Friday, June 14, 2024
spot_img
spot_img
spot_img
spot_img
spot_img
spot_img

ಮೆಟ್ರೋದಲ್ಲಿ ಯುವತಿಯ ಅಶ್ಲೀಲ ಡ್ಯಾನ್ಸ್ : ಅಸಹ್ಯ ಪಟ್ಟ ಸಹ ಪ್ರಯಾಣಿಕರು ; video viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಮೆಟ್ರೋ ನಗರ ಪ್ರದೇಶದ (Urban area) ಪ್ರಮುಖ ಸಾರಿಗೆ ಸಂಪರ್ಕವಾಗಿದ್ದು, ಇದೀಗ ಬೇರೆ ಬೇರೆ ಕಾರಣಗಳಿಂದ ಸುದ್ದಿಯಲ್ಲಿದೆ.

ಮೆಟ್ರೋದಲ್ಲಿ ಅಸಭ್ಯ ವರ್ತನೆ, ಅಶ್ಲೀಲ ಡ್ಯಾನ್ಸ್, ರೋಮ್ಯಾನ್ಸ್, ಕಿಸ್ಸಿಂಗ್ ಘಟನೆಗಳು ಮರುಕಳಿಸುತ್ತಿವೆ. ಈ ಕುರಿತು ಮೆಟ್ರೋ ಖಡಕ್ ಎಚ್ಚರಿಕೆ (warning) ನೀಡಿದರೂ ಏನೂ ಪ್ರಯೋಜನವಾಗಿಲ್ಲ.

ಇದನ್ನು ಓದಿ : ಕೈಗಾರಿಕೆ/ವಾಣಿಜ್ಯ ಇಲಾಖೆ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಗ್ರೂಪ್‌-C ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಸದ್ಯ ಯುವತಿಯೊಬ್ಬಳು ಮೆಟ್ರೋದಲ್ಲಿ ಅಶ್ಲೀಲ ಡ್ಯಾನ್ಸ್ (Obscene dance) ಮಾಡಿದ್ದಾಳೆ. ರೀಲ್ಸ್ ವಿಡಿಯೋಗಾಗಿ ಮಾಡಿರುವ ಈ ಡ್ಯಾನ್ಸ್‌ನಿಂದ ಸಹ ಪ್ರಯಾಣಿಕರು ಮುಜುಗರಕ್ಕೀಡಾದ ಘಟನೆ ದೆಹಲಿಯಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಮೆಟ್ರೋದಲ್ಲಿ ಲೇಡಿಸ್ ಕೋಚ್ ಹತ್ತಿದ ಈ ಯುವತಿ ಪ್ರಯಾಣ ಆರಂಭಗೊಳ್ಳುತ್ತಿದ್ದಂತೆ ರೀಲ್ಸ್ ಆರಂಭಿಸಿದ್ಧಾಳೆ. ಆರಂಭದಲ್ಲಿ ಭೋಜಪುರಿ ಹಾಡಿಗೆ ಅಶ್ಲೀಲವಾಗಿ ಹೆಜ್ಜೆ ಹಾಕಿದ್ದಾಳೆ.

ಬಳಿಕ ಹಿಂದಿ ಹಾಡಿಗೆ ಹೆಜ್ಜೆ ಹಾಕಿದ್ದಾಳೆ. ಈಕೆಯ ಡ್ಯಾನ್ಸ್ ನೋಡಿದ ಸಹ ಪ್ರಯಾಣಿಕರು ಅಸಹ್ಯ ಪಟ್ಟುಕೊಂಡಿದ್ದಾರೆ. ರೀಲ್ಸ್ ಶೂಟ್ ಮಾಡಿದ ಬಳಿಕ ಯುವತಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾಳೆ.

ಯುವತಿಯ ಹುಚ್ಚಾಟಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ದೆಹಲಿ ಮೆಟ್ರೋದಲ್ಲಿ (Delhi metro) ಪ್ರಯಾಣಿಕರನ್ನು ಸ್ವಾಗತಿಸುವ ಹೊಸ ವಿಧಾನ ಎಂದು ಕೆಲವರು ವ್ಯಂಗ್ಯವಾಡಿದ್ದಾರೆ.

ಇದನ್ನು ಓದಿ : ​”ನನ್ನ ಹುಡುಗ ನನ್ನಿಂದ ದೂರ ಆಗಲಿ, IAS ಅಧಿಕಾರಿ ಜೊತೆ ಮದುವೆ ಮಾಡಿಸು” ; ಬನಶಂಕರಿದೇವಿಗೆ ಯುವತಿಯ ಮನವಿ.!

ದೆಹಲಿ ಜನತೆಗೆ ಮಾಡಿದ ಅವಮಾನ ಎಂದು ಮತ್ತೆ ಕೆಲವರು ಕಮೆಂಟ್ ಮಾಡಿದ್ದಾರೆ. ಮೆಟ್ರೋದಲ್ಲಿ ಪದೆ ಪದೇ ಈ ರೀತಿ ಘಟನೆಗಳು ಮರುಕಳಿಸುತ್ತಿದೆ.

ಇಂತಹ ಹುಚ್ಚಾಟ ನಿಯಂತ್ರಿಸಲು ಯಾವುದೇ ರೀತಿಯ ಕ್ರಮಗಳನ್ನು ಅಧಿಕಾರಿಗಳು ಕೈಗೊಂಡಿಲ್ಲವೇ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

spot_img
spot_img
- Advertisment -spot_img