ಜನಸ್ಪಂದನ ನ್ಯೂಸ್, ಹುಬ್ಬಳ್ಳಿ : ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ರೈಲ್ವೆ ಇಲಾಖೆ ಕ್ಲರ್ಕ್ ಓರ್ವ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ.
ಕ್ಲರ್ಕ್ ನದೀಂ ಎಂಬಾತನ ವಿರುದ್ಧ ಸಂತ್ರಸ್ತೆ ದೂರು ನೀಡಿದ್ದಾರೆ. ಈತ ನೈರುತ್ಯ ರೈಲ್ವೆ ವಿಭಾಗ ಮುಖ್ಯ ಕಚೇರಿಯಲ್ಲಿ ಆರ್ಥಿಕ ವಿಭಾಗದಲ್ಲಿ ಕ್ಲರ್ಕ್ ಆಗಿದ್ದ. ನೌಕರಿ ಆಮಿಷ ತೋರಿಸಿ ಮಂಚಕ್ಕೆ ಕರೆದಿರುವುದಾಗಿ ಆರೋಪಿಸಿದ್ದಾರೆ.
ಇದನ್ನು ಓದಿ : ಅತ್ತೆ ಹೊಡೆದಿದ್ದಾರೆ ಎಂದು ಸಹಾಯವಾಣಿ ಕೇಂದ್ರಕ್ಕೆ Call ಮಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್; ಮುಂದೆನಾಯ್ತು ಗೊತ್ತಾ.?
ರೈಲ್ವೆ ಇಲಾಖೆ ನೌಕರಿ ಬೇಕು ಅಂದರೆ ಮಂಚ ಏರಬೇಕು ಎಂದು ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳ ಗೆಸ್ಟ್ ಹೌಸ್‌ಗೆ ಈ ನದೀಂ ಕರೆದಿದ್ದನಂತೆ. ವಿಚಾರ ತಿಳಿದ ಸ್ಥಳೀಯರು ನದೀಂನನ್ನು ಗೆಸ್ಟ್ ಹೌಸ್‌ನಲ್ಲಿ ಕೂಡಿಹಾಕಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಕೇಶ್ವಾಪುರ ಠಾಣೆ ಪೊಲೀಸರು ನದೀಂನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ನದೀಂ ವಿರುದ್ಧ ಕೇಶ್ವಾಪುರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ.
ಸೋಶಿಯಲ್ ಮೀಡಿಯಾದಲ್ಲಿ ನದೀಂ ರೈಲ್ವೆ ಜಾಬ್ ನೋಟಿಫಿಕೇಷನ್ ಪೇಜ್ ಕ್ರಿಯೇಟ್ ಮಾಡಿದ್ದ. ಕೆಲಸ ಅವಶ್ಯಕತೆ ಇರುವ ಹುಡುಗಿಯರು, ಮದುವೆಯಾದ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡಿ ಅಂತವರಿಗೆ ಫೇಕ್ ನೋಟಿಫಿಕೇಷನ್ ಕಳುಹಿಸುತ್ತಿದ್ದ ಎನ್ನಲಾಗಿದೆ.
ಇದನ್ನು ಓದಿ : Video : ಅಪಹರಿಸಿದವನ ಬಿಟ್ಟು ಬರಲ್ಲೊಪ್ಪದ ಮಗು : ಆತ ಕಿಡ್ನ್ಯಾಪರ್ ಅಲ್ಲ, ಹಾಗಾದ್ರೆ ಮತ್ಯಾರು.?
ಬಳಿಕ ಕೆಲಸ ಕೊಡಸ್ತಿನಿ ಅಂತಿದ್ದ. ಅಲ್ಲದೇ ನಿಮ್ಮ ಕೆಲಸ ಆಗಬೇಕಂದ್ರೆ ನಮ್ಮ ಹಿರಿಯ ಅಧಿಕಾರಿಗಳ ಜೊತೆಗೆ ಒಂದು ದಿನ ಕಳೆಯಬೇಕು ಅಂತ ಕಂಡಿಷನ್ ಹಾಕುತ್ತಿದ್ದ. ಬಳಿಕ ಇವರು ನಮ್ಮ ಆಫೀಸರ್ ಅಂತ ಫೇಕ್ ಐಡಿ ಕೊಟ್ಟು ತಾನೆ ಹುಡುಗಿಯರ ಜೊತೆ ಚಾಟ್ ಮಾಡಿ ಅವರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದನು ಎನ್ನಲಾಗಿದೆ.