Saturday, July 27, 2024
spot_img
spot_img
spot_img
spot_img
spot_img
spot_img

ಐಟಿಐ ಮುಗಿಸಿದ್ದಿರಾ.? ಹಾಗಾದ್ರೆ HALನಲ್ಲಿ ಒಂದು ವರ್ಷದ ಅಪ್ರೆಂಟಿಸ್​ ಹುದ್ದೆಗೆ ಸಂದರ್ಶನ.!

spot_img

ಜನಸ್ಪಂದನ ನ್ಯೂಸ್‌, ಬೆಂಗಳೂರು : ಹಿಂದೂಸ್ತಾನ್​ ಏರೋನಾಟಿಕಲ್​ ಲಿಮಿಟೆಡ್​ (HAL) ನಲ್ಲಿ ಐಟಿಐ ವಿದ್ಯಾರ್ಥಿಗಳಿಗೆ ಅಪ್ರೆಂಟಿಸ್​​ಶಿಪ್​ ಟ್ರೈನಿಂಗ್​​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಂದು ವರ್ಷದ ಅವಧಿಗೆ ನೇಮಕಾತಿ ನಡೆಯಲಿದೆ. ರಾಷ್ಟ್ರೀಯ ಅಪ್ರೆಂಟಿಸ್​​ ಪ್ರೊಮೋಷನ್​ ಸ್ಕೀಮ್​ (NAPS​) ಅಡಿಯಲ್ಲಿ ಬೆಂಗಳೂರಿನಲ್ಲಿ ಈ ಹುದ್ದೆ ಭರ್ತಿ ಪ್ರಕ್ರಿಯೆ ನಡೆಯುತ್ತದೆ.

ಹುದ್ದೆ ವಿವರ :

  • ಫಿಟ್ಟರ್​​,
  • ಟರ್ನರ್​​,
  • ಮೆಕಾನಿಸ್ಟ್​​,
  • ವೆಲ್ಡರ್​,
  • ಸಿಒಎಪಿ,
  • ಫೌಂಡ್ರೆ-ಮ್ಯಾನ್​,
  • ಶೀಟ್​ ಮೆಟಲ್​ ವರ್ಕ್​,
  • ಟೂಲ್​ ಅಂಡ್​ ಡೈ ಮೇಕರ್​,
  • ಎಲೆಕ್ಟ್ರಿಷಿಯನ್​ ಅಡ್ವಾನ್ಸ್ಡ್​​
  • ಸಿಎನ್​ಸಿ ಮೆಷಿಂಗ್​ ಹುದ್ದೆಗಳಿಗೆ ನೇಮಕಾತಿ

ವಿದ್ಯಾರ್ಹತೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಐಟಿಐ/ಐಟಿಸಿ ಪದವಿಯನ್ನು ಹೊಂದಿರಬೇಕು. ಈಗಾಗಲೇ ಒಂದು ಅಥವಾ ಅದಕ್ಕಿಂತ ಹೆಚ್ಚಿನ ವರ್ಷದ ಉದ್ಯೋಗ ಅನುಭವ ಹೊಂದಿರುವವರು ಅರ್ಜಿ ಸಲ್ಲಿಕೆಗೆ ಅರ್ಹರಲ್ಲ.

ವೇತನ : ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಮಾಸಿಕ 7000-7700 ರೂ.ವರೆಗೆ ಗೌರವಧನ ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ : ಸಂದರ್ಶನದ ಮೂಲಕ ಭರ್ತಿ.

ವಾಕ್​ ಇನ್​ ಇಂಟರ್​ವ್ಯೂಗೆ ಬರುವ ಮೊದಲು ಅಭ್ಯರ್ಥಿಗಳು apprenticeshipindia.org/candidate-registration ಪೋರ್ಟಲ್​ನಲ್ಲಿ ಸ್ಟುಡೆಂಟ್​ನಲ್ಲಿ ದಾಖಲಾತಿ ಹೊಂದಿ ಈ ರಿಜಿಷ್ಟ್ರೇಷನ್​ ಕಾಪಿಯನ್ನು ಹೊಂದಿರಬೇಕು.

ಈ ಹುದ್ದೆಗಳಿಗೆ ಮೊದಲು ಬಂದವರಿಗೆ ಆದ್ಯತೆ ಅನುಸಾರ ಪ್ರಾಶಸ್ತ್ಯ ನೀಡಲಾಗುವುದು.

ನೇರ ಸಂದರ್ಶನವೂ ಜೂನ್​ 17ರಿಂದ ಜೂನ್​ 22ರ ವರೆಗೆ ಈ ಕೆಳಗಿನ ವಿಳಾಸದಲ್ಲಿ ನಡೆಯಲಿದೆ.

ಟೆಕ್ನಿಕಲ್​ ಟ್ರೈನಿಂಗ್​​ ಇನ್ಸುಟಿಟ್ಯೂಟ್​, ಸುರಂಜನ್​ ದಾಸ್​ ರಸ್ತೆ, ಬೆಂಗಳೂರು -560017

ಈ ಹುದ್ದೆ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು hal-india.co.in ಇಲ್ಲಿಗೆ ಭೇಟಿ ನೀಡಿ.

spot_img
spot_img
- Advertisment -spot_img