Friday, June 14, 2024
spot_img
spot_img
spot_img
spot_img
spot_img
spot_img

Special news : ರಾತ್ರಿ ಪದೇ ಪದೇ ಮೂತ್ರ ವಿಸರ್ಜನೆ ಮಾಡ್ತೀರಾ.? ಕಾರಣವೇನು ಗೊತ್ತಾ.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಕೆಲವರಿಗೆ ಒಮ್ಮೆ ನಿದ್ರೆ ಆವರಿಸಿದರೆ ಮತ್ತೆ ಎಚ್ಚರವಾಗುವುದು ಬೆಳಗ್ಗೆಯೇ. ನಿಜವಾಗಿಯೂ ಇದು ತುಂಬಾ ಒಳ್ಳೆಯ ನಿದ್ರೆ (good sleeping) ಎಂದು ನಾವು ತಿಳಿಯುತ್ತೇವೆ. ಆದರೆ ಇನ್ನು ಕೆಲವರು ಮೂತ್ರ ವಿಸರ್ಜನೆಗೆಂದು ಪದೇ ಪದೇ ಎದ್ದೇಳುತ್ತಿರುತ್ತಾರೆ.

ಇನ್ನೂ ಅನೇಕ ಮಂದಿ ಈ ಸಮಸ್ಯೆಯಿಂದ ಬಳಲುತ್ತಿದ್ದು, ಮನೆಯಲ್ಲಿ ಕನಿಷ್ಠ ಒಬ್ಬ ವ್ಯಕ್ತಿ ಮಧುಮೇಹಕ್ಕೆ ಒಳಗಾಗಿದ್ದಾರೆ. ಶ್ವಾದ್ಯಂತ ಪ್ರತಿ ವರ್ಷ ಒಂದೂವರೆ ಮಿಲಿಯನ್ ಜನರು ಮಧುಮೇಹದಿಂದ (diabetes) ಸಾಯುತ್ತಿದ್ದಾರೆ. ನಿರ್ದಿಷ್ಟವಾಗಿ ಹೇಳುವುದಾದರೆ, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಇದು ವಿಶ್ವದ 9ನೇ ಮಾರಣಾಂತಿಕ ಕಾಯಿಲೆಯಾಗಿದೆಯಂತೆ.

ಇದನ್ನು ಓದಿ : ಐಟಿಐ ಮುಗಿಸಿದ್ದಿರಾ.? ಹಾಗಾದ್ರೆ HALನಲ್ಲಿ ಒಂದು ವರ್ಷದ ಅಪ್ರೆಂಟಿಸ್​ ಹುದ್ದೆಗೆ ಸಂದರ್ಶನ.!

ಕಾರಣಗಳು :
* ಇನ್ನೂ ರಾತ್ರಿ ಪದೇ ಪದೇ ಮೂತ್ರ ವಿಸರ್ಜಿಸುವುದನ್ನು ನೋಕ್ಟುರಿಯಾ (Nocturia) ಎಂದು ಕರೆಯುತ್ತಾರೆ. 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಈ ಸಮಸ್ಯೆ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಯಾಕೆಂದರೆ ಇದು ಕೆಲ ರೋಗಗಳ ಸಂಕೇತವಾಗಿದೆ. ಮೂತ್ರಪಿಂಡದಲ್ಲಿ ಸೋಂಕು, ಕಾಲಿನ ಕೆಳ ಭಾಗದ ಊತ, ಅತಿ ಸಕ್ರಿಯವಾದ ಮೂತ್ರಕೋಶ (Bladder), ಪ್ರಾಸ್ಟೆಸ್ ಗಡ್ಡೆಗಳು, ಮಧುಮೇಹ, ಆತಂಕ, ಅಂಗ ವೈಫಲ್ಯ, ಮೂತ್ರದ ಸೋಂಕು, ನರದ ಅಸ್ವಸ್ಥತೆ ಇದಕ್ಕೆ ಕಾರಣವಾಗಿರಬಹುದು.

ಮಾತ್ರೆಗಳ ಸೇವನೆಯು ಸಹ ನೊಕ್ಟೊರಿಯಾಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಅಧಿಕ ರಕ್ತದೊತ್ತಡ ಸಮಸ್ಯೆ ಎದುರಿಸುವ ಜನರಿಗೆ ನೀಡುವ ಮೂತ್ರವರ್ಧಕ ಮಾತ್ರೆ (Diuretic pill) ನೊಕ್ಟೊರಿಯಾ ಸಮಸ್ಯೆಗೆ ಕಾರಣವಾಗುತ್ತದೆ.

* ಜೀವನ ಶೈಲಿಯು (life style) ಸಹ ರಾತ್ರಿ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಲು ಮತ್ತೊಂದು ಕಾರಣವಾಗಿದೆ.

* ಅತಿಯಾದ ದ್ರವ ಆಹಾರ ಸೇವನೆ ಕೂಡ ಇದಕ್ಕೆ ಕಾರಣ. ಆಲ್ಕೋಹಾಲ್ ಮತ್ತು ಕೆಫೀನ್ ಹೊಂದಿರುವ ಪಾನೀಯ ಸಮಸ್ಯೆ ಹೆಚ್ಚು ಮಾಡುತ್ತದೆ. ಇದನ್ನು ಹೆಚ್ಚು ಸೇವನೆ ಮಾಡುವವರು ರಾತ್ರಿ ಹೆಚ್ಚು ಬಾರಿ ಮೂತ್ರ ವಿಸರ್ಜನೆಗೆ ಹೋಗ್ತಾರೆ. ಆಲ್ಕೋಹಾಲ್ ಹಾಗೂ ಕೆಫೀನ್ ಪಾನೀಯಗಳು ದೇಹದಲ್ಲಿ ಹೆಚ್ಚು ಮೂತ್ರ ಉತ್ಪಾದನೆ ಮಾಡಲು ಕಾರಣವಾಗುತ್ತದೆ.

ಪರಿಹಾರ :
ಬೆಳಿಗ್ಗೆ ಹೆಚ್ಚು ನೀರು ಕುಡಿಯಬೇಕು. ರಾತ್ರಿ ಮಲಗುವ 2 – 4 ಗಂಟೆ ಮುಂಚೆ ನೀರು ಕುಡಿಯುವ ಪ್ರಮಾಣವನ್ನು ಕಡಿಮೆ ಮಾಡ್ಬೇಕು.

ಕೆಲವೊಂದು ವ್ಯಾಯಾಮ ಹಾಗೂ ಯೋಗದಿಂದ (By exercise and yoga) ದೇಹದ ಸ್ನಾಯುಗಳನ್ನು ಬಲಪಡಿಸಬಹುದು.

ಅನೇಕರು ನಿದ್ರೆ ಬರದ ಕಾರಣ ಪದೇ ಪದೇ ಮೂತ್ರ ವಿಸರ್ಜನೆ ಮಾಡ್ತಿರುತ್ತಾರೆ. ನಿದ್ರೆ ಸರಿಯಾಗಿ ಬಂದ್ರೆ ಈ ಸಮಸ್ಯೆ ಕಡಿಮೆಯಾಗುತ್ತದೆ.

ಇದನ್ನು ಓದಿ : ಭಜನೆ ಮಾಡ್ತಿದ್ದ ಮಹಿಳೆಯರ ಮುಂದೆಯೇ ಅಂಡರ್‌ವೇರ್‌ನಲ್ಲೇ ಕುಳಿತ ಸಬ್ ಇನ್ಸ್‌ಪೆಕ್ಟರ್ ; Video Viral.!

ಮದ್ಯ ಮತ್ತು ಕೆಫೀನ್ ಪಾನೀಯಗಳಿಂದ ದೂರವಿರಬೇಕು.

ಧ್ಯಾನ ಮುದ್ರೆಗಳಿಂದಲೂ ಮನಸ್ಸನ್ನು ನಿಯಂತ್ರಿಸಬೇಕು.

ಮಲಗುವ ಮುನ್ನ ಮೂತ್ರ ವಿಸರ್ಜನೆ ಮಾಡಿ ಮಲಗಬೇಕು.

spot_img
spot_img
- Advertisment -spot_img