ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ಪ್ರಾಣಿ, ಪಕ್ಷಿಗಳ ಕುರಿತು ಹತ್ತು ಹಲವು ವಿಡಿಯೋಗಳು ಸಹ ವೈರಲ್ ಆಗುತ್ತಿರುತ್ತವೆ.
ಸೋಶಿಯಲ್ ಮೀಡಿಯಾಗಳಲ್ಲಿ ಹಾವಿನ ಸಂಬಂಧಿಸಿದ ಹಲವಾರು ವಿಡಿಯೋಗಳನ್ನು ನೋಡುತ್ತಿರುತ್ತೇವೆ, ಹಾವು ಎಂದ್ರೆ ಎಲ್ಲರಿಗೂ ಭಯಾನೇ. ಅದರಲ್ಲೂ ಹೆಬ್ಬಾವು ಎಂದರೆ ಈ ಭಯವು ಜಾಸ್ತಿ ಆಗಿರುತ್ತದೆ.
ಇದನ್ನು ಓದಿ : ಬಿಎಸ್ಎನ್ಎಲ್ ಗ್ರಾಹಕರಿಗೆ ಗುಡ್ ನ್ಯೂಸ್ : ʼಬಿಎಸ್ಎನ್ಎಲ್ʼನಿಂದ 4G ಸೇವೆ ಆರಂಭ ; ಎಂದಿನಿಂದ ಗೊತ್ತೇ.?
ದೂರದಲ್ಲಿ ಒಂದು ಹೆಬ್ಬಾವು ಕಂಡರೂ ಕೈಕಾಲು ನಡುಗಿ ಏನು ಮಾಡಬೇಕೆಂದು ತಿಳಿಯುವುದೇ ಇಲ್ಲ. ಈ ಹೆಬ್ಬಾವುಗಳು ಪ್ರಾಣಿಗಳನ್ನು ಮಾತ್ರವಲ್ಲ ಮನುಷ್ಯರನ್ನು ಕೂಡಾ ಜೀವಂತವಾಗಿ ನುಂಗಿ ನೀರು ಕುಡಿದು ಬಿಡುತ್ತವೆ.
ಇದರಲ್ಲಿ ರೆಟಿಕ್ಯುಲೇಟೆಡ್ ಹೆಬ್ಬಾವು ತನ್ನ ಬೇಟೆಯನ್ನು ಹಿಡಿಯಲು ಗೋಡೆಯನ್ನು ಹತ್ತುತ್ತಿರುವುದನ್ನು ತೋರಿಸಲಾಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಇದನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.
ಇದನ್ನು ಓದಿ : ಬಾಲಕಿಯನ್ನು ಹೊತ್ತೊಯ್ಯಲು ಯತ್ನಿಸಿದ ದೈತ್ಯಾಕಾರದ ಹದ್ದು ; ಮೈ ನಡುಗಿಸುವ ವಿಡಿಯೋ Viral.!
ವೈರಲ್ ವಿಡಿಯೋದಲ್ಲಿರುವ ದೃಶ್ಯ :
ರೆಟಿಕ್ಯುಲೇಟೆಡ್ ಹೆಬ್ಬಾವು ತನ್ನ ಬೇಟೆಯನ್ನು ಹಿಡಿಯಲು ಗೋಡೆಯನ್ನು ಏರುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು. ಇನ್ನೂ ವಿಡಿಯೋ ವೈರಲ್ ಆಗಿದ್ದು, ಈ ಜೀವಿಗಳು ತಮ್ಮ ಆವಾಸಸ್ಥಾನಗಳಲ್ಲಿ ಹೇಗೆ ಹೊಂದಿಕೊಳ್ಳುತ್ತವೆ ಮತ್ತು ಅಭಿವೃದ್ಧಿ ಹೊಂದುತ್ತವೆ ಎಂಬುದನ್ನು ನೋಡುವುದು ಆಶ್ಚರ್ಯಕರವಾಗಿದೆ ಎಂದು ಬರೆದಿದ್ದಾರೆ.
ಈ ಹಾವುಗಳಲ್ಲಿ ವಿಷವಿಲ್ಲದಿದ್ದರೂ ಇವು ತುಂಬಾ ಅಪಾಯಕಾರಿಯಾಗಿವೆ. ಎಲ್ಲ ಶಕ್ತಿಯನ್ನು ಹಾಕಿ ತನ್ನ ಹೊಟ್ಟೆಯೊಳಗಿರುವ ಬೇಟೆಯನ್ನು ಹಿಂಡಲು ಪ್ರಯತ್ನಿಸುತ್ತದೆ. ಇದು ಮನುಷ್ಯನನ್ನು ಕೂಡ ಕೊಂದು ಹಾಕುತ್ತದೆ.
ಇದನ್ನು ಓದಿ : ವಿದ್ಯುತ್ ಇಲಾಖೆ (ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ) ಯಲ್ಲಿ ಖಾಲಿ ಇರುವ 1,000+ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಸಾಮಾನ್ಯವಾಗಿ ರೆಟಿಕ್ಯುಲೇಟೆಡ್ ಹೆಬ್ಬಾವು ಅತಿ ಉದ್ದದ ಹಾವುಗಳಲ್ಲಿ ಒಂದಾಗಿದೆ. ಕೆಲವು 33 ಅಡಿ ಉದ್ದಗಳವರೆಗೆ ಬೆಳಯುತ್ತವೆ. ಅವು ತೂಕ 165 ಪೌಂಡ್‌ಗಳವರೆಗೆ ಇರಬಹುದು ಎಂದು ನಂದಾ ತಮ್ಮ ಟ್ವೀಟರ್‌ನಲ್ಲಿ ಉಲ್ಲೇಖಿಸಿದ್ದಾರೆ.
ಈ ರೆಟಿಕ್ಯುಲೇಟೆಡ್ ಹೆಬ್ಬಾವು ಎಷ್ಟು ಎತ್ತರದ ಸ್ಥಳಗಳನ್ನು ಬೇಕಾದರೂ ಹತ್ತುತ್ತದೆ. ಹಾಗಾಗಿ ಇದು ಪಕ್ಷಿಗಳು, ಸಸ್ತನಿಗಳು ಮತ್ತು ಇತರ ಸರೀಸೃಪಗಳಂತಹ ಬೇಟೆಯನ್ನು ತಿಂದು ತೇಗುತ್ತದೆ. ತನ್ನ ಬೇಟೆಯನ್ನು ಹಿಡಿದ ನಂತರ, ಹೆಬ್ಬಾವು ಅದನ್ನು ಉಸಿರುಗಟ್ಟುವವರೆಗೆ ಹಿಂಡುತ್ತದೆ. ನಂತರ ಅದನ್ನು ಸಂಪೂರ್ಣವಾಗಿ ನುಂಗಿ ನೀರು ಕುಡಿಯುತ್ತದೆ. ಹಾಗೇ ದೊಡ್ಡ ಜೀವಿಗಳನ್ನು ತಿನ್ನಲು ಅವು ತನ್ನ ದವಡೆಯಿಂದ ಜಗಿಯುತ್ತವೆ ಎನ್ನಲಾಗಿದೆ.
The longest & one of the heaviest snakes of planet. A Reticulated Python climbs the wall to reach out for its prey in Myanmar.
Reticulated Python are constrictors and kill prey by squeezing them to death. The python's squeezing force is about 14 PSI enough to kill human beings. pic.twitter.com/ruRFVNIFiP
— Susanta Nanda (@susantananda3) March 29, 2023