Friday, June 14, 2024
spot_img
spot_img
spot_img
spot_img
spot_img
spot_img

ಅಸಹ್ಯ ರೀತಿಯಲ್ಲಿ ಬಟ್ಟೆ ಧರಿಸಿ ಯುವತಿಯ ಅಶ್ಲೀಲ ಡ್ಯಾನ್ಸ್ ; Video Viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾರ್ವಜನಿಕ ಸ್ಥಳಗಳಲ್ಲಿ (public area) ರೀಲ್ಸ್‌, ಡಾನ್ಸ್‌, ಸೇರಿದಂತೆ ಅಸಭ್ಯ ವರ್ತನೆಯನ್ನು ತೋರಬಾರದು ಅಂತ ಎಚ್ಚರಿಕೆ ನೀಡಿದ್ದರೂ ಕೆಲವರು ಇನ್ನೂ ಈ ಹುಚ್ಚಾಟ ನಿಲ್ಲಿಸಿಲ್ಲ.

ಇಲ್ಲೊಬ್ಬಳು ಯುವತಿ ಕೂಡಾ ರೀಲ್ಸ್‌ ವಿಡಿಯೋ ಮಾಡುವ ನೆಪದಲ್ಲಿ ಮುಂಬೈನ CSTM ರೈಲ್ವೆ ನಿಲ್ದಾಣದ (railway station) ಹೊರ ಭಾಗದಲ್ಲಿ ಸೀರೆಯನ್ನು ಅಸಹ್ಯ ರೀತಿಯಲ್ಲಿ ಉಟ್ಟು ಅಶ್ಲೀಲ ನೃತ್ಯ ಮಾಡುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.

ಇದನ್ನು ಓದಿ : ಭಜನೆ ಮಾಡ್ತಿದ್ದ ಮಹಿಳೆಯರ ಮುಂದೆಯೇ ಅಂಡರ್‌ವೇರ್‌ನಲ್ಲೇ ಕುಳಿತ ಸಬ್ ಇನ್ಸ್‌ಪೆಕ್ಟರ್ ; Video Viral.!

ಈಕೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವನ್ನು @Mumbaikhabar9 ಎಂಬ ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಮುಂಬೈ CSTM ನಿಲ್ದಾಣದ ಹೊರಗಡೆ ಸಾರ್ವಜನಿಕವಾಗಿ ಯುವತಿಯ ಅಶ್ಲೀಲ ನೃತ್ಯ” ಎಂಬ ಶೀರ್ಷಿಕೆಯನ್ನು ನೀಡಲಾಗಿದೆ.

ಮುಂಬೈನ ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣದ ಹೊರಗೆ ಸಾರ್ವಜನಿಕರು ನೆತೆದಿದ್ದು, ಯುವತಿಯೊಬ್ಬಳು ಅವರ ಎದುರಲ್ಲಿಯೇ ಸೊಂಟ ಬಳುಕಿಸುತ್ತಾ ಅಶ್ಲೀಲವಾಗಿ ನೃತ್ಯ (Obscene dance) ಮಾಡುವಂತಹ ದೃಶ್ಯವನ್ನು ವೈರಲ್‌ ವಿಡಿಯೋದಲ್ಲಿ ನೋಡಬಹುದು.

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 46 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಇದನ್ನು ಓದಿ : ಗಾಯಗೊಂಡವರನ್ನು ಕಣ್ಣೆತ್ತಿ ನೋಡದೆ ಮದ್ಯದ ಬಾಟಲಿಗಳನ್ನು ಎತ್ತಾಕ್ಕೊಂಡು ಹೋದ ಜನ ; video viral.!

ಅಲ್ಲದೇ ಈ ಯುವತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫೇಮಸ್‌ ಆಗುವ ಸಲುವಾಗಿ ಕೆಲವರು ಈ ರೀತಿ ಕೀಳು ಮಟ್ಟಕ್ಕೆ (lower level) ಬೇಕಾದರೂ ಇಳಿಯುತ್ತಾರೆ. ಹೌದು ಕೆಲವು ಯುವಕ ಯುವತಿಯರು ರೀಲ್ಸ್‌ ನೆಪದಲ್ಲಿ ರೊಮ್ಯಾನ್ಸ್‌ ವಿಡಿಯೋ ಮಾಡುವ ಮೂಲಕ, ಅಶ್ಲೀಲ ನೃತ್ಯ ಮಾಡುವ ಮೂಲಕ ಹುಚ್ಚಾಟವನ್ನು ಮೆರೆಯುತ್ತಿರುತ್ತಾರೆ.

spot_img
spot_img
- Advertisment -spot_img