ಜನಸ್ಪಂದನ ನ್ಯೂಸ್, ಡೆಸ್ಕ್ : ಲಾವೋಸ್ (Laos) ನ ಒಂದು ಹಳ್ಳಿಯಲ್ಲಿ ವಿದೇಶಿ ಪ್ರವಾಸಿ ಮಹಿಳೆ (Lady) ಯೊಬ್ಬಳಿಗೆ ಅಚ್ಚರಿಯ ಅನುಭವ ಎದುರಾಯಿತು. ಬಿಳಿ ಚರ್ಮ ಹೊಂದಿದ್ದ ಆ ಮಹಿಳೆಯನ್ನು ಕಂಡ ಸ್ಥಳೀಯ ಮಕ್ಕಳು ಭಯದಿಂದ ಜೋರಾಗಿ ಅತ್ತಿದ್ದು, ಅಲ್ಲದೆ ಕೆಲವರು ದೂರ ಓಡಿಹೋದರು.
ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಿಳೆ (Lady) ಯು ಶಾಲೆಗೆ ಭೇಟಿ ನೀಡಿದಾಗ ಮಕ್ಕಳು ತನ್ನನ್ನು ಕಂಡ ತಕ್ಷಣ ಗಾಬರಿಗೊಂಡು ಓಡಿಹೋಗುತ್ತಿರುವುದನ್ನು ನೋಡಿ ಮೊದಲಿಗೆ ಗೊಂದಲಕ್ಕೊಳಗಾದಳು.
knife : ಡಿವೋರ್ಸ್ ಪ್ರಕರಣ ; ಕೋರ್ಟ್‌ನಲ್ಲೇ ಪತ್ನಿಗೆ ಚಾಕುವಿನಿಂದ ಇರಿದ ಪತಿ.!
ಬಳಿಕ, ತನ್ನ ಬಿಳಿ ಚರ್ಮವೇ ಇದಕ್ಕೆ ಕಾರಣವೆಂದು ಅವಳು ಅರ್ಥಮಾಡಿಕೊಂಡಳು. ಹಳ್ಳಿಗಳಿಗೆ ವಿದೇಶಿ ಪ್ರವಾಸಿಗರು ಬಹಳ ವಿರಳವಾಗಿ ಬರುತ್ತಾರೆ ಎಂಬುದನ್ನು ಮಹಿಳೆ (Lady) ಯು ವಿಡಿಯೋದಲ್ಲಿ ಸ್ಪಷ್ಟಪಡಿಸಿದ್ದಾಳೆ.
ಸಾಮಾಜಿಕ ಮಾಧ್ಯಮದಲ್ಲಿ ಈ ದೃಶ್ಯ ಜನರ ಗಮನ ಸೆಳೆದಿದೆ. ಕೆಲವರು ಹಾಸ್ಯಾತ್ಮಕವಾಗಿ ಪ್ರತಿಕ್ರಿಯಿಸಿದರೆ, ಇನ್ನು ಕೆಲವರು ಗಂಭೀರ ಚರ್ಚೆಗೆ ಇಳಿದರು. ಕೆಲವು ಸಂಸ್ಕೃತಿಗಳಲ್ಲಿ ಬಿಳಿ ಬಣ್ಣವನ್ನು ದೆವ್ವ ಅಥವಾ ದುಷ್ಟಶಕ್ತಿಗಳೊಂದಿಗೆ ಸಂಪರ್ಕಿಸುವ ನಂಬಿಕೆ ಇರುವುದರಿಂದ ಮಕ್ಕಳು ಹೆದರಿರಬಹುದು ಎಂದು ಬಳಕೆದಾರರೊಬ್ಬರು ಅಭಿಪ್ರಾಯಪಟ್ಟರು.
Warts : ಹೀಗೆ ಮಾಡಿದ್ರೆ ದೇಹದ ಮೇಲಿರುವ ನರುಳ್ಳೆ ಸುಲಭವಾಗಿ ಉದುರಿಹೋಗುತ್ತವೆ.!
ಅದೇ ವೇಳೆ, ವಿಡಿಯೋ ಹಂಚಿಕೆ ಮಾಡುವ ವಿಧಾನವನ್ನೂ ಹಲವರು ಟೀಕಿಸಿದ್ದಾರೆ. ಮಕ್ಕಳ ಪೋಷಕರ ಅನುಮತಿಯಿಲ್ಲದೆ ಅವರನ್ನು ಚಿತ್ರೀಕರಿಸಿರುವುದು ಸರಿಯಲ್ಲ ಎಂಬ ಅಭಿಪ್ರಾಯ ಹಲವು ಜನರಿಂದ ವ್ಯಕ್ತವಾಗಿದೆ. ಮಹಿಳೆ (Lady) ತನ್ನ ಅನುಭವವನ್ನು ಮಕ್ಕಳನ್ನು ಫ್ರೇಮ್‌ನಲ್ಲಿ ತೋರಿಸದೆ ಹೇಳಬಹುದಿತ್ತು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.
ಈ ಘಟನೆಯನ್ನು ನೋಡಿ ಕೆಲವರು “ಮಕ್ಕಳು ನಿಜವಾಗಿಯೂ ಭಯಗೊಂಡಿದ್ದರೆ, ಅವರ ಮೇಲೆ ನಗುವುದು ಅಥವಾ ಅವರನ್ನು ಹಿಂಬಾಲಿಸುವ ಬದಲು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕಾಗಿತ್ತು” ಎಂದು ಅಭಿಪ್ರಾಯಪಟ್ಟಿದ್ದಾರೆ.
Parlour : ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ಅಕ್ರಮ ಚಟುವಟಿಕೆ ; 4 ಜನರ ಬಂಧನ.!
ಇನ್ನೂ ಕೆಲವರು ಪಾಶ್ಚಾತ್ಯ ಸಂಸ್ಕೃತಿ ಮತ್ತು ಮಾಧ್ಯಮದ ಪ್ರಭಾವವನ್ನು ಉಲ್ಲೇಖಿಸಿ, ಮಕ್ಕಳು ಚಿತ್ರಗಳಲ್ಲೋ ಅಥವಾ ಮಾಧ್ಯಮದಲ್ಲೋ ಬಿಳಿ ಜನರನ್ನು ಕಂಡು ಭಿನ್ನ ಕಲ್ಪನೆ ಮಾಡಿಕೊಂಡಿರಬಹುದು ಎಂದೂ ಹೇಳಿದ್ದಾರೆ. ಈ ವಿಡಿಯೋ ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಮಹಿಳೆ (Lady) ಯನ್ನು ಕಂಡು ಓಡುತ್ತಿರುವ ಮಕ್ಕಳ ವಿಡಿಯೋ :
Tourist goes and visits a school in Laos who apparently have never seen a white woman before. Now they are traumatized. Nice one lady.
pic.twitter.com/XXVs424iFz— Jacob in Cambodia 🇺🇸 🇰🇭 (@jacobincambodia) September 20, 2025
Mosquito : “ಸಾಯಿಸಿದ ನಂತರ ಅಂಟಿಸಿ ನಂಬರ್ ಹಾಕುತ್ತಿರುವ ವ್ಯಕ್ತಿ ; ವಿಚಿತ್ರ ಹವ್ಯಾಸದ ವಿಡಿಯೋ ವೈರಲ್”.!
ಜನಸ್ಪಂದನ ನ್ಯೂಸ್, ಡೆಸ್ಕ್ : ಜಗತ್ತಿನಲ್ಲಿ ಜನರ ಸ್ವಭಾವ ಮತ್ತು ಹವ್ಯಾಸಗಳು ವಿಭಿನ್ನವಾಗಿರುತ್ತವೆ. ಕೆಲವರಿಗೆ ಪುಸ್ತಕ ಓದುವುದು, ಸಿನಿಮಾ ನೋಡುವುದು, ಕ್ರಾಫ್ಟ್ ಮಾಡುವುದು ಇಷ್ಟವಾಗಿದೆಯಾದರೆ, ಕೆಲವರು ರೀಲ್ಸ್ ಮಾಡುವುದು ಅಥವಾ ಸಂಗೀತದಲ್ಲಿ ತಲ್ಲೀನರಾಗುವುದು ಇಷ್ಟಪಡುತ್ತಾರೆ.
ಆದರೆ ಇತ್ತೀಚೆಗೆ ಒಬ್ಬ ವ್ಯಕ್ತಿಯ ಹವ್ಯಾಸ ಎಲ್ಲರನ್ನೂ ಆಶ್ಚರ್ಯಕ್ಕೊಳಪಡಿಸಿದೆ. ಅವನ ಹವ್ಯಾಸವೇನೆಂದರೆ, ಸಾಯಿಸಿದ ಸೊಳ್ಳೆ (Mosquito) ಗಳನ್ನು ಸಂಗ್ರಹಿಸುವುದು.!
“Heart Blockage ನ ಆರಂಭಿಕ ಲಕ್ಷಣಗಳಿವು! ಒಂದೇ ಬದಲಾವಣೆ ಕಂಡರೂ ನಿರ್ಲಕ್ಷ್ಯ ಬೇಡ”.!
ಸೊಳ್ಳೆ (Mosquito) ಗಳನ್ನು ಸಾಯಿಸಿ ಸಂಗ್ರಹಿಸುವ ಹವ್ಯಾಸ :
ಫೇಸ್‌ಬುಕ್‌ನ Bright Life ಎಂಬ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ವ್ಯಕ್ತಿಯೊಬ್ಬನು ತನ್ನನ್ನು ಕಚ್ಚಿದ ಸೊಳ್ಳೆ (Mosquito) ಗಳನ್ನು ಸಾಯಿಸಿ ಒಂದು ವಿಶೇಷ ರೀತಿಯಲ್ಲಿ ಸಂಗ್ರಹಿಸುತ್ತಿರುವುದು ಕಾಣಬಹುದು.
ಆತ ಸೊಳ್ಳೆ (Mosquito) ಯನ್ನು ಹಿಡಿದು ಡಬ್ಬಿಯೊಳಗೆ ಹಾಕಿ, ಶಾಕ್ ಟ್ರೀಟ್ಮೆಂಟ್ ನೀಡುವ ಮೂಲಕ ಸಾಯಿಸುತ್ತಾನೆ. ನಂತರ ಬಿಳಿ ಹಾಳೆಯ ಮೇಲೆ ಅಂಟಿಸಿ, ಅದರ ಸಾಯಿಸಿದ ದಿನಾಂಕ ಹಾಗೂ ಸಮಯವನ್ನು ಬರೆದು ಸಂಗ್ರಹಿಸುತ್ತಾನೆ.
“Wife on Rent” ; ಇಲ್ಲಿ ಸುಂದರ ಹೆಂಡತಿಯರು ಬಾಡಿಗೆಗೆ ಸಿಗುತ್ತಾರೆ.!
ವೈರಲ್ ವಿಡಿಯೋಗೆ ನೆಟ್ಟಿಗರ ಪ್ರತಿಕ್ರಿಯೆ :
ಈ ವಿಚಿತ್ರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಹಲವರು ವೀಕ್ಷಿಸಿ ತರಹೇವಾರಿ ಪ್ರತಿಕ್ರಿಯೆ ನೀಡಿದ್ದಾರೆ.
- ಒಬ್ಬ ಬಳಕೆದಾರ, “ಸೊಳ್ಳೆ (Mosquito) ಕೂಡ ದೇವರ ಸೃಷ್ಟಿಯೇ, ಅದು ತನ್ನ ಏಳು ದಿನಗಳ ಜೀವನದಲ್ಲಿ ಒಮ್ಮೆ ರಕ್ತ ಕುಡಿಯುವುದು ಸಹಜ. ಆದರೂ ನಾನು ದಿನಕ್ಕೆ ಕನಿಷ್ಠ 20 ಸೊಳ್ಳೆ ಹೊಡೆದು ಸಾಯಿಸುತ್ತೇನೆ” ಎಂದು ಕಾಮೆಂಟ್ ಮಾಡಿದ್ದಾರೆ.
- ಇನ್ನೊಬ್ಬರು ವ್ಯಂಗ್ಯವಾಗಿ, “ಈತನಿಗೆ ಬೇರೆ ಕೆಲಸವಿಲ್ಲವೇ? ಸೊಳ್ಳೆಗಳನ್ನು ಸಾಯಿಸಿ ಹಾಳೆಗೆ ಅಂಟಿಸಿ ಮರಣ ದಿನಾಂಕ ಬರೆಯೋದು ಒಂದು ವಿಭಿನ್ನ ಅಂತ್ಯಸಂಸ್ಕಾರದಂತೆ ಇದೆ” ಎಂದು ಬರೆದಿದ್ದಾರೆ.
- ಮತ್ತೊಬ್ಬರು, “ಇವನೊಬ್ಬ ಮಾನಸಿಕ ಸಮಸ್ಯೆಗೊಳಗಾದವನಿರಬೇಕು” ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ವಿಡಿಯೋ :
BSNL ರೂ. 199 ಪ್ರಿಪೇಯ್ಡ್ ಪ್ಲಾನ್ : ಕಡಿಮೆ ದರದಲ್ಲಿ ಹೆಚ್ಚು ಪ್ರಯೋಜನ ನೀಡುವ ಆಕರ್ಷಕ ಪ್ಯಾಕ್
ನೆಟ್ಟಿಗರ ಚರ್ಚೆಗೆ ಕಾರಣ :
ಸಾಧಾರಣವಾಗಿ ಜನರು ಹವ್ಯಾಸಗಳ ಮೂಲಕ ಮನರಂಜನೆ ಪಡೆಯುತ್ತಾರೆ. ಆದರೆ ಈ ವ್ಯಕ್ತಿಯಂತಹ ವಿಚಿತ್ರ ಹವ್ಯಾಸಗಳು ಸಾಮಾಜಿಕ ಜಾಲತಾಣದಲ್ಲಿ ಸದಾ ಕುತೂಹಲ ಹುಟ್ಟಿಸುತ್ತವೆ. ಕೆಲವರಿಗೆ ಇದು ನಗುವಿಗೆ ಕಾರಣವಾದರೆ, ಕೆಲವರಿಗೆ ಆಕ್ರೋಶಕ್ಕೂ ಕಾರಣವಾಗಿದೆ.