ಜನಸ್ಪಂದನ ನ್ಯೂಸ್, ಡೆಸ್ಕ್ : ನಾಯಿ ಹಾಗೂ ಕಾಗೆಯ ಸ್ನೇಹದ ಕುರಿತಾದ ವಿಡಿಯೋವೊಂದು ವೈರಲ್ ಆಗಿದೆ.
ಜರ್ಮನ್ ಶೆಫರ್ಡ್ ಹೆಚ್ಚಾಗಿ ಈಗ ಕಾಗೆ ಜತೆಗೆ ಸಮಯ ಕಳೆಯುತ್ತೆ ಎನ್ನುತ್ತಾರೆ ಅದನ್ನು ಸಾಕಿದ ಜೋ ಎಂಬ ಮಹಿಳೆ.
ಇದನ್ನು ಓದಿ : ಈ ಹಳ್ಳಿಯ ಪ್ರತಿಯೊಬ್ಬರ ಬಳಿ ಇದೆ ಜೆಟ್; ತರಕಾರಿ ತರಲು ಸಹ Jet ನಲ್ಲೇ ಪ್ರಯಾಣಿಸ್ತಾರೆ.!
ಜೋ ಪ್ರಕಾರ, ಕಾಗೆ ಮತ್ತು ಜರ್ಮನ್ ಶೆಫರ್ಡ್ ನಡುವೆ ಸಹೋದರರ ರೀತಿ ಪ್ರತಿವೊಂದು ವಿಚಾರಕ್ಕೆ ಪೈಪೋಟಿ ಇತ್ತಂತೆ. ಎಲ್ಲಾದರೂ ಈ ಪೆಪೆ (ಕಾಗೆ) ಆಟಿಕೆಯೊಂದಿಗೆ ಆಡುತ್ತಿದ್ದರೆ, ನಮ್ಮ ಜರ್ಮನ್ ಶೆಫರ್ಡ್ ಓಡಿ ಹೋಗಿ ಆಟಿಕೆಯ ಇನ್ನೊಂದು ತುದಿಯನ್ನು ಹಿಡಿಯುತ್ತಾನೆ. ಹಾಗೇ ಪೆಪೆ ಜತೆ ಸಖತ್ ತುಂಟಾಟ ಮಾಡುತ್ತಾನೆ ಎಂದು ಹೇಳಿಕೊಂಡಿದ್ದಾರೆ.
ಸದ್ಯ ಕಾಗೆಯೂ ಜರ್ಮನ್ ಶೆಫರ್ಡ್‌ಗೆ ಬೆಸ್ಟ್ ಫ್ರೆಂಡ್. ಮಹಿಳೆ ಜರ್ಮನ್ ಶೆಫರ್ಡ್‌ಗೆ ಆಹಾರ ಕೊಟ್ಟಾಗ ಕಾಗೆಯ ಜೊತೆ ಹಂಚಿಕೊಂಡು ತಿನ್ನುತ್ತದೆಯಂತೆ. ಇದರಿಂದಾಗಿ ಅವುಗಳ ಮಧ್ಯೆ ಬಾಂಡಿಂಗ್ ಬೆಳೆಯಿತು.
ಇದನ್ನು ಓದಿ : ಅಶ್ಲೀಲ ಕಮೆಂಟ್ ಮಾಡಿದಾತನ ಮನೆಗೆ ನುಗ್ಗಿ ಹಿಗ್ಗಾಮುಗ್ಗಾ ಥಳಿಸಿದ ಯುವತಿ; ವಿಡಿಯೋ Viral.!
ಒಟ್ಟಿಗೆ ನೀರು ಕುಡಿಯುವುದು, ವಾಕಿಂಗ್‌ಗೆ ಜತೆಗೆ ಬರುವುದು ಹೀಗೆ ಇಬ್ಬರ ಮಧ್ಯೆ ಫ್ರೆಂಡ್‌ಶಿಪ್ ತುಂಬಾ ಗಾಢವಾಗಿ ಬೆಳೆದಿದೆ. ಈ ವಿಡಿಯೋವನ್ನು ಜೋ ಇನ್‌ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇವುಗಳ ಈ ಸ್ನೇಹಕ್ಕೆ ಪ್ರಾಣಿ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದಲ್ಲದೇ ಮನುಷ್ಯರಿಗಿಂತ ಪ್ರಾಣಿಗಳೇ ಲೇಸು ಎಂದು ಕಮೆಂಟ್ ಮಾಡ್ತಿದ್ದಾರೆ.
Rescue crow goes on walks with his favorite German Shepherd — and now that he can fly he brings all of his friends to visit 🖤 pic.twitter.com/Tjkg2OhhdT
— The Dodo (@dodo) April 16, 2022