Tuesday, October 14, 2025

Janaspandhan News

HomeHealth & Fitness"Heart Blockage ನ ಆರಂಭಿಕ ಲಕ್ಷಣಗಳಿವು! ಒಂದೇ ಬದಲಾವಣೆ ಕಂಡರೂ ನಿರ್ಲಕ್ಷ್ಯ ಬೇಡ".!
spot_img
spot_img
spot_img

“Heart Blockage ನ ಆರಂಭಿಕ ಲಕ್ಷಣಗಳಿವು! ಒಂದೇ ಬದಲಾವಣೆ ಕಂಡರೂ ನಿರ್ಲಕ್ಷ್ಯ ಬೇಡ”.!

- Advertisement -

ಜನಸ್ಪಂದನ ನ್ಯೂಸ್‌, ಆರೋಗ್ಯ : ಇಂದಿನ ಯುವ ಪೀಳಿಗೆ ಆರೋಗ್ಯ ಸಮಸ್ಯೆಗಳ ಒತ್ತಡಕ್ಕೆ ಒಳಗಾಗುತ್ತಿದೆ. ಹಿಂದೆ ವಯಸ್ಸಾದವರಿಗೆ ಮಾತ್ರ ಕಂಡುಬರುವ ಹೃದಯಾಘಾತ (Heart Attack), ಮಧುಮೇಹ (Suger) ಹಾಗೂ ಅಧಿಕ ರಕ್ತದೊತ್ತಡ (BP) ದಂತಹ ಕಾಯಿಲೆಗಳು ಈಗ 30-35 ವರ್ಷದವರಲ್ಲಿಯೇ ಹೆಚ್ಚುತ್ತಿರುವುದು ವೈದ್ಯಕೀಯ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.

ವೈದ್ಯರ ಅಭಿಪ್ರಾಯದಲ್ಲಿ, ಅನಾರೋಗ್ಯಕರ ಆಹಾರ ಪದ್ಧತಿ, ಒತ್ತಡ ಹಾಗೂ ದೈಹಿಕ ಚಟುವಟಿಕೆಯ ಕೊರತೆ ಯುವಕರಲ್ಲಿ ಹೃದಯ (Heart) ಕಾಯಿಲೆಗಳ ವೇಗವಾಗಿ ಬೆಳವಣಿಗೆಗೆ ಕಾರಣವಾಗುತ್ತಿದೆ. ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ವರದಿಯ ಪ್ರಕಾರ, ಅಪಧಮನಿ ಅಡಚಣೆಯಿಂದ ಉಂಟಾಗುವ ಪ್ರಕರಣಗಳು ಯುವ ಜನಾಂಗದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ.

3.65 ಲಕ್ಷ ಅನರ್ಹ BPL Ration Card ರದ್ದು ; ನೋಟಿಸ್‌ ನೀಡಲು ಆಹಾರ ಇಲಾಖೆ ಕ್ರಮ.!
ಅಪಧಮನಿಗಳಲ್ಲಿ ಅಡಚಣೆ ಏಕೆ ಉಂಟಾಗುತ್ತದೆ?

ಅಪಧಮನಿಗಳು ಹೃದಯದಿಂದ ದೇಹದ ಇತರ ಭಾಗಗಳಿಗೆ ರಕ್ತವನ್ನು ಸಾಗಿಸುತ್ತವೆ. ಆದರೆ ಕೊಬ್ಬು, ಕೆಟ್ಟ ಕೊಲೆಸ್ಟ್ರಾಲ್ ಹಾಗೂ ಇತರ ಅಂಶಗಳು ಸೇರುವುದರಿಂದ ಪ್ಲೇಕ್ ರೂಪುಗೊಂಡು ರಕ್ತ ಹರಿವು ತಡೆಗಟ್ಟುತ್ತದೆ. ಇದರಿಂದ ಹೃದಯ (Heart) ದ ಮೇಲೆ ಒತ್ತಡ ಹೆಚ್ಚುತ್ತದೆ ಮತ್ತು ಹೃದಯಾಘಾತದ ಅಪಾಯ ಏರುತ್ತದೆ.

ಇದಕ್ಕೆ ಪ್ರಮುಖ ಕಾರಣಗಳಾಗಿ ಜಂಕ್ ಫುಡ್, ಸಂಸ್ಕರಿಸಿದ ಆಹಾರ, ಧೂಮಪಾನ, ಮದ್ಯಪಾನ, ಹೆಚ್ಚಿದ ಒತ್ತಡ, ದೀರ್ಘಕಾಲ ಕುಳಿತಿರುವ ಅಭ್ಯಾಸ ಹಾಗೂ ದೈಹಿಕ ಚಟುವಟಿಕೆಯ ಕೊರತೆ ಗುರುತಿಸಲಾಗಿದೆ. ಇದೇ ಕಾರಣದಿಂದ ಯುವಕರಲ್ಲಿ ಬೊಜ್ಜು, ಟೈಪ್-2 ಮಧುಮೇಹ ಹಾಗೂ ರಕ್ತದೊತ್ತಡದ ಸಮಸ್ಯೆಗಳು ಹೆಚ್ಚುತ್ತಿವೆ.

Lawyers : ನ್ಯಾಯಾಲಯ ಆವರಣದಲ್ಲಿಯೇ ವಕೀಲರಿಂದ ಪೊಲೀಸರ ಮೇಲೆ ಹಲ್ಲೆ ; FIR ದಾಖಲು.!
ಹೃದಯ ಕಾಯಿಲೆಯ ಆರಂಭಿಕ ಲಕ್ಷಣಗಳು :

ವೈದ್ಯರ ಪ್ರಕಾರ, ದೇಹವು ಹೃದಯ (Heart) ಸಮಸ್ಯೆಗಳ ಮೊದಲು ಕೆಲವು ಎಚ್ಚರಿಕೆ ಸೂಚನೆಗಳನ್ನು ನೀಡುತ್ತದೆ. ಅವುಗಳನ್ನು ನಿರ್ಲಕ್ಷಿಸುವುದು ಅಪಾಯಕಾರಿಯಾಗಬಹುದು.

  • ಎದೆನೋವು ಅಥವಾ ಭಾರದ ಭಾವನೆ.
  • ಸಣ್ಣ ಕೆಲಸಕ್ಕೂ ಉಸಿರಾಟದ ತೊಂದರೆ.
  • ವೇಗದ ಅಥವಾ ಅಸ್ಥಿರ ಹೃದಯ ಬಡಿತ.
  • ಆಗಾಗ್ಗೆ ತಲೆ ತಿರುಗುವುದು ಅಥವಾ ಮೂರ್ಛೆ ಹೋಗುವುದು.
  • ಹೊಟ್ಟೆ ಅಥವಾ ಎದೆಯಲ್ಲಿ ಒತ್ತಡದ ಭಾವನೆ.
“Wife on Rent” ; ಇಲ್ಲಿ ಸುಂದರ ಹೆಂಡತಿಯರು ಬಾಡಿಗೆಗೆ ಸಿಗುತ್ತಾರೆ.!
ಅಪಧಮನಿ ಅಡಚಣೆ ಪತ್ತೆ ಮಾಡುವ ವಿಧಾನಗಳು :

ಇಂದಿನ ವೈದ್ಯಕೀಯ ತಂತ್ರಜ್ಞಾನದ ಮೂಲಕ ಅಪಧಮನಿಯ ಅಡಚಣೆಯನ್ನು ಬೇಗನೆ ಪತ್ತೆ ಮಾಡಬಹುದು. ಇದಕ್ಕಾಗಿ ಇಸಿಜಿ, ಎಕೋಕಾರ್ಡಿಯೋಗ್ರಫಿ, ಟ್ರೆಡ್‌ಮಿಲ್ ಸ್ಟ್ರೆಸ್ ಟೆಸ್ಟ್, ಸಿಟಿ ಕರೋನರಿ ಆಂಜಿಯೋಗ್ರಫಿ ಹಾಗೂ ಲಿಪಿಡ್ ಪ್ರೊಫೈಲ್ ಪರೀಕ್ಷೆಗಳನ್ನು ಮಾಡಲಾಗುತ್ತದೆ.

ಹೃದಯಾಘಾತ (Heart Attack) ತಪ್ಪಿಸಲು ಏನು ಮಾಡಬೇಕು?

ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವುದೇ ಹೃದಯ (Heart) ಕಾಯಿಲೆಯಿಂದ ದೂರವಿರಲು ಮುಖ್ಯ.

  • ಪ್ರತಿದಿನ ನಿಯಮಿತ ವ್ಯಾಯಾಮ ಮಾಡಿ.
  • ತಾಜಾ ಹಣ್ಣು, ತರಕಾರಿ, ಧಾನ್ಯ ಹಾಗೂ ಪ್ರೋಟೀನ್‌ಯುಕ್ತ ಆಹಾರ ಸೇವಿಸಿ.
  • ಜಂಕ್ ಫುಡ್, ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರವನ್ನು ತಪ್ಪಿಸಿ.
  • ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ.
  • ಕೊಲೆಸ್ಟ್ರಾಲ್, ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಿ.
  • ಕಾಲಕಾಲಕ್ಕೆ ವೈದ್ಯಕೀಯ ಪರೀಕ್ಷೆ ಮಾಡಿಸಿ.
BSNL ರೂ. 199 ಪ್ರಿಪೇಯ್ಡ್ ಪ್ಲಾನ್ : ಕಡಿಮೆ ದರದಲ್ಲಿ ಹೆಚ್ಚು ಪ್ರಯೋಜನ ನೀಡುವ ಆಕರ್ಷಕ ಪ್ಯಾಕ್

ವೈದ್ಯರ ಸಲಹೆಯಂತೆ, ಸಮಯಕ್ಕೆ ಸರಿಯಾಗಿ ಎಚ್ಚರಿಕೆ ಲಕ್ಷಣಗಳನ್ನು ಗಮನಿಸಿ ಜೀವನಶೈಲಿಯಲ್ಲಿ ಬದಲಾವಣೆ ಮಾಡಿದರೆ, ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ತಪ್ಪಿಸಿಕೊಳ್ಳಬಹುದು.


ECIL : ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನಲ್ಲಿ 160 ಹುದ್ದೆಗಳ ನೇಮಕಾತಿ.!

ECIL

ಜನಸ್ಪಂದನ ನ್ಯೂಸ್‌, ನೌಕರಿ : ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗಾಗಿ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ECIL) ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ (ECIL) ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.

Lawyers : ನ್ಯಾಯಾಲಯ ಆವರಣದಲ್ಲಿಯೇ ವಕೀಲರಿಂದ ಪೊಲೀಸರ ಮೇಲೆ ಹಲ್ಲೆ ; FIR ದಾಖಲು.!
ಹುದ್ದೆಗಳ ವಿವರ :
  • ಇಲಾಖೆ ಹೆಸರು : ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ECIL).
  • ಒಟ್ಟು ಹುದ್ದೆಗಳು : 160.
  • ಹುದ್ದೆಗಳ ಹೆಸರು : ತಾಂತ್ರಿಕ ಅಧಿಕಾರಿ.
  • ಉದ್ಯೋಗ ಸ್ಥಳ : ಭಾರತದೆಲ್ಲೆಡೆ.
  • ಅರ್ಜಿಯ ವಿಧಾನ : ಆನ್‌ಲೈನ್ ಮೋಡ್.
ವೇತನದ ವಿವರ :
  • ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹25,000 ರಿಂದ ₹31,000/- ವರೆಗೆ ಸಂಬಳ ನೀಡಲಾಗುತ್ತದೆ.
ವಯೋಮಿತಿ :
  • ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು 30 ವರ್ಷ ಮೀರಿರಬಾರದು.
ಸೇತುವೆ ಕೆಳಗೆ ಚೀಲದಲ್ಲಿ ಸುತ್ತಿದ Woman ಶವ ಪತ್ತೆ ; ಶಾಕ್ ಆದ ಸ್ಥಳೀಯರು.!
ಶೈಕ್ಷಣಿಕ ಅರ್ಹತೆ :
  • ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಇ / ಬಿ.ಟೆಕ್ ಪದವಿ ಪಡೆದಿರಬೇಕು.
ECIL ಆಯ್ಕೆ ವಿಧಾನ :

ಅಭ್ಯರ್ಥಿಗಳನ್ನು ಕೆಳಗಿನ ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ:

  • ಅರ್ಹತೆ ಪಟ್ಟಿ.
  • ಅನುಭವದ ಪರಿಶೀಲನೆ.
  • ದಾಖಲೆಗಳ ಪರಿಶೀಲನೆ.
  • ವೈಯಕ್ತಿಕ ಸಂದರ್ಶನ.
ತಲಾಖ್ ಆರೋಪ : ಕೋರ್ಟ್ ಆವರಣದಲ್ಲಿಯೇ ಪತಿಗೆ ಚಪ್ಪಲಿಯಿಂದ ಹಿಗ್ಗಾಮುಗ್ಗ ಥಳಿಸಿದ Wife.!
ಅರ್ಜಿ ಸಲ್ಲಿಸುವ ವಿಧಾನ :
  1. ECIL ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  2. ನೇಮಕಾತಿ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ಹಾಗೂ ಸಂಪೂರ್ಣವಾಗಿ ಓದಿ.
  3. ಆನ್‌ಲೈನ್ ಅರ್ಜಿ ಲಿಂಕ್‌ಗೆ ಕ್ಲಿಕ್ ಮಾಡಿ.
  4. ಅಗತ್ಯ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
  5. ಅಗತ್ಯವಿದ್ದರೆ ಅರ್ಜಿ ಶುಲ್ಕವನ್ನು ಪಾವತಿಸಿ.
  6. ಪಾಸ್‌ಪೋರ್ಟ್ ಸೈಸ್ ಫೋಟೋ ಮತ್ತು ಸಹಿ ಅಪ್‌ಲೋಡ್ ಮಾಡಿ.
  7. ಅಂತಿಮವಾಗಿ ಅರ್ಜಿಯನ್ನು ಸಲ್ಲಿಸಿ ಮತ್ತು ಪ್ರಿಂಟ್‌ಔಟ್ ತೆಗೆದುಕೊಳ್ಳಿ.
ಪ್ರಮುಖ ದಿನಾಂಕಗಳು :
  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 16 ಸೆಪ್ಟೆಂಬರ್ 2025.
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 22 ಸೆಪ್ಟೆಂಬರ್ 2025.
3.65 ಲಕ್ಷ ಅನರ್ಹ BPL Ration Card ರದ್ದು ; ನೋಟಿಸ್‌ ನೀಡಲು ಆಹಾರ ಇಲಾಖೆ ಕ್ರಮ.!
ECIL ನ ಪ್ರಮುಖ ಲಿಂಕ್‌ಗಳು :
- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments