Monday, October 7, 2024
spot_img
spot_img
spot_img
spot_img
spot_img
spot_img
spot_img

ಹೆಬ್ಬಾವಿಗೆ ಮುತ್ತು ಕೊಡಲು ಹೋದ ಯುವಕ; ಮುಂದೆನಾಯ್ತು ಗೊತ್ತಾ.? Video ನೋಡಿ.

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿ ಪಕ್ಷಿಗಳ ಕುರಿತಾದ ಹತ್ತು ಹಲವು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅದರಲ್ಲಿಯೂ ಹಾವುಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸೌಂಡ್ ಮಾಡುತ್ತವೆ.

ಸದ್ಯ ಹೆಬ್ಬಾವಿನ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಯುವಕನೋರ್ವ ಹೆಬ್ಬಾವಿಗೆ ಮುತ್ತು ನೀಡಲು ಹೋಗಿ ಸಮಸ್ಯೆಗೆ ಸಿಕ್ಕಿಹಾಕಿಕೊಂಡಿದ್ದಾನೆ.

ಇದನ್ನು ಓದಿ : Belagavi : ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಮೂವರು ವಿದ್ಯಾರ್ಥಿಗಳಿಗೆ ಚಾಕು ಇರಿತ.!

ಆತ ಹೆಬ್ಬಾವಿಗೆ ಮುತ್ತು ನೀಡಲು ಹೋಗಿ ಸಂಕಷ್ಟಕ್ಕೆ ಸಿಲುಕಿ ಹಾಕಿಕೊಂಡ ವಿಡಿಯೋ ಈಗ ಸಾಮಾಜಿಕ ಜಾಲತಾಣವಾದ ಇನ್ ಸ್ಟಾ ಗ್ರಾಮ್ ನಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ಯುವಕ ಹೆಬ್ಬಾವನ್ನು ಕೈಯಲ್ಲಿ ಹಿಡಿದುಕೊಂಡಿದ್ದಾನೆ. ಬಳಿಕ ಅದಕ್ಕೆ ಮುತ್ತು ನೀಡಲು ಹೋದವನ ಬಾಯಿಯನ್ನೇ ಹಾವು ಕಚ್ಚಿದೆ. ಆತ ಎಷ್ಟೇ ಎಳೆದರೂ ಬಿಡದೇ ಕಚ್ಚಿದೆ. ಹಾವಿನಿಂದ ಬಿಡಿಸಿಕೊಳ್ಳಲು ಆತ ಪರದಾಡುತ್ತಿರುವುದನ್ನು ಕಾಣಬಹುದು.

ವ್ಯಕ್ತಿ ಹಾವಿನೊಂದಿಗೆ ರೀಲ್ಸ್ ಮಾಡಬೇಕೆಂದು ಅದನ್ನು ಕೈಯಲ್ಲಿ ಹಿಡಿದಿದ್ದಾನೆ. ಹಾವಿನ ಬಾಯಿ ಸಮೀಪ ತನ್ನ ಮುಖ ಸಮೀಪಿಸಿದ್ದಾನೆ. ಆದರೆ ಹಾವು ಏಕಾಏಕಿ ಆತನ ಮೇಲೆ ದಾಳಿ ನಡೆಸಿದೆ. ಆತನ ಬಾಯಿಯನ್ನು ತನ್ನ ಬಾಯಿಯಲ್ಲಿ ಹಿಡಿದುಕೊಂಡಿದೆ.

ಹಾವಿನಿಂದ ವ್ಯಕ್ತಿ ತನ್ನನ್ನು ತಾನು ರಕ್ಷಿಕೊಂಡನೇ ಅಥವಾ ಇಲ್ಲವೇ.? ಎಂಬುದು ವಿಡಿಯೋದಲ್ಲಿ ಕಂಡು ಬಂದಿಲ್ಲ.

ಇದನ್ನು ಓದಿ : ಈ ಹಳ್ಳಿಯ ಪ್ರತಿಯೊಬ್ಬರ ಬಳಿ ಇದೆ ಜೆಟ್; ತರಕಾರಿ ತರಲು ಸಹ Jet ನಲ್ಲೇ ಪ್ರಯಾಣಿಸ್ತಾರೆ.!

ಸದ್ಯ ಈ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವರು ಕಮೆಂಟ್ ಮಾಡಿದ್ದಾರೆ. ಪ್ರಾಣಿಗಳೊಂದಿಗೆ ಅದರಲ್ಲೂ ಮುಖ್ಯವಾಗಿ ಹಾವುಗಳೊಂದಿಗೆ ನಾವು ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ಅವುಗಳು ಅನಿರೀಕ್ಷಿತವಾಗಿ ದಾಳಿಯನ್ನು ನಡೆಸುತ್ತವೆ. ಇದರಿಂದ ಜೀವ ಹಾನಿಯಾಗುವ ಅಪಾಯವಿದೆ ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img