Monday, October 7, 2024
spot_img
spot_img
spot_img
spot_img
spot_img
spot_img
spot_img

Cable ಅಳವಡಿಕೆಗೆ ಲಕ್ಷ ಲಕ್ಷ ಲಂಚಕ್ಕೆ ಬೇಡಿಕೆ ; ಅಧಿಕಾರಿಯ ವಿರುದ್ಧ ಹರಿದಾಡಿದ ವಿಡಿಯೋ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ರಾಮನಗರ : ರಾಮನಗರ ಜಿಲ್ಲೆಯ ಹಾರೋಹಳ್ಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ವೇತಾ ಬಾಯಿ ಅವರು ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್‌ಸಿ) ಅಳವಡಿಕೆಗಾಗಿ ಗುತ್ತಿಗೆದಾರನೊಬ್ಬನಿಗೆ ₹3.50 ಲಕ್ಷಕ್ಕೆ ಬೇಡಿಕೆ ಇಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದನ್ನು ಓದಿ : PUC, ಪದವಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ 11,558 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.!

ಆನೇಕಲ್ ಮೂಲದ ಈಶಾ ಎಂಟರ್‌ಪ್ರೈಸಸ್‌ನ ಗುತ್ತಿಗೆದಾರ ವಿಶ್ವನಾಥ್, ಅದನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ. ಈತ ಕೇಬಲ್ ಅಳವಡಿಕೆಗೆ ಸಂಬಂಧಿಸಿದಂತೆ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಶ್ವೇತಾ ಅವರನ್ನು ಭೇಟಿಯಾಗಲೆಂದು ತೆರಳಿದ್ದ ವಿಡಿಯೋ ಮಾಡಿದ್ದಾನೆ.

ಪಟ್ಟಣದಲ್ಲಿ 2 ಕಿಲೋಮೀಟರ್ ರಸ್ತೆಯಲ್ಲಿ ಕೇಬಲ್ ಅಳವಡಿಕೆಗೆ ಸಹಕರಿಸುವಂತೆ ವಿಶ್ವನಾಥ್ ಕೇಳಿದ್ದಾನೆ. ಅದಕ್ಕಾಗಿ, ಬೇರೆಯವರಿಗೆ ಹಣ ಕೊಟ್ಟಿರುವುದಾಗಿ ಗುತ್ತಿಗೆದಾರ ಹೇಳುತ್ತಾನೆ. ಆಗ ಶ್ವೇತಾ ಅವರು ಕಿ.ಮೀ.ಗೆ ₹2 ಲಕ್ಷದಂತೆ ₹4 ಲಕ್ಷಕ್ಕೆ ಬೇಡಿಕೆ ಇಟ್ಟು, ಕಡೆಗೆ ₹3.50 ಲಕ್ಷಕ್ಕೆ ಒಪ್ಪಿಕೊಳ್ಳುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಇದನ್ನು ಓದಿ : ಅತ್ತೆ ಹೊಡೆದಿದ್ದಾರೆ ಎಂದು ಸಹಾಯವಾಣಿ ಕೇಂದ್ರಕ್ಕೆ Call ಮಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್; ಮುಂದೆನಾಯ್ತು ಗೊತ್ತಾ.?

ಶ್ವೇತಾ ಈ ವಿಷಯವನ್ನು ಬೇರೆ ಯಾರೊಂದಿಗೆ ಮಾತನಾಡಬಾರದು ಎಂದು ಹೇಳಿದ್ದಾರೆ. ನಂತರ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ಕೇಬಲ್ ಅಳವಡಿಕೆಯ ವಿಷಯ ತಿಳಿಸುತ್ತಾರೆ. ಕೆಲಸಕ್ಕೆ ಸಂಬಂಧಿಸಿದಂತೆ, ಏನೇ ಇದ್ದರೂ ನೋಡಿಕೊಳ್ಳುವಂತೆ ಸೂಚನೆ ನೀಡುತ್ತಾರೆ.

ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ವಿಶ್ವನಾಥ್, ಶ್ವೇತಾ ಬಾಯಿ ಅವರು ಚಂದಾಪುರ ಪಟ್ಟಣ ಪಂಚಾಯಿತಿಯಲ್ಲೂ ಮುಖ್ಯಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರು. ಅಂದಿನಿಂದಲೂ ಅವರು ಪರಿಚಯವಿದ್ದರು. ಈ ವಿಡಿಯೋ ಅವರನ್ನು ರೇಗಿಸಲು ಮಾಡಿಕೊಂಡಿದ್ದೆ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನು ಓದಿ : ಹೆಡ್ ಕಾನ್ಸ್‌ಟೇಬಲ್ ನಿಂದ ಮೊಬೈಲ್ ನಂಬರ್, ಟವರ್ ಲೋಕೇಶನ್ ಮಾಹಿತಿ ಸೋರಿಕೆ.!

ಈ ವಿಡಿಯೋ ನನ್ನ ಯೂಟ್ಯೂಬ್‌ ಚಾನೆಲ್‌ಗೂ ಅ‍ಪ್ಲೋಡ್ ಮಾಡಲಾಗಿತ್ತು. ನಂತರ, ಆ ವಿಡಿಯೋ ಡಿಲಿಟ್ ಮಾಡಿದ್ದೇನೆ. ಅದೇ ವಿಡಿಯೊ ಈಗ ವೈರಲ್ ಆಗಿದ್ದು, ವಿಡಿಯೋವನ್ನು ಕತ್ತರಿಸಿ ತೋರಿಸಲಾಗುತ್ತಿದೆ.

ವಿಡಿಯೋಗೆ ಸಂಬಂಧಿಸಿದಂತೆ, ಈಗಾಗಲೇ ಜಿಲ್ಲಾಧಿಕಾರಿ ಕಚೇರಿಗೆ ಸ್ಪಷ್ಟನೆಯ ಪತ್ರವೊಂದನ್ನು ಸಲ್ಲಿಸಿದ್ದೇನೆ. ಅವರು ವಿಚಾರಣೆಗೆ ಕರೆದರೆ ಹೋಗಿ ಸತ್ಯ ತಿಳಿಸಲು ಸಿದ್ಧನಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img