Friday, June 14, 2024
spot_img
spot_img
spot_img
spot_img
spot_img
spot_img

ಭಜನೆ ಮಾಡ್ತಿದ್ದ ಮಹಿಳೆಯರ ಮುಂದೆಯೇ ಅಂಡರ್‌ವೇರ್‌ನಲ್ಲೇ ಕುಳಿತ ಸಬ್ ಇನ್ಸ್‌ಪೆಕ್ಟರ್ ; Video Viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಮಹಿಳೆಯರು ಭಜನೆ ಮಾಡುತ್ತಿದ್ದ ವೇಳೆ ಅವರ ಮುಂದೆಯೇ ಸಬ್ ಇನ್ಸ್‌ಪೆಕ್ಟರ್ (sub inspector) ಓರ್ವ ಕೇವಲ ಅಂಡರ್‌ವೇರ್ ಧರಿಸಿ ಕುಳಿತ ಘಟನೆ ನಡೆದಿದೆ.

ಉತ್ತರ ಪ್ರದೇಶ (Uttar Pradesh) ರಾಜ್ಯದ ಉನ್ನಾವೊ ಜಿಲ್ಲೆಯ ಅಚಲ್‌ಗಂಜ್‌ನಲ್ಲಿ ಘಟನೆ ನಡೆದಿದ್ದು, ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.

ಇದನ್ನು ಓದಿ : Suicide case : ರೈಲಿಗೆ ತಲೆಕೊಟ್ಟು ಹೆಡ್ ಕಾನ್ಸ್‌ಟೇಬಲ್ ಆತ್ಮಹತ್ಯೆ ; ಕಾರಣ.?

ನೆಟ್ಟಿಗರು ಆತನ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಅಲ್ಲದೇ ಪೊಲೀಸಪ್ಪನ ನಡತೆಯ (Police behavior) ಬಗ್ಗೆ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿರುವ ದೃಶ್ಯ :
ಮಹಿಳೆಯರೆಲ್ಲಾ ದೇವಸ್ಥಾನದ ಮುಂಭಾಗದಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ (prayer) ತೊಡಗಿದ್ದಾರೆ. ಬಹುತೇಕ ಎಲ್ಲ ಮಹಿಳೆಯರು ತಲೆಗೆ ಸೆರಗನ್ನು ಧರಿಸಿದ್ದಾರೆ. ಆದರೆ ಅವರ ವಿರುದ್ಧ ದಿಕ್ಕಿನಲ್ಲಿ ಕೂತಿದ್ದ ಪೊಲೀಸ್ ಬರೀ ಅಂಡರ್‌ವೇರ್‌ ಧರಿಸಿ ಚೇರೊಂದರ ಮೇಲೆ ಕುಳಿತು ಟೇಬಲ್ ಮೇಲಿದ್ದ ಏನನ್ನೋ ತಿನ್ನುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಹೀಗೆ ಬರೀ ಚಡ್ಡಿಯಲ್ಲಿ ಮಹಿಳೆಯ ಮುಂದೆ ಕುಳಿತ ವ್ಯಕ್ತಿಯನ್ನು ಸ್ಥಳೀಯ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಎಂದು ಗುರುತಿಸಲಾಗಿದೆ

ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸಪ್ಪನ ನಡತೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ನೆಟ್ಟಿಗರು ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಮೆಂಟ್ ಮಾಡುತ್ತಿದ್ದಾರೆ. ಅನೇಕರು ಉನ್ನವೋ ಪೊಲೀಸರನ್ನು ಟ್ವಿಟ್ಟರ್‌ನಲ್ಲಿ ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದನ್ನು ಓದಿ : ಗಾಯಗೊಂಡವರನ್ನು ಕಣ್ಣೆತ್ತಿ ನೋಡದೆ ಮದ್ಯದ ಬಾಟಲಿಗಳನ್ನು ಎತ್ತಾಕ್ಕೊಂಡು ಹೋದ ಜನ ; video viral.!

ಈ ಹಿನ್ನೆಲೆಯಲ್ಲಿ ಬಿಘಾಪುರದ ಸ್ಟೇಷನ್ ಅಧಿಕಾರಿಗೆ ತನಿಖೆಗೆ ಸೂಚಿಸಲಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಅರೆಬೆತ್ತಲೆ ಕುಳಿತ ಪೊಲೀಸ್ ಅಧಿಕಾರಿ, ತಾನು ಉಟ್ಟಿದ್ದ ಟವೆಲ್ ತೊಳೆದು ಹಾಕಿದ ನಂತರ ಕರೆಂಟ್ ಹೋಯ್ತು, ನಾನು ಸ್ನಾನ ಮಾಡುವ ಪ್ರದೇಶವೂ ಕೂಡ ತೆರೆದ ಪ್ರದೇಶದಲ್ಲಿ ಇದೆ ಹೀಗಾಗಿ 2 ನಿಮಿಷಗಳ ಕಾಲ ನಾನು ಅಲ್ಲಿ ಹಾಗೆ ಕುಳಿತಿದ್ದೆ. ಈ ವೇಳೆ ವಿಡಿಯೋ ಮಾಡಲಾಗಿದೆ ಎಂದು ಹೇಳಿದ್ದಾರೆ.

spot_img
spot_img
- Advertisment -spot_img