Sunday, September 8, 2024
spot_img
spot_img
spot_img
spot_img
spot_img
spot_img
spot_img

Special news : ರಾತ್ರಿ ಊಟದ ಬಳಿಕ ವೀಳ್ಯದೆಲೆ ತಿಂತೀರಾ.? ಹಾಗಿದ್ರೆ ಈ ಸುದ್ದಿ ಓದಿ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಊಟದ (Dinner) ನಂತರ ಕೆಲವರು ವೀಳ್ಯದೆಲೆ (Betel nut) ತಿನ್ನುತ್ತಾರೆ. ಇನ್ನು ಕೆಲವರು ಸೋಂಪು ತಿನ್ನುತ್ತಾರೆ. ಇನ್ನೂ ಸ್ವಲ್ಪ ಜನರು ಊಟದ ನಂತರ ಸಿಹಿ ಪದಾರ್ಥ ತಿನ್ನಲು ತುಂಬಾ ಇಷ್ಟ ಪಡ್ತಾರೆ.

ಹಾಗಾದ್ರೆ ಬನ್ನಿ ವೀಳ್ಯದೆಲೆ ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು.? ಅಂತ ತಿಳಿಯೋಣ.

ಇದನ್ನು ಓದಿ : Weather : ಮುಂದಿನ 48 ಗಂಟೆಗಳಲ್ಲಿ ಕರ್ನಾಟಕಕ್ಕೆ ಮುಂಗಾರು ಪ್ರವೇಶ : ಈ ಜಿಲ್ಲೆಗಳಲ್ಲಿ ಭಾರಿ ಮಳೆಗಾಳಿ ಮುನ್ಸೂಚನೆ.!

* ವೀಳ್ಯದೆಲೆಯ ಎಣ್ಣೆಯು ದಂತಕ್ಷ ಯವನ್ನು ತಡೆಯುತ್ತದೆ. ಬಾಯಿಯೊಳಗೆ ಬ್ಯಾಕ್ಟೀರಿಯಾ (Bacteria) ಬೆಳವಣಿಗೆಯನ್ನು ತಡೆದು ವಸಡು ಮತ್ತು ಹಲ್ಲನ್ನು ಸದೃಢಗೊಳಿಸುತ್ತದೆ.

ಕೆಲವು ಹನಿ ವೀಳ್ಯದೆಲೆಯ ಎಣ್ಣೆ ಬೆರೆಸಿದ ಒಂದು ಕಪ್‌ ಉಗುರು ಬೆಚ್ಚನೆಯ ನೀರಿನಲ್ಲಿ (Warm water) ಬೆಳಗ್ಗೆ ಮತ್ತು ರಾತ್ರಿ ಬಾಯಿ ಮುಕ್ಕಳಿಸಿದರೆ ಬಾಯಿಯ ದುರ್ವಾಸನೆ ಹೋಗುತ್ತದೆ.

* ವೀಳ್ಯದೆಲೆಯನ್ನು ಜಜ್ಜಿ ಹಣೆಗೆ ಲೇಪಿಸಿದರೆ (Apply) ನೋವು ಕ್ರಮೇಣ ಕಡಿಮೆಯಾಗುತ್ತದೆ.

* ಹೊಟ್ಟೆಯಲ್ಲಿ ಆಮ್ಲೀಯತೆ ಹೆಚ್ಚಿ ಕಂಡು ಬರುವ ಹೊಟ್ಟೆ ನೋವಿಗೆ ವೀಳ್ಯದೆಲೆ ಸೇವನೆ ಬೆಸ್ಟ್‌.

* ಕರ್ಮಿನೇಟಿವ್‌ ಮತ್ತು ಗ್ಯಾಸ್ಟ್ರೊಪ್ರೊಟೆಕ್ಟಿವ್‌ (Gastroprotective) ಅಂಶಗಳು ಹೆಚ್ಚಿರುವ ವೀಳ್ಯದೆಲೆ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.

* ವೀಳ್ಯದೆಲೆಯಲ್ಲಿ ನೋವನ್ನು ನಿವಾರಿಸುವ ಔಷಧೀಯ ಗುಣಗಳಿದ್ದು, ಈ ಎಲೆಯ ಜಜ್ಜಿ ಗಾಯಕ್ಕೆ ಹಚ್ಚಿದರೆ ನೋವು ಕಡಿಮೆಯಾಗುತ್ತದೆ. ವೀಳ್ಯದೆಲೆಯನ್ನು ಜಗಿದರೂ ಹೊಟ್ಟೆ ನೋವು ಇತ್ಯಾದಿಗಳು ಕಡಿಮೆಯಾಗುತ್ತದೆ.

* ಆ್ಯಂಟಿಬಯೋಟಿಕ್ಸ್‌ನ ಆಗರವಾಗಿರುವ ವೀಳ್ಯದೆಲೆ ಸತತ ಕೆಮ್ಮು ಮತ್ತು ಅದರಿಂದ ಉಂಟಾಗುವ ಉರಿಯನ್ನು ಕಡಿಮೆಗೊಳಿಸುತ್ತದೆ.

* ಪಾನ್‌ನಲ್ಲಿ ಆ್ಯಂಟಿಮೈಕ್ರೊಬಲ್‌ ಅಂಶಗಳಿದ್ದು ಇದು ಮೊಡವೆ ನಿವಾರಿಸಿ ಚರ್ಮಕ್ಕೆ ಕಾಂತಿ (Radiant skin) ನೀಡುತ್ತದೆ. ಅಲರ್ಜಿ, ಸನ್‌ಬರ್ನ್‌, ಕಜ್ಜಿ, ಕೆರೆತ, ದುರ್ಗಂಧ ಮುಂತಾದ ಚರ್ಮದ ಸಮಸ್ಯೆಗಳನ್ನು ನಿವಾರಿಸುತ್ತದೆ. ವೀಳ್ಯದೆಲೆಯ ರಸಕ್ಕೆ ಸ್ವಲ್ಪ ಅರಶಿನ ಪುಡಿ ಹಾಕಿ ಮುಖಕ್ಕೆ ಲೇಪಿಸಿದರೆ ಉತ್ತಮ ಪರಿಣಾಮ ಬೀರುತ್ತದೆ.

* ವೀಳ್ಯದೆಲೆಯಲ್ಲಿ ನಾರಿನಂಶ ಅಧಿಕವಾಗಿರುವುದರಿಂದ ಪಾನ್‌ ಸೇವನೆಯಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.

* ಯಾವುದರಲ್ಲೂ ಆಸಕ್ತಿಯಿರದೆ ಒಂದು ರೀತಿಯ ಮಂಕುತನ ಕಾಡುತ್ತಿದ್ದರೆ ವೀಳ್ಯದೆಲೆ ತಿನ್ನಿ. ಇದು ಬುದ್ಧಿಯನ್ನು ಚುರುಕುಗೊಳಿಸುತ್ತದೆ.

ಇದನ್ನು ಓದಿ : BSFನಲ್ಲಿ ಎಸ್ಐ, ಹೆಡ್‌ ಕಾನ್ಸ್‌ಟೇಬಲ್‌ ಮತ್ತು ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಒಂದು ಟೀ ಸ್ಪೂನ್‌ ವೀಳ್ಯದೆಲೆಯ ರಸಕ್ಕೆ ಸ್ವಲ್ಪ ಜೇನುತುಪ್ಪ (Honey) ಬೆರೆಸಿ ಪ್ರತಿದಿನ ಎರಡು ಬಾರಿ ಸೇವಿಸಿದರೆ ಉತ್ತಮ ಪರಿಣಾಮ ಬೀರುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img