Sunday, September 8, 2024
spot_img
spot_img
spot_img
spot_img
spot_img
spot_img
spot_img

ನೆಲ ಒರೆಸುವಾಗ ಹೀಗೆ ಮಾಡಿ ನೋಡಿ ಮನೆಯೊಳಗೆ mosquito ಬರೋದೇ ಇಲ್ಲ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಬೇಸಿಗೆ ಬಂತೆಂದರೆ ಸಾಕು ಸೊಳ್ಳೆಗಳ ಕಾಟ ಶುರುವಾಗುತ್ತದೆ. ಸೊಳ್ಳೆಗಳಿಂದ (Mosquito) ರೋಗಗಳ ಅಪಾಯವೂ ಹೆಚ್ಚಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಸೊಳ್ಳೆಗಳಿಂದ ನಮ್ಮನ್ನು ರಕ್ಷಿಸಿಕೊಳ್ಳುವುದು ತುಂಬಾ ಮುಖ್ಯ. ಸೊಳ್ಳೆಗಳು ಮನೆಗೆ ಬಾರದಂತೆ ನೋಡಿಕೊಳ್ಳುವುದು ಉತ್ತಮ.

ಬಹಳಷ್ಟು ಜನರು ತಮ್ಮ ಮನೆಯನ್ನು ಸ್ವಚ್ಛವಾಗಿಡಲು ನಿಯಮಿತವಾಗಿ (regular) ನೆಲವನ್ನು ಸ್ವಚ್ಛಗೊಳಿಸುತ್ತಾರೆ.

ಇದನ್ನು ಓದಿ : Health : ಶ್ವಾಸಕೋಶದ ಆರೋಗ್ಯವನ್ನು ಕಾಪಾಡುವುದು ಹೇಗೆ.?

ನೀವು ನಿಮ್ಮ ಮನೆಯನ್ನು ಒರೆಸುವಾಗ ಈ 3 ಪದಾರ್ಥಗಳನ್ನು ನೀರಿನಲ್ಲಿ ಮಿಶ್ರಣ (mix) ಮಾಡಿ. ಇದರಿಂದ ಕೀಟ, ಸೊಳ್ಳೆಗಳ ಕಾಟ ಕಡಿಮೆಯಾಗುತ್ತದೆ.

* ವಿನೆಗರ್ : ವಿನೆಗರ್ ಅನ್ನು ನೀರಿನಲ್ಲಿ ಬೆರೆಸಿ ಸಿಂಪಡಿಸಿ. ಇದರಿಂದ ಕ್ರಿಮಿ, ಕೀಟ, ಸೊಳ್ಳೆಗಳು ಮನೆಯೊಳಗೆ ಬರಲು ಸಾಧ್ಯವಾಗುವುದಿಲ್ಲ. ಇದಲ್ಲದೇ ನೆಲವೂ ಹೊಳೆಯುತ್ತದೆ (shine).

* ಎಣ್ಣೆ : ಲ್ಯಾವೆಂಡರ್ ಎಣ್ಣೆ ಅಥವಾ ಪುದೀನಾ ಎಣ್ಣೆಯಂತಹ ಸಾರಭೂತ ತೈಲಗಳನ್ನು (Essential oils) ನೀರಿನಲ್ಲಿ ಬೆರೆಸಿದರೆ, ನಿಮ್ಮ ಮನೆಯಲ್ಲಿ ಕೀಟಗಳು ಮತ್ತು ಸೊಳ್ಳೆಗಳಂತಹ ಯಾವುದೇ ತೊಂದರೆಗಳು ಇರುವುದಿಲ್ಲ. ಜೊತೆಗೆ ಮನೆಯ ನೆಲವೂ ಸ್ವಚ್ಛವಾಗಿರುತ್ತದೆ.

ಇದನ್ನು ಓದಿ : Health : ಬೆಲ್ಲ ಮತ್ತು ಕಡಲೆಬೇಳೆ ಒಟ್ಟಿಗೆ ತಿನ್ನುವುದರಿಂದ ಆಗುವ ಪ್ರಯೋಜನಗಳು.!

* ದಾಲ್ಚಿನ್ನಿ : ಬೇಸಿಗೆಯಲ್ಲಿ ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ಮೊದಲು ದಾಲ್ಚಿನ್ನಿಯನ್ನು (Cinnamon) ನೀರಿನಲ್ಲಿ ಕುದಿಸಬೇಕು. ನಂತರ ಆ ನೀರಿನಿಂದ ಮನೆಯನ್ನು ಒರೆಸಿ.

ಬಿಸಿ ನೀರಿನಿಂದ ಮನೆಯನ್ನು ಶುಚಿಗೊಳಿಸುವುದರಿಂದ ನೆಲದ ಕೊಳೆ (dirt) ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ. ಮನೆಯಲ್ಲಿ ನೊಣ, ಸೊಳ್ಳೆಗಳ ಕಾಟವೂ ಕಡಿಮೆಯಾಗುತ್ತದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img