಕ್ಷಿತ ಚಾಲನೆ ಅತಿ ಮುಖ್ಯ.

Disclaimer: ಈ ವರದಿಯಲ್ಲಿನ ಮಾಹಿತಿ ಸಾರ್ವಜನಿಕ ಮೂಲಗಳು ಮತ್ತು ಪ್ರಾಥಮಿಕ ವರದಿಗಳ ಆಧಾರದ ಮೇಲೆ ನೀಡಲಾಗಿದೆ. ಹೆಚ್ಚಿನ ವಿವರಗಳು ಲಭ್ಯವಾದ ನಂತರ ಸುದ್ದಿಯಲ್ಲಿ ಬದಲಾವಣೆ ಸಾಧ್ಯ. ಯಾವುದೇ ತಪ್ಪು ಮಾಹಿತಿಗೆ ನಮ್ಮ ನ್ಯೂಸ್‌ ವೆಬ್‌ಸೈಟ್ ಜವಾಬ್ದಾರಿಯಿಲ್ಲ.

ರಕ್ತದ ಸಕ್ಕರೆ ನಿಯಂತ್ರಣಕ್ಕೆ ಊಟದ ನಂತರ 10 ನಿಮಿಷ ನಡಿಗೆ ಎಷ್ಟು ಪರಿಣಾಮಕಾರಿ?

0

ಜನಸ್ಫಂದನ ನ್ಯೂಸ್‌, ಆರೋಗ್ಯ : ರಕ್ತದಲ್ಲಿನ ಸಕ್ಕರೆ (Blood Sugar) ಮಟ್ಟವನ್ನು ನಿಯಂತ್ರಿಸಲು ಕಟ್ಟುನಿಟ್ಟಾದ ಡಯಟ್, ಕ್ಯಾಲೊರಿ ಎಣಿಕೆ ಅಥವಾ ಕಠಿಣ ವ್ಯಾಯಾಮ ಅಗತ್ಯವೆಂಬ ಭ್ರಮೆಯಿದೆ. ಆದರೆ, ಪ್ರಸಿದ್ಧ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸೌರಭ್ ಸೇಠಿ ಅವರ ಪ್ರಕಾರ, ದೈನಂದಿನ ಜೀವನದಲ್ಲಿ ಒಂದೇ ಒಂದು ಸರಳ ಅಭ್ಯಾಸ ಸಾಕು — ಅದು ರಕ್ತದ ಸಕ್ಕರೆ ನಿಯಂತ್ರಣದಲ್ಲಿ ಮಹತ್ವದ ಬದಲಾವಣೆ ತರಬಹುದು.

AIIMS, ಹಾರ್ವರ್ಡ್ ಹಾಗೂ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಗಳಲ್ಲಿ ತರಬೇತಿ ಪಡೆದಿರುವ ಡಾ. ಸೌರಭ್ ಸೇಠಿ ಅವರು ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಈ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ಊಟದ ಬಳಿಕ 10 ನಿಮಿಷದ ನಡುಗೆ, ರಕ್ತದ ಸಕ್ಕರೆಗೆ ಪರಿಣಾಮಕಾರಿ :

“ರಕ್ತದ ಸಕ್ಕರೆ (Blood Sugar) ಯನ್ನು ನಿಯಂತ್ರಿಸಲು ದೊಡ್ಡ ಆಹಾರ ಬದಲಾವಣೆ ಅಗತ್ಯವಿಲ್ಲ. ಊಟದ ನಂತರ ಕೇವಲ 10 ನಿಮಿಷ ನಿಧಾನವಾಗಿ ನಡೆಯುವುದರಿಂದಲೇ ಸಾಕಷ್ಟು ಲಾಭ ಸಿಗುತ್ತದೆ” ಎಂದು ಡಾ. ಸೇಠಿ ತಿಳಿಸಿದ್ದಾರೆ.

ಅವರ ಪ್ರಕಾರ, ಊಟದ ನಂತರ ನಡೆಯುವಾಗ:

  • ಕಾಲಿನ ಸ್ನಾಯುಗಳು ಚಲಿಸಿ ರಕ್ತದಲ್ಲಿರುವ ಗ್ಲೂಕೋಸ್ ಅನ್ನು ನೇರವಾಗಿ ಶೋಷಿಸುತ್ತವೆ.
  • ಇದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ.
  • ಇನ್ಸುಲಿನ್ ಬಿಡುಗಡೆ ನಿಯಂತ್ರಣವಾಗುತ್ತದೆ.
  • ಲಿವರ್‌ನಲ್ಲಿ ಕೊಬ್ಬು ಸಂಗ್ರಹವಾಗುವ ಸಾಧ್ಯತೆ ಕಡಿಮೆಯಾಗುತ್ತದೆ.

ಈ ಆರೋಗ್ಯ ಸುದ್ದಿ ಓದಿ : ಆಯುರ್ವೇದವನ್ನು ಕಡೆಗಣಿಸಿದ ಭಾರತೀಯರು; ಚೀನಿಯರ ಆರೋಗ್ಯ ಕಷಾಯ ರಹಸ್ಯ.

ಯಾರಿಗೆ ಈ ಅಭ್ಯಾಸ ಹೆಚ್ಚು ಉಪಯುಕ್ತ?

ಈ ಸರಳ ಅಭ್ಯಾಸವು ಕೆಳಗಿನ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಅತ್ಯಂತ ಲಾಭದಾಯಕವಾಗಬಹುದು:

  • ಪ್ರಿ-ಡಯಾಬಿಟಿಸ್.
  • ಟೈಪ್ 2 ಡಯಾಬಿಟಿಸ್.
  • ಫ್ಯಾಟಿ ಲಿವರ್ ಸಮಸ್ಯೆ.
  • ಇನ್ಸುಲಿನ್ ರೆಸಿಸ್ಟೆನ್ಸ್.
  • ಹೊಟ್ಟೆ ಭಾಗದ ಕೊಬ್ಬು.
  • ಸಕ್ಕರೆ ತಿನ್ನುವ ಹವ್ಯಾಸ.
  • ಊಟದ ನಂತರ ತಲೆಸುತ್ತು ಅಥವಾ ಅಲಸತನ.

ನಡಿಗೆ ಹೇಗಿರಬೇಕು?

ಡಾ. ಸೇಠಿ ಅವರ ಮಾತಿನ ಪ್ರಕಾರ:

  • ವೇಗವಾಗಿ ನಡೆಯಬೇಕೆಂಬ ಅಗತ್ಯವಿಲ್ಲ.
  • ಜಿಮ್ ಅಥವಾ ಟ್ರೆಡ್‌ಮಿಲ್ ಅವಶ್ಯಕವಿಲ್ಲ.
  • ಮನೆಯೊಳಗೆ ನಿಧಾನವಾಗಿ ನಡೆಯುವುದೂ ಸಾಕು.
  • 10 ನಿಮಿಷಗಳಷ್ಟು ನಿರಂತರವಾಗಿ ನಡೆದರೆ ಸಾಕು.

👉 ಮುಖ್ಯವಾದದ್ದು ನಿರಂತರತೆ, ತೀವ್ರತೆ ಅಲ್ಲ.

ಈ ಅಭ್ಯಾಸದಿಂದ ಸಿಗುವ ಆರೋಗ್ಯ ಲಾಭಗಳು :

  • ಊಟದ ನಂತರ ಸಕ್ಕರೆ ಏರಿಕೆಯಾಗುವುದನ್ನು ತಡೆಯುತ್ತದೆ.
  • ಇನ್ಸುಲಿನ್ ಮಟ್ಟ ಸಮತೋಲನದಲ್ಲಿರುತ್ತದೆ.
  • ಲಿವರ್ ಫ್ಯಾಟ್ ಕಡಿಮೆಯಾಗುತ್ತದೆ.
  • ಹೊಟ್ಟೆಯ ಕೊಬ್ಬು ನಿಧಾನವಾಗಿ ಇಳಿಯುತ್ತದೆ.
  • ಶಕ್ತಿಯ ಮಟ್ಟ ದಿನವಿಡೀ ಸ್ಥಿರವಾಗಿರುತ್ತದೆ.
  • ಡಯಾಬಿಟಿಸ್ ಅಪಾಯ ಕಡಿಮೆಯಾಗುತ್ತದೆ.

ಇದನ್ನು ಓದಿ : ಆರೋಗ್ಯ, ಚರ್ಮ ಹಾಗೂ ಕೂದಲಿಗೆ ಟೊಮೆಟೊದ ಅಚ್ಚರಿ ಪ್ರಯೋಜನಗಳು.

ತಜ್ಞರ ಸಲಹೆ ಏನು?

“ಅತಿಯಾಗಿ ವ್ಯಾಯಾಮ ಮಾಡುವುದಕ್ಕಿಂತ ಪ್ರತಿದಿನ ಸರಳವಾಗಿ ನಡೆಯುವುದು ಹೆಚ್ಚು ಪರಿಣಾಮಕಾರಿ. ದಿನಕ್ಕೆ ಮೂರು ಊಟಗಳ ನಂತರವೂ 10 ನಿಮಿಷ ನಡೆಯುವ ಅಭ್ಯಾಸ ಮಾಡಿದರೆ ಆರೋಗ್ಯದಲ್ಲಿ ದೊಡ್ಡ ಬದಲಾವಣೆ ಕಾಣಬಹುದು” ಎಂದು ಡಾ. ಸೌರಭ್ ಸೇಠಿ ಹೇಳಿದ್ದಾರೆ.


Disclaimer: ಈ ಲೇಖನದಲ್ಲಿರುವ ಮಾಹಿತಿಯನ್ನು ಸಾಮಾನ್ಯ ಆರೋಗ್ಯ ಅರಿವಿಗಾಗಿ ಮಾತ್ರ ನೀಡಲಾಗಿದೆ. ಇದು ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಯಾವುದೇ ಔಷಧೋಪಚಾರ, ಆಹಾರ ಪದ್ಧತಿ ಅಥವಾ ವ್ಯಾಯಾಮ ಆರಂಭಿಸುವ ಮೊದಲು ನಿಮ್ಮ ವೈದ್ಯರ ಸಲಹೆ ಪಡೆಯುವುದು ಅಗತ್ಯ. ಈ ಮಾಹಿತಿಯ ಆಧಾರದಲ್ಲಿ ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳಿಗೆ ವೆಬ್‌ಸೈಟ್ ಹೊಣೆಗಾರರಾಗುವುದಿಲ್ಲ.

ಅಕ್ರಮ ಸಂಬಂಧ ಬಯಲಾಗುವ ಭಯ: 5 ವರ್ಷದ ಮಗನನ್ನೇ ಕೊಂದ ತಾಯಿ.

0

ಜನಸ್ಪಂದನ ನ್ಯೂಸ್, ಭೂಪಾಲ : ಮಧ್ಯಪ್ರದೇಶದಲ್ಲಿ ತಾಯಿಯೊಬ್ಬಳು ತನ್ನ ಐದು ವರ್ಷದ ಮಗನನ್ನೇ ನಿರ್ದಾಕ್ಷಿಣ್ಯವಾಗಿ ಕೊಂದ ಹೃದಯವಿದ್ರಾವಕ ಘಟನೆ ಬಹಿರಂಗವಾಗಿದ್ದು, ರಾಜ್ಯದಾದ್ಯಂತ ಭಾರೀ ಆಘಾತ ಮೂಡಿಸಿದೆ.

ಅಕ್ರಮ ಸಂಬಂಧ ಬಹಿರಂಗವಾಗುವ ಭಯದಿಂದ ಈ ಭೀಕರ ಕೃತ್ಯ ಎಸಗಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಗ್ವಾಲಿಯರ್ ನಗರದ ಥಟೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ತಾಯಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಅಕ್ರಮ ಸಂಬಂಧವೇ ಕೊಲೆಗೆ ಕಾರಣ :

ಪೊಲೀಸ್ ಕಾನ್‌ಸ್ಟೆಬಲ್ ರಾಥೋಡ ಅವರ ಪತ್ನಿ ಜ್ಯೋತಿ, ತಮ್ಮ ನೆರೆಯವನಾದ ಉದಯ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. 2023ರ ಏಪ್ರಿಲ್ 28ರಂದು ಜ್ಯೋತಿ ತನ್ನ ಪ್ರೇಮಿಯೊಂದಿಗೆ ಖಾಸಗಿ ಕ್ಷಣ ಕಳೆಯುತ್ತಿದ್ದ ವೇಳೆ, ಅವರ ಐದು ವರ್ಷದ ಮಗ ಜತಿನ್ ಆ ದೃಶ್ಯವನ್ನು ನೋಡಿದ್ದಾನೆ. ಮಗ ಈ ವಿಷಯವನ್ನು ತಂದೆಗೆ ತಿಳಿಸಬಹುದು ಎಂಬ ಭಯ ಜ್ಯೋತಿಯಲ್ಲಿ ಮನೆಮಾಡಿತ್ತು.

ಮಗುವನ್ನು ಎರಡನೇ ಮಹಡಿಯಿಂದ ತಳ್ಳಿದ ತಾಯಿ :

ಮಗನಿಂದ ಸತ್ಯ ಹೊರಬೀಳುವ ಭಯದಿಂದ, ಜ್ಯೋತಿ ಆತನನ್ನು ಕಟ್ಟಡದ ಎರಡನೇ ಮಹಡಿಯಿಂದ ಕೆಳಗೆ ತಳ್ಳಿದ್ದಾಳೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ರಸ್ತೆ ಮೇಲೆ ಬಿದ್ದು ತೀವ್ರವಾಗಿ ಗಾಯಗೊಂಡ ಮಗು ನೋವಿನಿಂದ ನರಳಾಡುತ್ತಿದ್ದರೂ, ತಾಯಿ ಕೆಳಗೆ ಬಂದು ನೋಡುವ ಪ್ರಯತ್ನವನ್ನೂ ಮಾಡಿಲ್ಲ ಎನ್ನಲಾಗಿದೆ. ಮಗುವನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕವೂ ಜ್ಯೋತಿ ಆಸ್ಪತ್ರೆಗೆ ಹೋಗಿಲ್ಲ ಎಂಬ ಅಂಶ ಪ್ರಕರಣವನ್ನು ಇನ್ನಷ್ಟು ಗಂಭೀರಗೊಳಿಸಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವು :

ತಲೆಗೆ ತೀವ್ರ ಪೆಟ್ಟು ಬಿದ್ದಿದ್ದ ಜತಿನ್ ಅವರನ್ನು ಗ್ವಾಲಿಯರ್‌ನ ಜಯಾರೋಗ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಂಭೀರ ಗಾಯಗಳ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ಆರಂಭದಲ್ಲಿ ಕುಟುಂಬದವರು ಇದನ್ನು ಆಕಸ್ಮಿಕ ಅಪಘಾತ ಎಂದು ಭಾವಿಸಿದ್ದರು.

15 ದಿನಗಳ ಬಳಿಕ ಬಯಲಾದ ಭೀಕರ ಸತ್ಯ :

ಘಟನೆಯ ನಂತರ ರಾಥೋಡ ಅವರಿಗೆ ಪತ್ನಿಯ ನಡವಳಿಕೆಯ ಮೇಲೆ ಅನುಮಾನ ಮೂಡಿತ್ತು.

ಘಟನೆ ನಡೆದ ಸುಮಾರು 15 ದಿನಗಳ ಬಳಿಕ ಜ್ಯೋತಿ ಪಶ್ಚಾತ್ತಾಪದಿಂದ ತನ್ನ ಪತಿಯ ಮುಂದೆ “ನಾನು ದೊಡ್ಡ ತಪ್ಪು ಮಾಡಿದ್ದೇನೆ” ಎಂದು ಹೇಳಿಕೊಂಡಿದ್ದಾಳೆ. ಈ ವೇಳೆ ರಾಥೋಡ ಪತ್ನಿಯನ್ನು ಸಮಾಧಾನಪಡಿಸಿ, ಸಂಪೂರ್ಣ ಘಟನೆ ವಿವರಿಸುವಂತೆ ಕೇಳಿದ್ದಾರೆ.

ಜ್ಯೋತಿ ಎಲ್ಲವನ್ನೂ ಹೇಳುವ ಸಂದರ್ಭದಲ್ಲಿ, ಧ್ಯಾನ್ ಸಿಂಗ್ ಆ ಸಂಭಾಷಣೆಯನ್ನು ರಹಸ್ಯವಾಗಿ ಆಡಿಯೋ ಹಾಗೂ ವಿಡಿಯೋ ರೂಪದಲ್ಲಿ ದಾಖಲಿಸಿಕೊಂಡಿದ್ದಾರೆ.

ಜೊತೆಗೆ ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ನಂತರ ಅವರು ಪತ್ನಿಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನ್ಯಾಯಾಲಯದ ತೀರ್ಪು :

ಪೊಲೀಸರು ಜ್ಯೋತಿ ರಾಥೋಡ್ ಮತ್ತು ಆಕೆಯ ಪ್ರೇಮಿ ಉದಯ್ ಇಂಡೋಲಿಯಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕ ವಿಜಯ್ ಶರ್ಮಾ ಪ್ರಕರಣದ ಪರವಾಗಿ ವಾದ ಮಂಡಿಸಿದರು.

ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಗ್ವಾಲಿಯರ್‌ನ ಹೆಚ್ಚುವರಿ ಸತ್ರ ನ್ಯಾಯಾಲಯ, ಮಗುವನ್ನು ಕೊಂದ ಆರೋಪದಲ್ಲಿ ಜ್ಯೋತಿ ರಾಥೋಡ್ ಅವರನ್ನು ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ.

ಆದರೆ, ಉದಯ್ ಇಂಡೋಲಿಯಾ ವಿರುದ್ಧ ಪೂರಕ ಹಾಗೂ ನೇರ ಸಾಕ್ಷ್ಯಗಳ ಕೊರತೆ ಇದ್ದ ಕಾರಣ, ನ್ಯಾಯಾಲಯ ಆತನನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.

ರಾಜ್ಯವನ್ನೇ ಬೆಚ್ಚಿಬೀಳಿಸಿದ ಘಟನೆ :

ತಾಯಿಯೊಬ್ಬಳು ತನ್ನದೇ ಮಗನ ಜೀವ ತೆಗೆದಿರುವ ಈ ಪ್ರಕರಣ ಮಧ್ಯಪ್ರದೇಶದಲ್ಲಿ ಭಾರೀ ಆಘಾತ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಸಂಬಂಧಗಳು ದಾರಿ ತಪ್ಪಿದಾಗ ಅದರ ಪರಿಣಾಮ ಎಷ್ಟು ಭೀಕರವಾಗಬಹುದು ಎಂಬುದಕ್ಕೆ ಈ ಘಟನೆ ಕಣ್ಣಾರೆ ಸಾಕ್ಷಿಯಾಗಿದೆ.

Disclaimer : ಈ ಸುದ್ದಿಯಲ್ಲಿ ಉಲ್ಲೇಖಿಸಿರುವ ಮಾಹಿತಿಯನ್ನು ವಿಶ್ವಾಸಾರ್ಹ ಮೂಲಗಳು, ಪೊಲೀಸ್ ತನಿಖೆ ಹಾಗೂ ನ್ಯಾಯಾಲಯದ ತೀರ್ಪಿನ ಆಧಾರದಲ್ಲಿ ಪ್ರಕಟಿಸಲಾಗಿದೆ. ಯಾವುದೇ ವ್ಯಕ್ತಿಯ ಮಾನಹಾನಿ ಮಾಡುವ ಉದ್ದೇಶ ನಮ್ಮದಲ್ಲ. ಇಲ್ಲಿ ಬಳಸದಿರುವ ಹೆಸರುಗಳು, ಸ್ಥಳಗಳು ಹಾಗೂ ವಿವರಗಳು ಸಾರ್ವಜನಿಕ ದಾಖಲೆಗಳು ಮತ್ತು ಕಾನೂನು ಪ್ರಕ್ರಿಯೆಗಳ ಆಧಾರದಲ್ಲಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ಅಥವಾ ಮೇಲ್ಮನವಿ ಪ್ರಕ್ರಿಯೆಯಲ್ಲಿ ಮಾಹಿತಿ ಬದಲಾಗುವ ಸಾಧ್ಯತೆ ಇದೆ. ಓದುಗರು ಈ ಸುದ್ದಿಯನ್ನು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಪರಿಗಣಿಸಬೇಕು.

ಮೂತ್ರ ವಿಸರ್ಜನೆ ವೇಳೆ ಈ ಒಂದು ಕೆಲಸ ಮಾಡಿದರೆ ಕಿಡ್ನಿ ಸಮಸ್ಯೆ ದೂರ!

0

ಜನಸ್ಪಂದನ ನ್ಯೂಸ್‌, ಆರೋಗ್ಯ : ಮೂತ್ರ ವಿಸರ್ಜನೆ ವೇಳೆ ಈ ಒಂದು ಕೆಲಸ ಮಾಡಿದರೆ ಕಿಡ್ನಿ ಸಮಸ್ಯೆ ದೂರವಿರಬಹುದೆಂದು “ಸ್ವರ್ ವಿಜ್ಞಾನ” ತಿಳಿಸುತ್ತದೆ. ಬನ್ನಿ ಈ ಬಗ್ಗೆ ಇಂದಿನ ಆರೋಗ್ಯ ಸುದ್ದಿಯಲ್ಲಿ ತಿಳಿಯೋಣ.!

ಇಂದಿನ ವೇಗದ ಜೀವನಶೈಲಿ, ಅಸಮತೋಲಿತ ಆಹಾರ ಪದ್ಧತಿ ಹಾಗೂ ನೀರಿನ ಕೊರತೆಯಿಂದಾಗಿ ಮೂತ್ರಪಿಂಡ ಸಂಬಂಧಿತ ಕಾಯಿಲೆಗಳು ದಿನೇದಿನೇ ಹೆಚ್ಚಾಗುತ್ತಿವೆ. ಮಾನವನ ದೇಹದಲ್ಲಿ ಮೂತ್ರಪಿಂಡಗಳು ಅತ್ಯಂತ ಪ್ರಮುಖ ಅಂಗಗಳಾಗಿದ್ದು, ರಕ್ತವನ್ನು ಶುದ್ಧೀಕರಿಸುವುದು, ವಿಷಕಾರಿ ಅಂಶಗಳನ್ನು ಹೊರಹಾಕುವುದು ಹಾಗೂ ದೇಹದಲ್ಲಿನ ನೀರಿನ ಸಮತೋಲನವನ್ನು ಕಾಪಾಡುವ ಪ್ರಮುಖ ಹೊಣೆಗಾರಿಕೆ ಹೊಂದಿವೆ.

ಆದರೆ ಅನಾರೋಗ್ಯಕರ ಜೀವನಶೈಲಿ, ಒತ್ತಡ, ಕಡಿಮೆ ನೀರು ಸೇವನೆ ಮತ್ತು ಅಜಾಗರೂಕತೆಗಳಿಂದಾಗಿ ಇಂದು ಯುವಕರಲ್ಲೂ ಕೂಡ ಮೂತ್ರಪಿಂಡದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಆಯುರ್ವೇದ ಹಾಗೂ ಪ್ರಾಚೀನ ಸ್ವರ್ ವಿಜ್ಞಾನವು ಕೆಲವು ಸರಳ ಕ್ರಮಗಳನ್ನು ಅನುಸರಿಸುವ ಮೂಲಕ ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳುತ್ತದೆ.

ಮೂತ್ರ ವಿಸರ್ಜನೆ ವೇಳೆ ಈ ಒಂದು ಕೆಲಸ ಮಾಡಿದರೆ ಕಿಡ್ನಿ ಸಮಸ್ಯೆ ದೂರ!

ಸ್ವರ್ ವಿಜ್ಞಾನ ಎಂದರೇನು?

ಸ್ವರ್ ವಿಜ್ಞಾನವು ಉಸಿರಾಟ ಮತ್ತು ದೇಹದ ಶಕ್ತಿಚಕ್ರಗಳ ನಡುವಿನ ಸಂಬಂಧವನ್ನು ವಿವರಿಸುವ ಪುರಾತನ ವಿಜ್ಞಾನವಾಗಿದೆ. ನಮ್ಮ ಮೂಗಿನ ಉಸಿರಾಟದ ದಿಕ್ಕು ದೇಹದ ವಿವಿಧ ಅಂಗಗಳ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಇದು ತಿಳಿಸುತ್ತದೆ.

ಚಂದ್ರ ನಾಡಿ ಮತ್ತು ಮೂತ್ರಪಿಂಡಗಳ ಸಂಬಂಧ :

ಸ್ವರ್ ವಿಜ್ಞಾನ ಪ್ರಕಾರ, ಮೂತ್ರಪಿಂಡಗಳು ನೀರಿನ ಅಂಶದೊಂದಿಗೆ ಸಂಬಂಧ ಹೊಂದಿವೆ. ಎಡ ಮೂಗಿನ ಹೊಳ್ಳೆಯಿಂದ ಹರಿಯುವ ಉಸಿರಾಟವನ್ನು ‘ಚಂದ್ರ ನಾಡಿ’ ಎಂದು ಕರೆಯಲಾಗುತ್ತದೆ. ಈ ಚಂದ್ರ ನಾಡಿ ಶೀತಲ ಶಕ್ತಿಯನ್ನು ಪ್ರತಿನಿಧಿಸುವುದರಿಂದ, ಮೂತ್ರಪಿಂಡಗಳ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.

ಚಂದ್ರ ನಾಡಿ ಸಕ್ರಿಯವಾಗಿರುವಾಗ:

  • ಮೂತ್ರ ವಿಸರ್ಜನೆ ಸುಗಮವಾಗುತ್ತದೆ.
  • ಸುಡುವ ಸಂವೇದನೆ ಕಡಿಮೆಯಾಗುತ್ತದೆ.
  • ಮೂತ್ರಪಿಂಡಗಳ ಮೇಲೆ ಒತ್ತಡ ಇಳಿಯುತ್ತದೆ.

ಈ ಆರೋಗ್ಯ ಸುದ್ದಿ ಓದಿ : ಚಳಿಗಾಲದಲ್ಲಿ ಹೃದಯಕ್ಕೆ ಅಪಾಯಕಾರಿ ಈ ಆಹಾರಗಳು; ವೈದ್ಯರ ಎಚ್ಚರಿಕೆ.!

ಕಿಡ್ನಿ ಸಮಸ್ಯೆ ಬರದಿರಲು ಮೂತ್ರ ವಿಸರ್ಜಿಸುವಾಗ ಏನು ಮಾಡಬೇಕು?

ತಜ್ಞರ ಸಲಹೆಯ ಪ್ರಕಾರ, ಮೂತ್ರ ವಿಸರ್ಜನೆ ಮಾಡುವ ಸಮಯದಲ್ಲಿ ಕೆಳಗಿನ ಕ್ರಮವನ್ನು ಪಾಲಿಸುವುದು ಉತ್ತಮ:

  • ಮೂತ್ರ ವಿಸರ್ಜನೆ ವೇಳೆ ಎಡ ಮೂಗಿನ ಹೊಳ್ಳೆಯಿಂದ ಮಾತ್ರ ಉಸಿರಾಟ ಮಾಡಬೇಕು.
  • ಬಲ ಮೂಗಿನ ಹೊಳ್ಳೆಯನ್ನು ಸೌಮ್ಯವಾಗಿ ಮುಚ್ಚಬಹುದು.
  • ಇದರಿಂದ ಚಂದ್ರ ನಾಡಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತದೆ.

ಚಂದ್ರ ನಾಡಿ ಸಕ್ರಿಯವಿದೆಯೇ ಎಂಬುದನ್ನು ಹೇಗೆ ಗುರುತಿಸಬೇಕು?

  1. ಬಲ ಮೂಗಿನ ಹೊಳ್ಳೆಯನ್ನು ಬೆರಳಿನಿಂದ ನಿಧಾನವಾಗಿ ಮುಚ್ಚಿ.
  2. ಎಡ ಮೂಗಿನ ಹೊಳ್ಳೆಯಿಂದ ಉಸಿರಾಟ ಸುಲಭವಾಗಿ ಸಾಗುತ್ತಿದೆಯೇ ಎಂದು ಪರಿಶೀಲಿಸಿ.
  3. ಉಸಿರಾಟ ಸರಾಗವಾಗಿದ್ದರೆ ಚಂದ್ರ ನಾಡಿ ಸಕ್ರಿಯವಾಗಿದೆ ಎಂದರ್ಥ.
  4. ಸಕ್ರಿಯವಾಗಿಲ್ಲದಿದ್ದರೆ, ಸ್ವಲ್ಪ ಸಮಯ ಎಡಭಾಗಕ್ಕೆ ಮಲಗಿ ಪ್ರಯತ್ನಿಸಬಹುದು.

ಮೂತ್ರಪಿಂಡ ವೈಫಲ್ಯದ ಲಕ್ಷಣಗಳು :

ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ಕಾಣಿಸಿಕೊಳ್ಳುವ ಲಕ್ಷಣಗಳು:

  • ಮೂತ್ರ ವಿಸರ್ಜನೆ ಪ್ರಮಾಣ ಕಡಿಮೆಯಾಗುವುದು.
  • ಮೂತ್ರಕ್ಕೆ ದುರ್ವಾಸನೆ ಬರುವುದು.
  • ಮೂತ್ರ ವಿಸರ್ಜನೆ ವೇಳೆ ಸುಡುವ ಅನುಭವ.
  • ದೇಹದಲ್ಲಿ ಊತ ಕಾಣಿಸಿಕೊಳ್ಳುವುದು.
  • ತೀವ್ರ ದಣಿವು.

ಇದನ್ನು ಓದಿ : ಮೂಗಿನಲ್ಲಿ ದುರ್ಮಾಂಸ ಸಮಸ್ಯೆ: ಲಕ್ಷಣಗಳು, ಕಾರಣಗಳು ಮತ್ತು ಆಯುರ್ವೇದ ಪರಿಹಾರ.

ಮಹತ್ವದ ಸೂಚನೆ :

ಸ್ವರ್ ವಿಜ್ಞಾನ ಮತ್ತು ಆಯುರ್ವೇದ ಕ್ರಮಗಳು ಸಹಾಯಕವಾಗಿದ್ದರೂ, ಗಂಭೀರ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಅಗತ್ಯ. ಸ್ವಯಂ ಚಿಕಿತ್ಸೆಯನ್ನು ತಪ್ಪಿಸಬೇಕು.


Disclaimer : ಈ ಲೇಖನದಲ್ಲಿರುವ ಮಾಹಿತಿ ಸಾಮಾನ್ಯ ಜ್ಞಾನ ಮತ್ತು ಆಯುರ್ವೇದ–ಸ್ವರ್ ವಿಜ್ಞಾನ (swar vigyan) ಆಧಾರಿತ ಅರಿವಿನ ಮೇಲೆ ಮಾತ್ರ ನೀಡಲಾಗಿದೆ. ಇದು ಯಾವುದೇ ರೀತಿಯ ವೈದ್ಯಕೀಯ ಸಲಹೆ, ಚಿಕಿತ್ಸೆ ಅಥವಾ ರೋಗನಿರ್ಣಯಕ್ಕೆ ಪರ್ಯಾಯವಲ್ಲ. ಮೂತ್ರಪಿಂಡ ಅಥವಾ ಇತರ ಆರೋಗ್ಯ ಸಮಸ್ಯೆಗಳಿದ್ದಲ್ಲಿ, ದಯವಿಟ್ಟು ಅರ್ಹ ವೈದ್ಯರು ಅಥವಾ ತಜ್ಞರ ಸಲಹೆ ಪಡೆಯುವುದು ಅನಿವಾರ್ಯ. ಈ ಲೇಖನದಲ್ಲಿರುವ ಮಾಹಿತಿಯನ್ನು ಅನುಸರಿಸಿ ಉಂಟಾಗುವ ಯಾವುದೇ ಆರೋಗ್ಯ ಸಮಸ್ಯೆಗಳಿಗೆ ವೆಬ್‌ಸೈಟ್ ಅಥವಾ ಲೇಖಕರು ಹೊಣೆಗಾರರಾಗಿರುವುದಿಲ್ಲ.

ಚಳಿಗಾಲದಲ್ಲಿ ಹೃದಯಕ್ಕೆ ಅಪಾಯಕಾರಿ ಈ ಆಹಾರಗಳು; ವೈದ್ಯರ ಎಚ್ಚರಿಕೆ.!

0

ಜನಸ್ಪಂದನ ನ್ಯೂಸ್‌, ಆರೋಗ್ಯ : ಇತ್ತೀಚಿನ ದಿನಗಳಲ್ಲಿ ಚಳಿ ಕ್ರಮೇಣ ಹೆಚ್ಚಾಗುತ್ತಿದ್ದು, ಇದರೊಂದಿಗೆ ದೇಹದ ಆರೈಕೆಯ ಅಗತ್ಯವೂ ಹೆಚ್ಚಾಗಿದೆ. ವಿಶೇಷವಾಗಿ ಚಳಿಗಾಲದಲ್ಲಿ ನಾವು ಅನುಸರಿಸುವ ಆಹಾರ ಪದ್ಧತಿ ನಮ್ಮ ಒಟ್ಟಾರೆ ಆರೋಗ್ಯದ ಮೇಲೆ, ಅದರಲ್ಲೂ ಹೃದಯದ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಿದ್ದಾರೆ.

ಚಳಿಯ ವಾತಾವರಣದಲ್ಲಿ ದೇಹದ ಚಯಾಪಚಯ ಕ್ರಿಯೆ ನಿಧಾನಗೊಳ್ಳುತ್ತದೆ. ಈ ಸಮಯದಲ್ಲಿ ಅತಿಯಾಗಿ ಎಣ್ಣೆಯುಕ್ತ, ಮಸಾಲೆಯುಕ್ತ ಹಾಗೂ ಜೀರ್ಣವಾಗಲು ಕಷ್ಟವಾಗುವ ಆಹಾರ ಸೇವಿಸಿದರೆ, ಹೃದಯದ ಮೇಲೆ ಹೆಚ್ಚುವರಿ ಒತ್ತಡ ಬೀಳುವ ಸಾಧ್ಯತೆ ಇದೆ.

ಪರಿಣಾಮವಾಗಿ ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಆಹಾರ ಪದ್ಧತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ.

ಚಳಿಗಾಲದಲ್ಲಿ ಹೃದಯಕ್ಕೆ ಹಾನಿಕಾರಕ ಆಹಾರಗಳು :

ರಾಜೀವ್ ಗಾಂಧಿ ಆಸ್ಪತ್ರೆಯ ಹೃದ್ರೋಗ ವಿಭಾಗದ ವೈದ್ಯ ಡಾ. ಅಜಿತ್ ಜೈನ್ ಅವರ ಪ್ರಕಾರ, ಚಳಿಗಾಲದಲ್ಲಿ ಜನರು ಸಾಮಾನ್ಯವಾಗಿ ಕೆಲವು ಆಹಾರಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಹೃದಯದ ಆರೋಗ್ಯ ಹದಗೆಡುವ ಸಾಧ್ಯತೆ ಇರುತ್ತದೆ.

ಆರೋಗ್ಯ ಸುದ್ದಿ : Heart Attack : ಇವು ಹೃದಯಾಘಾತದ ಲಕ್ಷಣಗಳು ; ಇವನ್ನು ನಿರ್ಲಕ್ಷಸದಿರಿ.!

ಮೊದಲನೆಯದಾಗಿ, ಹುರಿದ ಹಾಗೂ ಅತಿಯಾಗಿ ಮಸಾಲೆಯುಕ್ತ ಆಹಾರಗಳು ರಕ್ತದೊತ್ತಡವನ್ನು ಹೆಚ್ಚಿಸಬಹುದು. ಇವುಗಳಲ್ಲಿ ಇರುವ ಅತಿಯಾದ ಕೊಬ್ಬು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಿ, ರಕ್ತನಾಳಗಳಲ್ಲಿ ಅಡ್ಡಿ ಉಂಟುಮಾಡುವ ಸಾಧ್ಯತೆ ಇದೆ.

ಎರಡನೆಯದಾಗಿ, ಹೆಚ್ಚು ಉಪ್ಪು ಹಾಗೂ ಅತಿಯಾಗಿ ಸಿಹಿ ಪದಾರ್ಥಗಳನ್ನು ಸೇವಿಸುವ ಅಭ್ಯಾಸವೂ ಹೃದಯಕ್ಕೆ ಹಾನಿಕಾರಕ. ಹೆಚ್ಚಿದ ಉಪ್ಪಿನ ಸೇವನೆಯಿಂದ ದೇಹದಲ್ಲಿ ನೀರಿನ ಅಂಶ ಹೆಚ್ಚಾಗಿ ಹೃದಯದ ಮೇಲೆ ಹೆಚ್ಚುವರಿ ಒತ್ತಡ ಬೀಳುತ್ತದೆ.

ಮೂರನೆಯದಾಗಿ, ಕೆಂಪು ಮಾಂಸದ ಅತಿಯಾದ ಸೇವನೆಯು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚಿಸಿ ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಹೆಚ್ಚಿಸಬಹುದು. ಚಳಿಗಾಲದಲ್ಲಿ ದೇಹದ ರಕ್ತ ಪರಿಚಲನೆ ನಿಧಾನವಾಗುವುದರಿಂದ ಈ ಅಪಾಯ ಇನ್ನಷ್ಟು ಹೆಚ್ಚಾಗುತ್ತದೆ.

ಚಳಿಗಾಲದಲ್ಲಿ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಯಾವ ಆಹಾರ ಉತ್ತಮ?

ಚಳಿಗಾಲದಲ್ಲಿ ಹೃದಯವನ್ನು ಆರೋಗ್ಯಕರವಾಗಿಡಲು ಸಮತೋಲಿತ ಹಾಗೂ ಪೌಷ್ಟಿಕ ಆಹಾರ ಸೇವನೆ ಅತ್ಯಂತ ಮುಖ್ಯ. ಪ್ರತಿದಿನ ಹಣ್ಣು ಮತ್ತು ತರಕಾರಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ. ವಿಶೇಷವಾಗಿ ಕಿತ್ತಳೆ, ಸೇಬುಗಳಂತಹ ಕಾಲೋಚಿತ ಹಣ್ಣುಗಳು ಹಾಗೂ ಹಸಿರು ತರಕಾರಿಗಳು ಹೃದಯಕ್ಕೆ ಉಪಯುಕ್ತವಾಗಿವೆ.

ಓಟ್ಸ್, ಗಂಜಿ ಹಾಗೂ ಸಂಪೂರ್ಣ ಧಾನ್ಯಗಳು ಹೃದಯದ ಆರೋಗ್ಯವನ್ನು ಕಾಪಾಡಲು ಸಹಾಯಕವಾಗಿವೆ. ಮೀನು, ಬೇಳೆ ಹಾಗೂ ವಿವಿಧ ಬೀಜಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ಹೃದಯಕ್ಕೆ ಲಾಭಕಾರಿ. ಅಗಸೆ ಬೀಜಗಳು ಹಾಗೂ ಒಮೆಗಾ–3 ಕೊಬ್ಬು ಆಮ್ಲಗಳುಳ್ಳ ಆಹಾರಗಳನ್ನು ನಿಯಮಿತವಾಗಿ ಸೇವಿಸುವುದು ಹೃದಯವನ್ನು ಬಲವಾಗಿಡುತ್ತದೆ.

ಇದನ್ನು ಓದಿ : ಮೂತ್ರದ ಬಣ್ಣವೇ ಹೇಳುತ್ತದೆ ನಮ್ಮ ಆರೋಗ್ಯದ ಮುಖ್ಯ ಎಚ್ಚರಿಕೆ ಸೂಚನೆಗಳನ್ನ.!

ಇದರ ಜೊತೆಗೆ ಸಾಕಷ್ಟು ನೀರು ಕುಡಿಯುವುದು, ಲಘು ವ್ಯಾಯಾಮ ಮಾಡುವುದು, ಸಮರ್ಪಕ ನಿದ್ರೆ ಪಡೆಯುವುದು ಸಹ ಅತ್ಯಗತ್ಯ. ಧೂಮಪಾನ ಮತ್ತು ಮದ್ಯಪಾನದಿಂದ ದೂರವಿದ್ದು, ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದರಿಂದ ಚಳಿಗಾಲದಲ್ಲಿಯೂ ಹೃದಯದ ಆರೋಗ್ಯವನ್ನು ಸುಲಭವಾಗಿ ಕಾಪಾಡಿಕೊಳ್ಳಬಹುದು.


Disclaimer : ಈ ಲೇಖನದಲ್ಲಿರುವ ಮಾಹಿತಿ ಸಾರ್ವಜನಿಕ ಅರಿವು ಮತ್ತು ಸಾಮಾನ್ಯ ಆರೋಗ್ಯ ಮಾಹಿತಿಗಾಗಿ ಮಾತ್ರ. ಇದು ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಯಾವುದೇ ಆರೋಗ್ಯ ಸಮಸ್ಯೆಗಳಿದ್ದಲ್ಲಿ ಅಥವಾ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡುವ ಮೊದಲು ಅರ್ಹ ವೈದ್ಯರು ಅಥವಾ ತಜ್ಞರ ಸಲಹೆ ಪಡೆಯುವುದು ಸೂಕ್ತ.

ಅಂಚೆ ಕಚೇರಿ RD ಯೋಜನೆ : ದಿನಕ್ಕೆ ರೂ.200 ಉಳಿಸಿದರೆ 10 ವರ್ಷದಲ್ಲಿ ರೂ.10 ಲಕ್ಷ.

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಅಂಚೆ ಕಚೇರಿ RD ಯೋಜನೆ ಅಡಿಯಲ್ಲಿ [ಅಂಚೆ ಕಚೇರಿ ಆವರ್ತಕ ಠೇವಣಿ (Post Office Recurring Deposit – RD) ಯೋಜನೆ] ದಿನಕ್ಕೆ ರೂ.200 ಉಳಿಸಿದರೆ 10 ವರ್ಷದಲ್ಲಿ ರೂ.10 ಲಕ್ಷ ಹಣ ಸಂಪಾದಿಸಬಹುದು.

ಇತ್ತೀಚಿನ ದಿನಗಳಲ್ಲಿ ಹೂಡಿಕೆ (Investment) ಮತ್ತು ಉಳಿತಾಯ (Savings) ಪ್ರತಿಯೊಬ್ಬರಿಗೂ ಅನಿವಾರ್ಯವಾಗುತ್ತಿದೆ. ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಮಧ್ಯಮ ವರ್ಗದ ಕುಟುಂಬಗಳಿಗೆ ಹಣವನ್ನು ಜೋಪಾನವಾಗಿ ಉಳಿಸುವುದು ದೊಡ್ಡ ಸವಾಲಾಗಿದೆ. ಕೆಲವರಿಗೆ ಹೂಡಿಕೆ ಮಾಡುವ ಆಸಕ್ತಿ ಇದ್ದರೂ, ಯಾವ ಯೋಜನೆ ಉತ್ತಮ ಎಂಬ ಗೊಂದಲ ಇರುತ್ತದೆ.

ಷೇರು ಮಾರುಕಟ್ಟೆಯ ಏರಿಳಿತ, ಖಾಸಗಿ ಹೂಡಿಕೆಗಳ ಅಪಾಯಗಳನ್ನು ತಪ್ಪಿಸಿ, ಸುರಕ್ಷತೆ ಜೊತೆಗೆ ಸ್ಥಿರ ಆದಾಯ ಬಯಸುವವರಿಗೆ ಅಂಚೆ ಕಚೇರಿ (Post Office) ಒಂದು ವಿಶ್ವಾಸಾರ್ಹ ಆಯ್ಕೆಯಾಗಿದೆ.

ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಅಂಚೆ ಕಚೇರಿ ಹಲವು ಜನಪ್ರಿಯ ಉಳಿತಾಯ ಯೋಜನೆಗಳನ್ನು ನೀಡುತ್ತಿದ್ದು, ಅದರಲ್ಲಿ ಪ್ರಮುಖವಾದುದು ಅಂಚೆ ಕಚೇರಿ ಆವರ್ತಕ ಠೇವಣಿ (Post Office Recurring Deposit – RD) ಯೋಜನೆ.

ಅಂಚೆ ಕಚೇರಿ RD ಯೋಜನೆ ಏನು?

ಈ ಯೋಜನೆಯಡಿ ನೀವು ಪ್ರತಿದಿನ ಸ್ವಲ್ಪ ಮೊತ್ತವನ್ನು ಉಳಿಸುವ ಮೂಲಕ ಭವಿಷ್ಯದಲ್ಲಿ ದೊಡ್ಡ ಮೊತ್ತವನ್ನು ಸಂಗ್ರಹಿಸಬಹುದು. ಇದು ಸರ್ಕಾರದ ಯೋಜನೆಯಾಗಿರುವುದರಿಂದ ಹೂಡಿಕೆದಾರರಿಗೆ ಹೆಚ್ಚಿನ ಭದ್ರತೆ ದೊರೆಯುತ್ತದೆ. ಮಾರುಕಟ್ಟೆಯ ಏರಿಳಿತಗಳ ಪರಿಣಾಮ ಇಲ್ಲದೆ, ನಿಗದಿತ ಬಡ್ಡಿದರದ ಮೂಲಕ ಹಣ ಬೆಳೆಯುತ್ತದೆ.

ಈ ಸುದ್ದಿ ಓದಿ : Post Officeನ ಈ ಸ್ಕೀಮ್‌ನಿಂದ ತಿಂಗಳಿಗೆ 9,250 ರೂ.ವರೆಗೂ ನಿಯಮಿತ ಆದಾಯ

ಈ ಯೋಜನೆಯಲ್ಲಿ ಖಾತೆ ತೆರೆಯಲು ಕನಿಷ್ಠ ₹100 ಸಾಕು. ಪ್ರಸ್ತುತ ಅಂಚೆ ಕಚೇರಿ RD ಯೋಜನೆಗೆ ವಾರ್ಷಿಕ 6.7% ಬಡ್ಡಿದರ ಲಭ್ಯವಿದೆ. ಈ ಬಡ್ಡಿಯನ್ನು ಚಕ್ರಬಡ್ಡಿ (Compounding Interest) ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ.

ಅಂದರೆ, ಬಡ್ಡಿಯ ಮೇಲೂ ಬಡ್ಡಿ ಸೇರಿ ನಿಮ್ಮ ಹಣ ಕ್ರಮೇಣ ಹೆಚ್ಚಾಗುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿಯನ್ನು ಖಾತೆಗೆ ಸೇರಿಸಲಾಗುತ್ತದೆ.

ಸಾಲ ಸೌಲಭ್ಯವೂ ಲಭ್ಯ :

RD ಖಾತೆ ತೆರೆದ ಒಂದು ವರ್ಷದ ನಂತರ, ಖಾತೆಯಲ್ಲಿ ಜಮಾ ಆಗಿರುವ ಮೊತ್ತದ 50% ವರೆಗೆ ಸಾಲ ಪಡೆಯುವ ಅವಕಾಶವಿದೆ. ತುರ್ತು ಅಗತ್ಯಗಳ ಸಮಯದಲ್ಲಿ ಇದು ಹೂಡಿಕೆದಾರರಿಗೆ ಸಹಾಯಕವಾಗುತ್ತದೆ.

ಅವಧಿ ಮತ್ತು ಮುಚ್ಚುವಿಕೆ ಆಯ್ಕೆಗಳು :

ಈ ಯೋಜನೆಯ ಮೂಲ ಅವಧಿ 5 ವರ್ಷಗಳು. ಬೇಕಾದರೆ ಅವಧಿ ಪೂರ್ಣವಾದ ನಂತರ ಮತ್ತಷ್ಟು 5 ವರ್ಷ ವಿಸ್ತರಿಸುವ ಅವಕಾಶವೂ ಇದೆ. ಮಧ್ಯದಲ್ಲಿ ಹಣದ ಅಗತ್ಯವಿದ್ದರೆ, 3 ವರ್ಷಗಳ ನಂತರ ಖಾತೆ ಮುಚ್ಚುವ ಸೌಲಭ್ಯ ಕೂಡ ಲಭ್ಯವಿದೆ.

ದಿನಕ್ಕೆ ₹200 ಉಳಿಸಿದರೆ ಎಷ್ಟು ಹಣ ಸಿಗುತ್ತದೆ?

ನೀವು ದಿನಕ್ಕೆ ಕೇವಲ ₹200 ಉಳಿಸಿದರೆ, ಅದು ತಿಂಗಳಿಗೆ ಸುಮಾರು ₹6,000 ಆಗುತ್ತದೆ.

  • 5 ವರ್ಷಗಳಲ್ಲಿ ಒಟ್ಟು ಹೂಡಿಕೆ: ₹3,60,000
  • ಅಂದಾಜು ಬಡ್ಡಿ: ₹68,197
  • ಒಟ್ಟು ಮೊತ್ತ: ₹4,28,197

ಒಂದು ವೇಳೆ ಹಣವನ್ನು 5 ವರ್ಷಗಳ ನಂತರ ತೆಗೆದುಕೊಳ್ಳದೇ, ಯೋಜನೆಯನ್ನು ಇನ್ನೂ 5 ವರ್ಷಗಳ ಕಾಲ ವಿಸ್ತರಿಸಿದರೆ,

  • 10 ವರ್ಷಗಳಲ್ಲಿ ಒಟ್ಟು ಹೂಡಿಕೆ: ₹7,20,000
  • ಅಂದಾಜು ಬಡ್ಡಿ: ₹3,05,131
  • ಒಟ್ಟು ಮೊತ್ತ: ₹10,25,131

ಯಾರಿಗೆ ಈ ಯೋಜನೆ ಸೂಕ್ತ?

ಅಪಾಯದಿಂದ ದೂರವಿದ್ದು ಹಣ ಉಳಿಸಲು ಬಯಸುವ ಉದ್ಯೋಗಿಗಳು, ಮಹಿಳೆಯರು, ಯುವಕರು ಹಾಗೂ ನಿವೃತ್ತರು ಈ ಯೋಜನೆಯನ್ನು ಆಯ್ಕೆ ಮಾಡಬಹುದು. ಮಕ್ಕಳ ಶಿಕ್ಷಣ, ವಿವಾಹ, ಭವಿಷ್ಯದ ಅಗತ್ಯಗಳು ಅಥವಾ ತುರ್ತು ಪರಿಸ್ಥಿತಿಗಳಿಗಾಗಿ ಹಣ ಸಂಗ್ರಹಿಸಲು ಇದು ಉತ್ತಮ ಆಯ್ಕೆಯಾಗಿದೆ.

ಇದನ್ನು ಓದಿ : ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ: ತಿಂಗಳಿಗೆ ರೂ.5,550 ಗಳಿಸುವ ಅವಕಾಶ.

ಹಣವನ್ನು ಆತಂಕವಿಲ್ಲದೆ, ಸುರಕ್ಷಿತವಾಗಿ ಬೆಳಸಲು ಬಯಸುವವರು ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ RD ಖಾತೆ ತೆರೆಯಬಹುದು.


Disclaimer : ಈ ಲೇಖನದಲ್ಲಿರುವ ಮಾಹಿತಿ ಸಾರ್ವಜನಿಕವಾಗಿ ಲಭ್ಯವಿರುವ ಅಂಚೆ ಕಚೇರಿ ಯೋಜನೆಗಳ ವಿವರಗಳ ಆಧಾರದಲ್ಲಿದೆ. ಹೂಡಿಕೆ ಮಾಡುವ ಮೊದಲು ಸಂಬಂಧಿತ ಅಂಚೆ ಕಚೇರಿ ಅಥವಾ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ ದೃಢೀಕರಿಸಿಕೊಳ್ಳುವುದು ಒಳಿತು. ಈ ಸುದ್ದಿ ಯಾವುದೇ ಹೂಡಿಕೆ ಸಲಹೆಯಲ್ಲ.

ಹನುಮಾನ್ ದೇವಾಲಯದಲ್ಲಿ 48 ಗಂಟೆ ಪ್ರದಕ್ಷಿಣೆ ಹಾಕಿದ ನಾಯಿ; ಭಕ್ತರಲ್ಲಿ ಅಚ್ಚರಿ.

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಹನುಮಾನ್ ದೇವಾಲಯದಲ್ಲಿ ನಿರಂತರ 48 ಗಂಟೆ ಪ್ರದಕ್ಷಿಣೆ ಕಾಹುತ್ತಿರುವ ನಾಯಿಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಭಕ್ತರಲ್ಲಿ ಅಚ್ಚರಿ ಮೂಡಿಸಿದೆ.

ಪ್ರಾಣಿಗಳಲ್ಲಿಯೂ ಭಕ್ತಿ ಮತ್ತು ನಿಷ್ಠೆಯ ಭಾವನೆಗಳು ಕಾಣಿಸಿಕೊಳ್ಳುತ್ತವೆ ಎಂಬುದಕ್ಕೆ ಸಾಕ್ಷಿಯಂತಿರುವ ಘಟನೆಗಳು ಸಮಯಕ್ಕಾಗಾಗ ದೇಶದ ವಿವಿಧ ಭಾಗಗಳಿಂದ ವರದಿಯಾಗುತ್ತಿವೆ.

ಇತ್ತೀಚೆಗೆ ಮಹಾರಾಷ್ಟ್ರದ ಶನಿ ಮಹಾತ್ಮ ದೇವಾಲಯದಲ್ಲಿ ಬೆಕ್ಕೊಂದು ವಿಗ್ರಹಕ್ಕೆ ಪ್ರದಕ್ಷಿಣೆ ಹಾಕುತ್ತಿರುವ ದೃಶ್ಯ ವೈರಲ್ ಆಗಿದ್ದ ಬಳಿಕ, ಇದೀಗ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ಇಂತಹದ್ದೇ ಒಂದು ಅಪರೂಪದ ಘಟನೆ ಗಮನ ಸೆಳೆಯುತ್ತಿದೆ.

ಹನುಮಾನ್ ದೇವಾಲಯದಲ್ಲಿ 48 ಗಂಟೆ ಪ್ರದಕ್ಷಿಣೆ ಹಾಕಿದ ನಾಯಿ ವಿಡಿಯೋ :

ಈ ದೃಶ್ಯವನ್ನು ಸ್ಥಳೀಯರು ದಾಖಲಿಸಿದ್ದು, ಟ್ವಿಟರ್‌ನಲ್ಲಿ ಹರಿದಾಡುತ್ತಿರುವ ವಿಡಿಯೋ ಆಧಾರಿತವಾಗಿದೆ.

ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ನಗೀನಾ ತೆಹಸಿಲ್ ವ್ಯಾಪ್ತಿಯ ನಂದಪುರ ಗ್ರಾಮದಲ್ಲಿರುವ ಪ್ರಾಚೀನ ಹನುಮಾನ್ ದೇವಾಲಯದಲ್ಲಿ ನಾಯಿಯೊಂದು ಕಳೆದ 48 ಗಂಟೆಗಳಿಗೂ ಅಧಿಕ ಕಾಲದಿಂದ ನಿಂತಿಲ್ಲದೆ ಹನುಮಂತನ ವಿಗ್ರಹದ ಸುತ್ತ ನಿರಂತರವಾಗಿ ಪ್ರದಕ್ಷಿಣೆ ಹಾಕುತ್ತಿರುವುದು ಭಕ್ತರು ಹಾಗೂ ಗ್ರಾಮಸ್ಥರನ್ನು ಅಚ್ಚರಿಗೊಳಿಸಿದೆ.

Dog : ಮಾಲೀಕನ ಸಾವು ; ಬಿಕ್ಕಿ ಬಿಕ್ಕಿ ಅತ್ತ ನಾಯಿಯ ಭಾವುಕ ದೃಶ್ಯ ವೈರಲ್.

ಸೋಮವಾರ ಬೆಳಗಿನ ಜಾವ ಸುಮಾರು 4 ಗಂಟೆಯಿಂದ ಆರಂಭಗೊಂಡ ಈ ದೃಶ್ಯ, ದೇವಾಲಯಕ್ಕೆ ಭೇಟಿ ನೀಡುತ್ತಿರುವ ಜನರ ಗಮನ ಸೆಳೆಯುತ್ತಿದ್ದು, ಈಗ ಈ ಪ್ರದೇಶದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಗ್ರಾಮಸ್ಥರ ಹೇಳಿಕೆ ಪ್ರಕಾರ, ಈ ಶ್ವಾನವು ಯಾವುದೇ ಆಕ್ರಮಣಕಾರಿ ನಡವಳಿಕೆ ತೋರಿಸದೇ, ಶಾಂತವಾಗಿ ದೇವಾಲಯದ ಆವರಣದಲ್ಲಿ ವಿಗ್ರಹದ ಸುತ್ತ ಸುತ್ತುತ್ತಲೇ ಇದೆ. ದೇವಾಲಯವನ್ನು ಬಿಟ್ಟು ಹೊರ ಹೋಗುವ ಪ್ರಯತ್ನವನ್ನೂ ಅದು ಮಾಡುತ್ತಿಲ್ಲ.

ನಾಯಿಯ ಈ ಅಸಾಮಾನ್ಯ ನಡವಳಿಕೆಯನ್ನು ಕೆಲವರು ಭಕ್ತಿಯ ಸಂಕೇತವಾಗಿ ನೋಡುತ್ತಿದ್ದರೆ, ಇನ್ನೂ ಕೆಲವರು ಇದನ್ನು ಸಹಜ ಪ್ರಾಣಿಯ ವರ್ತನೆಯೆಂದು ಪರಿಗಣಿಸುತ್ತಿದ್ದಾರೆ.

ಹಿಂದೂ ಧರ್ಮದಲ್ಲಿ ಎಲ್ಲಾ ಜೀವಿಗಳಿಗೂ ದೈವಿಕ ಮಹತ್ವವಿದೆ ಎಂಬ ನಂಬಿಕೆ ಇದೆ. ವಿಶೇಷವಾಗಿ ಶ್ವಾನವನ್ನು ಕಾಲಭೈರವನ ರೂಪವೆಂದು ಪೂಜಿಸುವ ಸಂಪ್ರದಾಯವೂ ಇದೆ. ಈ ಹಿನ್ನೆಲೆಯಲ್ಲಿ ಹನುಮಾನ್ ದೇವಾಲಯದಲ್ಲಿ ಶ್ವಾನದ ಈ ವರ್ತನೆಯನ್ನು ಕೆಲ ಭಕ್ತರು ಆಧ್ಯಾತ್ಮಿಕ ನಂಬಿಕೆಯೊಂದಿಗೆ ಸಂಪರ್ಕಿಸುತ್ತಿದ್ದಾರೆ.

ಈ ಅಪರೂಪದ ದೃಶ್ಯವನ್ನು ವೀಕ್ಷಿಸಲು ಸುತ್ತಮುತ್ತಲ ಗ್ರಾಮಗಳಿಂದ ಮಾತ್ರವಲ್ಲದೆ ದೂರದೂರಿನಿಂದಲೂ ಭಕ್ತರು ಆಗಮಿಸುತ್ತಿರುವುದು ಕಂಡುಬಂದಿದೆ. ಘಟನೆಯ ಮಾಹಿತಿ ಪಡೆದ ಸ್ಥಳೀಯ ಮುಖಂಡ ಅನೂಪ್ ಬಾಲ್ಮಿಕಿ ಅವರು ದೇವಾಲಯಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ.

ಇದು ನಂಬಿಕೆಯ ವಿಷಯವಾಗಿದ್ದು, ಯಾವುದೇ ರೀತಿಯ ಗೊಂದಲ ಅಥವಾ ಅಶಾಂತಿಗೆ ಅವಕಾಶ ನೀಡಬಾರದು ಎಂದು ಅವರು ಮನವಿ ಮಾಡಿದ್ದಾರೆ. ದೇವಾಲಯದ ಸುತ್ತ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸ್ಥಳೀಯ ಆಡಳಿತವೂ ಎಚ್ಚರಿಕೆ ವಹಿಸಿದೆ.

ಚಳಿಗಾಲದ ಹಿನ್ನೆಲೆ, ದೇವಾಲಯ ಸಮಿತಿ ಮತ್ತು ಗ್ರಾಮಸ್ಥರು ನಾಯಿಗೆ ತೊಂದರೆಯಾಗದಂತೆ ದೇವಾಲಯದ ಆವರಣದಲ್ಲಿ ತಾತ್ಕಾಲಿಕ ಆಶ್ರಯ ವ್ಯವಸ್ಥೆ ಮಾಡಿದ್ದು, ಚಳಿಯಿಂದ ರಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಜೊತೆಗೆ ಭಕ್ತರಿಗೆ ಅನುಕೂಲವಾಗುವಂತೆ ದೇವಾಲಯದ ವ್ಯವಸ್ಥೆಯನ್ನೂ ಸರಿ ಮಾಡಲಾಗಿದೆ.

Dog : ಮಾಲೀಕನ ಸಾವು ಸಹಿಸಲಾರದೆ ನಾಯಿ ಕೂಡ ಬಿಟ್ಟಿತು ಪ್ರಾಣ..!

ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ನಂದಪುರ ಗ್ರಾಮದಲ್ಲಿರುವ ಹನುಮಾನ್ ದೇವಾಲಯದಲ್ಲಿ ನಡೆಯುತ್ತಿರುವ ಈ ಘಟನೆ ಈಗ ಸ್ಥಳೀಯ ಮಟ್ಟದಲ್ಲಿ ವಿಶೇಷ ಕುತೂಹಲ ಮತ್ತು ಚರ್ಚೆಯ ವಿಷಯವಾಗಿದ್ದು, ಧಾರ್ಮಿಕ ನಂಬಿಕೆ ಹಾಗೂ ಮಾನವ-ಪ್ರಾಣಿ ಸಂಬಂಧಗಳ ಕುರಿತು ಚರ್ಚೆಗೆ ಕಾರಣವಾಗಿದೆ.


Disclaimer : ಈ ವರದಿಯಲ್ಲಿ ಉಲ್ಲೇಖಿಸಲಾದ ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಶ್ಯಗಳು, ಸ್ಥಳೀಯರ ಹೇಳಿಕೆಗಳು ಮತ್ತು ಸಾರ್ವಜನಿಕ ನಂಬಿಕೆಗಳ ಆಧಾರಿತವಾಗಿವೆ. ಇದನ್ನು ಧಾರ್ಮಿಕ ನಂಬಿಕೆ ಅಥವಾ ವೈಜ್ಞಾನಿಕ ದೃಢೀಕರಣವೆಂದು ಪರಿಗಣಿಸಬಾರದು. ಓದುಗರು ಸ್ವಂತ ವಿವೇಚನೆ ಬಳಸುವಂತೆ ವಿನಂತಿ.

ಧಾರವಾಡ : ಕ್ಷುಲ್ಲಕ ಜಗಳಕ್ಕೆ ಶಾಲಾ ಬಾಲಕರಿಂದ SSLC ವಿದ್ಯಾರ್ಥಿ ಹತ್ಯೆ.

0

ಜನಸ್ಪಂದನ ನ್ಯೂಸ್‌, ಧಾರವಾಡ : ಶಾಲಾ ಬಾಲಕರ ಮಧ್ಯೆ ನಡೆದ ಘರ್ಷಣೆ ಕೊನೆಗೆ ಭೀಕರ ದುರಂತಕ್ಕೆ ತಿರುಗಿದೆ. ಎಸ್‌ಎಸ್‌ಎಲ್‌ಸಿ (SSLC) ಓದುತ್ತಿದ್ದ ಬಾಲಕನೊಬ್ಬನನ್ನು ಅದೇ ವಯಸ್ಸಿನ ಮೂವರು ಬಾಲಕರು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ಬುಧವಾರ ಸಂಜೆ ನಡೆದಿದೆ.

ಮೃತ ಬಾಲಕನನ್ನು ಕುಂದಗೋಳ ಪಟ್ಟಣದ ನಿವಾಸಿ ನಿಂಗರಾಜ್ (16) ಎಂದು ಗುರುತಿಸಲಾಗಿದೆ. ಆತ ಕುಂದಗೋಳದ ಅನುದಾನಿತ ಶಾಲೆಯಲ್ಲಿ SSLC ವಿದ್ಯಾಭ್ಯಾಸ ಮಾಡುತ್ತಿದ್ದನು. ಆರೋಪಿಗಳೂ ಸಹ ಅಪ್ರಾಪ್ತ ವಯಸ್ಸಿನವರಾಗಿದ್ದು, ಅವರಲ್ಲಿ ಒಬ್ಬನು ಇದೇ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಎನ್ನಲಾಗಿದೆ.

SSLC ಡ್ರಾಪ್‌ಔಟ್ ಸೇರಿ ಮೂವರು ಬಾಲಕರಿಂದ ಹಲ್ಲೆ :

ಪೊಲೀಸ್ ಮೂಲಗಳ ಪ್ರಕಾರ, ಈ ದುರ್ಘಟನೆಗೆ ಶಾಲೆಯಲ್ಲಿ ನಡೆದ ಕ್ಷುಲ್ಲಕ ವಿಚಾರವೇ ಕಾರಣ ಎನ್ನಲಾಗಿದೆ. ಎರಡು ದಿನಗಳ ಹಿಂದೆ ನಿಂಗರಾಜ್ ಹಾಗೂ ಕೆಲ ಸಹಪಾಠಿಗಳ ನಡುವೆ ಸಣ್ಣ ವಿಚಾರಕ್ಕೆ ಜಗಳ ನಡೆದಿತ್ತು.

ಈ ಜಗಳವನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಆರೋಪಿಯೊಬ್ಬ, SSLC ಡ್ರಾಪ್‌ಔಟ್ ಆಗಿದ್ದ ತನ್ನ ಇನ್ನಿಬ್ಬರು ಸ್ನೇಹಿತರನ್ನು ಕರೆದುಕೊಂಡು ಬಂದು ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

Crime : ಪಂಜಾಬ್‌ನಲ್ಲಿ ಧರ್ಮಸ್ಥಳ ಮೂಲದ ಇಂಜಿನಿಯರ್ ಅನುಮಾನಸ್ಪದ ಸಾವು ; ಕಾರಣ ನಿಗೂಢ.!

ಬುಧವಾರ ಸಂಜೆ ವೇಳೆ ಮೂವರು ಬಾಲಕರು ನಿಂಗರಾಜ್ ಮೇಲೆ ಏಕಾಏಕಿ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ನಿಂಗರಾಜ್ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕುಂದಗೋಳ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕೊಲೆಗೆ ಬೇರೆ ಯಾವುದೇ ಹಿನ್ನೆಲೆಗಳಿವೆಯೇ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ.

Wife ಹತ್ಯೆ ಪ್ರಕರಣ : ಶವದೊಂದಿಗೆ ಸೆಲ್ಫಿ ತೆಗೆದು ವಾಟ್ಸಾಪ್ ಸ್ಟೇಟಸ್ ಹಾಕಿದ ಪತಿ.

ಶಾಲಾ ವಯಸ್ಸಿನ ಮಕ್ಕಳಿಂದಲೇ ಇಂತಹ ಭೀಕರ ಕೃತ್ಯ ನಡೆದಿರುವುದು ಸ್ಥಳೀಯರಲ್ಲಿ ತೀವ್ರ ಆಘಾತ ಮತ್ತು ಆತಂಕಕ್ಕೆ ಕಾರಣವಾಗಿದೆ. ಒಂದೇ ಕ್ಷಣದ ಕೋಪ ಮತ್ತು ಅಸಹನೀಯ ನಿರ್ಧಾರ, ಒಬ್ಬ ಬಾಲಕನ ಭವಿಷ್ಯವನ್ನು ಕಸಿದುಕೊಂಡಷ್ಟೇ ಅಲ್ಲದೆ, ಹಲವು ಕುಟುಂಬಗಳ ಜೀವನವನ್ನೂ ದುಃಖದಲ್ಲಿ ಮುಳುಗಿಸಿದೆ.

Courtesy :  TV9 Kannada


Disclaimer : ಈ ವರದಿ ಅಧಿಕೃತ ಪೊಲೀಸ್ ಮಾಹಿತಿ ಮತ್ತು ಲಭ್ಯವಿರುವ ಮೂಲಗಳ ಆಧಾರದಲ್ಲಿ ತಯಾರಿಸಲಾಗಿದೆ. ಆರೋಪಿಗಳು ಅಪ್ರಾಪ್ತರಾಗಿದ್ದು, ತನಿಖೆ ಮುಂದುವರಿದಿದೆ. ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಆರೋಪಿಗಳನ್ನು ಅಪರಾಧಿಗಳೆಂದು ನಿರ್ಧರಿಸಲಾಗುವುದಿಲ್ಲ. ಯಾವುದೇ ರೀತಿಯ ಹಿಂಸೆಯನ್ನು ಈ ವರದಿ ಸಮರ್ಥಿಸುವುದಿಲ್ಲ.