Wednesday, May 22, 2024
spot_img
spot_img
spot_img
spot_img
spot_img
spot_img

Belagavi : ಸಹೋದರಿಯೊಂದಿಗೆ ಲವ್ವಿಡವ್ವಿಯಲ್ಲಿ ತೊಡಗಿದ್ದವನ ಬರ್ಬರ ಹತ್ಯೆ.!

spot_img

ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿಯ (Belagavi) ಮಹಾಂತೇಶ ನಗರದ ಬ್ರಿಡ್ಜ್ ಸಮೀಪ ಹಾಡಹಗಲೇ ಸ್ಕ್ರೂಡ್ರೈವರ್‌ನಿಂದ ಯುವಕನಿಗೆ ಚುಚ್ಚಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.

ಮೃತ ಯುವಕ ಗಾಂಧಿನಗರ ನಿವಾಸಿ ಇಬ್ರಾಹಿಂ ಗೌಸ್ (22) ಎನ್ನಲಾಗಿದ್ದು, ಮುಜಮಿಲ್ ಸತ್ತಿಗೇರಿ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ.

ಇದನ್ನು ಓದಿ : Fake ನಂಬರ್ ಪ್ಲೇಟ್ ಬಳಸಿ ಶೋಕಿ ಮಾಡುತ್ತಿದ್ದ IPS ಅಧಿಕಾರಿ ; ಮುಂದೆನಾಯ್ತು ಗೊತ್ತಾ.?

ತೀವ್ರ ರಕ್ತಸ್ರಾವದಿಂದ (With heavy bleeding) ಕುಸಿದುಬಿದ್ದಿದ್ದ ಇಬ್ರಾಹಿಂ ನನ್ನು ಸ್ಥಳೀಯರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಹತ್ಯೆಯಾದ ಇಬ್ರಾಹಿಂಗೂ ಅದೇ ಬಡಾವಣೆಯ ಮುಜಮಿಲ್ ಸತ್ತಿಗೇರಿ ಎಂಬುವವನ ಸಹೋದರಿಯೊಂದಿಗೆ ಲವ್ವಿಡವ್ವಿಯಲ್ಲಿ ತೊಡಗಿದ್ದಾನೆ.

ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ. ಈ ಹಿಂದೆ ವಾರ್ನಿಂಗ್ ಕೊಟ್ಟಿದ್ದ ಎನ್ನಲಾಗಿದೆ. ಆದರೂ ಪ್ರೀತಿ, ಪ್ರೇಮ ಅಂತಾ ಮುಜಮಿಲ್ ಸಹೋದರಿಯ ಹಿಂದೆ ಬಿದ್ದಿದ್ದ.

ಇದನ್ನು ಓದಿ : Urine : ನಿಮ್ಮ ಮೂತ್ರದ ಬಣ್ಣದಿಂದಲೇ ತಿಳಿಯುತ್ತೇ ನಿಮ್ಮ ಆರೋಗ್ಯದ ಹೇಗಿದೆ ಎಂದು.!

ಇಂದು ಸಹೋದರಿಯೊಂದಿಗೆ ಬೈಕ್‌ನಲ್ಲಿ ಹೊರಟಿದ್ದ ನೋಡಿ ಇಬ್ರಾಹಿಂನ ಫಾಲೋ ಮಾಡಿ ಸ್ಕ್ರೂಡ್ರೈವರ್‌ನಿಂದ ಮನಬಂದಂತೆ ಚುಚ್ಚಿ ಹತ್ಯೆ ಮಾಡಿದ್ದಾನೆ.

ಮಾಳ ಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

spot_img
spot_img
spot_img
- Advertisment -spot_img