Friday, June 14, 2024
spot_img
spot_img
spot_img
spot_img
spot_img
spot_img

Pan, ಗುಟ್ಕಾ ಮಸಾಲಾ ಮಾರಾಟ, ತಯಾರಿಕೆ ನಿಷೇಧಿಸಿದ ಸರ್ಕಾರ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಪಾನ್ ಮತ್ತು ಗುಟ್ಕಾ ಮಸಾಲಾ ನಿಷೇಧವನ್ನು ತೆಲಂಗಾಣದ ಆಹಾರ ಸುರಕ್ಷತಾ ಆಯುಕ್ತರು (Food Safety Commissioner) ಶನಿವಾರ ಪ್ರಕಟಿಸಿದ್ದಾರೆ.

ಮೇ 24, 2024 ರಿಂದ ಜಾರಿಗೆ ಬರುವಂತೆ ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ/ಪಾನ್ ಮಸಾಲಾ ತಯಾರಿಕೆ, ಸಂಗ್ರಹಣೆ, ವಿತರಣೆ, ಸಾಗಣೆ ಮತ್ತು ಮಾರಾಟವನ್ನು ನಿಷೇಧಿಸಿ (Prohibition) ಆಹಾರ ಸುರಕ್ಷತಾ ಆಯುಕ್ತರು ಅಧಿಸೂಚನೆ ಹೊರಡಿಸಿದ್ದಾರೆ.

ಇದನ್ನು ಓದಿ : ಕೈಗಾರಿಕೆ/ವಾಣಿಜ್ಯ ಇಲಾಖೆ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಗ್ರೂಪ್‌-C ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಇನ್ನೂ ರಾಜ್ಯದಲ್ಲಿ ತಂಬಾಕು ಮತ್ತು ನಿಕೋಟಿನ್ (Nicotine) ಹೊಂದಿರುವ ಗುಟ್ಕಾ ಮತ್ತು ಪಾನ್ ಮಸಾಲಾ ತಯಾರಿಕೆ, ಸಂಗ್ರಹಣೆ, ವಿತರಣೆ ಮತ್ತು ಮಾರಾಟವನ್ನು ತೆಲಂಗಾಣ ಸರ್ಕಾರವು ನಿಷೇಧಿಸಿದೆ. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಗುಟ್ಕಾ ಹಾಗೂ ಪಾನ್​ ಮಸಾಲ ಸೇವನೆಗೆ ಸಂಬಂಧಿಸಿದ ಗಂಭೀರ ಆರೋಗ್ಯ ಅಪಾಯದ (serious health hazard) ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ಉತ್ಪನ್ನಗಳು ಸಾಮಾನ್ಯವಾಗಿ ಕ್ಯಾನ್ಸರ್​, ಬಾಯಿಯ ಸಬ್​ಮ್ಯೂಕಸ್​ ಫೈಬ್ರೋಸಿಸ್ ಮತ್ತು ಇತರೆ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದೆ.

ವಾರಾಣಸಿಯಲ್ಲಿ ದಾಖಲಾಗುತ್ತಿರುವ ಶೇ 55ರಷ್ಟು ಕ್ಯಾನ್ಸರ್ ಪ್ರಕರಣಗಳಿಗೆ ಗುಟ್ಕಾ ಮತ್ತು ಪಾನ್ ಮಸಾಲಾ ಕಾರಣ ಎಂದು ವೈದ್ಯರು ಪತ್ತೆಹಚ್ಚಿದ್ದಾರೆ. ಗುಟ್ಕಾ, ಪಾನ್ ಮಸಾಲಾ ನಿಷೇಧದ ಬಗ್ಗೆ ಜನ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇವುಗಳನ್ನು ಶಾಶ್ವತವಾಗಿ (Forever) ನಿಷೇಧಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಇದಲ್ಲದೇ ತೆಲಂಗಾಣದ ಆಹಾರ ಸುರಕ್ಷತಾ ಅಧಿಕಾರಿಗಳು ಕೆಲ ದಿನಗಳ ಹಿಂದೆ ಮಾದಾಪುರ ರಾಮೇಶ್ವರಂ ಕೆಫೆ ಮತ್ತು ಹೈದರಾಬಾದ್‌ನ ಬಾಹುಬಲಿ ಕಿಚನ್‌ನಲ್ಲಿ ತಪಾಸಣೆ ನಡೆಸಿದ್ದಾರೆ.

ಕೃತುಂಗ, ಕೆಎಫ್‌ಸಿ, ರಾಮೇಶ್ವರಂ ಕೆಫೆಯಂತಹ ದೊಡ್ಡ ಹೊಟೇಲ್‌ಗಳಲ್ಲಿ ನೈರ್ಮಲ್ಯ ಕಾಪಾಡಿಲ್ಲ ಎಂಬುದನ್ನು ಸುರಕ್ಷತಾ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.

ಇದನ್ನು ಓದಿ : ತಾಳಿ ಕಟ್ಟಿದ ಬಳಿಕ ವಧುವಿಗೆ ಮುತ್ತಿಟ್ಟ ವರ : ರಣರಂಗವಾಯ್ತು ಮದುವೆ ಮಂಟಪ.!

ತಪಾಸಣೆಯ ವೇಳೆ ಅವಧಿ ಮೀರಿದ (Expired) ಅಗತ್ಯ ವಸ್ತುಗಳನ್ನು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ. ಅವಧಿ ಮೀರಿದ ಪದಾರ್ಥಗಳಿಂದ ಆಹಾರ ಪದಾರ್ಥಗಳನ್ನು ರೆಡಿ ಮಾಡುತ್ತಿರುವುದು ಸಹ ಕಂಡು ಬಂದಿದೆ.

2024ರ ಮಾರ್ಚ್ 24 ರಂದು ನಡೆದ ದಾಳಿಯಲ್ಲಿ ರಾಮೇಶ್ವರಂ ಕೆಫೆಯಲ್ಲಿ ಅವಧಿ ಮೀರಿದ 100 ಕೆಜಿ ಬೇಳೆಕಾಳುಗಳು, 10 ಕೆಜಿ ಮೊಸರು (curd) ಹಾಗೂ 8 ಲೀಟರ್ ಹಾಲು ಪತ್ತೆಯಾಗಿದ್ದು, ಅವುಗಳನ್ನು ಸ್ಥಳದಲ್ಲೇ ಕಸದ ತೊಟ್ಟಿಗಳಲ್ಲಿ ಹಾಕಲಾಗಿದೆ.

 

spot_img
spot_img
- Advertisment -spot_img