Thursday, September 19, 2024
spot_img
spot_img
spot_img
spot_img
spot_img
spot_img
spot_img

Video : ಮೂಗಿನಲ್ಲಿರುವ ಕೂದಲು ತೆಗೆಯುತ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ದೇಹದ ಪ್ರತಿಯೊಂದು ಅಂಗವು ಅವುಗಳ ರಚನೆಯಿಂದ ಹಿಡಿದು ಅವುಗಳ ಕೆಲಸ ಕಾರ್ಯಗಳಿಗೆ ತಕ್ಕಂತೆಯೇ ನೈಸರ್ಗಿಕವಾಗಿ ರಚನೆಗೊಂಡ ಆಕಾರಗಳಾಗಿವೆ.

ಆದರೆ ಇತ್ತೀಚಿಗೆ ಕೆಲವರು ಸರ್ಜರಿಗಳ ಮೂಲಕ ಅಂಗಗಳ ರಚನೆಯನ್ನೇ ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ. ಮತ್ತೆ ಕೆಲವರು ಗೊತ್ತಿಲ್ಲದೆಯೇ ಅವುಗಳಿಗೆ ಹಾನಿ ಮಾಡಿಕೊಳ್ಳುತ್ತಿದ್ದಾರೆ.

ಅದರಲ್ಲಿ ಮುಖ್ಯವಾಗಿ ನಾವು ಮೂಗಿನ ಒಳಗೆ ಬೆಳೆಯುವ ಕೂದಲು ಕೀಳುವುದನ್ನು ಮಾಡುವುದು ಎಷ್ಟು ಅಪಾಯಕಾರಿ ಎಂಬುದು ಗೊತ್ತಾ?

ಇದನ್ನು ಓದಿ : Cable ಅಳವಡಿಕೆಗೆ ಲಕ್ಷ ಲಕ್ಷ ಲಂಚಕ್ಕೆ ಬೇಡಿಕೆ ; ಅಧಿಕಾರಿಯ ವಿರುದ್ಧ ಹರಿದಾಡಿದ ವಿಡಿಯೋ.!

ಇದು ಅನಗತ್ಯ ಕೂದಲು ಎಂದು ಭಾವಿಸಿ ಹಲವರು ಬ್ಯೂಟಿ ಪಾರ್ಲರ್ ಅಥವಾ ಮನೆಯಲ್ಲಿ ಮೂಗಿನಲ್ಲಿರುವ ಕೂದಲನ್ನು ತೆಗೆಯುವ ಕಾರ್ಯ ಮಾಡುತ್ತಾರೆ. ಆದರೆ ಇದರಿಂದ ಬಹಳಷ್ಟು ಹಾನಿ ಸಂಭವಿಸುತ್ತದೆ.

ಮೂಗಿನಿಂದ ನೇರವಾಗಿ ನಿಮ್ಮ ಶ್ವಾಸಕೋಶಕ್ಕೆ ಬ್ಯಾಕ್ಟೀರಿಯಾಗಳು ಹೋಗದಂತೆ ತಡೆಯಲು ಇವು ಸಹಕಾರಿಯಾಗಿದೆ. ಹೀಗಾಗಿ ಮೂಗಿನಲ್ಲಿರುವ ಈ ಸೂಕ್ಷ್ಮ ಕೂದಲುಗಳು ಆರೋಗ್ಯದ ದೃಷ್ಟಿಯಿಂದ ಅತ್ಯುತ್ತಮ ರಚನೆಗಳಾಗಿವೆ.

ಈಗ ಸಾಮಾಜಿಕ ಜಾಲತಾಣದಲ್ಲಿ ಮೂಗಿನ ಕೂದಲು ತೆಗೆಯುವುದರಿಂದ ಆಗುವ ಅಪಾಯವೇನು ಎಂದು ತಿಳಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನು ಓದಿ : PUC, ಪದವಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ 11,558 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.!

ಕೂದಲನ್ನು ಕೀಳುವುದರಿಂದ ಕೋಶಕದ ಸುತ್ತಲಿನ ಸೂಕ್ಷ್ಮಾಣುಗಳು ಸುಲಭವಾಗಿ ಒಳಗೆ ಪ್ರವೇಶಿಸಿ ಸೋಂಕು ಉಂಟಾಗಲು ಕಾರಣವಾಗುತ್ತದೆ. ಇದು ಮೆದುಳಿನ ಸೋಂಕುಗಳಿಗೆ ಕಾರಣವಾಗಬಹುದು.

ಮೂಗಿನಿಂದ ರಕ್ತವನ್ನು ಹೊರತೆಗೆಯುವ ಅದೇ ರಕ್ತನಾಳಗಳು ಮೆದುಳಿನಿಂದ ರಕ್ತವನ್ನು ಸಾಗಿಸುವ ರಕ್ತನಾಳಗಳನ್ನು ಸಂಧಿಸುತ್ತವೆ. ಸೂಕ್ಷ್ಮಾಣುಗಳು ಮೆದುಳಿಗೆ ಹೋದಾಗ ಉರಿಯೂತ, ತಲೆನೋವು, ಮೆದುಳಿನ ಬಾವು ಸಹ ಕಾಣಿಸಿಕೊಳ್ಳಬಹುದು.

ಕಂಟೆಂಟ್ ಕ್ರಿಯೇಟರ್ ಝಾಕ್ ಡಿ ಫಿಲ್ಮ್ಸ್ ಹಂಚಿಕೊಂಡಿರುವ ಈ ವಿಡಿಯೋ ಮೂಗಿನ ಕೂದಲು ಕೀಳುವುದರಿಂದ ದೇಹಕ್ಕಾಗುವ ಅನಾರೋಗ್ಯದ ಕುರಿತು ತಿಳಿಸಿದೆ.

ಇದನ್ನು ಓದಿ : Strange tradition : ಭಾರತದ ಈ ಸಂತೆಯಲ್ಲಿ ಹುಡುಗಿಯರು ಮತ್ತು ಮಹಿಳೆಯರ ಮಾರಾಟ.!

ಅನಿಮೇಷನ್ ವಿಡಿಯೋದಲ್ಲಿ ಮೂಗಿನ ಕೂದಲು ತೆಗೆಯುವುದರಿಂದ ಬ್ಯಾಕ್ಟೀರಿಯಾ ಹೇಗೆ ಶ್ವಾಸಕೋಶಕ್ಕೆ ಸೇರುತ್ತವೆ ಅನ್ನೋದನ್ನ ವಿವರಿಸುತ್ತಿದೆ. ಈ ರೀತಿ ಕೂದಲು ತೆಗೆಯುವುದರಿಂದ ಶ್ವಾಸಕೋಶ ಮಾತ್ರವಲ್ಲ ಬ್ಯಾಕ್ಟೀರಿಯಾಗಳು ನೇರವಾಗಿ ಮೆದುಳಿನ ಮೇಲೂ ಹಾನಿ ಮಾಡುತ್ತವೆ. ಈ ಕೂದಲುಗಳು ಫಿಲ್ಟರ್ ರೀತಿಯಲ್ಲಿ ಕೆಲಸ ಮಾಡುತ್ತವೆ. ಆದರೆ ಈ ಕೂದಲುಗಳ ತೆಗೆಯುವುದು ಹಾನಿಗೆ ಕಾರಣವಾಗುತ್ತದೆ.

ಈ ವಿಡಿಯೋ ನೋಡಿದ ಮಂದಿ ಕಮೆಂಟ್ ಮಾಡಿದ್ದಾರೆ. ಕೆಲವರು ನಾನು ನನ್ನ ಮೂಗಿನ ಕೂದಲನ್ನು ಎಂದಿಗೂ ತೆಗೆಯುವುದಿಲ್ಲ ಮತ್ತು ನನ್ನ ಮೂಗಿನ ಕೂದಲುಗಳು ಮೂಗಿನಿಂದ ಹೊರಬಂದರೆ ನಾನು ಅದನ್ನು ಕತ್ತರಿಗಳಿಂದ ಕತ್ತರಿಸುತ್ತೇನೆ ಎಂದು ಕಮೆಂಟ್ ಮಾಡಿದರೆ, ಮತ್ತೆ ಕೆಲವರು ಮುಂದೆಂದು ಮೂಗಿನ ಕೂದಲು ತೆಗೆಯುವುದಿಲ್ಲ ಎಂದಿದ್ದಾರೆ‌.

 

View this post on Instagram

 

A post shared by Zack D. Films (@zackdfilms)

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img