Sunday, September 8, 2024
spot_img
spot_img
spot_img
spot_img
spot_img
spot_img
spot_img

ನೀವೂ ಲಿಫ್ಟ್‌ ಡೋರ್ ಕ್ಲೋಸ್ ಆಗದಂತೆ ನಿಲ್ಲಿಸಲು ಕೈ-ಕಾಲು ಬಳಸ್ತೀರಾ.? ; ಹಾಗಿದ್ರೆ ತಪ್ಪದೇ ಈ ವಿಡಿಯೋ ನೋಡಿ.

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾನ್ಯವಾಗಿ ನಾವೂ ನೀವೂ ಲಿಫ್ಟ್ ಬಳಕೆ ಮಾಡುವುದು ಸಾಮಾನ್ಯ. ಹೀಗಾಗಿ ನಾವು ಲಿಫ್ಟ್‌ನಲ್ಲಿ ಹೋದ ನಂತರ ನಮ್ಮವರಿಗಾಗಿ ಲಿಪ್ಟ್‌ ನಿಲ್ಲಿಸಲು ಕೈ ಅಥವಾ ಕಾಲು ಅಡ್ಡ ಹಾಕಿ ಲಿಫ್ಟ್‌ ನಿಲ್ಲಿಸಲು ಮುಂದಾಗುತ್ತೇವೆ. ಆದರೆ ಅದು ಎಷ್ಟು ಸರಿ.?

ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಆಘಾತಕಾರಿ (shocking) ಹಾಗೂ ಎಚ್ಚರಿಕೆಯಿಂದ ವರ್ತಿಸಲು ತಿಳಿಸುವಂತಹ ವಿಡಿಯೋವೊಂದು ವೈರಲ್ ಆಗ್ತಿದೆ. ಅದು ನಮಗೆ ಪಾಠವಾಗಬಹುದು ನೋಡಿ ಹಾಗೂ ಮತ್ತೋಬ್ಬರಿಗೂ ತಿಳಿಸಿ.

ಇದನ್ನು ಓದಿ : Photo : ಬಿಕಿನಿಯಲ್ಲಿ ಸೋಫಿಯಾ ಅನ್ಸಾರಿ ಹಾಟ್ ಲುಕ್ ; ಹೆಚ್ಚಾಯ್ತು ಹಾರ್ಟ್‌ ಬೀಟ್..!

ವಿಡಿಯೋದಲ್ಲಿರುವುದು :

ಬಿಲ್ಡಿಂಗ್ ಒಂದರಲ್ಲಿ ವ್ಯಕ್ತಿಯೊಬ್ಬರು ಲಿಫ್ಟ್ ಡೋರ್ ಓಪನ್ (door open) ಆಗುತ್ತಿದ್ದಂತೆ ಲಿಫ್ಟ್ ಒಳಗೆ ಹೋಗ್ತಾರೆ. ಲಿಫ್ಟ್ ಒಳಗೆ ಹೋಗುತ್ತಿದ್ದಂತೆ, ಯುವತಿಯೋರ್ವಳು ಲಿಫ್ಟ್ ಏರಲು ಬರುತ್ತಿರುವುದನ್ನು ಕಂಡ ಆ ವ್ಯಕ್ತಿ ಲಿಫ್ಟ್ ನಿಲ್ಲಿಸಲು ಡೋರ್ ಮಧ್ಯೆ ಕೈ ಇಡುತ್ತಾರೆ.

ಸೆನ್ಸರ್ ಕಾರ್ಯನಿರ್ವಹಿಸದ ಹಿನ್ನೆಲೆ, ಆ ವ್ಯಕ್ತಿಯ ಕೈ ಸಮೇತ ಲಿಫ್ಟ್ ಡೋರ್ ಕ್ಲೋಸ್ ಆಗಿ ಲಿಫ್ಟ್ (lift) ಮೇಲಕ್ಕೆ ಚಲಿಸಲು ಪ್ರಾರಂಭಿಸುತ್ತದೆ. ಪರಿಣಾಮವಾಗಿ ಆ ವ್ಯಕ್ತಿಯ ಕೈ ತುಂಡಾಗಿ (hand cut) ಕೆಳಗೆ ಬೀಳುತ್ತದೆ. ಇದನ್ನು ಕಂಡ ಯುವತಿ ಆಘಾತಗೊಂಡು ಸಹಾಯಕ್ಕಾಗಿ ಕಿರಿಚಾಡುವ ದೃಶ್ಯವನ್ನು ಕಾಣಬಹುದು.

PUC ಪಾಸಾದವರಿಗೆ ವಿವಿಧ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ.!

ಈ ವಿಡಿಯೋವನ್ನು @TriShool_Achuk ಎಂಬ ಹೆಸರಿನ X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ದಯವಿಟ್ಟು ಲಿಫ್ಟ್ ಅನ್ನು ನಿಲ್ಲಿಸಲು ನಿಮ್ಮ ಕೈ ಅಥವಾ ಕಾಲನ್ನು ಡೋರ್ ಮಧ್ಯದಲ್ಲಿ ಇಡಬೇಡಿ, ಸೆನ್ಸರ್ ಕೆಲಸ ಮಾಡದಿದ್ದರೆ ದೊಡ್ಡ ಅಪಘಾತ ಸಂಭವಿಸಬಹುದು ಎಂಬ ಶೀರ್ಷಿಕೆ ನೀಡಲಾಗಿದೆ. ಇದನ್ನು

ಆರೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಯಾರಾದರೂ ಲಿಫ್ಟ್ ಮಧ್ಯೆ ಕೈಯಿಟ್ಟಾಗ ಲಿಫ್ಟ್ ಡೋರ್ ಕ್ಲೋಸ್ ಆಗೊಲ್ಲ, ಇದು ನಕಲಿ ವಿಡಿಯೋವೆಂದು (fake video) ಕೆಲವರು ಕಮೆಂಟ್ ಮಾಡಿದರೆ, ಇನ್ನೂ ಕೆಲವರು ವಿಡಿಯೋ ನಕಲಿಯಾಗಿದ್ದರೂ ಜನರಿಗೆ ಈ ತಪ್ಪುಗಳನ್ನು ಮಾಡದಂತೆ ಉತ್ತಮ ಪಾಠ ಕಲಿಸುವಂತಿದೆ ಎಂದಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img