Saturday, June 14, 2025

Janaspandhan News

HomeInternational NewsNuclear leak : ಭಾರತೀಯ ಸೇನಾ ಇಫೆಕ್ಟ್‌ ; ಪಾಕ್‌ನಲ್ಲಿ ವೈದ್ಯಕೀಯ ಎಮರ್ಜೆನ್ಸಿ?
spot_img
spot_img

Nuclear leak : ಭಾರತೀಯ ಸೇನಾ ಇಫೆಕ್ಟ್‌ ; ಪಾಕ್‌ನಲ್ಲಿ ವೈದ್ಯಕೀಯ ಎಮರ್ಜೆನ್ಸಿ?

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಪರಮಾಣು ವಿಕಿರಣ ಸೋರಿಕೆ (Nuclear leak) ಯಾಗಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನಿಗಳಿಗೆ ವಾಂತಿ, ತಲೆನೋವು, ತಲೆ ಸುತ್ತುವುದು ಸೇರಿದಂತೆ ಮುಂತಾದ ಆರೋಗ್ಯ ಸಮಸ್ಯೆಗಳು ಕಂಡುಬಂದಿದ್ದು, ಸದ್ಯ ಪಾಕಿಸ್ತಾನದಲ್ಲಿ ಮೆಡಿಕಲ್ ಎಮರ್ಜೆನ್ಸಿ (Medical Emergency) ಘೋಷಿಸಲಾಗಿದೆ ಎನ್ನಲಾಗಿದೆ.

ಕದನ ವಿರಾಮ :

ಕಳೆದ ಎರಡು ದಿನಗಳ ಹಿಂದೆ ಪಾಕಿಸ್ತಾನ ಕದನ ವಿರಾಮಕ್ಕೆ ಭಾರತದ ದಾಳಿಯ ಒತ್ತಡವೇ ಅಥವಾ ಬೇರೇನಾದರೂ ಕಾರಣವಿದೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿದವು. ಸದ್ಯ ಸೊಶಿಯಲ್‌ ಮಿಡಿಯಾದಲ್ಲಿ ವೈರಲ್ ಆಗುತ್ತಿರುವ ಪಾಕಿಸ್ತಾನದ ರೇಡಿಯೋಲಾಜಿಕಲ್ ಸೇಫ್ಟಿ ಬುಲೆಟಿನ್ (Radiological Safety Bulletin), ವಿಕಿರಣ ಸೋರಿಕೆಯ ಬಗ್ಗೆ ಸುಳಿವು ನೀಡುತ್ತಿದೆ.

ಇದನ್ನು ಓದಿ :

ತನ್ನ ಬಳಿ ಅಣ್ವಸ್ತ್ರ ಇದೆ ಎಂದು ಸಾರುತ್ತಿದ್ದ ಪಾಕಿಸ್ತಾನ, ಭಾರತದ ಹೊಡೆತಕ್ಕೆ ತತ್ತರಿಸಿದ ಓಡಿಹೋಗಿ ಅಮೇರಿಕಾದ ಕಾಲು ಹಿಡಿದು ಕದನ ವಿರಾಮದ ಭಿಕ್ಷೆ ಬೇಡಿತ್ತು. ಡೊನಾಲ್ಡ್​ ಟ್ರಂಪ್​ ಮಧ್ಯಸ್ಥಿಕೆಯ ಪರಿಣಾಮ ಭಾರತವು ಕೂಡ ಕದನವಿರಾಮಕ್ಕೆ ಒಪ್ಪಿಕೊಂಡಿತು.

ಪಾಕ್‌ ಪೋಷಿತ ಉಗ್ರರ ನಾಶಕ್ಕೆ ಭಾರತಕ್ಕೆ ಇದೊಂದು ಒಳ್ಳೆಯ ಅವಕಾಶ ಇದ್ದಾಗ, ಕದನ ವಿರಾಮಕ್ಕೆ ಒಪ್ಪಿಕೊಳ್ಳಬಾರದಿತ್ತು ಎಂದು ಕೆಲವರು ವಾದಿಸಿದರು. ಆದರೆ ಈ ಕದನ ವಿರಾಮದ ಹಿಂದೆ ಬೇರೆಯದ್ದೇ ವಿಷ್ಯ ಇದ್ಯಾ ಅನ್ನುವಂತ ಸಂದೇಶವೊಂದು ಹೊರಬಿದ್ದಿದೆ.

ಇದನ್ನು ಓದಿ :

ರೇಡಿಯೋಲಾಜಿಕಲ್ ಸೇಫ್ಟಿ ಬುಲೆಟಿನ್ ಎನ್ನುವ ನೋಟಿಸ್​ ಒಂದು ಪಾಕಿಸ್ತಾನದಿಂದ ಹೊರಕ್ಕೆ ಬಂದಂತೆ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಗಳಲ್ಲಿ ಸುಳ್ಳಿನ ಕಂತೆಗಳೆ ಹೆಚ್ಚು. ಆದರೂ ಸಹ ರೇಡಿಯೋಲಾಜಿಕಲ್ ಸೇಫ್ಟಿ ಬುಲೆಟಿನ್ ಎನ್ನುವ ನೋಟಿಸ್ ಬಗ್ಗೆ ಸತ್ಯಾಸತ್ಯತೆಯ ಸ್ಪಷ್ಟತೆ ಇಲ್ಲದಿದ್ದರೂ, ಕದನ ವಿರಾಮಕ್ಕೆ ಪಾಕಿಸ್ತಾನ ಕಾಲಿಗೆ ಬಿದ್ದಿರುವುದರಿಂದ ಇದು ನಿಜ ಇರಬಹುದೇ ಎನ್ನುವ ಒಂದು ಮಾತೂ ಕೇಳಿಬರುತ್ತಿದೆ.

ಇದನ್ನು ಓದಿ :

ವಿಕಿರಣ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ, ಪಾಕಿಸ್ತಾನಿಗಳಿಗೆ ವಾಂತಿ, ತಲೆನೋವು ಮುಂತಾದ ಲಕ್ಷಣಗಳು ಕಂಡುಬಂದಿವೆ. ಸದ್ಯ ಪಾಕಿಸ್ತಾನದಲ್ಲಿ ಮೆಡಿಕಲ್ ಎಮರ್ಜೆನ್ಸಿ ಘೋಷಿಸಲಾಗಿದೆ ಎಂದು ತಿಳಿಸಲಾಗಿದೆ. ಉತ್ತರ ಪಾಕಿಸ್ತಾನದಲ್ಲಿ ವಿಕಿರಣ ಸೋರಿಕೆಯಾಗಿದೆ.

ನಿನ್ನೆಯಷ್ಟೇ ಕಾಂಗ್ರೆಸ್ ನಾಯಕ ಶಶಿ ತರೂರ್, ‘Ceasefire credit goes to radiation not for Trump mediation’ ಅರ್ಥಾತ್​ ಕದನ ವಿರಾಮದ ಹಿಂದೆ ಇರುವುದು ಟ್ರಂಪ್​ ಸಂಧಾನವಲ್ಲ, ಬದಲಿಗೆ ವಿಕಿರಣ ಎಂದು ಹೇಳಿದ್ದರು.

ಇದನ್ನು ಓದಿ :

ನಿನ್ನೆ ಪ್ರಧಾನಿಯವರು ತಮ್ಮ ಭಾಷಣದಲ್ಲಿ ಕೂಡ, ನೀವು ಗಡಿಗೆ ಗುರಿಯಿಟ್ರೆ ನಾವು ಎದೆಗೇ ಗುರಿಯಿಟ್ವಿ ಎಂದಿದ್ದರು. ಇವನ್ನೆಲ್ಲಾ ಒಂದಕ್ಕೊಂದು ಜೋಡಿಸಿ ನೋಡಿದರೇ ಏನೋ ಒಂದು ನಡೆದಿದೆ ಎನ್ನುವಂತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

Courtesy : asianetnews Kannada

ಹಿಂದಿನ ಸುದ್ದಿ : Health : ನಿಮ್ಮ ಮನೆ ಅಕ್ಕಪಕ್ಕದಲ್ಲಿ ಸಿಗುವ ಈ ಹಣ್ಣಿನಿಂದ ಸಿಗುತ್ತೆ ಮಧುಮೇಹದಿಂದ ಮುಕ್ತಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಸೀಮೆ ಹುಣಸೆ ಹಣ್ಣು, ಇಲಾಚಿ ಹಣ್ಣು ಎಂದು ಕರೆಯುವ ಈ ಹಣ್ಣು ಜಂಗಲ್ ಜಿಲೇಬಿ (Jungle Jilebi) ಎಂದೇ ಖ್ಯಾತಿ ಪಡೆದಿದೆ. ಪ್ರತಿದಿನ ಇಪ್ಪತ್ತರಿಂದ ಮೂವತ್ತು ಗ್ರಾಂ ಇಲಾಚಿ ಹಣ್ಣು ತಿನ್ನುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ದೂರ ಆಗುತ್ತವೆ.

ಪಿಥೆಸೆಲ್ಲೋಬಿಯಂ ಡುಲ್ಸ್ (Pithecellobium dulce) ಎಂದು ಕರೆಯಲ್ಪಡುವ ಸೀಮೆ ಹುಣಸೆ ಹಣ್ಣು, ವಿಶಿಷ್ಟವಾದ ರುಚಿ ಹೊಂದಿದೆ. ಇದರ ಔಷಧೀಯ ಗುಣಗಳು ಆರೋಗ್ಯಕ್ಕೂ ವರದಾನವಿದ್ದಂತೆ.

ಇದನ್ನು ಓದಿ : Revenue Department : ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಜಂಗಲ್ ಜಲೇಬಿಯನ್ನು ಊಟ ಮಾಡುವುದಕ್ಕಿಂತ ಒಂದು ಗಂಟೆ ಮುಂಚೆ ಅಥವಾ ಒಂದು ಗಂಟೆ ನಂತರ ತಿನ್ನಬೇಕು (Eat one hour before or one hour after) ಎನ್ನುತ್ತಾರೆ ಹಿರಿಯರು.

ಈ ಹಣ್ಣು ವಿಟಮಿನ್ ಸಿ, ಪ್ರೋಟೀನ್, ಕೊಬ್ಬು, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಥಯಾಮಿನ್, ರಿಬೋಫ್ಲಾವಿನ್ ಮುಂತಾದ ಅನೇಕ ಅಂಶಗಳನ್ನು ಹೊಂದಿದೆ.

ಕಣ್ಣಿನ ಸಮಸ್ಯೆ ಮತ್ತು ಚರ್ಮದ ಕಾಯಿಲೆಗೆ (Eye problems and skin disease) ಈ ಹಣ್ಣು ತುಂಬಾ ಉಪಯೋಗಕರ ಎಂದು ಪರಿಗಣಿಸಲಾಗಿದೆ.

ಇದನ್ನು ಓದಿ : ಅತ್ಯಂತ ದುರ್ಬಲ ಪಾಸ್‌ವರ್ಡ್ ಗಳಿವು; 1 ನಿ‌ಮಿಷ ಸಾಕು ಖಾತೆ ಹ್ಯಾಕ್ ಮಾಡಲು.!

ಇದು ದೇಹವನ್ನು ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ. ಈ ಗುಣವು ವಯಸ್ಸಾಗುವುದನ್ನು ತಡೆಯುತ್ತದೆ (Prevents aging) ಮತ್ತು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ.

ಈ ಹಣ್ಣು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುವುದು (To strengthen the digestive system).

ಜಂಗಲ್ ಜಲೇಬಿಯನ್ನು ಒಂದು ತಿಂಗಳು ನಿಯಮಿತವಾಗಿ ಸೇವಿಸಿದರೆ, ಸಕ್ಕರೆಯನ್ನು ನಿಯಂತ್ರಿಸಬಹುದಂತೆ.

ಇದನ್ನು ಓದಿ : Pahalgam attack : ಭಾರತದಿಂದ ಪ್ರತಿಕಾರದ ಭಯ ; ಪಾಕಿಸ್ತಾನ ಸೈನಿಕರ ಸಾಮೂಹಿಕ ರಾಜೀನಾಮೆ.?

ಇದರಲ್ಲಿರುವ ಆಂಟಿಆಕ್ಸಿಡೆಂಟ್, ಆಂಟಿಇನ್ಫ್ಲಾಮೇಟರಿ, ಆಂಟಿಡಿಯಾಬೆಟಿಕ್ ಅಂಶಗಳು ಕ್ಯಾನ್ಸರ್ ರೋಗಿಗಳಿಗೆ ಉಪಯುಕ್ತವಾಗಿವೆ (Useful for cancer patients).

ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು (To maintain body temperature) ಮತ್ತು ಶಾಖ ಸಂಬಂಧಿತ ಅಸ್ವಸ್ಥತೆಯನ್ನು ತಡೆಯಲು ಸಹಾಯ ಮಾಡುತ್ತದೆ.

ನೈಸರ್ಗಿಕ ನೋವು ನಿವಾರಕವಾಗಿಯೂ ಕಾರ್ಯನಿರ್ವಹಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಇದನ್ನು ಓದಿ : Health : ಏಕಾಏಕಿ ಕೈಗಳು ನಡುಗುವುದು ಈ ಗಂಭೀರ ಕಾಯಿಲೆಯಾಗಿರಬಹುದು.!

ಫೈಲೇರಿಯಾಸಿಸ್ ಎಂಬ ಸಾರವನ್ನು ಈ ಹಣ್ಣಿನ ಎಲೆ ಮತ್ತು ಬೀಜಗಳು ಹೊಂದಿದ್ದು, ಇದು ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ಉಪಯುಕ್ತವಾಗಿದೆ. ಅಲ್ಲದೇ ಸೊಳ್ಳೆಗಳ ವಿರುದ್ಧ ನೈಸರ್ಗಿಕ ಕೀಟನಾಶಕವಾಗಿಯೂ (Natural insecticide against mosquitoes) ಈ ಹಣ್ಣು ಕೆಲಸ ಮಾಡುತ್ತದೆ.

ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ.

ಇದು ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಇದನ್ನು ಓದಿ : ಬೇಡ, ಬೇಡ ಅಂದ್ರು ಮಧ್ಯರಾತ್ರಿ ಮಹಿಳೆ ಮನೆಯೊಳಗೆ ನುಗ್ಗಿದ Teacher ; ಮುಂದೆನಾಯ್ತು.!

ಕೆಮ್ಮು ಮತ್ತು ಅಸ್ತಮಾದಂತಹ ರೋಗಗಳನ್ನು ಗುಣಪಡಿಸಬಹುದು.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan News) ಈ ಲೇಖನಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರರಲ್ಲ.

spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments