Thursday, April 25, 2024
spot_img
spot_img
spot_img
spot_img
spot_img
spot_img

Lesbian : ಭಾರತ – ಪಾಕ್‌ ಮೂಲದ ಸಲಿಂಗ ಜೋಡಿಯ ಬ್ರೇಕಪ್ ; ಏನ್ ವಿಷ್ಯ ಗೊತ್ತಾ.?!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಭಾರತ ಹಾಗೂ ಪಾಕ್‌ ಮೂಲದವರಾದ ಸದ್ಯ ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ಸಲಿಂಗ ಪ್ರೇಮಿಗಳು ಹಾಗೂ ಪ್ರಭಾವಿ ಸೋಶಿಯಲ್‌ ಇನ್‌ಫ್ಲುಯೆನ್ಸರ್‌ಗಳಾದ ಅಂಜಲಿ ಚಕ್ರಾ (Anjali Chakra) ಮತ್ತು ಸೂಫಿ ಮಲಿಕ್ (Sufi Malik) 5 ವರ್ಷಗಳ ತಮ್ಮ ಸಾಂಗತ್ಯವನ್ನು (Marriage) ಕೊನೆಗೊಳಿಸಿದ್ದಾರೆ.

ಇಬ್ಬರೂ ಪ್ರತ್ಯೇಕ ಹೇಳಿಕೆಗಳನ್ನು ಪೋಸ್ಟ್‌ ಮಾಡಿ ತಮ್ಮ ಬ್ರೇಕಪ್‌ (breakup) ಅನ್ನು ತಿಳಿಸಿದ್ದಾರೆ.

ಈ ಕುರಿತು ಅಂಜಲಿ ಚಕ್ರಾ Instagram‌ ನಲ್ಲಿ ತಿಳಿಸಿದ್ದು, ತಾನು ಮಾಡಿರುವ ದಾಂಪತ್ಯ ದ್ರೋಹವೇ ವಿಚ್ಛೇದನಕ್ಕೆ (divorce) ಕಾರಣ, ಇದಕ್ಕೆ ತಾನು ತೀವ್ರ ವಿಷಾದ ವ್ಯಕ್ತಪಡಿಸುತ್ತೇನೆ ಹಾಗೂ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

Health : ಬೆಳಿಗ್ಗೆ ಎದ್ದ ಕೂಡಲೇ ಈ ಲಕ್ಷಣಗಳು ಕಂಡುಬರುತ್ತಿವೆಯೇ.? ಇವು ಈ ಗಂಭೀರ ಕಾಯಿಲೆಯ ಲಕ್ಷಣಗಳಾಗಿರಬಹುದು.?

ನಾನು ಅವಳಿಗೆ ಮದುವೆಗೆ ಕೆಲವು ವಾರಗಳ ಮೊದಲು ಮೋಸ, ದ್ರೋಹ ಮಾಡಿದ್ದೇನೆ. ನಾನು ಅವಳನ್ನು ಹೆಚ್ಚು ನೋಯಿಸಿದ್ದೇನೆ. ನನ್ನ ತಪ್ಪನ್ನು ನಾನು ಒಪ್ಪಿಕೊಂಡಿದ್ದೇನೆ, ಮುಂದೆಯೂ ಒಪ್ಪಿಕೊಳ್ಳುತ್ತೇನೆ. ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡು, ಅಂಜಲಿ ಮತ್ತು ಅಲ್ಲಾನಿಂದ ಕ್ಷಮೆಯನ್ನು ಕೇಳುತ್ತೇನೆ‌ ಎಂದು ಸೂಫಿ ಮಲಿಕ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಮಲಿಕ್ ಪೋಸ್ಟ್‌ನ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಆಕೆಯ ಕಡೆ ಬಹಳ ಟೀಕೆಗಳು ವ್ಯಕ್ತವಾಗಿವೆ. ಇದಕ್ಕೆ ಪ್ರತಿಕ್ರಿಯೆಯಾಗಿ ಚಕ್ರಾ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡುವಂತೆ ಜನ ಒತ್ತಾಯಿಸಿದ್ದಾರೆ. ಮಲಿಕ್ ಕಡೆಗೆ ನಕಾರಾತ್ಮಕ ಟೀಕೆ (negative comments) ಮಾಡದಂತೆ ಚಕ್ರಾ ಹೇಳಿದ್ದಾರೆ.

PUC ಪಾಸಾದವರಿಗೆ ವಿವಿಧ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ.!

ಅಂಜಲಿ ಚಕ್ರಾ ತಂದೆ ತಾಯಿಗಳು ಭಾರತ ಮೂಲದವರು. ಈಕೆ ಕೆನಡಾದ (Canada) ಒಂಟಾರಿಯೊದ ಒಟ್ಟಾವಾದಲ್ಲಿ ಜನಿಸಿ ಸ್ಯಾನ್‌ಫ್ರಾನ್ಸಿಸ್ಕೊ ​​​​ಕೊಲ್ಲಿ ಪ್ರದೇಶದಲ್ಲಿ ಬೆಳೆದವಳು.

ಇನ್ನೂ ಸೂಫಿ ಮಲಿಕ್‌ ಪಾಕಿಸ್ತಾನ ಮೂಲದವಳಾಗಿದ್ದು, ನ್ಯೂಯಾರ್ಕ್‌ನ (New York) ಬ್ರಾಂಕ್ಸ್‌ನಲ್ಲಿ ಹುಟ್ಟಿ ಬೆಳೆದವಳು. ಬ್ರೂಕ್ಲಿನ್‌ನಲ್ಲಿ ಐದು ವರ್ಷಗಳಿಂದ ಜೊತೆಯಾಗಿ ವಾಸಿಸುತ್ತಿದ್ದ ಇವರು 2024ರಲ್ಲಿ ವಿದ್ಯುಕ್ತವಾಗಿ ಮದುವೆಯಾಗಲು ನಿರ್ಧರಿಸಿದ್ದರು. ಜೋಡಿಯಾಗಿ ಇವರ ಪ್ರಕಟಣೆ ಹಾಗೂ ಫೋಟೋಶೂಟ್‌ ಸೋಶಿಯಲ್‌ ಮೀಡಿಯಾದಲ್ಲಿ ವಿವಾದಕ್ಕೆ ಕಾರಣವಾಗಿತ್ತು.

 

View this post on Instagram

 

A post shared by Anjali (@anjalichakra)

spot_img
spot_img
spot_img
- Advertisment -spot_img