Tuesday, September 17, 2024
spot_img
spot_img
spot_img
spot_img
spot_img
spot_img
spot_img

Cinema : ಶರಣ್ಯ ಶೆಟ್ಟಿಯ ಸೌಂದರ್ಯಕ್ಕೆ ಮಾರುಹೋದ ಸಿನಿ ರಸಿಕರು.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : ಇತ್ತೀಚಿಗೆ ಬಿಡುಗಡೆಯಾದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೃಷ್ಣಂ ಪ್ರಣಯ ಸಖಿ ಸಿನಿಮಾ ನೋಡಿ ಬಂದಿರುವ ವೀಕ್ಷಕರು ಶರಣ್ಯ ಶೆಟ್ಟಿಯ ಸೌಂದರ್ಯ ಹಾಗೂ ನಟನೆಗೆ ಫಿದಾ ಆಗಿದ್ದಾರೆ.

ಇದನ್ನು ಓದಿ : ಬಿಎಸ್ಎನ್ಎಲ್ ಗ್ರಾಹಕರಿಗೆ ಗುಡ್ ನ್ಯೂಸ್ : ʼಬಿಎಸ್ಎನ್ಎಲ್ʼನಿಂದ 4G ಸೇವೆ ಆರಂಭ ; ಎಂದಿನಿಂದ ಗೊತ್ತೇ.?

ಸಿನಿಮಾದ ಕಥೆ, ಹಾಡನ್ನು ಕೇಳಿ ಸಿನಿ ರಸಿಕರು ಥ್ರಿಲ್ ಆಗಿದ್ದರು, ನಾಯಕಿ ಮಾಳವಿಕಾ ನಾಯರ್ ಫ್ಯಾನ್ಸ್ ಗೆ ಇಷ್ಟವಾಗಿದ್ದಾರೆ, ಇದರ ಜೊತೆಗೆ ಮತ್ತೊಬ್ಬ ನಾಯಕಿಯನ್ನೂ ಜನ ಇಷ್ಟಪಟ್ಟಿದ್ದಾರೆ.

ಅದು ಬೇರೆ ಯಾರು ಅಲ್ಲ, ಅವರೇ ಶರಣ್ಯ ಶೆಟ್ಟಿ (Sharanya Shetty). ಈ ನಟಿಯ ಮೇಲೆ ಸಿನಿ ರಸಿಕರಿಗೆ ಸಿಕ್ಕಾಪಟ್ಟೆ ಲವ್ ಆಗಿದೆ. ಸಿನಿಮಾ ನೋಡಿದವರಿಗೆ ಶರಣ್ಯ ಶೆಟ್ಟಿಯ ಅಂದ, ಚೆಂದ ಗ್ಲಾಮರ್ ಸಿಕ್ಕಾಪಟ್ಟೆ ಇಷ್ಟವಾಗಿದ್ದು, ಫಿದಾ ಆಗಿದ್ದಾರೆ.

ಇದನ್ನು ಓದಿ : ಅಪ್ಪನನ್ನೇ ಬಂಧಿಸುವಂತೆ ಕಂಪ್ಲೆಂಟ್‌ ಕೊಟ್ಟ 5 ವರ್ಷದ ಮಗ ; ಅಂತ ಕಾರಣವಾದ್ರು ಏನು ಗೊತ್ತೇ.?

ಈ ಸಿನಿಮಾದಲ್ಲಿ ಕಾಡದೆಯೇ ಹೇಗಿರಲಿ ಹಾಡಿನಲ್ಲಿ ತುಂಬಾನೆ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಯಶಸ್ಸಿನಿಂದ ಖುಷಿಯಾಗಿರುವ ಶರಣ್ಯ ಶೆಟ್ಟಿಗೆ ಯಶಸ್ಸು ಸುಲಭವಾಗಿ ಸಿಕ್ಕಿಲ್ಲ, ಅದಕ್ಕಾಗಿ ಅವರು ಸಿಕ್ಕಾಪಟ್ಟೆ ಕಷ್ಟಪಟ್ಟಿದ್ದಾರೆ.

ಕಿರುತೆರೆಯಿಂದ ಆರಂಭವಾದ ಇವರ ನಟನಾ ಜರ್ನಿ ಈಗ ಹಿರಿತೆರೆಯಲ್ಲಿ ಮಿಂಚುವಂತೆ ಮಾಡಿದೆ. ಕೃಷ್ಣಂ ಪ್ರಣಯ ಸಖಿಗೂ (Krishnam Pranaya Sakhi) ಮುನ್ನ ಶರಣ್ಯ 1980, ನಗುವಿನ ಹೂಗಳ ಮೇಲೆ, ಹುಟ್ಟು ಹಬ್ಬದ ಶುಭಾಶಯಗಳು ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದರು, ಆದರೆ ಈ ಸಿನಿಮಾಗಳು ಅಷ್ಟೊಂದು ಹಿಟ್ ಆಗಿರಲಿಲ್ಲ.

ಇದನ್ನು ಓದಿ : ವಿದ್ಯುತ್‌ ಇಲಾಖೆ (ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ) ಯಲ್ಲಿ ಖಾಲಿ ಇರುವ 1,000+ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ತೆರೆ ಹಂಚಿಕೊಳ್ಳುವ ಅದೃಷ್ಟ ಕೆಲವೇ ನಟಿಯರಿಗೆ ಸಿಕ್ಕಿದೆ, ಆ ಕೆಲವರಲ್ಲಿ ತಾನು ಒಬ್ಬಳು ಎಂದು ಶರಣ್ಯ ಶೆಟ್ಟಿ ಸಂಭ್ರಮಿಸಿದ್ದಾರೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ ಶರಣ್ಯ ಶೆಟ್ಟಿ, ಕನ್ನಡ ಸಿನಿಮಾ ಇಂಡಷ್ಟ್ರಿಯ ಭರವಸೆಯ ನಟಿಯಾಗಿ ಮಿಂಚಲಿದ್ದಾರೆ.

ಗಟ್ಟಿಮೇಳ ಧಾರಾವಾಹಿಯ ಮೂಲಕ ಮಿಂಚಿದ್ದ ಶರಣ್ಯ ಶೆಟ್ಟಿ ಕಿರುತೆರೆಯಲ್ಲಿ ಕಮಾಲ್ ಮಾಡಿದ್ದರು.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img