ಜನಸ್ಪಂದನ ನ್ಯೂಸ್, ಡೆಸ್ಕ್ : ಕಿಡ್ನಾಪರ್ ನನ್ನು ಹಚ್ಚಿಕೊಂಡಿದ್ದ ಮಗು ಆತನನ್ನು ಬಿಟ್ಟು ಬರಲು ಮನಸ್ಸಾಗದೆ ರಚ್ಚೆಹಿಡಿದು ಅತ್ತ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಜೈಪುರದಲ್ಲಿ 14 ತಿಂಗಳ ಹಿಂದೆ ಅಪಹರಣಕ್ಕೊಳಗಾಗಿದ್ದ ಮಗುವನ್ನು ಪೊಲೀಸರು ಪತ್ತೆ ಹಚ್ಚಿದಾಗ ಆತ ಅಪಹರಣಕಾರನನ್ನು ಬಿಡಲು ಸಿದ್ಧನಿರಲಿಲ್ಲ. ಆರೋಪಿಯನ್ನು ಅಪ್ಪಿಕೊಂಡು ಜೋರಾಗಿ ಅಳತೊಡಗಿದೆ.
ಇದನ್ನು ಓದಿ : Video : ಪ್ರೇಯಸಿಯನ್ನು ಭೇಟಿಯಾಗಲು ಬುರ್ಖಾ ಧರಿಸಿ ಬಂದು ಸಿಕ್ಕಾಕೊಂಡ ಯುವಕ; ಮುಂದೆನಾಯ್ತು?
ಅಸಲಿಗೆ ಉತ್ತರ ಪ್ರದೇಶದ ತನುಜ್ ಚಹರ್ ಅವರು ರಿಸರ್ವ್ ಪೊಲೀಸ್ ಇಲಾಖೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿ ಕೆಲಸ ಮಾಡುತ್ತಿದ್ದರು. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಅವರನ್ನು ಅಮಾನತು ಮಾಡಿದ್ದರು.
ಇದೇ ಬೇಸರದಲ್ಲಿದ್ದ ಆತ ರಾಜಸ್ಥಾನದ ಪೃಥ್ವಿ ಎಂಬ 8 ತಿಂಗಳ ಮಗುವನ್ನು ಅಪಹರಿಸಿದ್ದ. ಮಗು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬಾಲಕನೊಂದಿಗೆ ಬೇರೆ ಬೇರೆ ಕಡೆ ಹೋಗುತ್ತಿದ್ದನು.
ಇದನ್ನು ಓದಿ : ಬ್ಯೂಟಿ ಪಾರ್ಲರ್ ಬಂದ್ ಮಾಡಿಸಿ ಎಂದು ಪ್ರತಿಭಟನೆ ನಡೆಸಿದ ಯುವಕರು; ವಿಡಿಯೋ Viral.!
ಅಲ್ಲದೇ ಯಾರೂ ತನ್ನನ್ನು ಕಂಡುಹಿಡಿಯಬಾರದೆಂದು ಗಡ್ಡ ಬೆಳೆಸಿ ಗೆಟಪ್ ಚೇಂಜ್ ಮಾಡುತ್ತಿದ್ದ. ಕೊನೆಗೂ 14 ತಿಂಗಳ ಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆತನನ್ನು ಅಲಿಗಢ ಪ್ರದೇಶದಲ್ಲಿ ಪೊಲೀಸರು ಬಂಧಿಸಿ ಠಾಣೆಗೆ ಕರೆ ತಂದಿದ್ದಾರೆ.
ಈ 14 ತಿಂಗಳುಗಳಲ್ಲಿ ಮಗು ಪೃಥ್ವಿಗೆ ಕಿಡ್ನಾಪರ್ ಬಗ್ಗೆ ಒಲವು ಬೆಳೆಯಿತು. ಅಪಹರಣಕಾರನನ್ನು ಬಿಟ್ಟು ತಂದೆ- ತಾಯಿಯರ ಬಳಿ ಹೋಗುವುದಿಲ್ಲ ಎಂದು ಮಗು ಅಳಲು ತೋಡಿಕೊಂಡಿದೆ. ನೋವಿನಿಂದ ಮಗುವನ್ನು ಒಪ್ಪಿಸಲು ಮುಂದಾದಾಗ ಅಪಹರಣಕಾರನ ಕಣ್ಣಲ್ಲೂ ನೀರು ತುಂಬಿತ್ತು.
ಇದನ್ನು ಓದಿ : ಗಂಡನನ್ನು ಫಾರಿನ್ ಗೆ ಕಳುಹಿಸಿ ಮಾವನೊಂದಿಗೆ ರೊಮ್ಯಾನ್ಸ್; YouTube ನಲ್ಲಿದೆ ಈ ಮೂವಿ.!
ಒಂದೆಡೆ ಬಾಲಕ ಅಳುತ್ತಿದ್ದರೂ ಬಲವಂತವಾಗಿ ಅಪಹರಣಕಾರನಿಂದ ಬಿಡುಗಡೆಗೊಳಿಸಿ ಮಗುವನ್ನು ಪೋಷಕರಿಗೆ ಒಪ್ಪಿಸಲಾಗಿದೆ. ಪೊಲೀಸರು ಬಾಲಕನನ್ನು ಅಪಹರಿಸಿದ ಕಾರಣವನ್ನು ಬಹಿರಂಗಪಡಿಸಿದ್ದಾರೆ.
ಅಪಹರಣಕಾರ ತನುಜ್ ಬಾಲಕನ ತಾಯಿ ಪೂನಂ ಚೌಧರಿ ಅವರ ಲವ್ವರ್ ಎಂದು ವರದಿಯಾಗಿದ್ದು, ತನ್ನೊಂದಿಗೆ ಬರುವಂತೆ ಒತ್ತಾಯಿಸಿದ್ದಾನೆ. ಆದರೆ ಆಕೆ ನಿರಾಕರಿಸಿದಾಗ, ಕೋಪದಲ್ಲಿ ಪೂನಂ ಮಗುವನ್ನು ಎತ್ತಿಕೊಂಡು ಹೋಗಿದ್ದನು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
जयपुर में 14 महीने पहले अगवा हुआ बच्चा जब पुलिस को मिला तो वह किडनैपर को छोड़ने के लिए तैयार ही नहीं हुआ। वह आरोपी से लिपटकर जोर-जोर से रोने लगा। बच्चे को रोता देख किडनैपर की आंखों में भी आंसू आ गए।@INCIndia @RahulGandhi #Toney #Root #voiceofpublic #Nokia #gomblegames pic.twitter.com/nL36giStjG
— Rehan Khan (@iamrehanu) August 30, 2024