Friday, June 14, 2024
spot_img
spot_img
spot_img
spot_img
spot_img
spot_img

prostitution : ಹೈಟೆಕ್ ವೇಶ್ಯಾವಾಟಿಕೆ ದಂಧೆ ; ಐವರು ಯುವತಿಯರ ರಕ್ಷಣೆ.!

spot_img

ಜನಸ್ಪಂದನ ನ್ಯೂಸ್, ಮೈಸೂರು : ಮೈಸೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ಪಾ (spa) ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು ಐವರು ಯುವತಿಯರನ್ನು ರಕ್ಷಿಸಿದ ಘಟನೆ ನಡೆದಿದೆ.

ವಿಜಯ ನಗರದಲ್ಲಿರುವ ಮಸಾಜ್ ಪಾರ್ಲರ್ ಮೇಲೆ ಪೊಲೀಸರು ದಾಳಿ ನಡೆಸಿದ್ದು, ದಾಳಿಯಲ್ಲಿ (raid) ಐವರು ಯುವತಿಯರನ್ನು ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : ನಿಮ್ಮ ಹಣೆಯೇ ಹೇಳುತ್ತದೆ ನಿಮ್ಮ personality ; ನಿಮ್ಮ ಹಣೆ ಹೇಗಿದೆ ಪರೀಕ್ಷಿಸಿಕೊಳ್ಳಿ.!

ಈ ಪೈಕಿ ಇಬ್ಬರು ಪಶ್ಚಿಮ ಬಂಗಾಳದವರಾಗಿದ್ದು, ಓರ್ವ ಹುಡುಗಿ ಮಡಿಕೇರಿ ಮೂಲದವಳು. ಇನ್ನುಳಿದ ಇಬ್ಬರು ಯುವತಿಯರು ಸ್ಥಳೀಯರು ಎಂದು ತಿಳಿದು ಬಂದಿದೆ.

ಈ ದಾಳಿಯಲ್ಲಿ ಓರ್ವ ದಂಧೆ ಕೋರ ಮಹಿಳೆ, ಒಬ್ಬ ಪಿಂಪ್ ಹಾಗೂ ಇಬ್ಬರು ಗಿರಾಕಿಗಳನ್ನು ವಶಕ್ಕೆ (custody) ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯನಗರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಪ್ರದೀಪ್ ರವರ ನೇತೃತ್ವದಲ್ಲಿ (led by) ಮಸಾಜ್ ಪಾರ್ಲರ್ ನ ಮೇಲೆ ದಾಳಿ ನಡೆಸಲಾಯಿತು.

ಇದನ್ನು ಓದಿ : ಕೈಗಾರಿಕೆ/ವಾಣಿಜ್ಯ ಇಲಾಖೆ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಗ್ರೂಪ್‌-C ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಸ್ಪಾ ಹೆಸರಿನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯು ಮಾಹಿತಿ ಕಲೆಹಾಕಿ ಸಹಾಯಕ ಪೊಲೀಸ್ ಆಯುಕ್ತರಾದ ಗಜೇಂದ್ರ ಪ್ರಸಾದ್‌ ಅವರಿಗೆ ದೂರು (complaint) ನೀಡಿತ್ತು.

ಇನ್ನೂ ದಾಳಿಯ ವೇಳೆ ಪೊಲೀಸ್ ಸಿಬ್ಬಂದಿಗಳು, ಒಡನಾಡಿ ಸಂಸ್ಥೆಯ ನಿರ್ದೇಶಕರಾದ ಸ್ಟ್ಯಾನ್ಲಿ, ಪರಶು ಹಾಗೂ ಒಡನಾಡಿ ಸಂಸ್ಥೆ ಸಿಬ್ಬಂದಿಗಳಾದ ಪ್ರದೀಪ್.ಕೆ, ಸುಮಾ, ಶಶಾಂಕ್ ಹಾಗೂ ಬಾಲುಕುಮಾರ್ ಇದ್ದರು.

spot_img
spot_img
- Advertisment -spot_img