Friday, June 14, 2024
spot_img
spot_img
spot_img
spot_img
spot_img
spot_img

Suicide case : ರೈಲಿಗೆ ತಲೆಕೊಟ್ಟು ಹೆಡ್ ಕಾನ್ಸ್‌ಟೇಬಲ್ ಆತ್ಮಹತ್ಯೆ ; ಕಾರಣ.?

spot_img

ಜನಸ್ಪಂದನ ನ್ಯೂಸ್, ಹುಬ್ಬಳ್ಳಿ : ಹುಬ್ಬಳ್ಳಿ ನಗರದ ಉತ್ತರ ಸಂಚಾರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ (head constable) ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಹುಬ್ಬಳ್ಳಿಯ (Hubli) ಲಿಂಗರಾಜ ನಗರ ನಿವಾಸಿ ಹೆಡ್ ಕಾನ್ಸ್‌ಟೇಬಲ್ ನಾಗಪ್ಪ (ನಾಗರಾಜ) ಹಂಚಿನಮನಿ (45) ಆತ್ಮಹತ್ಯೆ (suicide) ಮಾಡಿಕೊಂಡಿದ್ದು, ಇವರು ಮೂಲತಃ ಹುಬ್ಬಳ್ಳಿ ತಾಲೂಕಿನ ಅರಳಿಕಟ್ಟಿ ಗ್ರಾಮದವರು ಎಂದು ತಿಳಿದು ಬಂದಿದೆ.

ಇದನ್ನು ಓದಿ : ನಿಮ್ಮ ಹಣೆಯೇ ಹೇಳುತ್ತದೆ ನಿಮ್ಮ personality ; ನಿಮ್ಮ ಹಣೆ ಹೇಗಿದೆ ಪರೀಕ್ಷಿಸಿಕೊಳ್ಳಿ.!

ಇವತು ಆಗಸ್ಟ್ 10ರಂದು ವಿದ್ಯಾನಗರ ಠಾಣೆಯಿಂದ ವರ್ಗಾವಣೆಗೊಂಡು (transfer) ಉತ್ತರ ಸಂಚಾರ ಠಾಣೆಗೆ ಹಾಜರಾಗಿದ್ದರು.

ಆದರೆ ಕಳೆದ ಎರಡು ತಿಂಗಳಿಂದ ಕರ್ತವ್ಯಕ್ಕೆ ಗೈರು ಹಾಜರಿದ್ದರು. ಆದರೆ ಅದೇನಾಯ್ತೋ ಗೊತ್ತಿಲ್ಲ, ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

ಇಲ್ಲಿನ ಉಣಕಲ್ಲ ಕ್ರಾಸ್ ಬಳಿಯ ರಾಜನಗರ ಮಾರ್ಗದ ರೈಲ್ವೆ ಮೇಲ್ಸೇತುವೆಯಲ್ಲಿ (railway flyover) ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದನ್ನು ಓದಿ : Accident : ಭೀಕರ ರಸ್ತೆ ಅಪಘಾತ ; 6 ಜನರು ಸ್ಥಳದಲ್ಲೇ ಸಾವು.!

ಮೃತರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ.

ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಹುಬ್ಬಳ್ಳಿ ರೈಲ್ವೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸದ್ಯ ರೈಲ್ವೆ ಪೊಲೀಸ್ ಠಾಣೆಯಲ್ಲಿ (railway police station) ಪ್ರಕರಣ ದಾಖಲಾಗಿದೆ.

spot_img
spot_img
- Advertisment -spot_img