Friday, June 14, 2024
spot_img
spot_img
spot_img
spot_img
spot_img
spot_img

ಗಾಯಗೊಂಡವರನ್ನು ಕಣ್ಣೆತ್ತಿ ನೋಡದೆ ಮದ್ಯದ ಬಾಟಲಿಗಳನ್ನು ಎತ್ತಾಕ್ಕೊಂಡು ಹೋದ ಜನ ; video viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಮದ್ಯದ ಟ್ರಕ್ ಅಪಘಾತದ ನಂತರ, ಘಟನಾ ಸ್ಥಳದಲ್ಲಿದ್ದ ಜನರು ಗಾಯಗೊಂಡವರನ್ನು ಗಮನಿಸದೇ ನಾಚಿಕೆಯಿಲ್ಲದೆ ರಸ್ತೆಗೆ ಬಿದ್ದಿದ್ದ ಮದ್ಯವನ್ನು ಲೂಟಿ ಮಾಡಿದ ಆಘಾತಕಾರಿ ಘಟನೆ (shocking incident) ನಡೆದಿದೆ.

ಉತ್ತರ ಪ್ರದೇಶದ (Uttar Pradesh) ಬಿಜ್ನೋರ್’ನಲ್ಲಿ ಇಂತದ್ದೊಂದು ಅಮಾನವೀಯ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಇದನ್ನು ಓದಿ : ನೀವೂ ರೈಲ್ವೆ ಅಸಿಸ್ಟಂಟ್ ಲೋಕೋ ಪೈಲಟ್‌ ಹುದ್ದೆಗೆ ಅರ್ಜಿ ಹಾಕಿದ್ದೀರಾ.? RRB ಯಿಂದ ಮಹತ್ವದ ಸೂಚನೆ.!

ದೇಶಿ ಮತ್ತು ವಿದೇಶಿ ಮದ್ಯವನ್ನು ತುಂಬಿದ್ದ ಡಿಸಿಎಂ ಟ್ರಕ್ ನಿಯಂತ್ರಣ ಕಳೆದುಕೊಂಡು (out of control) ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಮಂಡವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ನಜೀಬಾಬಾದ್ ಹೆದ್ದಾರಿಯ (highway) ಜಟ್ಪುರ ಬೋಂಡಾ ಗ್ರಾಮದ ಬಳಿ ಮೇ 24-25 ರ ರಾತ್ರಿ 4 ಗಂಟೆಗೆ ಈ ಘಟನೆ ನಡೆದಿದೆ.

ಜನರು ಬಾಟಲಿಗಳನ್ನು ಎತ್ತಿಕೊಂಡು ಹೊರಟೊರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಹಿಡಿಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.

ಇದನ್ನು ಓದಿ : ಕೈಗಾರಿಕೆ/ವಾಣಿಜ್ಯ ಇಲಾಖೆ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಗ್ರೂಪ್‌-C ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಹೆದ್ದಾರಿಯಲ್ಲಿ ಚಲಿಸುವಾಗ ಟ್ರಕ್ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡು ಮತ್ತೊಂದು ಅಪರಿಚಿತ ವಾಹನಕ್ಕೆ (unknown vehicle) ಡಿಕ್ಕಿ ಹೊಡೆದ ನಂತರ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ.

ಹಸುವೊಂದು ಇದ್ದಕ್ಕಿದ್ದಂತೆ ವಾಹನದ ಮುಂದೆ ಬಂದಿದ್ದರಿಂದ ಅದನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿ ಚಾಲಕ ನಿಯಂತ್ರಣ ಕಳೆದುಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

spot_img
spot_img
- Advertisment -spot_img