Monday, September 16, 2024
spot_img
spot_img
spot_img
spot_img
spot_img
spot_img
spot_img

ಅತ್ತೆ ಹೊಡೆದಿದ್ದಾರೆ ಎಂದು ಸಹಾಯವಾಣಿ ಕೇಂದ್ರಕ್ಕೆ Call ಮಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್; ಮುಂದೆನಾಯ್ತು ಗೊತ್ತಾ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ತುಮಕೂರು : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಅವರು, ಮಹಿಳಾ ಸಾಂತ್ವಾನ ಸಹಾಯವಾಣಿ ಸಕ್ರಿಯವಾಗಿದ್ಯಾ ಇಲ್ಲ ಎಂದು ರಿಯಾಲಿಟಿ ಚೆಕ್ ಮಾಡಿದರು.

ಇನ್ನೂ ತುಮಕೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲೇ ಜಿಲ್ಲಾಧಿಕಾರಿ ಫೋನ್​ನಿಂದ ಕರೆ ಮಾಡಿ ಸಹಾಯವಾಣಿ ಕಾರ್ಯಕ್ಷಮತೆ ಪರಿಶೀಲಿಸಿದರು ಎಂದು ತಿಳಿದು ಬಂದಿದೆ.

ಇದನ್ನು ಓದಿ : Video : ಪ್ರೇಯಸಿಯನ್ನು ಭೇಟಿಯಾಗಲು ಬುರ್ಖಾ ಧರಿಸಿ ಬಂದು ಸಿಕ್ಕಾಕೊಂಡ ಯುವಕ; ಮುಂದೆನಾಯ್ತು?

ಜಿಲ್ಲಾ ಮಹಿಳಾ ಮತ್ತು ಮಕ್ಕಳ‌ ಕಲ್ಯಾಣ ಇಲಾಖೆ ಅಧಿಕಾರಿಗೆ ದಿನದ 24 ಗಂಟೆ ಸಹಾಯವಾಣಿ ಕೆಲಸ ಮಾಡುತ್ತದೆಯೇ ಎಂದು ಪ್ರಶ್ನಿಸಿದರು.

ಸಹಾಯವಾಣಿ ವಿಭಾಗದಲ್ಲಿ ನಾಲ್ವರು ಕೆಲಸ ಮಾಡುತ್ತಿದ್ದಾರೆ.‌ ಅವರು ಹಗಲು ರಾತ್ರಿ ಪಾಳಯದಲ್ಲಿ ಕೆಲಸ ಮಾಡುತ್ತಾರೆ. ಸಹಾಯ ವಾಣಿಯ ದೂರವಾಣಿ 24 ಗಂಟೆ ಸಕ್ರಿಯವಾಗಿರುತ್ತೆ ಎಂದರು.

ಹೀಗಾಗಿ ಸಭೆಯಲ್ಲೇ ರಿಯಾಲಿಟಿ ಚೆಕ್​ ಮಾಡಲು ಸಹಾಯವಾಣಿಗೆ ಕರೆ ಮಾಡಿದರು.

ಕರೆ ಸ್ವೀಕರಿಸಿದ ಸಹಾಯವಾಣಿ ಕೇಂದ್ರದ ಸಿಬ್ಬಂದಿಯ ಬಳಿ ನಾನು ಶಿರಾದಿಂದ ಕಾಲ್ ಮಾಡ್ತಿದ್ದೀನಿ. ಒಂದು ಸಮಸ್ಯೆಯಿದೆ, ನನ್ನ ಅತ್ತೆ ಹೊಡೆದಿದ್ದಾರೆ ಎಂದು ಹೇಳಿದ್ದಾರೆ. ಈ ವೇಳೆ ಸಹಾಯವಾಣಿ ಸಿಬ್ಬಂದಿಯು, ಬೆಳಗ್ಗೆ ಬಂದಿದ್ದವ್ರಾ ನೀವು ಎಂದು ಕೇಳಿದ್ದಾರೆ. ಆಗ ಸಚಿವೆ, ಇಲ್ಲ ನಾನು ಈಗಷ್ಟೇ ಕಾಲ್ ಮಾಡಿದ್ದೇನೆ ಎಂದಿದ್ದಾರೆ.

ಇದನ್ನು ಓದಿ : NUHM : ರಾಷ್ಟ್ರೀಯ ನಗರ ಆರೋಗ್ಯ ಮಿಷನ್‌ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಕೊನೆಗೆ ಕರೆ ಸ್ವೀಕರಿಸಿದ ಸಿಬ್ಬಂದಿಗೆ ನಾನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಎಂದು ಪರಿಚಯ ಹೇಳಿಕೊಂಡರು. ಅಲ್ಲದೇ ಸಹಾಯವಾಣಿ ಸಕ್ರಿಯವಾಗಿದ್ದಕ್ಕೆ ಅಭಿನಂದನೆ ತಿಳಿಸಿದರು.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img