Sunday, September 15, 2024
spot_img
spot_img
spot_img
spot_img
spot_img
spot_img
spot_img

ಅಪ್ಪನನ್ನೇ ಬಂಧಿಸುವಂತೆ ಕಂಪ್ಲೆಂಟ್‌ ಕೊಟ್ಟ 5 ವರ್ಷದ ಮಗ ; ಅಂತ ಕಾರಣವಾದ್ರು ಏನು ಗೊತ್ತೇ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಡೆಸ್ಕ್‌ :  ಓರ್ವ 5 ವರ್ಷದ ಪುಟ್ಟ ಬಾಲಕನೊಬ್ಬ ತಂದೆಯ ವಿರುದ್ಧವೇ ಪೊಲೀಸ್ ಠಾಣೆಗೆ ಹೋಗಿ ತಂದೆಯನ್ನು ಬಂಧಿಸುವಂತೆ ಕಂಪ್ಲೇಂಟ್ ಕೊಟ್ಟು ಬಂದಿದ್ದಾನೆ ಎಂದರೆ ನೀವೂ ನಂಬದೇ ಇರಬಹುದು ಆದರೆ ಇದು ಸತ್ಯ.

ಹೌದು, ಮಧ್ಯಪ್ರದೇಶದ ಧಾರ್‌ನಲ್ಲಿ ಈ ಘಟನೆ ನಡೆದಿದ್ದು, ತಂದೆಯ ವಿರುದ್ಧ ದೂರು ನೀಡಲು ಪುಟ್ಟ ಬಾಲಕನೊಬ್ಬ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ. ನನ್ನ ತಂದೆ ಬೀದಿಯಲ್ಲಿ ಸುತ್ತಾಡಲು ಬಿಡುವುದಿಲ್ಲ, ನದಿ ನೀರಿನಲ್ಲಿ ಆಟವಾಡಲು ಬಿಡುವುದಿಲ್ಲವೆಂದು ಕೋಪಗೊಂಡ ಬಾಲಕ ತನ್ನ ತಂದೆಯನ್ನು ಬಂಧಿಸುವಂತೆ ಪೊಲೀಸ್ ಅಧಿಕಾರಿಗೆ ದೂರನ್ನು ನೀಡಿದ್ದಾನೆ.

ಇದನ್ನು ಓದಿ : ಪಾರ್ಕ್ ಪೊದೆಯಲ್ಲಿ ಜೋಡಿಯ ರೊಮ್ಯಾನ್ಸ್ ; ವಿಡಿಯೋ Viral.!

ಇನ್ನು ದೂರು ಕೊಟ್ಟ ಬಾಲಕನ ಹೆಸರು ಹಸನೈನ್, ಮತ್ತು ಆರೋಪಿ ಸ್ಥಾನದಲ್ಲಿರುವ ತಂದೆಯ ಹೆಸರು ಇಕ್ಬಾಲ್ ಎಂದು ತಿಳಿದು ಬಂದಿದೆ.

TeluguScribe ಹೆಸರಿನ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಹಂಚಿಕೊಳ್ಳಲಾಗಿದ್ದು, “ನದಿ ನೀರಿನಲ್ಲಿ ಆಟವಾಡಲು ಬಿಡುವುದಿಲ್ಲವೆಂದು ತಂದೆಯ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಬಂದ 5 ವರ್ಷ ವಯಸ್ಸಿನ ಬಾಲಕ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್ ವಿಡಿಯೋದಲ್ಲಿ ಬಾಲಕ ಪೊಲೀಸ್ ಅಧಿಕಾರಿಯ ಜೊತೆ ತನ್ನ ತಂದೆಯ ವಿರುದ್ಧ ದೂರು ನೀಡುತ್ತಿರುವ ದೃಶ್ಯವನ್ನು ಕಾಣಬಹುದು. ತಂದೆಯನ್ನು ಬಂಧಿಸುವಂತೆ ಕಂಪ್ಲೇಂಟ್ ಕೊಡಲು ಬಂದ ಬಾಲಕ, ನನ್ನ ಅಪ್ಪ ಬೀದಿ ಬದಿ ಆಟವಾಡಲು ಬಿಡುತ್ತಿಲ್ಲ, ನದಿ ಕಡೆ ಹೋದ್ರೆ ಗದರುತ್ತಾರೆ ಎಂದು ದೂರನ್ನು ನೀಡಿದ್ದಾನೆ. ಪೊಲೀಸ್ ಅಧಿಕಾರಿ ತುಂಟ ಬಾಲಕನ ದೂರನ್ನು ಆಲಿಸಿ ತಂದೆಯ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿ ಮನೆಗೆ ಕಳಿಸಿದ್ದಾರೆ.

ಇದನ್ನು ಓದಿ : ಪತ್ನಿ ಅನುಮಾನಾಸ್ಪದ ಸಾವು; ಭಯದಿಂದ ಕೆರೆಗೆ ಹಾರಿ ಪತಿ ಆತ್ಮಹತ್ಯೆ.!

ಇಂದು ದಿ.21ರ ಮಧ್ಯಾಹ್ನ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಇಲ್ಲಿಯವರೆಗೆ ಈ ವಿಡಿಯೋವನ್ನು 56 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img