ಜನಸ್ಪಂದನ ನ್ಯೂಸ್, ಡೆಸ್ಕ್ : ಪ್ರೊಫೆಸರ್ ತನ್ನ ವಿದ್ಯಾರ್ಥಿಯೊಂದಿಗೆ ಸಖತ್ ಆಗಿ ಡ್ಯಾನ್ಸ್ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಾಲಿವುಡ್‌ನ ಖ್ಯಾತ ಯುಪಿ ವಾಲಾ ತುಮ್ಕಾ ಹಾಡಿಗೆ ಇಬ್ಬರು ಹೆಜ್ಜೆ ಹಾಕಿದ್ದು, ಈ ವಿಡಿಯೋ ಇದೀಗ ಹೊಸ ದಾಖಲೆ ಸೃಷ್ಟಿಸಿದೆ.
ಇದನ್ನು ಓದಿ : ಹೆಡ್ ಕಾನ್ಸ್‌ಟೇಬಲ್ ನಿಂದ ಮೊಬೈಲ್ ನಂಬರ್, ಟವರ್ ಲೋಕೇಶನ್ ಮಾಹಿತಿ ಸೋರಿಕೆ.!
ವೈರಲ್ ವಿಡಿಯೋದಲ್ಲಿರುವ ದೃಶ್ಯ :
ವಿದ್ಯಾರ್ಥಿಯೂ ಡ್ಯಾನ್ಸ್ ಮಾಡಬೇಕೆಂದು ವೇದಿಕೆ ಏರಿದ್ದಾನೆ. ಇತ್ತ ಕಿಕ್ಕಿರಿದು ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಎಲ್ಲರೂ ಸೇರಿದ್ದಾರೆ. ಈ ವೇಳೆ ಬಾಲಿವುಡ್ ಹಾಡು ಕೂಡ ಪ್ಲೇ ಮಾಡಲಾಗಿದೆ.
ಇನ್ನೇನು ವಿದ್ಯಾರ್ಥಿ ಹೆಜ್ಜೆ ಹಾಕಬೇಕು ಅನ್ನುವಷ್ಟರಲ್ಲೇ ಪ್ರೊಫೆಸರ್ ಅಡ್ಡಿಪಡಿಸಿದ್ದಾರೆ. ಒಂದು ನಿಮಿಷ ನಿಲ್ಲು ಎಂದು ಅನೌನ್ಸ್ ಮಾಡಿ ಪ್ರೊಫೆಸರ್ ಕೂಡ ವೇದಿಕೆ ಹತ್ತಿದ್ದಾರೆ.
ಇದನ್ನು ಓದಿ : ಬಾಯ್‌ಫ್ರೆಂಡ್ ಜೊತೆ ಓಡಿಹೋಗುತ್ತಿದ್ದ ಯುವತಿಗೆ ನೆನಪಾದ ತಂದೆ ; ಮುಂದೆನಾಯ್ತು? ಈ Video ನೋಡಿ.
ಬಾಲಿವುಡ್ ನಟ ಗೋವಿಂದ ಅವರ ಚಿತ್ರದ ಹಾಡು ಇದಾಗಿದ್ದು, ಅವರಂತೆ ಸೂಪರ್ ಡ್ಯಾನ್ಸ್ ಮಾಡಿ ಮಿಂಚಿದ್ದಾರೆ. ಇದರ ನಡುವೆ ಪ್ರೊಫೆಸರ್ ರಜನಿಕಾಂತ್ ಸ್ಟೈಲ್‌ನಲ್ಲಿ ಸನ್ ಗ್ಲಾಸ್ ಧರಿಸಿದ್ದಾರೆ. ಮತ್ತೊಂದು ವಿಶೇಷ ಅಂದರೆ ಈ ಡ್ಯಾನ್ಸ್‌ನಲ್ಲಿ ವಿದ್ಯಾರ್ಥಿ ಹಾಗೂ ಪ್ರೊಫೆಸರ್ ಇಬ್ಬರೂ ಒಂದೇ ರೀತಿ ಡ್ರೆಸ್ ಧರಿಸಿದ್ದಾರೆ. ಬ್ಲಾಕ್ ಡ್ರೆಸ್ ಮೂಲಕ ಡ್ಯಾನ್ಸ್ ಮಾಡಿ ಮಿಂಚಿದ್ದಾರೆ.
ಪ್ರೊಫೆಸರ್ ವೇದಿಕೆ ಹತ್ತುತ್ತಿದ್ದಂತೆ ವಿದ್ಯಾರ್ಥಿಗಳು ಶಿಳ್ಳೆ ಚಪ್ಪಾಳೆ ಮೂಲಕ ಹುರಿದುಂಬಿಸಿದ್ದಾರೆ. ಹಾಡು ಪ್ಲೇ ಮಾಡಲಾಗಿದೆ. ವಿದ್ಯಾರ್ಥಿ ಹಾಗೂ ಪ್ರೊಫೆಸರ್ ಇಬ್ಬರು ಒಂದೇ ರೀತಿ ಅದ್ಭುತವಾಗಿ ಹೆಜ್ಜೆ ಹಾಕಿದ್ದಾರೆ.
ಇದನ್ನು ಓದಿ : Special news : ರಾತ್ರಿ ಮಲಗುವ ಮುನ್ನ ಒಂದು ಎಸಳು ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ.?
ವಿಡಿಯೋ ಪೋಸ್ಟ್ ಮಾಡಿದ ಬೆನ್ನಲ್ಲೇ ಬರೋಬ್ಬರಿ 6 ಮಿಲಿಯನ್ ವೀಕ್ಷಣೆ ಕಂಡಿದೆ. ಇವರು ಡ್ಯಾನ್ಸ್ ಟೀಚರ್ ಇರಬೇಕು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ, ಇನ್ನೂ ಕೆಲವರು ಪ್ರೊಫೆಸರ್ ಅದ್ಬುತ ಡ್ಯಾನ್ಸ್ ಕಾರ್ಯಕ್ರಮದ ಹೈಲೈಟ್ಸ್ ಎಂದಿದ್ದಾರೆ.
View this post on Instagram