Friday, June 14, 2024
spot_img
spot_img
spot_img
spot_img
spot_img
spot_img

ನೀವೂ ರೈಲ್ವೆ ಅಸಿಸ್ಟಂಟ್ ಲೋಕೋ ಪೈಲಟ್‌ ಹುದ್ದೆಗೆ ಅರ್ಜಿ ಹಾಕಿದ್ದೀರಾ.? RRB ಯಿಂದ ಮಹತ್ವದ ಸೂಚನೆ.!

spot_img

ಜನಸ್ಪಂದನ ನ್ಯೂಸ್‌, ನೌಕರಿ : ಭಾರತೀಯ ರೈಲ್ವೆ ಸಚಿವಾಲಯವು ವಿವಿಧ ವಲಯಗಳಲ್ಲಿ ಸೇರಿದಂತೆ ಒಟ್ಟು 5696 ಅಸಿಸ್ಟಂಟ್ ಲೋಕೋ ಪೈಲಟ್ ಹುದ್ದೆಗಳ ಭರ್ತಿಗಾಗಿ ಕಳೆದ ಫೆಬ್ರುವರಿ ತಿಂಗಳಲ್ಲಿ ಅರ್ಜಿ ಸ್ವೀಕರಿಸಿತ್ತು.

ಈ ಹುದ್ದೆಗಳಿಗೆ ಅರ್ಜಿ ಹಾಕಿದವರಿಗಾಗಿ ಮಹತ್ವದ ಸೂಚನೆಯೊಂದನ್ನು ಈಗ ರೈಲ್ವೆ ಇಲಾಖೆ ಬಿಡುಗಡೆ ಮಾಡಿದೆ. ನೀವು ಅರ್ಜಿ ಹಾಕಿದ್ದಲ್ಲಿ ತಪ್ಪದೇ ಈ ಮಾಹಿತಿ ಓದಿಕೊಳ್ಳಿ.!

ಅರ್ಜಿ ತಿರಸ್ಕೃತವಾಗದಿರಲು ಸೂಕ್ತ ಪಾಸ್‌ಪೋರ್ಟ್‌ ಅಳತೆ ಭಾವಚಿತ್ರ, ಸಹಿ ಫೋಟೋ ಅಪ್‌ಲೋಡ್‌ ಮಾಡಲು ಸೂಚನೆ :

ಇದನ್ನು ಓದಿ : ಕೈಗಾರಿಕೆ/ವಾಣಿಜ್ಯ ಇಲಾಖೆ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಗ್ರೂಪ್‌-C ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ರೈಲ್ವೆ ಇಲಾಖೆಯು ಈಗಾಗಲೇ 5696 ಎಎಲ್‌ಪಿ – ಅಸಿಸ್ಟಂಟ್‌ ಲೋಕೋ ಪೈಲಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವವರ ಪೈಕಿ ಹಲವು ಅಭ್ಯರ್ಥಿಗಳಿಗೆ ಸೂಕ್ತ ಪಾಸ್‌ಪೋರ್ಟ್‌ ಅಳತೆ ಭಾವಚಿತ್ರ, ಸಹಿ ಫೋಟೋ ಅಪ್‌ಲೋಡ್‌ ಮಾಡಲು ಸೂಚಿಸಿದ್ದು, ಈ ಕುರಿತು ಸುತ್ತೋಲೆ ಹೊರಡಿಸಿದೆ.

ಯಾವ ಅಭ್ಯರ್ಥಿಗಳ ಫೋಟೋ, ಸಹಿ ಸ್ಕ್ಯಾನ್‌ ಕಾಪಿ ಸರಿಯಾದ ಅಳತೆಯಲ್ಲಿ ಅಪ್‌ಲೋಡ್‌ ಮಾಡಲಾಗಿಲ್ಲವೋ ಅವರಿಗೆ ಇ-ಮೇಲ್‌ ಹಾಗೂ ಎಸ್‌ಎಂಎಸ್‌ ಮಾಡಲಾಗುತ್ತದೆ. ಅಂತಹ ಅಭ್ಯರ್ಥಿಗಳು ನಿಮ್ಮ ಅರ್ಜಿ ತಿರಸ್ಕೃತವಾಗಬಾರದು ಎಂದರೆ ಅಧಿಸೂಚನೆಯಲ್ಲಿ ತಿಳಿಸಿರುವ ಅಳತೆಯ ಫ್ರೆಶ್‌ ಭಾವಚಿತ್ರ, ಸಹಿ ಸ್ಕ್ಯಾನ್‌ ಕಾಪಿ ಅಪ್‌ಲೋಡ್‌ ಮಾಡಬೇಕು ಎಂದಿದೆ.

ಇದಕ್ಕಾಗಿ ಅಭ್ಯರ್ಥಿಗಳಿಗೆ ಅವಕಾಶ ನೀಡಲು ಲಿಂಕ್‌ ಅನ್ನು ಆರ್‌ಆರ್‌ಬಿ ವೆಬ್‌ಸೈಟ್‌ಗಳಲ್ಲಿ ಆಕ್ಟಿವೇಟ್‌ ಮಾಡಲಾಗುತ್ತದೆ. ಹಾಗೂ ನಿಗದಿತ ಕಾಲಾವಕಾಶವನ್ನು ನೀಡಲಾಗುತ್ತದೆ. ಈ ದಿನಾಂಕಗಳ ಒಳಗಾಗಿ ತಪ್ಪದೇ ನಿಗದಿತ ಅಳತೆಯ ಅಭ್ಯರ್ಥಿ ಭಾವಚಿತ್ರ, ಸಹಿ ಫೋಟೋ ಅಪ್‌ಲೋಡ್‌ ಮಾಡಬೇಕು ಎಂದು ಆರ್‌ಆರ್‌ಬಿ ತಿಳಿಸಿದೆ.

ಇದನ್ನು ಓದಿ : Hubballi : ನೈಋತ್ಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ನೇಮಕಾತಿ.!

  1. ಅಭ್ಯರ್ಥಿಗಳು ಭಾವಚಿತ್ರ, ಸಹಿ ಫೋಟೋ ಅಪ್‌ಲೋಡ್‌ ಮಾಡಲು ಆರ್‌ಆರ್‌ಬಿ ಲಿಂಕ್ ಆಕ್ಟಿವೇಟ್‌ ಮಾಡುವ ದಿನಾಂಕ: 27-05-2024 ರಿಂದ 31-05-2024 ರ ರಾತ್ರಿ 11-59 ರವರೆಗೆ.
  2. ಕರ್ನಾಟಕದ ಅಭ್ಯರ್ಥಿಗಳು ಈ ದಾಖಲೆಗಳನ್ನು ಅಪ್‌ಲೋಡ್‌ ಮಾಡಲು ಭೇಟಿ ನೀಡಬೇಕಾದ ವೆಬ್‌ ವಿಳಾಸ : https://www.rrbbnc.gov.in
  • ಪಾಸ್‌ಪೋರ್ಟ್‌ ಅಳತೆಯ ಫೋಟೋ ಕಾಪಿ 30kp ಇಂದ 70kb ಇರಬೇಕು.
  • ಸ್ಕ್ಯಾನ್‌ ಮಾಡಿದ ಸಹಿ ಕಾಪಿ ಸಹ 30kp ಇಂದ 70kb ಡಾಟಾ ಸೈಜ್ ಇರಬೇಕು.

ಈ ಮೇಲಿನ ನಿಗದಿತ ದಿನಾಂಕದೊಳಗೆ ಫೋಟೋಗಳು ಅಪ್‌ಲೋಡ್‌ ಆಗದಿದ್ದಲ್ಲಿ, ಸ್ವಯಂಕೃತವಾಗಿ ಅಂತಹವರ ಅರ್ಜಿಗಳು ತಿರಸ್ಕೃತವಾಗಲಿವೆ. ನಂತರ ನೇಮಕಾತಿ ಮಂಡಳಿ ಇದಕ್ಕೆ ಜವಾಬ್ದಾರಿ ಆಗಿರುವುದಿಲ್ಲ.

ಅಭ್ಯರ್ಥಿಗಳು ಈ ಹುದ್ದೆಗಳ ಕುರಿತ ಯಾವುದೇ ರೀತಿಯ ಲೇಟೆಸ್ಟ್‌ ನೇಮಕಾತಿ ಮಾಹಿತಿಗಳಿಗಾಗಿ ಆರ್‌ಆರ್‌ಬಿ ಅಧಿಕೃತ ವೆಬ್‌ಸೈಟ್‌ಗಳಿಗೆ ಮಾತ್ರ ಭೇಟಿ ನೀಡಬೇಕು ಎಂದು ಆರ್‌ಆರ್‌ಬಿ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ : 9592001188, 01725653333.
ಇ-ಮೇಲ್‌ ವಿಳಾಸ : rrb.help@csc.gov.in

spot_img
spot_img
- Advertisment -spot_img