Sunday, September 8, 2024
spot_img
spot_img
spot_img
spot_img
spot_img
spot_img
spot_img

ಉತ್ತರ ಪತ್ರಿಕೆ ಓದದೇ ರೀಲ್ಸ್ ಮಾಡುತ್ತ ಮಾರ್ಕ್ಸ್ ಕೊಟ್ಟ ಮೇಡಂ ; ಮುಂದೆನಾಯ್ತು Video ನೋಡಿ.

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಪ್ರತಿಭೆಗಳಿಗೆ ಅದ್ಭುತ ವೇದಿಕೆಯೆಂದರೆ (stage) ಅದು ಸಾಮಾಜಿಕ ಜಾಲತಾಣ. ಈಗಾಗಲೇ ಅದೆಷ್ಟೋ ಜನರು ನೃತ್ಯ, ನಟನೆ, ಹಾಡು ಹೀಗೆ ನಾನಾ ರೀತಿಯ ಪ್ರತಿಭೆಯ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಫಾಲೋವರ್ಸ್ ಗಳನ್ನು (followers) ಹೊಂದಿದ್ದಾರೆ.

ಆದರೆ ಇಲ್ಲೊಬ್ಬ ಶಿಕ್ಷಕಿಯ (teacher) ಉತ್ತರ ಪತ್ರಿಕೆ ಕರೆಕ್ಷನ್ ಮಾಡುವ ವೇಳೆ ರೀಲ್ಸ್ ಮಾಡಿದ್ದಾಳೆ. ಈ ವಿಡಿಯೋ ನೋಡಿದ ಮೇಲೆ ಈಕೆಗೆ ರೀಲ್ಸ್ ಹುಚ್ಚು ಎಷ್ಟಿದೆ ಎಂದು ತಿಳಿಯುತ್ತದೆ.

ಇದನ್ನು ಓದಿ : ಐಟಿಐ ಮುಗಿಸಿದ್ದಿರಾ.? ಹಾಗಾದ್ರೆ HALನಲ್ಲಿ ಒಂದು ವರ್ಷದ ಅಪ್ರೆಂಟಿಸ್​ ಹುದ್ದೆಗೆ ಸಂದರ್ಶನ.!

ಬಿಹಾರದ ಪಾಟ್ನಾ (Patna, Bihar) ಕಾಲೇಜು ಶಿಕ್ಷಕಿಯೊಬ್ಬರು ಉತ್ತರ ಪತ್ರಿಕೆಗಳನ್ನು ಪರಿಶೀಲಿಸುವ ಸಂದರ್ಭ ರೀಲ್ಸ್ ಮಾಡಿದ್ದಾರೆ.

ಶಾಲೆಯ ಬೆಂಚ್ ಮೇಲೆ ಮಹಿಳಾ ಶಿಕ್ಷಕಿ ಹಲವಾರು ಉತ್ತರ ಪತ್ರಿಕೆಗಳನ್ನು (answer sheet) ಇಟ್ಟಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆದರೆ ಕರೆಕ್ಷನ್ ಮಾಡುವುದರಲ್ಲಿ ಇರಬೇಕಾದ ಗಮನ ಮೊಬೈಲ್ ಕ್ಯಾಮೆರಾದ ಮೇಲಿದೆ. ಉಳಿದ ಶಿಕ್ಷಕರು ತಮ್ಮ ಕೆಲಸದಲ್ಲಿ ಬ್ಯುಸಿಯಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

ಸದ್ಯ ಕರ್ತವ್ಯ ನಿರ್ವಹಿಸುವುದನ್ನು ಬಿಟ್ಟು ರೀಲ್ಸ್ ನಲ್ಲಿ ಮುಳುಗಿದ ಈ ಶಿಕ್ಷಕಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಈ ವಿಡಿಯೋವನ್ನು @BiharTeacherCan ಹೆಸರಿನ X ಖಾತೆಯಿಂದ ಹಂಚಿಕೊಳ್ಳಲಾಗಿದ್ದು, ಮೂರು ಲಕ್ಷದ ಎಂಭತ್ತಮ್ಮೂರು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಅದಲ್ಲದೇ, ಶಿಕ್ಷಕಿಯ ರೀಲ್ಸ್ ಹುಚ್ಚು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿಸಿದೆ.

ಇದನ್ನು ಓದಿ : ನಿಮ್ಮ ಹಣೆಯೇ ಹೇಳುತ್ತದೆ ನಿಮ್ಮ personality ; ನಿಮ್ಮ ಹಣೆ ಹೇಗಿದೆ ಪರೀಕ್ಷಿಸಿಕೊಳ್ಳಿ.!

ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಶಿಸ್ತನ್ನು ಕಲಿಸುವ ಶಿಕ್ಷಕರೇ ಹೀಗೆ ಮಾಡಿದರೆ ಮಕ್ಕಳ ಭವಿಷ್ಯದ (future) ಗತಿಯೇನು ಎಂದು ಕೆಲವರು ಕಮೆಂಟ್ ಮಾಡಿದರೆ, ಮತ್ತೆ ಕೆಲವರು ಮಕ್ಕಳ ಪೇಪರ್ ಬ್ಯಾಕ್ ಅಪ್ ಯಾಕೆ ಆಗುತ್ತಿದೆಯೆಂದು ಈಗ ಅರ್ಥವಾಗುತ್ತಿದೆ ಎಂದಿದ್ದಾರೆ. ಇನ್ನೂ ಕೆಲವರು ಮೇಡಂ ವಧುವಿನಂತೆ ಕಂಗೊಳಿಸುತ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img